
ನವದೆಹಲಿ: ಭಾರತದ ಇತಿಹಾಸದಲ್ಲೇ ಮಹಿಳೆಯರು ಅಧಿಕ ಪ್ರಮಾಣದಲ್ಲಿ ತಮ್ಮ ಬಳಿಯಿದ್ದ ಚಿನ್ನವನ್ನು ಮಾರಾಟ ಇಲ್ಲವೇ ಅಡವಿಟ್ಟು ಕಳೆದುಕೊಂಡಿದ್ದು ತಮ್ಮ ಅವಧಿಯಲ್ಲಿ ಎಂಬ ಕುಖ್ಯಾತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯದರ್ಶಿ ಜೈರಾಂ ರಮೇಶ್ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜೈರಾಂ ರಮೇರ್ಶ್, ‘ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಬಳಿಯಿದ್ದ ಚಿನ್ನವನ್ನು ಮಾರಾಟ ಇಲ್ಲವೇ ಅಡವಿಟ್ಟು ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ರೂಪಿಸಿದ ಅಸಮರ್ಪಕ ಆರ್ಥಿಕ ನೀತಿಗಳೇ ಕಾರಣ.
ಕೋವಿಡ್ ಅವಧಿಯಲ್ಲಿ ಮಹಿಳೆಯರು 60 ಸಾವಿರ ರು. ಮೌಲ್ಯದ ಚಿನ್ನವನ್ನು ಅಡವಿಟ್ಟು ಕಟ್ಟಲಾಗದಿದ್ದಾಗ ಬ್ಯಾಂಕ್‌ಗಳು ಕರುಣೆಯಿಲ್ಲದೆ ಹರಾಜು ಹಾಕಿದವು. ಜೊತೆಗೆ ಕಳೆದ ಫೆಬ್ರವರಿಯಲ್ಲಿ ಭಾರತದಲ್ಲಿ ಚಿನ್ನದ ಮೇಲಿನ ಸಾಲವು ಮೊದಲ ಬಾರಿಗೆ 1 ಲಕ್ಷ ಕೋಟಿ ರು. ದಾಟಿದೆ. ಕಳೆದ 5 ವರ್ಷಗಳಲ್ಲಿ ಚಿನ್ನ ಸಾಲ ಪಡೆಯುವಿಕೆ ಶೇ.300ರಷ್ಟು ಏರಿದೆ’ ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಭಾನುವಾರವಷ್ಟೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರ ಮಂಗಳಸೂತ್ರ ಕಸಿಯಲಿದೆ ಎಂದು ಆರೋಪಿಸಿದ್ದರು.
ಜೂ.4ರ ಬಳಿಕ ಪ್ರಧಾನಿ ಮೋದಿಗೆ ರಜೆ, ಇದು ಜನರ ಗ್ಯಾರಂಟಿ: ಕಾಂಗ್ರೆಸ್‌ನ ಜೈರಾಂ ರಮೇಶ್
7 ವಿದೇಶಿ ರಾಯಭಾರ ಸಿಬ್ಬಂದಿಯಿಂದ ಬಿಜೆಪಿ ಪ್ರಚಾರ ವೀಕ್ಷಣೆ
ನವದೆಹಲಿ: ಭಾರತದ ಲೋಕಸಭಾ ಚುನಾವಣೆಯ ಕುರಿತು ಅರಿವು ಮತ್ತು ಬಿಜೆಪಿಯ ಚುನಾವಣಾ ಪ್ರಚಾರ ವೀಕ್ಷಿಸುವ ಸಲುವಾಗಿ 7 ವಿವಿಧ ದೇಶಗಳ ರಾಜತಾಂತ್ರಿಕ ಸಿಬ್ಬಂದಿ ರಾಜಸ್ಥಾನದ ಜೋಧ್‌ಪುರಕ್ಕೆ ಆಗಮಿಸಿದ್ದಾರೆ. ಬಾಂಗ್ಲಾದೇಶ, ಇಂಡೋನೇಷ್ಯಾ, ಮಲೇಷ್ಯಾ, ರಷ್ಯಾ ಮತ್ತು ಸುರಿನೇಮ್ ನ ಒಟ್ಟು ಏಳು ಮಂದಿ ರಾಜತಾಂತ್ರಿಕ ಅಧಿಕಾರಿಗಳು ಸೋಮವಾರ ಜೋಧ್ಪುರಕ್ಕೆ ಬಂದಿದ್ದು, ಈ ತಿಂಗಳ 24 ರ ತನಕ ಪ್ರಚಾರ ವೀಕ್ಷಿಸಲಿದ್ದಾರೆ. 20ಕ್ಕೂ ಹೆಚ್ಚು ದೇಶಗಳಿಗೆ ಬಿಜೆಪಿ ಇಂಥ ಆಹ್ವಾನ ನೀಡಿತ್ತು.
ತರಗತಿ ಚುನಾವಣೆಗೂ ನಿಲ್ಲದವರು ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ, ಜೈರಾಮ್‌ಗೆ ಗೌರವ್ ಟಾಂಗ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.