ಚುನಾವಣೆ ಸ್ಪರ್ಧೆ ಎಂದ ಮೇಲೆ ಸೋಲು-ಗೆಲುವು ಸಹಜ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸೋತಿದ್ದೇವೆ. ಬಿಜೆಪಿಯಲ್ಲಿ ಸೋಲು-ಗೆಲುವು ಸಂಘಟನೆಯಿಂದಲೇ ಆಗುತ್ತದೆ.
ಸೊರಬ (ಮೇ.20): ಚುನಾವಣೆ ಸ್ಪರ್ಧೆ ಎಂದ ಮೇಲೆ ಸೋಲು-ಗೆಲುವು ಸಹಜ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸೋತಿದ್ದೇವೆ. ಬಿಜೆಪಿಯಲ್ಲಿ ಸೋಲು-ಗೆಲುವು ಸಂಘಟನೆಯಿಂದಲೇ ಆಗುತ್ತದೆ. ಆದರೆ ವೈಯಕ್ತಿಕ ನಿರ್ಧಾರಗಳಿಂದ ಸೋಲು ಸಂಭವಿಸಿದ್ದರೆ ಅದನ್ನು ತಿದ್ದಿಕೊಳ್ಳುತ್ತೇನೆ ಎಂದು ಪರಾಜಿತ ಅಭ್ಯರ್ಥಿ ಕುಮಾರ ಬಂಗಾರಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ಗೆ 43 ಸಾವಿರಕ್ಕೂ ಅಧಿಕ ಮತಗಳು ಸಂದಾಯವಾಗುತ್ತವೆ ಎಂದು ನಿರೀಕ್ಷಿಸಿರಲಿಲ್ಲ. ನಾವು ಅಭಿವೃದ್ಧಿ ಮಾಡಿಯೂ ಸೋಲು ಕಂಡಿದ್ದೇವೆ. ಇದಕ್ಕೆ ವೈಯಕ್ತಿಕ ನಿರ್ಧಾರಗಳು ಕಾರಣಗಳಾದರೆ ಅದನ್ನು ತಿದ್ದಿಕೊಳ್ಳುತ್ತೇನೆ ಎಂದು ಪುನರುಚ್ಚಿಸಿದರು. ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಮುಖಂಡರ ಸ್ಪರ್ಧಾ ಕಣಕ್ಕಿಳಿಸಿ ಗೆಲುವು ಸಾಧಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ತಿಳಿಸಿದ ಅವರು, ನಮೋ ವೇದಿಕೆ ಗೆದ್ದಿದ್ದಾರೆ ಎಂದರೆ ಗೆದ್ದವರಿಗೆ ಮತ ಹಾಕಿದ್ದಾರೆ ಎಂದರ್ಥ ಎಂದರು.
ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಹಿಂದುಳಿದವರಿಗೆ ಅವಕಾಶ ಸಿಕ್ಕಿಲ್ಲ: ಆನಂದ್ ಆಸ್ನೋಟಿಕರ್
ಅಭಿವೃದ್ಧಿಯ ಆತ್ಮ ತೃಪ್ತಿ ಇದೆ: ತಾಲೂಕಿನ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಜಿಲ್ಲೆ ಹಾಗೂ ರಾಜ್ಯ, ರಾಷ್ಟ್ರೀಯ ನಾಯಕರು ಶ್ರಮಿಸಿದ್ದಾರೆ. ಆದರೆ ಬಿಜೆಪಿ ಸೋಲು, ಗೆಲುವುಗಳನ್ನು ಹಲವು ಬಾರಿ ಕಂಡಿದೆ. ಜಿಲ್ಲೆಯಲ್ಲಿ ಏಳು ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹೊಂದಲಾಗಿತ್ತು. ಆದರೆ ನಾಲ್ಕರಲ್ಲಿ ಸೋತು ಮೂರರಲ್ಲಿ ಗೆಲುವು ಕಂಡಿದ್ದೇವೆ. ಆದರೆ ಈ ಹಿಂದೆ ನೀಡಿದ ಬಹುಮತವನ್ನು ಸಂಪೂರ್ಣ ಉಪಯೋಗಿಸಿಕೊಂಡು ತಾಲೂಕಿನ ಐದು ವರ್ಷದಲ್ಲಿ ಸಮಗ್ರ ಅಭಿವೃದ್ಧಿಪಡಿಸಿದ ಆತ್ಮತೃಪ್ತಿ ತಮಗಿದೆ. ಅದನ್ನು ಅಭಿವೃದ್ಧಿ ಹೆಸರಿನಲ್ಲಿ ಸಾಧಿಸಿದ್ದೇವೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಂಡಲ ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಎಂ.ಡಿ.ಉಮೇಶ, ದೇವೇಂದ್ರಪ್ಪ ಚನ್ನಾಪುರ, ಗುರುಕುಮಾರ ಪಾಟೀಲ್ ಸೇರಿ ತಾಲೂಕಿನ ವಿವಿಧ ಬೂತ್‌ಗಳ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.
ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!
ಬಿಜೆಪಿಯ ಮತಗಳು ನಮಗೆ ಸಂದಾಯವಾಗಿವೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ನಿಂದ ಮಹಿಳೆಯರ ಮತಗಳು ನಮ್ಮನ್ನು ಬೆಂಬಲಿಸಲಿಲ್ಲ. ಇದರಿಂದ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದರೂ ಮಹಿಳೆಯರು ತಾಲೂಕಿನ ಅಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕಿತ್ತು.
-ಕುಮಾರ ಬಂಗಾರಪ್ಪ, ಮಾಜಿ ಶಾಸಕ