ಕಮ್ಮಿ ಅನುದಾನ: ಕಾಂಗ್ರೆಸ್‌ ಶಾಸಕರ ಕಿಡಿ..!

Published : Nov 17, 2022, 03:42 AM IST
ಕಮ್ಮಿ ಅನುದಾನ: ಕಾಂಗ್ರೆಸ್‌ ಶಾಸಕರ ಕಿಡಿ..!

ಸಾರಾಂಶ

ಕಾಂಗ್ರೆಸ್‌ ಶಾಸಕರಿಗೆ ಕೊಟ್ಟ ಕಡಿಮೆ ಅನುದಾನಕ್ಕೂ ಅಧಿಕಾರಿಗಳಿಂದ ತಡೆ, ಮುಖ್ಯಮಂತ್ರಿಗಳ ಮಧ್ಯಪ್ರವೇಶಕ್ಕೆ ನಗರದ ಕಾಂಗ್ರೆಸ್‌ ಶಾಸಕರಿಂದ ಆಗ್ರಹ

ಬೆಂಗಳೂರು(ನ.17): ಬಿಜೆಪಿ ಶಾಸಕರಿರುವ 15 ಕ್ಷೇತ್ರಗಳ ಮಳೆ ನೀರು ಕಾಲುವೆ ಕಾಮಗಾರಿಗಳಿಗೆ ಬರೋಬ್ಬರಿ .1,204 ಕೋಟಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರವು ಕಾಂಗ್ರೆಸ್‌ ಶಾಸಕರ 12 ಕ್ಷೇತ್ರಗಳಿಗೆ ನಿಗದಿ ಮಾಡಿರುವ .221.9 ಕೋಟಿಯನ್ನೂ ಬಿಡುಗಡೆ ಮಾಡದೆ ತಾರತಮ್ಯ ಎಸಗುತ್ತಿದೆ ಎಂದು ಕಾಂಗ್ರೆಸ್‌ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯ ಹಿರಿಯ ಅಧಿಕಾರಿಗಳು ಕಾಂಗ್ರೆಸ್‌ ಕ್ಷೇತ್ರಗಳಲ್ಲಿನ ಕಾಮಗಾರಿಗಳಿಗೆ ಉದ್ದೇಶಪೂರ್ವಕವಾಗಿ ತಡೆ ಹಿಡಿದಿದ್ದು, ಇದರಿಂದ ಮುಂದಿನ ಮಳೆಗಾಲದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ. ಮುಖ್ಯಮಂತ್ರಿಯವರು ಕೂಡಲೇ ಮಧ್ಯಪ್ರವೇಶಿಸಿ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್‌ ಶಾಸಕರು ಎಚ್ಚರಿಸಿದ್ದಾರೆ.

ಮಳೆ ನೀರು ಕಾಲುವೆಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಪ್ರವಾಹ ಉಂಟಾಗಿ ಕಳೆದ ತಿಂಗಳಷ್ಟೇ ವಿಶ್ವ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಾದರೂ ಸರ್ಕಾರ ಬುದ್ಧಿ ಕಲಿತಿಲ್ಲ. ಅನುದಾನ ಹಂಚಿಕೆಯಲ್ಲಿ ತೀವ್ರ ತಾರತಮ್ಯ ವಹಿಸಿರುವ ಸರ್ಕಾರವು, ಅನುದಾನ ಬಿಡುಗಡೆ ಹಾಗೂ ಕಾಮಗಾರಿ ಆದೇಶದಲ್ಲೂ ಅನ್ಯಾಯ ಎಸಗುತ್ತಿದೆ ಎಂದು ಕಾಂಗ್ರೆಸ್‌ ಶಾಸಕರು ಆರೋಪಿಸಿದ್ದಾರೆ.

ಹಿಂದೂ ಮಂತ್ರ ಜಪ ಬಿಟ್ಟರೆ ಬಿಜೆಪಿಗರಿಗೆ ಬೇರೇನೂ ಗೊತ್ತಿಲ್ಲ: ತಿಮ್ಮಾಪೂರ

ಶೇ.82ರಷ್ಟು ಅನುದಾನ ಬಿಜೆಪಿ ಪಾಲು!

ಬೆಂಗಳೂರಿನಲ್ಲಿ ಮಳೆ ನೀರು ಕಾಲುವೆಗಳ ನಿರ್ಮಾಣ, ನಿರ್ವಹಣೆ ಕಾಮಗಾರಿಗಳಿಗೆ .1,465.64 ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಬಿಜೆಪಿ ಶಾಸಕರಿರುವ 15 ಕ್ಷೇತ್ರಗಳಿಗೆ ಬರೋಬ್ಬರಿ .1,204.41 ಕೋಟಿ (ಶೇ.82) ಅನುದಾನ ನೀಡಲಾಗಿದೆ. ಕಾಂಗ್ರೆಸ್‌ ಶಾಸಕರಿರುವ 12 ಕ್ಷೇತ್ರಗಳಿಗೆ ಕೇವಲ .221.9 ಕೋಟಿ ಅನುದಾನ ನೀಡಿ ತೀವ್ರ ತಾರತಮ್ಯ ಎಸಗಲಾಗಿದೆ. ಜೆಡಿಎಸ್‌ ಶಾಸಕರ ದಾಸರಹಳ್ಳಿ ಕ್ಷೇತ್ರಕ್ಕೆ .33.93 ಕೋಟಿ ನೀಡಿದ್ದು, ಅವರ ಕ್ಷೇತ್ರದಲ್ಲೂ ಕಾಮಗಾರಿಗೆ ಆದೇಶ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಇದಲ್ಲದೆ, ಕಾಂಗ್ರೆಸ್‌ ಶಾಸಕರು ಎಷ್ಟುಬಾರಿ ಮುಖ್ಯಮಂತ್ರಿಗಳ ಕಚೇರಿಗೆ ಓಡಾಡಿದರೂ ಕಾಮಗಾರಿ ಟೆಂಡರ್‌ಗೆ ಮಂಜೂರಾತಿ ನೀಡಿ ಸರ್ಕಾರ ಆದೇಶ ಹೊರಡಿಸಿಲ್ಲ. ಹೀಗಾಗಿ ಕಾಂಗ್ರೆಸ್‌ ಕ್ಷೇತ್ರದಲ್ಲಿನ ಒಂದೂ ಕಾಮಗಾರಿಯೂ ಪ್ರಾರಂಭವಾಗಿಲ್ಲ. ಮುಂದಿನ ಮಳೆಗಾಲ ಶುರುವಾದರೆ ಕಳೆದ ತಿಂಗಳು ಆಗಿದ್ದಕ್ಕಿಂತ ಭೀಕರ ಪ್ರವಾಹ ಸೃಷ್ಟಿಯಾಗಲಿದೆ. ಹೀಗಿದ್ದರೂ ಸರ್ಕಾರಕ್ಕೆ ತನ್ನ ರಾಜಕೀಯ ಹಾಗೂ ಭ್ರಷ್ಟಾಚಾರದ ಸ್ವಾರ್ಥವೇ ಹೆಚ್ಚಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕ್ಷೇತ್ರಗಳಲ್ಲಿ ಮಾತ್ರ ಕಾಮಗಾರಿ:

ಬಿಜೆಪಿ ಶಾಸಕರ ಕ್ಷೇತ್ರಗಳ ಶೇ.90ರಷ್ಟು ಕಾಮಗಾರಿ ಆರಂಭವಾಗಿದೆ. ಬಿಜೆಪಿ ಕ್ಷೇತ್ರಗಳಿಗೆ ಹೊಂದಿಕೊಂಡಂತೆ ಹಲವು ಕಡೆ ಕಾಂಗ್ರೆಸ್‌ ಕ್ಷೇತ್ರಗಳಿವೆ. ಬಿಜೆಪಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಮಗಾರಿಯಿಂದಾಗಿ ಸರಾಗವಾಗಿ ಹರಿಯುವ ನೀರು ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ಕಾಮಗಾರಿ ಆಗದ ಕಾರಣ ಪ್ರವಾಹ ಸೃಷ್ಟಿಸುವ ಸಾಧ್ಯತೆಯಿದೆ. ಈಗ ಕಾಮಗಾರಿಗೆ ಆದೇಶ ಮಾಡಿದರೂ ಕನಿಷ್ಠ 4 ತಿಂಗಳು ಬೇಕಾಗುತ್ತದೆ. ಹೀಗಿದ್ದರೂ ಆದೇಶ ಮಾಡದಿರುವುದರಿಂದ ಮುಂದಿನ ಮಳೆಗಾಲದಲ್ಲಿ ಪ್ರವಾಹ ಸಮಸ್ಯೆಗಳು ಮರುಕಳಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ ಅಧಿಕಾರಕ್ಕೆ ಬರೋದು ಸೂರ್ಯ, ಚಂದ್ರರಷ್ಟೇ ಸತ್ಯ, ಕುಮಾರಣ್ಣ ಮುಂದಿನ ಮುಖ್ಯಮಂತ್ರಿ'

ಬಿಜೆಪಿ ಕ್ಷೇತ್ರಗಳಿಗೆ ಹಣದ ಹೊಳೆ:

ಬಿಜೆಪಿಯ ಮಹದೇವಪುರ .226.84 ಕೋಟಿ, ಬೊಮ್ಮನಹಳ್ಳಿ .170.21 ಕೋಟಿ, ಬೆಂಗಳೂರು ದಕ್ಷಿಣ .142.31 ಕೋಟಿ, ಕೆ.ಆರ್‌.ಪುರ .124.77 ಕೋಟಿ, ರಾಜರಾಜೇಶ್ವರಿ ನಗರ .103.27 ಕೋಟಿ, ಯಶವಂತಪುರ .98.11 ಕೋಟಿ, ಯಲಹಂಕ .90.23 ಕೋಟಿ, ಪದ್ಮನಾಭನಗರ .61.38 ಕೋಟಿ, ಗೋವಿಂದರಾಜ ನಗರ .44.99 ಕೋಟಿ, ಸಿ.ವಿ.ರಾಮನ್‌ ನಗರ .41.37 ಕೋಟಿ, ಮಲ್ಲೇಶ್ವರ .24.64 ಕೋಟಿ, ರಾಜಾಜಿನಗರ .17.27 ಕೋಟಿ, ಮಹಾಲಕ್ಷ್ಮಿ ಬಡಾವಣೆ .16.42 ಕೋಟಿ, ಬಸವನಗುಡಿ .24.52 ಕೋಟಿಗಳಷ್ಟುಅನುದಾನ ನೀಡಲಾಗಿದೆ.

ಕಾಂಗ್ರೆಸ್‌ನ 12 ಶಾಸಕರಿಗೂ ಸೇರಿ ಕೇವಲ .221.9 ಕೋಟಿ ಅನುದಾನ ನೀಡಲಾಗಿದೆ. ಸರ್ಕಾರದ ತಾರತಮ್ಯದಿಂದ ಶಾಂತಿನಗರ-ಪೂರ್ವ ವಲಯದ ಕಾಮಗಾರಿ ಹೊರತುಪಡಿಸಿದರೆ ಕಾಂಗ್ರೆಸ್‌ ಪಕ್ಷದ ಶಾಸಕರಿರುವ ಹೆಬ್ಬಾಳ, ಸರ್ವಜ್ಞನಗರ, ಶಿವಾಜಿನಗರ, ಪುಲಿಕೇಶಿನಗರ, ಚಾಮರಾಜಪೇಟೆ, ಗಾಂಧಿನಗರ, ವಿಜಯನಗರ, ಬ್ಯಾಟರಾಯನಪುರ, ಯಶವಂತಪುರ ಕ್ಷೇತ್ರಗಳಲ್ಲಿ ಒಂದೂ ಕಾಮಗಾರಿಗೂ ಆದೇಶ ನೀಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಗೋಗರೆದರೂ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ