ನಾನು ಕರ್ನಾಟಕಕ್ಕೆ ಬಂದ್ರೆ ರಾಜ್ಯ ಸರ್ಕಾರ ನಿದ್ದೆಗೆಡುತ್ತೆ: ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ

By Ravi JanekalFirst Published Oct 26, 2024, 2:39 PM IST
Highlights

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾಂಗ್ರೆಸ್‌ನವರೇ ದೂಡಿದ್ದಾರೆ. ನಿನ್ನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನೀವೇ ನೋಡಿದ್ರಿ, ನಮ್ಮ ನಾಯಕರು, ಬಿಜೆಪಿ ನಾಯಕರು ಬಂದು ಶಕ್ತಿ ತುಂಬಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರು (ಅ.26): ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾಂಗ್ರೆಸ್‌ನವರೇ ದೂಡಿದ್ದಾರೆ. ನಿನ್ನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನೀವೇ ನೋಡಿದ್ರಿ, ನಮ್ಮ ನಾಯಕರು, ಬಿಜೆಪಿ ನಾಯಕರು ಬಂದು ಶಕ್ತಿ ತುಂಬಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಸ್ಪರ್ಧೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು. ಈ ಸರ್ಕಾರ(ಕಾಂಗ್ರೆಸ್) ಅಧಿಕಾರಕ್ಕೆ ಬಂದ ಬಳಿಕ ದಬ್ಬಾಳಿಕೆ ಮಾಡುವುದು ಕಾಯಕ ಮಾಡಿಕೊಂಡಿದೆ. ಜನರು ನಿನ್ನೆ ನಮ್ಮ ಕಾರ್ಯಕ್ರಮಕ್ಕೆ ಬರಬಾರದ? ಕಾರ್ಯಕ್ರಮಕ್ಕೆ ಬಂದವರ ಮೇಲೆ ಕೇಸ್ ಹಾಕಿದ್ದಾರೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ತಾರೆ. ಕಾಂಗ್ರೆಸ್ನವ್ರಿಗೆ ಅಭ್ಯರ್ಥಿಗಳೇ ಇರಲಿಲ್ಲ. ಹಾಗಾಗಿ ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಲೇವಡಿ ಮಾಡಿದರು ಇದೇ ವೇಳೆ ಎಲ್‌ಆರ್ ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ, 'ಅವರ ಬಗ್ಗೆ ಯಾಕೆ ಚರ್ಚೆ ಬ್ರದರ್' ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.

Latest Videos

ಉಪರಾಷ್ಟ್ರಪತಿಗೆ ದೇವೇಗೌಡರ ಬಗ್ಗೆ ವಿಶೇಷ ಗೌರವ:

ಉಪರಾಷ್ಟ್ರಪತಿ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಉಪರಾಷ್ಟ್ರಪತಿಗಳಿಗೆ ಹೆಚ್‌ಡಿ ದೇವೇಗೌಡ ಬಗ್ಗೆ ವಿಶೇಷ ಪ್ರೀತಿಯಿದೆ. ಹಿಂದಿನಿಂದಲೂ ದೇವೇಗೌಡರ ಜೊತೆಗೆ ಉತ್ತಮ ಬಾಂಧವ್ಯ ಇದೆ. ಅವರು ಯಾವಾಗಲೂ ದೇವೇಗೌಡರ ಕೆಲಸ ಕಾರ್ಯಗಳು ರೈತರ ಬಗ್ಗೆ ಇರುವ ಕಾಳಜಿ ಕುರಿತು ಚರ್ಚೆ ಮಾಡ್ತಾರೆ.  ಅಲ್ಲದೆ ಆರೋಗ್ಯ ಸಮಸ್ಯೆ ಇದ್ದರೂ ಸಂಸತ್ತಿನ ಕಾರ್ಯಕಲಾಪಗಳಲ್ಲಿ ಭಾಗವಹಿಸ್ತಾರೆ. ಆ ಮೂಲಕ ಸಮಾಜಕ್ಕೆ ಅವರ ಬದ್ದತೆ ತೋರಿಸ್ತಾರೆ. ಅವರು ದೇವೇಗೌಡ ಮನೆಗೆ ಬಂದು ಅವರ ಜೊತೆಯಲ್ಲಿ ಉಪಹಾರ ಸೇವಿಸಬೇಕು ಅಂತ ಬೆಳಗ್ಗೆ ಬಹಳ ದಿನ ಹೇಳ್ತಾ ಇದ್ರು. ಅದೇ ವಿಶ್ವಾಸದಲ್ಲಿ ಒಂದು ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ನೋಡಿದ್ದೇನೆ. ಹುದ್ದೆಗೆ ಗೌರವ ಕೊಡ್ತಾರೆ. ಸದನದ ವೇಳೆ ಸಲಹೆ ನೀಡಿದ್ದಾರೆ. ಅದಕ್ಕೆ ನಾನು ಅವರನ್ನು ಸ್ವಾಗತ ಮಾಡಲು ಬಂದೆ. ಇದರಲ್ಲಿ ಯಾವ ವಿಶೇಷವೂ ಇಲ್ಲ ಎಂದರು.

'ಮೋದಿ ಬಗ್ಗೆ ನಿರೀಕ್ಷೆ ಇಲ್ಲ, ಮಾಮೂಲಿ ಭಾಷಣ ಮಾಡ್ತಾರೆ, ಜನ ಮರುಳಾಗ್ತಾರೆ ಅಷ್ಟೇ'

ಸಿಎಂಗೆ  ಕುಮಾರಸ್ವಾಮಿ ಟಾಂಗ್

ಸಿಎಂ ಸಿದ್ದರಾಮಯ್ಯ ನಾವು ಮೂರು ಕ್ಷೇತ್ರ ಗೆದ್ದಾಗಿದೆ ಅಂತಾ ಹೇಳ್ಕೊಳ್ತಿದ್ದಾರೆ. ಕುಮಾರಸ್ವಾಮಿಯವರ ಭಾವನಾತ್ಮಕ ಮಾತು ಮತ್ತು ಕಣ್ಣೀರು ಜನರಿಗೆ ಬೇಸರವಾಗಿ ಹೋಗಿದೆ ಅಂದಿದ್ದಾರೆ. ಹೌದು ನಾನು ಜನರ ಕಷ್ಟಗಳಿಗೆ ಮೊಸಳೆ ಕಣ್ಣೀರು ಹಾಕಿದ್ದ.  ಪಾಪ ಇವರು ಎಂದೂ ಜನರ ಮುಂದೆ ಕಣ್ಣೀರು ಹಾಕಿಲ್ಲ. ಇವತ್ತು ಇವರ ನಡವಳಿಕೆ ಕಣ್ಣಲ್ಲೂ ನೀರು ಬರದಂಥ ಪರಿಸ್ಥಿತಿ ತಂದಿಟ್ಟಿದೆ. ಇವರು ಈ ಚುನಾವಣೆ ಅಧಿಕಾರ, ಹಣದ ದುರ್ಬಳಕೆಯಿಂದ ಗೆದ್ದಾಗಿದೆ ಅಂತ ಹೊರಟಿದ್ದಾರಲ್ಲ.ಇವರಿಗೆ ಕಾಂಗ್ರೆಸ್ ನಿಂದ ಒಬ್ಬ ಅಭ್ಯರ್ಥಿ ಆಯ್ಕೆ ಮಾಡಲು ಆಗಲಿಲ್ಲ. ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ, ಇಷ್ಟಾದರೂ ಕುತಂತ್ರ ಬೇರೆ ಮಾಡ್ತಿದ್ದಾರೆ. ಇದನ್ನೆಲ್ಲ ರಾಜ್ಯದ ಜನರು ಗಮನಿಸುತ್ತಿದ್ದಾರೆ. ನಾನು ಯಾರ‌ ಬಗ್ಗೆಯೂ ಟೀಕೆ ಮಾಡಲ್ಲ. ನನ್ನ ಕೆಲಸ ಆಧಾರದಲ್ಲಿ ಮತ ಕೇಳ್ತೇವೆ. ಗೆಲ್ಲುವ ವಿಶ್ವಾಸ ಹೆಚ್ಚಿದೆ ಎಂದರು.

ಕೇತಗಾನಹಳ್ಳಿ ಭೂ ಒತ್ತುವರಿ ತನಿಖೆ: ಎಚ್‌ಡಿಕೆ ವಾಗ್ದಾಳಿ:

ನಾನು ಈಶ್ವರ್ ಖಂಡ್ರೆಯವರಿಗೆ ಹೇಳೋದು ಇಷ್ಟೆ, ಪಾಪ ನಿನ್ನೆ ಅಲ್ಲೆಲ್ಲೋ ಕೋಲಾರದಲ್ಲಿಒತ್ತುವರಿ ಭೂಮಿ ಅಂತ ಸಸಿ ನೆಡೋಕೆ ಹೋಗಿದಾರೆ. ಮೊದಲು ಕೇಂದ್ರ ಸರ್ಕಾರದಿಂದ ಅರಣ್ಯ ಇಲಾಖೆ ಅವ್ರು ಶ್ರೀನಿವಾಸಪುರದಲ್ಲಿ ಯಾರೋ ಒಬ್ಬ ಮಾಜಿ ಸ್ಪೀಕರ್ ನೂರಾರು ಎಕರೆ ಲೂಟಿ ಹೊಡೆದಿದ್ದಾರೆ. ರ್ಪು ಬಂದಿದ್ದಾನ್ನೆಲ್ಲ ಕೆಳಗೆ ಇಟ್ಕೊಂಡು ಕೂತಿದ್ದಾರೆ. ಮೊದಲು ಅದನ್ನ ನೋಡೋಕೆ ಹೇಳಿ. ಅಲ್ಲಿ ಎಷ್ಟು ಎಕರೆ ಲೂಟಿ ಆಗಿದೆ ಅದನ್ನ ನೋಡಿ. ಅದರ ಬಗ್ಗೆ ಎಲ್ಲೂ ಚರ್ಚೆ ಆಗ್ತಿಲ್ಲಾ. ಇಲ್ಲಿ ಕೋರ್ಟ್ ಇದೆ ತೀರ್ಮಾನ ತೆಗೆದುಕೊಳ್ಳುತ್ತೆ, ನ್ಯಾಯಾಲಯದ ತೀರ್ಪಿಗೆ HMT ಅವ್ರು ಹಾಗೂ ಎಲ್ರು ತಲೆಬಾಗಬೇಕುತ್ತಾರೆ ಎಂದರು.

ಕೇತಗಾನಹಳ್ಳಿ ಭೂಒತ್ತುವರಿ ಆಗಿದೆ ಅಂತಾ ಇವರು ತನಿಖೆ ಮಾಡಲು ಮುಂದಾಗಿದ್ದಾರೆ. ಕೇತಗಾನಹಳ್ಳಿಗೆ ಸಂಬಂಧಿಸಿದಂತೆ ಕಳೆದ ನಲವತ್ತು ವರ್ಷಗಳಿಂದ ತನಿಖೆ ‌ನಡೆಯುತ್ತಿದೆ. ಹಲವು ಹೈಕೋರ್ಟ್ ಆದೇಶಗಳ ಆದೇಶಗಳ ಮೇರೆಗೆ ದಾಖಲೆ ನೋಡಿ, ಸರ್ವೆ ಮಾಡಿ ಸುಸ್ತಾಗಿದ್ದಾರೆ. ಕೇತಗಾನಹಳ್ಳಿ ಯಲ್ಲಿ ಯಾವುದೇ ಒತ್ತುವರಿ ಮಾಡಿದ್ರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ, ನಮ್ಮ ಆಕ್ಷೇಪ ಏನಿಲ್ಲ. ಅಲ್ಲಿ 1980 ರಲ್ಲಿ ಪ್ರಾರಂಭವಾಗಿರೋದು ಇನ್ನೂ ನಿಂತಿಲ್ಲ. ಈ ಸರ್ಕಾರಕ್ಕೆ ಮಾನ ‌ಮರ್ಯಾದೆ ಬೇಡವಾ? ಇದು ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಆಸ್ತಿ. ಇನ್ನೊಬ್ಬರ ತರ ಕಳ್ಳ ಬೇಲಿ ಹಾಕಿಕೊಂಡು ಪಡ್ಕೊಂಡಿರೋದಲ್ಲ.. ಸರ್ಕಾರ ಯಾವ ತರಹ ಬೇಕಾದರೂ ತನಿಖೆ ಮಾಡಿಕೊಳ್ಳಲಿ, ನಾನು ಸಿದ್ಧವಾಗಿ ಇದ್ದೇನೆ ಎಂದು ಸವಾಲು ಹಾಕಿದರು.

'HDK ದುಷ್ಕರ್ಮಿಗಳಿಗೆ ಬೆಂಬಲ ನೀಡುತ್ತಿದ್ದಾರೆನ್ನುವ ಅನುಮಾನ ಕಾಡುತ್ತಿದೆ'

ಮಂಡ್ಯಕ್ಕೆ ಮಾತ್ರ ಸೀಮಿತ ಸಿಎಂ ಹೇಳಿಕೆಗೆ ತಿರುಗೇಟು:

ಕುಮಾರಸ್ವಾಮಿ ಮಂಡ್ಯಕ್ಕೆ ಮಾತ್ರ ಸೀಮಿತಾರಾಗಿದ್ದಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಕಳೆದ ನಾಲ್ಕು ತಿಂಗಳ ನನ್ನ ಟಿಪಿ‌ ನೋಡಿದ್ದಾರಾ ಅವರು? ನನ್ನ ಇಲಾಖೆ ನಡೆಸಲು ಹಲವು ರಾಜ್ಯಗಳಿಗೆ ಹೋಗಿದ್ದೇನೆ. ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್ಗಢ, ಆಂಧ್ರ, ತಮಿಳುನಾಡಿಗೆ ಹೋಗಿ ಬಂದಿದ್ದೇನೆ. ನಾನು ಎಷ್ಟು ರಾಜ್ಯಗಳಿಗೆ ಹೋಗಿದ್ದೀನಿ ಗೊತ್ತಿದೆಯಾ ಅವರಿಗೆ? ದೆಹಲಿಯಲ್ಲಿ ಸಮಯ ವ್ಯರ್ಥ ಮಾಡದೇ ಕೆಲಸ ಮಾಡ್ಡಿದ್ದೇನೆ. ಇವರಿಂದ ನಾನು ಸರ್ಟಿಫಿಕೇಟ್ ತಗೊಳ್ಳೋ ಅಗತ್ಯ ಇಲ್ಲ. ಕರ್ನಾಟಕಕ್ಕೆ ಬರಲೇಬಾರದಾ ನಾನು? ನನ್ನ ಗೆಲ್ಲಿಸಿದ ಜನರ ಕಷ್ಟ ಕೇಳಲು ಬರಲೇಬಾರದಾ? ನಾನು ಕರ್ನಾಟಕಕ್ಕೆ ಬಂದರೆ ಇವರು ನಿದ್ದೆಗೆಡ್ತಾರೆ ಅಂತಾಯ್ತು ಅಲ್ಲಿಗೆ ಎಂದು ಟಾಂಗ್ ನೀಡಿದರು.

click me!