Assembly Election: ಸಿದ್ದರಾಮಯ್ಯಗೆ ಗೆಲ್ಲುವ ಸಂಶಯ ಬಂದರೆ ನಿವೃತ್ತಿ ಒಳಿತು: ಈಶ್ವರಪ್ಪ

Published : Nov 17, 2022, 08:18 AM ISTUpdated : Nov 17, 2022, 08:25 AM IST
Assembly Election: ಸಿದ್ದರಾಮಯ್ಯಗೆ ಗೆಲ್ಲುವ ಸಂಶಯ ಬಂದರೆ ನಿವೃತ್ತಿ ಒಳಿತು: ಈಶ್ವರಪ್ಪ

ಸಾರಾಂಶ

ಮುಖ್ಯಮಂತ್ರಿ ಆಗಿದ್ದವರಿಗೆ ಯಾವ ಕ್ಷೇತ್ರದಲ್ಲಿಯೂ ಗೆಲ್ಲುವ ಸಾಧ್ಯತೆಯೇ ಕಂಡು ಬಾರದ ಸ್ಥಿತಿ ಎದುರಾಗುತ್ತಿದೆ ಎಂದರೆ, ಅವರು ರಾಜಕೀಯ ನಿವೃತ್ತಿ ಪಡೆಯುವುದು ಒಳ್ಳೆಯದು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸಿದ್ದರಾಮಯ್ಯನವರಿಗೆ ಟಾಂಗ್‌ ನೀಡಿದರು.

ಶಿವಮೊಗ್ಗ (ನ.17) : ಮುಖ್ಯಮಂತ್ರಿ ಆಗಿದ್ದವರಿಗೆ ಯಾವ ಕ್ಷೇತ್ರದಲ್ಲಿಯೂ ಗೆಲ್ಲುವ ಸಾಧ್ಯತೆಯೇ ಕಂಡು ಬಾರದ ಸ್ಥಿತಿ ಎದುರಾಗುತ್ತಿದೆ ಎಂದರೆ, ಅವರು ರಾಜಕೀಯ ನಿವೃತ್ತಿ ಪಡೆಯುವುದು ಒಳ್ಳೆಯದು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸಿದ್ದರಾಮಯ್ಯನವರಿಗೆ ಟಾಂಗ್‌ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಬಾರಿ ಸಮೀಕ್ಷೆ ನಡೆಸಿದರೂ ಜನ ಒಪ್ತಾರಾ ಅಥವಾ ಇಲ್ಲವೋ ಎಂದ ಗೊಂದಲವೇ ಇವರಿಗೆ ಬಗೆಹರಿಯುತ್ತಿಲ್ಲ. ಇಷ್ಟುಗೊಂದಲ, ಆತಂಕ ಇಟ್ಟುಕೊಂಡು ಸ್ಪರ್ಧೆಯಾದರೂ ಯಾಕೆ ಬೇಕು ಎಂದು ಪ್ರಶ್ನಿಸಿದರು.

Shivamogga News: ಜಲಸಂಪನ್ಮೂಲ ಸಂರಕ್ಷಣೆ ಎಲ್ಲರ ಕರ್ತವ್ಯ: ಈಶ್ವರಪ್ಪ

ಸಿದ್ದರಾಮಯ್ಯ ಚುನಾವಣೆಗೆ ನಿಂತು ವಿಪಕ್ಷ ನಾಯಕ ನಾನೇ ಆಗಬೇಕು, ಮುಖ್ಯಮಂತ್ರಿ ನಾನೇ ಆಗಬೇಕು ಎಂದು ಒಂದೇ ಸಮನೆ ಹೇಳುತ್ತಿದ್ದಾರೆ. ಇವರ ಬದಲು ಬೇರೆ ಯಾರೂ ನಾಯಕರೇ ಇಲ್ಲವೇ? ಏನನ್ನೂ ಮಾಡದ ಇವರಿಗೆ ಅಲ್ಲಿನ ಜನ ಗೆಲ್ಲಿಸುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಈಗ ಎಲ್ಲಿ ನಿಲ್ಲಲಿ ಎಂದು ಒಂದೇ ಸಮನೆ ಸುತ್ತುತ್ತಿದ್ದಾರೆ. ಒಮ್ಮೆ ಬಾದಾಮಿ ಅಂದ್ರು, ಇನ್ನೊಮ್ಮೆ ಚಾಮರಾಜಪೇಟೆ ಅಂದ್ರು, ಆ ಬಳಿಕ ಚಾಮುಂಡೇಶ್ವರಿ ನಿಲ್ಲಲ್ಲ ಕೋಲಾರ ಅಂದ್ರು. ಯಾವುದಾದರೂ ಒಂದು ಕ್ಷೇತ್ರದಲ್ಲಿ ಅರ್ಜಿ ಹಾಕು ಪುಣ್ಯಾತ್ಮ..? ಎಂತಹ ಅಲೆಮಾರಿಯಯ್ಯಾ ನೀನು ಎಂದು ಛೇಡಿಸಿದರು.

ಇನ್ನೂ ಪಕ್ಷದ ಟಿಕೆಟ್‌ಗೆ ಅರ್ಜಿಯನ್ನೇ ಹಾಕಿಲ್ಲ. ಅರ್ಜಿ ಹಾಕಲು ಕ್ಷೇತ್ರವೇ ಸಿಕ್ಕಿಲ್ಲವಲ್ಲ. ಆದರೆ ಪಕ್ಷ ನ.15 ಕೊನೆ ದಿನಾಂಕ ಎಂದು ಹೇಳಿತ್ತು. ಕೆಪಿಸಿಸಿ ಅಧ್ಯಕ್ಷರ ಸೂಚನೆಯನ್ನು ಕೂಡ ಸಿದ್ದರಾಮಯ್ಯ ಮೀರುತ್ತಾರೆ. ಇದೀಗ ಅರ್ಜಿ ಸಲ್ಲಿಕೆ ದಿನಾಂಕವನ್ನು ನ.20ಕ್ಕೆ ಮುಂದೂಡಿದ್ದಾರೆ. ಸರಿಯಾಗಿ ಅರ್ಜಿ ಬಂದಿಲ್ಲ ಎಂದೋ ಅಥವಾ ಇನ್ನಷ್ಟುದುಡ್ಡ ಬರಲಿ ಎಂದು ಈ ರೀತಿ ವಿಸ್ತರಣೆ ಮಾಡಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಅಲ್ಲದೆ, ಕಾಂಗ್ರೆಸ್‌ ಮಧ್ಯಮ ವರ್ಗದ ಕಾರ್ಯಕರ್ತರು ದುಡ್ಡಿಲ್ಲ ಎಂದರೆ ಸ್ಪರ್ಧಿಸಲೇಬಾರದು. ದುಡ್ಡಿದ್ದವರು ಮಾತ್ರ ಸ್ಪರ್ಧಿಸಬೇಕು ಎಂಬುದು ಪಕ್ಷದ ನೀತಿ ಆಗಿರಬೇಕು ಎಂದರು.

ಈಶ್ವರಪ್ಪಗೆ ಸಚಿವ ಸ್ಥಾನ ನೀಡಿ: ಹಿಂದುಳಿದ ಒಕ್ಕೂಟ ಒತ್ತಾಯ

ಸಿದ್ದು ವಿರೋಧ ಅರ್ಥಹೀನ:

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಬಿಜೆಪಿ ಶೇ.10ರಷ್ಟುಮೀಸಲಾತಿ ನಿಗದಿ ವಿರೋಧಿಸಿರುವ ಸಿದ್ದರಾಮಯ್ಯ ಆ ಪಕ್ಷದ ನೀತಿಯನ್ನೇ ವಿರೋಧಿಸುತ್ತಿದ್ದಾರೆ. ಮಾತ್ರವಲ್ಲ, ಎಲ್ಲ ವರ್ಗದ ಬಡವರ ವಿರುದ್ಧ ಸಿದ್ದರಾಮಯ್ಯ ಇದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ. ಸುಪ್ರೀಂಕೋರ್ಚ್‌ ಕೂಡ ಈ ಮೀಸಲಾತಿ ಒಪ್ಪಿಕೊಂಡಿದೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೈರಾಮ್‌ ರಮೇಶ್‌ ಸೇರಿ ಕಾಂಗ್ರೆಸ್‌ನ ಹಿರಿಯ ನಾಯಕರೆಲ್ಲರೂ ಇದನ್ನು ಸ್ವಾಗತಿಸಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಇದನ್ನು ವಿರೋಧಿಸುವ ಮೂಲಕ ಬಡವರ ವಿರೋಧಿ ಮನಃಸ್ಥಿತಿ ತೋರಿಸಿದ್ದಾರೆ. ಈ ರೀತಿಯ ನಿಲುವು ತಾಳಿದ್ದಕ್ಕಾಗಿ ದೇಶದ ಬಡವರ ಕ್ಷಮೆ ಕೋರಬೇಕೆಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್