ಇಂದಲ್ಲ ನಾಳೆ ಸಿದ್ದರಾಮಯ್ಯ ಕೂಡ ಬಿಜೆಪಿಗೆ ಬರ್ತಾರೆ: ಕೆ.ಎಸ್.ಈಶ್ವರಪ್ಪ

By Kannadaprabha News  |  First Published Feb 2, 2024, 3:14 PM IST

ಸಂಸದ ಡಿ.ಕೆ.ಸುರೇಶ್‌ ಇದು ಕೇಂದ್ರದ ಬಜೆಟ್, ರಾಜ್ಯದ ಬಜೆಟ್ ಅಲ್ಲ ಎಂಬುದನ್ನು ತಿಳಿದು ಪ್ರತಿಕ್ರಿಯಿಸಲಿ. ಯಾವ ಯೋಜನೆಯಲ್ಲಿ ರಾಜ್ಯಗಳಿಗೆ ಎಷ್ಟು ಪಾಲಿದೆ ಎಂದು ಹೇಳಿಲ್ಲ. ರಾಜ್ಯಕ್ಕೆ ಎಷ್ಟು ಬರಬೇಕು ಎಂಬುದನ್ನು ಪಟ್ಟಿ ಮಾಡಿ ಕೊಡಲಿ ಎಂದರು.


ರಾಯಚೂರು (ಫೆ.02): ಭಾರತ ದೇಶ ಒ1ದಾಗಿರುವುದು ಕಾಂಗ್ರೆಸ್‌ ನಾಯಕರಿಗೆ ಇಷ್ಟವಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಭಾರತ-ಪಾಕಿಸ್ತಾನ ಬೇರೆ ಮಾಡಿದರು. ಈಗ ಜಾತಿ ಧರ್ಮದ ಹೆಸರಲ್ಲಿ ದೇಶ ಒಡೆಯುತ್ತಿದ್ದಾರೆ. ಬಜೆಟ್ ವಿಚಾರದಲ್ಲೂ ಉತ್ತರ ಭಾರತ ದಕ್ಷಿಣ ಭಾರತ ಎಂದು ಇಬ್ಭಾಗ ಮಾಡುತ್ತಿದ್ದಾರೆ ಎಂದು ದೂರಿದರು.

ಸಂಸದ ಡಿ.ಕೆ.ಸುರೇಶ್‌ ಇದು ಕೇಂದ್ರದ ಬಜೆಟ್, ರಾಜ್ಯದ ಬಜೆಟ್ ಅಲ್ಲ ಎಂಬುದನ್ನು ತಿಳಿದು ಪ್ರತಿಕ್ರಿಯಿಸಲಿ. ಯಾವ ಯೋಜನೆಯಲ್ಲಿ ರಾಜ್ಯಗಳಿಗೆ ಎಷ್ಟು ಪಾಲಿದೆ ಎಂದು ಹೇಳಿಲ್ಲ. ರಾಜ್ಯಕ್ಕೆ ಎಷ್ಟು ಬರಬೇಕು ಎಂಬುದನ್ನು ಪಟ್ಟಿ ಮಾಡಿ ಕೊಡಲಿ. ನಾವು ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಬಜೆಟ್‌ನಲ್ಲೂ ಉತ್ತರ ಭಾರತ ದಕ್ಷಿಣ ಭಾರತ ಎನ್ನುವುದು ಕಾಂಗ್ರೆಸ್ ನಾಯಕರ ಮನಸ್ಥಿತಿಯಾಗಿದೆ. ಡಿ.ಕೆ.ಸುರೇಶ್ ಕೂಗಿದ ತಕ್ಷಣ ದೇಶ ಒಡೆಯೋಕೆ ಆಗಲ್ಲ. ನಮ್ಮನ್ನು ಬಿಟ್ಟು ಈ ದೇಶದಲ್ಲಿ ಬೇರೆ ಯಾರೂ ಅಧಿಕಾರಕ್ಕೆ ಬರಲ್ಲ. ಈ ದೇಶ ಒಡೆಯುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ ಎಂದರು.

Tap to resize

Latest Videos

ಶೀಘ್ರ ಕಾಂಗ್ರೆಸ್‌ನ ಮತ್ತಷ್ಟು ನಾಯಕರು ಬಿಜೆಪಿಗೆ: ವಿಜಯೇಂದ್ರ ವಿಶ್ವಾಸ

ಪ್ರಧಾನಿ ಮೋದಿಯವರ ವಿಶೇಷ ಬಜೆಟ್ ಇದಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ. ಬಡವ, ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಯುವಕ, ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಈ ಬಜೆಟ್‌ನಲ್ಲಿದೆ. ಏಳು ಲಕ್ಷದವರೆಗೆ ತೆರಿಗೆ ವಿನಾಯಿತಿ, ಮೀನುಗಾರಿಕೆಗೆ ವಿಶೇಷ ಸಚಿವಾಲಯ, ಗರ್ಭಕೋಶ ಕ್ಯಾನ್ಸರ್‌ಗೆ ಉಚಿತ ಚಿಕಿತ್ಸೆ ಸೌಲಭ್ಯ ನೀಡಿರುವುದು ಉತ್ತಮ ನಿರ್ಧಾರ. ಈ ಬಜೆಟ್ ಜನರಪ ಯೋಜನೆ ಆಗಿದೆ ಎಂದರು. ಬಿಜೆಪಿಗೆ ಸೇರುವ ಪ್ರತಿಯೊಬ್ಬ ವ್ಯಕ್ತಿಯದು ನಾನು ಹೇಳೋಕೆ ಆಗುವುದಿಲ್ಲ. ಅಜಿತ್ ಪವಾರ್, ನಿತೀಶ್ ಕುಮಾರ್ ಬಿಜೆಪಿಗೆ ಬಂದರು. ಇವತ್ತಲ್ಲ ನಾಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದೊಡ್ಡ ಗುಂಪಿನೊಂದಿಗೆ ಬಿಜೆಪಿ ಸೇರುತ್ತಾರೆ ಕಾದುನೋಡಿ ಎಂದು ಹೇಳಿದರು.

ಇಂಡಿಯಾ ಒಕ್ಕೂಟ ಛಿದ್ರವಾಗುತ್ತದೆ: ಇಂಡಿಯಾ ಒಕ್ಕೂಟದಲ್ಲಿ ಒಡಕು ಮೂಡಿದೆ. ಕಾಂಗ್ರೆಸ್ ಜೊತೆ ಹೋಗಲ್ಲ ಅಂತಾ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಛಿದ್ರವಾಗಿ ಹೋಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸುಳ್ಳು ಗ್ಯಾರಂಟಿ ಮೂಲಕ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ನಿರ್ನಾಮ ಮಾಡ್ತೀವಿ ಅಂತ ಹೇಳಿದ್ದರು. ಬಿಜೆಪಿಯಿಂದ ಕಾಂಗ್ರೆಸ್ ಗೆ ಶಾಸಕರು ಬರುತ್ತಾರೆ ಅಂತ ಹೇಳಿದ್ದರು. ಒಬ್ಬನೇ ಒಬ್ಬ ಶಾಸಕ ಇದುವರೆಗೆ ಹೋಗಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಒಪ್ಪಲು ಯಾರೊಬ್ಬರೂ ಸಿದ್ದರಿಲ್ಲ. 

ದೇಶ ತುಂಡರಿಸುವುದೇ ಕಾಂಗ್ರೆಸ್ ಸಂಸ್ಕೃತಿ, ದೇಶ ಜೋಡಿಸುವುದು ಬಿಜೆಪಿ ಸಂಸ್ಕೃತಿ: ಕೋಟ ಶ್ರೀನಿವಾಸ ಪೂಜಾರಿ

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವು ಸಿಗಲಿಲ್ಲ. ಈ ಬಾರಿ ವಿಪಕ್ಷ ಸ್ಥಾನವನ್ನಾದರೂ ಕೊಡು ಅಂತಾ ರಾಮನನ್ನು ಬೇಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ ಸರ್ಕಾರ ಪೂರ್ಣಾವಧಿ ಪೂರೈಸಲ್ಲ: ಇಂಡಿಯಾ ಒಕ್ಕೂಟದಲ್ಲಿ ಒಡಕು ಮೂಡಿದೆ. ಕಾಂಗ್ರೆಸ್ ಜೊತೆ ಹೋಗಲ್ಲ ಅಂತಾ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಛಿದ್ರವಾಗಿ ಹೋಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ. ಸಿದ್ದರಾಮಯ್ಯ ಸರ್ಕಾರ ಪೂರ್ಣ ಅಧಿಕಾರ ಪೂರೈಸಲ್ಲ. ರಾಷ್ಟ್ರದಲ್ಲಿ ರಾಮಭಕ್ತರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು.

click me!