ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಆ ಪಕ್ಷಕ್ಕೆ ವಲಸೆ ಹೋಗುವುದು ಸಿ.ಪಿ.ಯೋಗೇಶ್ವರ್‌ಗೆ ಚಾಳಿಯಾಗಿದೆ. ಈ ಬಾರಿ ರಾಂಗ್ ಪಕ್ಷವನ್ನು ಚಾಯ್ಸ್ ಮಾಡಿಕೊಂಡಿರುವ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಹರಕೆಯ ಕುರಿ ಮಾಡಲಿದೆ ಎಂದು ವಿಪಕ್ಷ ನಾಯಕ ಆರ್ .ಅಶೋಕ್ ತಿಳಿಸಿದರು.
ರಾಮನಗರ (ಅ.26): ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಆ ಪಕ್ಷಕ್ಕೆ ವಲಸೆ ಹೋಗುವುದು ಸಿ.ಪಿ.ಯೋಗೇಶ್ವರ್‌ಗೆ ಚಾಳಿಯಾಗಿದೆ. ಈ ಬಾರಿ ರಾಂಗ್ ಪಕ್ಷವನ್ನು ಚಾಯ್ಸ್ ಮಾಡಿಕೊಂಡಿರುವ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಹರಕೆಯ ಕುರಿ ಮಾಡಲಿದೆ ಎಂದು ವಿಪಕ್ಷ ನಾಯಕ ಆರ್ .ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಬಿಜೆಪಿಯಲ್ಲಿ ದೊಡ್ಡ ನಾಯಕರಾಗಿದ್ದರು. ಉಪಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್‌ನಲ್ಲಿ ಯಾವ ಸಾಲಿಗೆ ತಳ್ಳಲ್ಪಡುತ್ತಾರೊ ಗೊತ್ತಿಲ್ಲ. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎದುರು ಯೋಗೇಶ್ವರ್ ಸೋಲುವುದು ನೂರಕ್ಕೆ ನೂರರಷ್ಟು ಸತ್ಯ ಎಂದರು.
ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಮೋದಿ ಮತ್ತು ದೇವೇಗೌಡರ ಆಶೀರ್ವಾದ ಇದೆ. ಎರಡು ಚುನಾವಣೆಯಲ್ಲಿ ಸೋತಿರುವುದಕ್ಕೆ ಸಿಂಪತಿಯೂ ಇದೆ. ಅವರ ಗೆಲುವಿಗಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸುವರು. ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಭದ್ರ ನೆಲೆಯಿದ್ದು, ಬಿಜೆಪಿ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದೆ. ಮತದಾರರ ಒಲವು ಎನ್‌ಡಿಎ ಪರವಾಗಿ ಇರುವುದರಿಂದ ಗೆಲ್ಲುವ ವಾತಾವರಣ ಇದೆ ಎಂದರು. ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.
undefined
ಜಮೀನು ಮಾರಾಟ ಮಾಡದೆ ಮಕ್ಕಳ ಭವಿಷ್ಯಕ್ಕೆ ಉಳಿಸಿಕೊಳ್ಳಿ: ಶಾಸಕ ಜಿ.ಟಿ.ದೇವೇಗೌಡ
ಆದರೆ, ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಕೇಳದೆ, ಆ ಪಕ್ಷದ ನಾಯಕರು ಆಯ್ಕೆ ಮಾಡಿದ್ದಾರೆ. ಈಗ ಆ ಕಾರ್ಯಕರ್ತರೆಲ್ಲರು ಯೋಗೇಶ್ವರ್ ಗೆ ರೆಬೆಲ್ ಆಗಿದ್ದಾರೆ. ಹೀಗಾಗಿಯೇ ಡಿ.ಕೆ.ಶಿವಕುಮಾರ್ ಯಾರು ಮಾತನಾಡಬಾರ ದೆಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಕಾಂಗ್ರೆಸ್ ನ ಒಂದು ಟೀಮ್ ನಮಗೆ ಬೆಂಬಲ ನೀಡಲಿದೆ ಎಂದು ತಿಳಿಸಿದರು. ಯೋಗೇಶ್ವರ್ ಅವರಿಗೆ ಎನ್‌ಡಿಎ ಟಿಕೆಟ್ ಕೊಡಿಸಲು ನಾವೆಲ್ಲರು ನಿರಂತರವಾಗಿ ಪ್ರಯತ್ನ ಮಾಡಿದೆವು. ಅಲ್ಲದೆ, ಕೇಂದ್ರ ಸಚಿವ ಕುಮಾರಸ್ವಾಮಿ ಜೆಡಿಎಸ್ ಅಥವಾ ಬಿಜೆಪಿ ಚಿಹ್ನೆ ಅಡಿಯಲ್ಲಿ ನಿಲ್ಲುವಂತೆಯೂ ಆಫರ್ ನೀಡಿದರು.
ಹೀಗಿದ್ದರು ಎರಡು ದಿನದ ಹಿಂದೆ ಮದ್ದೂರಿನಲ್ಲಿ ಡಿ.ಕೆ.ಸುರೇಶ್ ಅವರೊಂದಿಗೆ ಕಾಣಿಸಿಕೊಂಡರು. ಇನ್ನು ಬಿ ಫಾರಂ ನೀಡಿದರೆ ದುರುಪಯೋಗ ಆಗುತ್ತದೆ ಎಂಬ ಕಾರಣಕ್ಕೆ ಸುಮ್ಮನಾದೆವು. ಅಷ್ಟಕ್ಕೂ ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದು ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗಾಗಿ ಅಲ್ಲ, ಸ್ವಂತ ಅಭಿವೃದ್ಧಿಗಾಗಿ ಎಂದು ಟೀಕಿಸಿದರು. ಬಿಜೆಪಿ ಪಕ್ಷಕ್ಕೆ ಈ ಜಿಲ್ಲೆಯಲ್ಲಿ ಸ್ಥಳೀಯವಾಗಿ ಪ್ರಬಲ ನಾಯಕ ಸಿಕ್ಕಿರಲಿಲ್ಲ. ಯೋಗೇಶ್ವರ್ ಅವರನ್ನು ಅತಿಯಾಗಿ ನಂಬಿಕೊಂಡು ಜವಾಬ್ದಾರಿ ನೀಡಿದ್ದೆ ನಮಗೆ ಮುಳ್ಳಾಯಿತು. ಸ್ಥಳೀಯ ನಾಯಕತ್ವ ಬೆಳೆಸಲು ನಾವು ಕೂಡ ಒತ್ತು ಕೊಡಲಿಲ್ಲ.
ಪದೇ ಪದೇ ಕನಸಲ್ಲಿ ಸತ್ತವರು ಕಾಣಿಸಿಕೊಂಡು ಅಳ್ತಾ ಇದ್ರೆ ಏನಾಗುತ್ತೆ ಗೊತ್ತಾ?
ಈಗ ಅದರಿಂದಾದ ನಷ್ಟದ ಅರಿವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಯೋಗೇಶ್ವರ್ ತಮ್ಮ ಬೆಂಬಲಿಗರಿಗೆ ಮಾತ್ರ ಅಧಿಕಾರ ಕೊಡಿಸಿದರು. ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶವನ್ನೇ ನೀಡಲಿಲ್ಲ. ಜಿಲ್ಲೆಯಲ್ಲಿ ಪಕ್ಷ ಶಕ್ತಿಯುತವಾಗಿದ್ದು, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅಶೋಕ್ ಉತ್ತರಿಸಿದರು. ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಹುಲುವಾಡಿ ದೇವರಾಜು ಇತರರಿದ್ದರು.