ಹಿಂದೂ ಮಂತ್ರ ಜಪ ಬಿಟ್ಟರೆ ಬಿಜೆಪಿಗರಿಗೆ ಬೇರೇನೂ ಗೊತ್ತಿಲ್ಲ: ತಿಮ್ಮಾಪೂರ

By Girish Goudar  |  First Published Nov 16, 2022, 11:30 PM IST

ಸಿಎಂ ನೇತೃತ್ವದಲ್ಲಿ ತಕ್ಷಣ ಸಭೆ ಕರೆದು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಿ: ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ 
ಬಾಗಲಕೋಟೆ(ನ.16):
ಕಳೆದ 48 ದಿನಗಳಿಂದ ಮುಧೋಳದಲ್ಲಿ ಕಬ್ಬು ಬೆಳೆಗಾರರು ಹೋರಾಟ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕೆಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. 

ಇಂದು(ಬುಧವಾರ) ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ವಿಷಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಜಿಲ್ಲೆಯ ಉಸ್ತುವಾರಿ ಮಂತ್ರಿಗಳಿಗೂ ಜವಾಬ್ದಾರಿ ಇಲ್ಲ, ನಿತ್ಯ ಕಬ್ಬು ಬೆಳೆಗಾರರು ಹೋರಾಟದಲ್ಲಿ ದಿನಗಳೆಯುವಂತಾಗಿದೆ. ಹೀಗಾಗಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಮುನ್ನ ಎಚ್ಚೆತ್ತುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.

Tap to resize

Latest Videos

undefined

ಸಿದ್ದರಾಮಯ್ಯ ಮಾಡಿದ ಹಾಗೆ ಉಂಡ ಮನೆ ಜಂತಿ ಎಣಿಸೋದಿಲ್ಲ: ಶ್ರೀರಾಮುಲು

ಸಿದ್ದರಾಮಯ್ಯ ಈಜ್ ಮಾಸ್ ಲೀಡರ್...ರಾಜ್ಯದ ಯಾವುದೇ ಕ್ಷೇತ್ರದಿಂದ ಗೆಲ್ಲುವ ಮಹಾನ್ ಶಕ್ತಿವಂತ

ಸಿದ್ದರಾಮಯ್ಯ ಈಸ್ ಮಾಸ್ ಲೀಡರ್, ಅವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ನಿಂತರೂ ಗೆಲ್ಲುವ ಮಹಾನ್ ಶಕ್ತಿವಂತ ಎಂದು ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ಅಂತಹ ಮಹಾನ್ ನಾಯಕ ಸಿದ್ದರಾಮಯ್ಯನವರ ಬಗ್ಗೆ ಮಾತಾಡೋರ ಬಗ್ಗೆ ಏನು ಹೇಳಬೇಕು ಅರ್ಥವಾಗ್ತಿಲ್ಲ ಎಂದರು.

ಇವರಿಗೆ ನಾಚಿಕೆ ಮಾನ ಮರ್ಯಾದೆ ಏನು ಇಲ್ಲ. ಸಣ್ಣತನದಿಂದ ಮಾತನಾಡುವವರಿಗೆ ಏನು ಹೇಳುವುದು ಎಂದ ಅವರು ಬಾದಾಮಿಯಲ್ಲಿ ನಿಲ್ಲೋಕೆ ಒತ್ತಾಯ ಮಾಡ್ತೀವಿ. ಬನ್ನಿ ಸರ್, ನಾವೆಲ್ಲಾ ಒಟ್ಟಾಗಿ  ಕೆಲ್ಸ ಮಾಡ್ತೀವಿ. ಜನರ ಈ ಬಾರಿಯೂ ಬರಲಿ ಅಂತ ಬಯಸ್ತಿದ್ದಾರೆ ಎಂದು ಹೇಳುತ್ತೇವೆ ಎಂದರಲ್ಲದೆ, ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಕೆಲಸ ನೆನಪಿಸಿಕೊಳ್ತಿದ್ದಾರೆ. ಬಾದಾಮಿಯಲ್ಲಾದ ಅಭಿವೃದ್ಧಿ ನೋಡಿ ಜನ ಚಾಮರಾಜ ಪೇಟೆಗೆ ಬನ್ನಿ, ಕೋಲಾರಕ್ಕೆ ಬನ್ನಿ ಅಂತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಿಲ್ಲ ಎಂದು ಸಣ್ಣತನದ ಮಾತುಗಳನ್ನು ಆಡುವುದು ಸರಿಯಲ್ಲ ಎಂದರು.

ಹಿಂದೂ ಮಂತ್ರ ಜಪ ಬಿಟ್ಟರೆ ಬಿಜೆಪಿಗರಿಗೆ ಬೇರೇನೂ ಗೊತ್ತಿಲ್ಲ

ಬಿಜೆಪಿ ಸರ್ಕಾರಕ್ಕೆ ಅನ್ನ ಕೊಡೊದು ಗೊತ್ತಿಲ್ಲ, ನೀರು ಕೋಡೊದು ಗೊತ್ತಿಲ್ಲ, ಅಭಿವೃದ್ಧಿ ಗೊತ್ತಿಲ್ಲ, ಬೆಳಗಾದರೆ ಸಾಕು ಹಿಂದು ಹಿಂದು ಎನ್ನುವ ಮಂತ್ರ ಜಪಿಸುವುದು, ಇದನ್ನು ಬಿಟ್ಟರೆ ಬಿಜೆಪಿಗರಿಗೆ ಬೇರೆ  ಏನೂ ಗೊತ್ತಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಬಿಜೆಪಿಗರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅವರು ಇವರಷ್ಟೆ ಹಿಂದುಗಳಾ ? ಕಾಂಗ್ರೆಸ್ ನಲ್ಲಿ ಶೇಕಡಾ 99 ರಷ್ಟು ಜನ ಹಿಂದುಗಳಿದ್ದಾರೆ. ಏನು ಹಿಂದೂ ಅಂದ್ರೆ, ಐ ಆಮ್ ಆಲ್ಸೋ ಹಿಂದೂ. ನಮ್ಮಪ್ಪ ಹಿಂದು, ನಮ್ಮಜ್ಜಿ ಹಿಂದೂ, ನಾನು, ನನ್ನಮಗ ಹಿಂದೂ. ಇವರಪ್ಪನ ಮನೆ ಆಸ್ತೀನಾ ಹಿಂದುತ್ವ ಅಂದ್ರೆ ಎಂದು ಖಾರವಾಗಿ ಪ್ರಶ್ನಿಸಿದರು. ನಾನು ಹಿಂದೂನೇ, ದಲಿತ ನಾನು. ಅಸ್ಪೃಶ್ಯತೆಗೆ ನಾನು ಒಳಗೊಳ್ಳುತ್ತೇನೆ. ಆದರೂ ನಾನು ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುತ್ತೇನೆ. ಅಸ್ಪೃಶ್ಯತೆ ಹೋಗಲಾಡಿಸಲು ನೀವೇನಾದ್ರೂ ಪ್ರಯತ್ನಪಟ್ಟಿದ್ದೀರಾ ಎಂದು ಪ್ರಶ್ನಿಸಿದರು.

ಹಿಂದುತ್ವ ಪದದ ಬಗ್ಗೆ ಜಾರಕಿಹೊಳಿ ಸಾಹೇಬ್ರು ಇರೋ ವಿಷಯ ಹೇಳಿದ್ದಾರೆ.  ಯಾವುದೋ ಒಂದು ಭಾಷೆಯಲ್ಲಿ ಹಿಂದೂ ಪದಕ್ಕೆ ಅಪಶಬ್ಧ ಇದೆ ಅಂತ ಹೇಳಿದ್ದಾರೆ. ಸರ್ಕಾರದವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಬೆಳಗಿನಿಂದ ಸಂಜೆವರೆಗೆ ಹಾಗಂದ್ರೂ, ಹೀಗಂದ್ರೂ ಎನ್ನುತ್ತಾರೆ. ಇವರಿಗೆ ಮಾಡೋಕೆ ಏನು ಕೆಲಸ ಇಲ್ಲ. ಅಭಿವೃದ್ಧಿ ಅಂದ್ರೆ ಏನಿ ಅಂತಾನೆ ಇವರಿಗೆ ಗೊತ್ರಿಲ್ಲ ಎಂದರು.

ಬಾಗಲಕೋಟೆ: ಇಂಚಗೇರಿಯಿಂದಲೇ ಗೋವಾ ವಿಮೋಚನೆ, ಸಿಎಂ ಪ್ರಮೋದ ಸಾವಂತ್‌

ಹಿಂದೂಗಳ ಹೆಸರಲ್ಲಿ ಹೇಗೆ ಅಧಿಕಾರಕ್ಕೆ ಬರೋದು ಅಂತೀರಿ. ಅಧಿಕಾರಕ್ಕೆ ಬಂದರೂ ಹಿಂದೂಗಳಿಗೆ ಏನು ಮಾಡಿದ್ದೀರಿ. ನಾನು ಹಿಂದೂ ಇದೀನಿ, ಅಸ್ಪೃಶ್ಯತೆ ಬಗ್ಗೆ ನೀವೇನು ಮಾಡಿದ್ದೀರಿ. ದಲಿತರು ಸತ್ತೋಗ್ತಿದ್ದಾರೆ. ಮರ್ಡರ್ ಆಗ್ತಿದ್ದಾವೆ. ಅದರ ಬಗ್ಗೆ ಯಾರನ್ನಾದರೂ ಅರೆಸ್ಟ್ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿ, ಸತ್ತ ಅಸ್ಪೃಶ್ಯರು ಹಿಂದೂಗಳಲ್ವಾ ಎಂದರು.

2023ಕ್ಕೆ ಯಾರು ಸವೆದು ಹೋಗ್ತಾರೆ, ಯಾರೂ ಚಲಾವಣೆಗೆ ಬರ್ತಾರೆ ಅಂತ ಜನರೇ ತೀರ್ಮಾಣಿಸ್ತಾರೆ 

ನಿರುದ್ಯೋಗಿ ಔಟಡೇಟೆಡ್ ರಾಜಕಾರಣಿ ಎಂದ ಸಚಿವ ಕಾರಜೋಳ ವಿರುದ್ಧ ತಿಮ್ಮಾಪೂರ ವಾಗ್ದಾಳಿ ನಡೆಸಿದ ಅವರು, ಯಾರು ಸವೆದು ಹೋಗ್ತಾರೆ, ಯಾರೂ ಚಲಾವಣೆಗೆ ಬರ್ತಾರೆ ಎಂದು ಜನ ತೀರ್ಮಾನ ಮಾಡ್ತಾರೆ. ಇವರು ಯಾರ ಜೊತೆ ಹೋಗಿದ್ರೂ, ಏನು ಲೂಟಿ ಹೊಡೆದ್ರು, ಏನು ಕುತಂತ್ರ ಮಾಡಿದ, ಯಾರ ಜೊತೆ ಸೇರಿ ನನಗೆ ಟಿಕೆಟ್ ತಪ್ಪಿಸಲು ನೋಡಿದ್ರು ಗೊತ್ತಿದೆ, ಜನ ಎಲ್ಲವನ್ನೂ ನೋಡ್ತಾರೆ. 20 ವರ್ಷ ಏನು ಆಳ್ವಿಕೆ ಮಾಡಿದ್ರು, ಎಷ್ಟು ಲೂಟಿ ಹೊಡೆದ್ರು ಗೊತ್ತಿದೆ. 2023ಕ್ಕೆ ಜನರೇ ಇವರನ್ನ ರಿಟೈರ್ಡ್ ಮಾಡ್ತಾರೆ. ಇವರ ಬಗ್ಗೆ ಇಂಚಿಂಚು ಮಾಹಿತಿ ಕೊಡ್ತೇನೆ. ಇವರ ಬಂಡವಾಳವನ್ನ 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಬಿಚ್ಚಿಡುತ್ತೇನೆ ಎಂದು ತಿಮ್ಮಾಪೂರ ಹೇಳಿದರು.
 

click me!