ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೋಲಾರದಲ್ಲಿ ಟಿಪ್ಪು ವಿವಿ ಸ್ಥಾಪನೆ: ಮಾತು ಕೊಟ್ಟ ಇಬ್ರಾಹಿಂ

Published : Nov 20, 2022, 01:30 PM IST
ಜೆಡಿಎಸ್ ಅಧಿಕಾರಕ್ಕೆ ಬಂದ್ರೆ  ಕೋಲಾರದಲ್ಲಿ ಟಿಪ್ಪು ವಿವಿ ಸ್ಥಾಪನೆ:  ಮಾತು ಕೊಟ್ಟ ಇಬ್ರಾಹಿಂ

ಸಾರಾಂಶ

ಕೋಲಾರದಲ್ಲಿ ಟಿಪ್ಪು ಸುಲ್ತಾನ್‌ ವಿವಿ ಸ್ಥಾಪನೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಂಹಿಂ ಭರವಸೆ ಪಕ್ಷ ಅಧಿಕಾರಕ್ಕೆ ತರಲು ಮನವಿ

ಬಂಗಾರಪೇಟೆ (ನ.20) : ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕೋಲಾರದಲ್ಲಿ ಟಿಪ್ಪು ಸುಲ್ತಾನ್‌ ಯೂನಿವರ್ಸಿಟಿ ಸೇರಿದಂತೆ ರಾಜ್ಯಾದ್ಯಂತ ವಿವಿಧ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭರವಸೆ ನೀಡಿದರು.

ಜೆಡಿಎಸ್‌ ಪಕ್ಷ ಆಯೋಜಿಸಿರುವ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಲು ಬಂದಿದ್ದ ಅವರು ಪಟ್ಟಣದ ಶಂಶುದ್ದೀನ್‌ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದು ಕೋಲಾರದಲ್ಲಿ ಟಿಪ್ಪು ಸುಲ್ತಾನ್‌ ರವರ ಹೆಸರಿನಲ್ಲಿ ಯೂನಿವರ್ಸಿಟಿಯನ್ನು ಸ್ಥಾಪಿಸಲಾಗುವುದು ಎಂದರು.

Kolar : ಜೆಡಿಎಸ್‌, ಕಾಂಗ್ರೆಸ್‌ ಮತದಾರರ ಹೆಸರು ರದ್ದು

ಕನಕದಾಸರ ಮತ್ತು ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಮಿಲಿಟರಿ ಶಾಲೆ, ವಿಧಾನಸೌಧ ಎದುರು ಕೆಂಪೇಗೌಡರ ಪ್ರತಿಮೆ ಸ್ಥಾಪನೆ, ಸೂಲಗತ್ತಿ ನರಸಮ್ಮರ ಹೆಸರಿನಲ್ಲಿ ಆರೋಗ್ಯ ವಿಶ್ವವಿದ್ಯಾನಿಲಯ ಎಲ್ಲರಿಗೂ ಉಚಿತ ಆರೋಗ್ಯ ನೀಡಲು ಗ್ರಾಮ ಪಂಚಾಯಿತಿಗೊಂದು ಸುಸಜ್ಜಿತ ಆರೋಗ್ಯ ಕೇಂದ್ರ, ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ, 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ 5 ಸಾವಿರ ಮಾಸಾಶನ ಮೊದಲಾದ ಜನಪರ ಯೋಜನೆಗಳನ್ನು ಹಮ್ಮಿಕೊಂಡುವುದಾಗಿ ತಿಳಿಸಿದರು.

ನಮ್ಮ ಭರವಸೆ ಈಡೇರಿಸದಿದ್ದರೆ ಮುಂದಿನ ಚುನಾವಣೆಗೆ ಮತದಾರರ ಬಳಿ ಮತ ಕೇಳಲು ಬರುವುದಿಲ್ಲ. ಇಷ್ಟೆಲ್ಲ ಯೋಜನೆಗಳು ಮಾಡಲಿಕ್ಕೆ ಹಣ ಎಲ್ಲಿಂದ ಬರುತ್ತೆ ಎಂಬ ಪ್ರಶ್ನೆ ಉದ್ಭವವಾಗಬಹುದು. ಆದರೆ ಕರ್ನಾಟಕ ರಾಜ್ಯದಲ್ಲಿ 7 ಲಕ್ಷ ಕೋಟಿ ವರಮಾನ ಇದೆ. ಇದನ್ನು ಅಂದಾಜು ಮಾಡಿಯೇ ಈ ಯೋಜನೆಗಳನ್ನ ಮಾಡಿದ್ದೇವೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಹಿಜಾಬು, ಹಲಾಲ್‌ ಕಟ್‌ ಮೊದಲಾದ ಅನಾವಶ್ಯಕ ವಿಷಯಗಳ ಮೇಲೆ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕೊಳಚೆ ನೀರು ಕೊಟ್ಟಿದ್ದೇ ಸಿದ್ದರಾಮಯ್ಯ ಸಾಧನೆ: ಕುಮಾರಸ್ವಾಮಿ ವ್ಯಂಗ್ಯ

ಕೋಲಾರದಲ್ಲಿ ಕೆ.ಎಚ್‌ ಮುನಿಯಪ್ಪನವರನ್ನ ಸೋಲಿಸಿದವರೇ ಈಗ ಕೆ.ಎಚ್‌. ಮುನಿಯಪ್ಪನವರನ್ನು ಓಲೈಸುತ್ತಿದ್ದಾರೆ. ಅವರು ಸಹಾಯ ಮಾಡುತ್ತಾರೆಯೇ, ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಕರೆಸಿ ಬಿಸ್ಮಿಲ್ಲಾ ಮಾಡಿ ಕಳಿಸುತ್ತಾರೆಯೇ ನೆಡಬೇಕು. ಕಾಂಗ್ರೆಸ್‌ನವರು ಭಾರತ್‌ ಜೋಡೋಗೆ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಜೋಡೋ ಮಾಡುವ ಕೆಲಸ ಮಾಡಲಿ ಎಂದು ವ್ಯಂಗ್ಯವಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್