ರೈತರಿಗೆ ವರ್ಷಕ್ಕೆ ಎಕರೆಗೆ 10 ಸಾವಿರ ರು., 24 ಗಂಟೆ ವಿದ್ಯುತ್, ಪಂಚರತ್ನ ರಥ ಯಾತ್ರೆಯಲ್ಲಿ ಜೆಡಿಎಸ್ ಮುಖಂಡ, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್
ಗುರುಮಠಕಲ್(ಮಾ.23): ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿಯಂತೆ ರೈತರ ಪ್ರತಿ ಎಕರೆಗೆ ವರ್ಷಕ್ಕೆ 10 ಸಾವಿರ ರು.ಗಳಂತೆ, ಎಷ್ಟು ಎಕರೆ ಇದ್ದರೂ ನೆರವು ನೀಡಲಾಗುವುದು, ಜೊತೆಗೆ 24 ಗಂಟೆ ವಿದ್ಯುತ್ ನೀಡಲಾಗುವುದು ಎಂದು ಮಾಜಿ ಸಚಿವ, ಶಾಸಕ ಜೆಡಿಎಸ್ ನಾಯಕ ಬಂಡೆಪ್ಪ ಖಾಶೆಂಪೂರ್ ಭರವಸೆ ನೀಡಿದರು.
ಇಂದು(ಗುರುವಾರ) ಯಾದಗಿರಿ ಸಮೀಪದ, ಗುರುಮಠಕಲ್ ಮತಕ್ಷೇತ್ರದ ಯರಗೋಳ ಗ್ರಾಮದಲ್ಲಿ ಆಯೋಜಿಸಿದ್ದ, 88 ನೇ ಜೆಡಿಎಸ್ ಪಂಚರತ್ನ ರಥ ಯಾತ್ರೆ ಸಮಾವೇಶದಲ್ಲಿ ಮಾತನಾಡಿದರು.
undefined
ಧಮ್, ತಾಕತ್ ಇದ್ರೆ ಜೆಡಿಎಸ್ ಯಾತ್ರೆ ನಿಲ್ಲಿಸಿ: ಸಿಎಂ ಬೊಮ್ಮಾಯಿಗೆ ಕಂದಕೂರ ಸವಾಲ್
ರೈತಪರ ಕಾಳಜಿಯ ಎಚ್ಡಿಕೆ ಅಧಿಕಾರಕ್ಕೆ ತನ್ನಿ. ಇದು ಜನಪರ ಕಾಳಜಿಯ ಪಕ್ಷ ಎಂದ ಅವರು, ರೈತ ಕುಟುಂಬದ ಪ್ರತಿ ಯುವತಿಯ ಮನೆಗೆ 2 ಲಕ್ಷ ರು. ನೆರವು, ರೈತರ ಹಾಗೂ ಸ್ವ ಸಹಾಯ ಸಂಘಗಳ ಸಾಲ ಮನ್ನಾ, 65 ವರ್ಷ ಮೇಲ್ಪಟ್ಟ ಬಾರಿಗೆ 5 ಸಾವಿರ ಮಾಸಿಕ ವೃದ್ಧ್ಯಾಪ್ಯ ವೇತನ, ಮುಂತಾದವುಗಳ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷವು 4 ಗ್ಯಾರಂಟಿ ಕಾರ್ಡುಗಳನ್ನು ಚುನಾವಣೆ ಪ್ರಣಾಳಿಕೆಯಿಂದ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಗ್ಯಾರಂಟಿ ಇಲ್ಲದ ಪಕ್ಷವಾಗಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಕುರಿತು ಬಂಡೆಪ್ಪ ಲೇವಡಿ ಮಾಡಿದರು. ಜೆಡಿಎಸ್ ನಿಯೋಜಿತ ಅಭ್ಯರ್ಥಿ ಶರಣಗೌಡ ಕಂದಕೂರ ಗೆಲ್ಲಿಸಲು ಕ್ಷೇತ್ರದ ಜನರು ಮುಂದಾಗಬೇಕು ಎಂದು ಮನವಿ ಮಾಡಿದರು.