ಕಳೆದ ತಿಂಗಳು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ₹7000 ಕೋಟಿ ನೀಡಿದ್ದಾರೆ. ಅದರಲ್ಲೂ ₹300 ಕೋಟಿ ನಮ್ಮ ಕ್ಷೇತ್ರಕ್ಕೆ ನೀಡಿದ್ದಾರೆರೆಂದು ಶಾಸಕ, ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಚಿತ್ತಾಪುರ (ಅ.26): ಚುನಾವಣೆಯಲ್ಲಿ ನೀಡಿರುವ ಭರವಸೆಯಂತೆ ನಾನು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ತರುತ್ತಿದ್ದು ಇಂದು ₹63 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸುತ್ತಿದ್ದೇನೆ. ಕಳೆದ ತಿಂಗಳು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ₹7000 ಕೋಟಿ ನೀಡಿದ್ದಾರೆ. ಅದರಲ್ಲೂ ₹300 ಕೋಟಿ ನಮ್ಮ ಕ್ಷೇತ್ರಕ್ಕೆ ನೀಡಿದ್ದಾರೆರೆಂದು ಶಾಸಕ, ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಸದ ರಾಧಾಕೃಷ್ಣ ದೊಡ್ಮನಿ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವುಗಳ ಜತೆ ಮುಂದಿನ ಒಂದು ವರ್ಷದಲ್ಲಿ ಕಲ್ಯಾಣ ಪಥ ಯೊಜನೆಯಲ್ಲಿ ಗ್ರಾಮೀಣ ಭಾಗದ ರಸ್ತೆಗಳು, ತೊಗರಿ ಬೆಳೆಗಾರರಿಗೆ ವೇರ ಹೌಸ್, ಸಾಮೂಹಿಕ ಶೌಚಾಲಯ, ಮಾಡಬೂಳದ ಹತ್ತಿರ ಜೂ ಪಾರ್ಕ್, ದಂಡೊತಿ ಹತ್ತಿರ ಬ್ರೀಜ್ ನಂತಹ ಮಹತ್ವದ ಕಾಮಗಾರಿಗಳನ್ನು ಮತ್ತು 30 ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ನೀಲಿ ನಕ್ಷೆ ಸಿದ್ಧಪಡಿಸಿ ಅಭಿವೃದ್ದಿ ಮಾಡುವ ಮೂಲಕ ಮುಂದಿನ ಒಂದು ವರ್ಷದಲ್ಲಿ ಕ್ಷೇತ್ರದ ಚಿತ್ರಣವನ್ನು ಬದಲಾಯಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದರು. ನಮ್ಮದು ಪಾರದರ್ಶಕ ಸರ್ಕಾರವಾಗಿದ್ದು, ಆಳುವ ಸರ್ಕಾರವಲ್ಲಾ ಆಲಿಸುವ ಸರ್ಕಾರವಾಗಿದೆ. ಜನರು ನೀಡುವ ಸಲಹೆ ಸೂಚನೆಗಳನ್ನು ಆಲಿಸಿ ಅವರ ಸಲಹೆ ಸೂಚನೆಗಳಂತೆ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
undefined
ಬಿಸಿಯೂಟ ತಯಾರಕರ ಎಲ್ಲಾ ಬೇಡಿಕೆ ಈಡೇರಿಕೆ: ಸಚಿವ ಮಧು ಬಂಗಾರಪ್ಪ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ ಹಗರಣವನ್ನು ತಡೆದು, ಒಂದು ವರ್ಷದ ಅವಧಿಯಲ್ಲಿ ಒಂದು ಸಾವಿರ ಪಿಎಸ್‌ಐ, ಪಂಚಾಯತ್ ರಾಜ್ ಇಲಾಖೆಯಲ್ಲಿ 900 ಇಂಜಿನಿಯರ್ ನೇಮಕಾತಿ ಮಾಡಲಾಗಿದೆ. ಇನ್ನು 2 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವದು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೆದಾರ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ. ಪಾಟೀಲ್ ಮುಖಂಡರಾದ ರೇವುನಾಯಕ ಬೆಳಮಗಿ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ ಸ್ವಾಗತಿಸಿದರು. ನಾಗರೆಡ್ಡಿ ಪಾಟೀಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಂತಣ್ಣ ಚಾಳಿಕಾರ ನಿರೂಪಿಸಿದರು.
ಸಮಗ್ರ ಅಭಿವೃದ್ಧಿಗಾಗಿ ಶ್ರಮ: ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಲೋಕಸಭೆಗೆ ಆರಿಸಿ ಕಳಿಸಿದೆ. ಅದಕ್ಕೆ ಜಿಲ್ಲೆಯ ಎಲ್ಲಾ ಮತದಾರರು ನನಗೆ ಅಭೂತಪೂರ್ವ ಗೆಲುವು ತಂದು ಕೊಟ್ಟಿರುವಿರಿ. ತಮ್ಮ ನಂಬಿಕೆಗೆ ಮೋಸ ಮಾಡದೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಿಮ್ಮ ಧ್ವನಿಯಾಗಿ ಲೊಕಸಭೆಯಲ್ಲಿ ಮಾತನಾಡುತ್ತೇನೆ. ಕಳೆದ ಅವಧಿಯಲ್ಲಿ ಜಿಲ್ಲೆಯಿಂದ ಬಿಟ್ಟು ಹೋಗಿರುವ ಯೊಜನೆಗಳನ್ನು ವಾಪಸ್ಸು ತರುವದು ಮತ್ತು ಅರ್ಧಕ್ಕೆ ನಿಂತ ಕಾಮಗಾರಿ ಅನುದಾನ, ಜಿಲ್ಲೆಗೆ ಪೂರಕ ಯೊಜನೆಗಳನ್ನು ತರುವ ಪ್ರಾಮಾಣಿಕ ಪ್ರಯತ್ನಮಾಡತ್ತೇನೆ ಎಂದು ನೂತನ ಸಂಸದ ರಾಧಾಕೃಷ್ಣ ದೊಡ್ಮನಿ ಹೇಳಿದರು.
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಹರಕೆಯ ಕುರಿ: ಆರ್.ಅಶೋಕ್
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಆದರೆ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಡವರ ವಿರೋಧಿ ಪಕ್ಷವಾಗಿದ್ದು, ಅದು ಕಾರ್ಪೋರೇಟ್ ಪರವಾದ ಸರ್ಕಾರವಾಗಿದೆ ಎನ್ನುವದು ಅವರ ಕಳೆದ 10 ವರ್ಷಗಳ ಅಧಿಕಾರಾವಧಿಯಲ್ಲಿ ಸಾಬೀತಾಗಿದೆ. ಇದನ್ನು ನೋಡಿದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರಿಗೆ ಸಮಾನತೆಯ ಬದುಕು, ಉತ್ತಮ ಶಿಕ್ಷಣ ನೀಡಲು ಸಾಧ್ಯ.
-ಡಾ. ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವರು