ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಕೇವಲ ತಮ್ಮ ಪರಿವಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಹಾರದ ಮಾಜಿ ಡೆಪ್ಯುಟಿ ಸಿಎಂ ಸುಶೀಲಕುಮಾರ ಮೋದಿ ಟೀಕಿಸಿದರು.
ಹುಬ್ಬಳ್ಳಿ (ಏ.28) : ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಕೇವಲ ತಮ್ಮ ಪರಿವಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಹಾರದ ಮಾಜಿ ಡೆಪ್ಯುಟಿ ಸಿಎಂ ಸುಶೀಲಕುಮಾರ ಮೋದಿ ಟೀಕಿಸಿದರು.
ಇಲ್ಲಿನ ದಾಜಿಬಾನಪೇಟದ ಶ್ರೀ ತುಳಜಾಭವಾನಿ ದೇವಸ್ಥಾನ(Tulujabhavani temple hubballi)ದ ಸಭಾಭವನದಲ್ಲಿ ಬುಧವಾರ ನಡೆದ ಎಸ್‌ಎಸ್‌ಕೆ ಸಮಾಜ ಹಾಗೂ ಹು-ಧಾ ಪೂರ್ವ ಕ್ಷೇತ್ರದ ಬಿಜೆಪಿ ಪಕ್ಷದ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.
ಪ್ರಧಾನಿ ಮೋದಿಯ ಆದೇಶ ಪಾಲಿಸುವ ಸಿಎಂ ಬೇಕು: ಪ್ರಹ್ಲಾದ್ ಜೋಶಿ
ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಮೋದಿ ಅವರ ಆಡಳಿತ ಮಾದರಿಯಾಗಿದೆ. ಇಡೀ ವಿಶ್ವವೇ ಮೋದಿ(Narendra Modi)ಯವರ ನಾಯಕತ್ವಕ್ಕೆ ತಲೆಬಾಗಿದ್ದು, ಬರುವ ದಿನಗಳಲ್ಲಿ ಭಾರತ ವಿಶ್ವಗುರು ಸ್ಥಾನವನ್ನು ಅಲಂಕರಿಸಲಿದೆ ಎಂದರು.
ಕೇಂದ್ರದಲ್ಲಿ ಮೋದಿ ಹಾಗೂ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ(CM Basavaraj bommai) ಸರಕಾರ ಮಾದರಿ ಕೆಲಸ ಮಾಡುತ್ತಿದೆ. ಹುಬ್ಬಳ್ಳಿಗೆ ಉತ್ತಮ ವಿಮಾನ ನಿಲ್ದಾಣ, ಗುಣಮಟ್ಟದ ರಸ್ತೆ, ರೈಲು ನಿಲ್ದಾಣ ಬಿಜೆಪಿಯ ಕೊಡುಗೆಯಾಗಿದೆ. ಹಿಂದೂಗಳ ಬಹುದಿನಗಳ ಕನಸಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಮೋದಿಯೇ ಕಾರಣ ಆಗಿದ್ದಾರೆ. ಸದ್ಯದಲ್ಲಿಯೇ ಭವ್ಯ ಮಂದಿರ ನಿರ್ಮಾಣ ಕಾರ್ಯಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಸ್‌ಎಸ್‌ಕೆ ಸಮಾಜ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದರು.
ಬಿಹಾರದ ಶಾಸಕ ಪ್ರಣವ್ ಕುಮಾರ ಯಾದವ್, ಮಾಜಿ ಶಾಸಕ ಪ್ರೇಮರಂಜನ್ ಪಟೇಲ್ ಮಾತನಾಡಿದರು. ನಂತರ ಕಮರೀಪೇಟೆಯ ರಾಮದೇವರ ಗುಡಿ ಸಭಾಭವನದಲ್ಲಿ ಮಾರವಾಡಿ ಸಮಾಜದೊಂದಿಗೆ ಬಿಹಾರ ಮಾಜಿ ಸಿಎಂ ಸುಶೀಲಕುಮಾರ ಮೋದಿ ಸಭೆ ನಡೆಸಿ, ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಬಿಜೆಪಿ ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಎತ್ತಿ ಕಟ್ಟುತ್ತಿದೆ: ಜಗದೀಶ ಶೆಟ್ಟರ್
ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ರಂಗಾ ಬದ್ದಿ, ವಿಠ್ಠಲ ಲದ್ವಾ, ಮಾಜಿ ಮಹಾಪೌರ ಸರಳ ಬಾಂಡಗೆ, ಬಾಳು ಮುಗಜಿಗೊಂಡಿ, ಭಾಸ್ಕರ ಜಿತೂರಿ, ಗೋಪಾಲ ಬದ್ದಿ ಉಪಸ್ಥಿತರಿದ್ದರು.
ಬಿಜೆಪಿ ಪಕ್ಷದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಹಲವಾರು ಸ್ಥಾನಮಾನ ನೀಡಿದ್ದರೂ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಖಂಡನೀಯ. ಶೆಟ್ಟರ್ ಅವರು ಮಾತೃ ಪಕ್ಷಕ್ಕೆ ಮೋಸ ಮಾಡಿದ್ದು, ಈ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.
-ಸುಶೀಲಕುಮಾರ ಮೋದಿ, ಬಿಹಾರ ಮಾಜಿ ಡಿಸಿಎಂ