ಬಿಜೆಪಿ ಸರ್ಕಾರಕ್ಕೆ, ಸಿಎಂಗೆ ಅಧಿಕಾರದ ಮದ ಹೀಗೆ ಮಾತನಾಡಿಸುತ್ತಿದೆ, ಬ್ರಹ್ಮಾಂಡ ಭ್ರಷ್ಟಾಚಾರ ಈ ಸರ್ಕಾರದಲ್ಲಿ ತಾಂಡವವಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಹರಿಹಾಯ್ದ ಶಾಸಕ ನಾಗನಗೌಡ ಕಂದಕೂರ.
ಯಾದಗಿರಿ(ಮಾ.23): ಧಮ್, ತಾಕತ್ತು ಇದ್ದರೆ ಜೆಡಿಎಸ್ ಪಂಚರತ್ನ ಯಾತ್ರೆ ನಿಲ್ಲಿಸಿ ನೋಡೋಣ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಸಿಎಂ ಬಸವರಾಜ ಬೊಮ್ಮಾಯಿಗೆ ಸವಾಲ್ ಹಾಕಿದರು. ಯಾದಗಿರಿ ಸಮೀಪದ, ಗುರುಮಠಕಲ್ ಮತಕ್ಷೇತ್ರದ ಯರಗೋಳ ಗ್ರಾಮದಲ್ಲಿ ಇಂದು(ಗುರುವಾರ) ಸಂಜೆ ಆಯೋಜಿಸಲಾಗಿದ್ದ 88ನೇ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ, ಸಿಎಂಗೆ ಅಧಿಕಾರದ ಮದ ಹೀಗೆ ಮಾತನಾಡಿಸುತ್ತಿದೆ, ಬ್ರಹ್ಮಾಂಡ ಭ್ರಷ್ಟಾಚಾರ ಈ ಸರ್ಕಾರದಲ್ಲಿ ತಾಂಡವವಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಬಿಜೆಪಿ ಸರಕಾರ ಭ್ರಷ್ಟಾಚಾರದಿಂದ ಕೂಡಿದೆ. ಅದರಿಂದ ಮುಕ್ತರಾಗಲು ಜೆಡಿಎಸ್ ಪಕ್ಷ ಬೆಂಬಲಿಸಿ ಕುಮಾರಸ್ವಾಮಿಯವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಶಾಸಕ ನಾಗನಗೌಡ ಕಂದಕೂರ ಕರೆ ನೀಡಿದರು.
undefined
ಡಬಲ್ ಎಂಜಿನ್ ಸರ್ಕಾರದಿಂದ ದಾಹ ಮುಕ್ತ ರಾಜ್ಯ: ಸಚಿವ ಭೈರತಿ ಬಸವರಾಜ್
ರೈತರು, ಮಹಿಳೆಯರು ಮತ್ತು ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಲು ಕುಮಾರ ಸ್ವಾಮಿ ಅವರನ್ನು ರಾಜ್ಯದ ಜನರು ಬಲ ಪಡಿಸಲು ಮುಂದಾಗಬೇಕು ಎಂದರು.
ಗುರುಮಠಕಲ್ ಕ್ಷೇತ್ರಕ್ಕೆ ಕುಮಾರ ಸ್ವಾಮಿ ನೀಡಿದ 200 ಕೋಟಿ ರೂ.ಗಳ ಅನುದಾನ ನೀಡಿದ್ದನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಡೆ ಹಿಡಿದು ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡಿದರು ಎಂದು ಅಂದಿನ ದಿನಗಳ ನೆನೆದರು.
ನನ್ನ ಅವಧಿಯಲ್ಲಿ ಅನುದಾನ ಕಡಿತ ವಾದರೂ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ನನ್ನನ್ನು ಕ್ಷೇತ್ರದ ಜನರು ಹೇಗೆ ನನ್ನನ್ನು ಹೇಗೆ ಆಶೀರ್ವಾಡಿಸಿದರೋ ಹಾಗೆ ನನ್ನ ಮಗ ಶರಣಗೌಡ ಕಂದಕೂರ ಅವರನ್ನು ಆಶೀರ್ವದಿಸಿ ಎಂದು ಅವರು ಮನವಿ ಮಾಡಿದರು.
ಯುವಕರು ಮೋದಿ ಹಿಂದೆ ಹೋಗಬೇಡಿ, ಅದು ದೊಡ್ಡ ಕಂದಕವಿದೆ. ಅದರಿಂದ ನೀವು ಹಾಳಾಗುತ್ತೀರಿ ಎಂದ ಕಂದಕೂರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಮ್, ತಾಕತ್ತು ಬಗ್ಗೆ ಹೇಳುತ್ತಿದ್ದಾರೆ ಅವರು ಕುರ್ಚಿ ಬಿಟ್ಟು ರಾಜಕೀಯ ಅಖಾಡಕ್ಕೆ ಇಳಿದು ತೋರಿಸಲಿ ಯಾರ ಧಮ್ ತಾಕತ್ತು ಎಷ್ಟು ಇರುತ್ತದೆ ಎಂದು ಗೊತ್ತು ಆಗುತ್ತದೆ ಎಂದು ಅವರು ಸವಾಲ್ ಎಸೆದರು.