ಬಾಬೂರಾವ್ ಚಿಂಚನ್‍ಸೂರ್ ಅಲ್ಲ, 'ಚಂಚಲ'ಸೂರ್`: ಎನ್.ರವಿಕುಮಾರ್ ವಾಗ್ದಾಳಿ

By Girish Goudar  |  First Published Mar 23, 2023, 10:28 PM IST

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದರು. ಇಲ್ಲೆಲ್ಲಾ ಲಾಭ ಪಡೆದು ಮತ್ತೆ ಕಾಂಗ್ರೆಸ್‍ಗೆ ಜಿಗಿದಿದ್ದಾರೆ. ಇವರು ಚಂಚಲ ಸ್ವಭಾವಕ್ಕೇ ಹೆಸರುವಾಸಿ. ಹೀಗಾಗಿ ಇವರು ಚಂಚಲ ಸೂರ್ ಎಂದು ಮಾತಲ್ಲೇ ಬಾಬೂರಾವ್ ಚಿಂಚನ್‍ಸೂರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರವಿಕುಮಾರ್. 


ಕಲಬುರಗಿ(ಮಾ.23): ಭಾರತೀಯ ಜನತಾ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಸಚಿವ, ಕೋಲಿ ಸಮಾಜದ ಮುಖಂಡ ಬಾಬೂರಾವ ಚಿಂಚನ್‍ಸೂರ್ ಬಿಜೆಪಿಗೆ ದ್ರೋಹ ಮಾಡಿದ್ದಾರೆಂದು ಹೇಳಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಬಾಬೂರಾವ್‌ ಚಿಂಚನ್‍ಸೂರ್ ಅಲ್ಲ, 'ಚಂಚಲ' ಸೂರ್ ಎಂದು ಲೇವಡಿ ಮಾಡಿದ್ದಾರೆ.

ಇಂದು(ಗುರುವಾರ) ನಗರದಲ್ಲಿ ಸುದ್ದಿಗಾರರಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದರು. ಇಲ್ಲೆಲ್ಲಾ ಲಾಭ ಪಡೆದು ಮತ್ತೆ ಕಾಂಗ್ರೆಸ್‍ಗೆ ಜಿಗಿದಿದ್ದಾರೆ. ಇವರು ಚಂಚಲ ಸ್ವಭಾವಕ್ಕೇ ಹೆಸರುವಾಸಿ. ಹೀಗಾಗಿ ಇವರು ಚಂಚಲ ಸೂರ್ ಎಂದು ಮಾತಲ್ಲೇ ಬಾಬೂರಾವ್ ಚಿಂಚನ್‍ಸೂರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Tap to resize

Latest Videos

undefined

'ಹೆಸರನ್ನ ಅಲ್ಲೇ ಇಟಗೊಂಡು ಕುಂದ್ರಿ' : ಬಿಜೆಪಿ ಪ್ರಚಾರ ಸಮಿತಿಯಲ್ಲಿ ಸೇರಿಸದ್ದಕ್ಕೆ ಸ್ವಪಕ್ಷದ ವಿರುದ್ಧವೇ ಯತ್ನಾಳ್ ಗರಂ

ನನ್ನ ಸಾಮರ್ಥ್ಯ ಏನೆಂದು ಚುನಾವಣೆಯಲ್ಲಿ ತೋರಿಸುತ್ತೇನೆ: ಬಿಜೆಪಿ ವಿರುದ್ಧ ತೊಡೆ ತಟ್ಟಿದ ಬಾಬುರಾವ್ ಚಿಂಚನಸೂರು

ಕಳೆದ ವಾರ ಬಿಜೆಪಿಗೆ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಇಂದು ಕಲಬುರಗಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಬಾಬುರಾವ್ ಚಿಂಚನಸೂರರನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾಂಗ್ರೆಸ್ ಕಾರ್ಯಕರ್ತರು. ಸ್ವಾಗತದ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಾಬುರಾವ್ ಚಿಂಚನಸೂರ, ಮಲ್ಲಿಕಾರ್ಜುನ ಖರ್ಗೆ ದೇಶ ಗುರುತಿಸುವ ಮಟ್ಟಿಗೆ ಬೆಳೆದಿದ್ದಾರೆ. ಖರ್ಗೆ ಭದ್ರ ಕೋಟೆ ಛಿದ್ರ ಛಿದ್ರ ಮಾಡುವುದು ಬಿಜೆಪಿ ಗುರಿ. ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಖರ್ಗೆಯವರ ಭದ್ರಕೋಟೆಯನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಗೆ ಬಂದಿದ್ದಕ್ಕೆ ಚಿತ್ತಾಪೂರದಲ್ಲಿ ಬಿಜೆಪಿ ಜಿರೋ ಆಗಿದೆ. ಪ್ರಿಯಾಂಕ್ ಖರ್ಗೆ ನಾಮಿನೇಶನ್ ಹಾಕಿದ್ರೆ ಸಾಕು ರಾಜ್ಯದಲ್ಲೇ ಹೈಯೆಸ್ಟ್ ಲೀಡ್‌ನಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಂಚನಸೂರ ಶಕ್ತಿ ಸಾಮರ್ಥ್ಯ ಏನು ಅನ್ನೋದು ಈ ಚುನಾವಣೆಯಲ್ಲಿ ತೋರಿಸುವೆ ಎಂದು ಬಿಜೆಪಿಗೆ ಸವಾಲು ಹಾಕಿದರು ಇದೇ ವೇಳೆ ಕೋಲಿ ಸಮಾಜ ಎಸ್ಟಿ ಮಾಡುತ್ತೇವೆಂದು ಭರವಸೆ ಕೊಟ್ಟು ಬಿಜೆಪಿಯವರು ಮೋಸ ಮಾಡಿದ್ರು. ನೊಂದು ಕಣ್ಣಿರು ಹಾಕಿ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ದೇನೆ ಎಂದರು. 

click me!