ನಾನು ಈ ಜಿಲ್ಲೆಯಲ್ಲಿ ಬೇನಾಮಿ ಆಸ್ತಿಮಾಡಿದ್ದರೆ ಸರ್ಕಾರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ದ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಆರೋಪಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದರು.
ಹಾಸನ (ಜ.12): ನಾನು ಈ ಜಿಲ್ಲೆಯಲ್ಲಿ ಬೇನಾಮಿ ಆಸ್ತಿಮಾಡಿದ್ದರೆ ಸರ್ಕಾರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ದ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಆರೋಪಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನದಲ್ಲಿ ರೇವಣ್ಣ ಕುಟುಂಬದ ವಿರುದ್ದ ಮಾಜಿ ಶಾಸಕ ಎಟಿ ರಾಮಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿ ರಾಮಸ್ವಾಮಿ ಅವರು ಯಾವುದೇ ದಾಖಲೆ ಇಲ್ಲದೆ, ಪೂರ್ವಾಗ್ರಹ ಪೀಡಿತರಾಗಿ ತಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ಯಾವುದೇ ತಿರುಳಿಲ್ಲದ ವಿಚಾರವನ್ನು ರಾಜಕೀಯ ಗೊಳಿಸುತ್ತಿರುವುದು ದುರದೃಷ್ಟಕರ. ಅನ್ಯಾಯಕ್ಕೆ ಒಳಗಾದ ಮಹಿಳೆ ಹೆಸರಿನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಯತ್ನ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದಿನ ವಿಚಾರ ಇಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ. ಅಂತಹ ಆರೋಪ ಏನಾದರೂ ಇದ್ದರೆ ಯಾವುದೇ ತನಿಖೆ ಬೇಕಿದ್ದರೆ ಮಾಡಲಿ ಎಂದು ಸವಾಲು ಹಾಕಿದರು.
undefined
‘ರಾಜ್ಯದಲ್ಲಿ ಎಲ್ಲಾ ರೀತಿಯ ತನಿಖೆ ಎದುಸಿರೋದು ದೇವೇಗೌಡರ ಕುಟುಂಬ. ಆ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹಲವು ನಾಯಕರಿದ್ದ ಬಗ್ಗೆ ಓದಿದ್ದೇನೆ. ನಾನು ಈ ಜಿಲ್ಲೆಯಲ್ಲಿ ಬೇನಾಮಿ ಆಸ್ತಿ ಮಾಡಿದ್ದರೆ ಸರ್ಕಾರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ದ. ಯಾವುದಾದರೂ ಬೇನಾಮಿ ಪಟ್ಟಿ ಇದ್ದರೆ ಯಾವುದಾದರೂ ಸಂಸ್ಥೆಗೆ ದೂರು ಕೊಡಲಿ’ ಎಂದು ಹೇಳಿದರು. ‘ನಾನು ಈ ಜಿಲ್ಲೆಯಲ್ಲಿ ಯಾವ ದೌರ್ಜನ್ಯ ಮಾಡಿಸಿದ್ದೀನಿ, ಯಾವ ಆಸ್ತಿ ಪಡೆದಿದ್ದೇನೆ ಎಂದು ಹೇಳಲಿ, ಪ್ರತಿ ನಟನೆಗೆ ಹೇಗೆ ಕರೆದುಕೊಂಡು ಬಂದರು, ಹೇಗೆ ಪೇಮೆಂಟ್ ಆಯ್ತು ಗೊತ್ತಿದೆ. ಇದೇ ರೀತಿ ಮಾಡಿದರೆ ಕಾನೂನು ಹೋರಾಟ ಏನು ಮಾಡಬೇಕೊ ಮಾಡ್ತೀನಿ’ ಎಂದು ಎಚ್ಚರಿಕೆ ಕೊಟ್ಟರು.
ಮಾಜಿ ಸಿಎಂ ಎಚ್‌ಡಿಕೆ-ಬಿಜೆಪಿ ನಾಯಕರ ಭೇಟಿ: ಯಾಕೆ ಗೊತ್ತಾ?
‘ನಮಗೆ ಮೋದಿ ಅವರ ಬಗ್ಗೆ ಅಪಾರ ಗೌರವ ಇದೆ. ದೇಶಕ್ಕೆ ಈಗ ಮೋದಿಯವರ ಅಧಿಕಾರದ ಅವಶ್ಯಕತೆ ಇದೆ. ಕಾಂಗ್ರೆಸ್ ನಾಯಕರು ರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ ಎಂದಿದ್ದಾರೆ. ಅವರು ತಮ್ಮ ಓಟ್ ಬ್ಯಾಂಕ್ ಉಳಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ಕಾಂಗ್ರೆಸ್‌ನವರು ಬೇಕಾದಾಗ ಉಪಯೋಗಿಸಿಕೊಳ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ರಾಮಸ್ವಾಮಿ ಅವರು ಕಾಂಗ್ರೆಸ್ ಸೇರೋ ಪ್ರಯತ್ನ ಮಾಡಿದರು. ಆನಂತರ ಏನೇನಾಯ್ತು ನಿಮಗೆ ಗೊತ್ತಿದೆ. ಅವರು ಸತ್ಯ ತಿಳಿಯದೆ ಹೀಗೆ ಆರೋಪ ಮಾಡಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಈಗ ಲೋಕಸಭಾ ಚುನಾವಣೆ ಹತ್ತಿರ ಬರ್ತಾ ಇದೆ. ಈಗ ಹೋರಾಟ ಮಾಡೋ ಬದಲು ವರ್ಷದ ಹಿಂದೆಯೆ ಮಾಡಬೇಕಿತ್ತು’ ಎಂದು ಸಲಹೆ ನೀಡಿದರು. ಹಾಸನದಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹೆಸರು ವಿಚಾರದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ದೇವೇಗೌಡರು ಕುಮಾರಸ್ವಾಮಿ ಏನು ಹೇಳ್ತಾರೆ ಅದೇ ಅಂತಿಮ ಎಂದು ಹೇಳಿದರು.