Lok Sabha Election 2024: ನುಡಿದಂತೆ ನಡೆದಿದ್ದೇವೆ ಮತ ನೀಡಿ: ಶಾಸಕ ಕೊತ್ತೂರು ಮಂಜುನಾಥ್

By Kannadaprabha News  |  First Published Apr 10, 2024, 7:09 PM IST

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ನೇರವಾಗಿ ಫಲಾನುಭವಿಗಳ ಕೈಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಬೆಂಬಲಿಸುವಂತೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಮನವಿ ಮಾಡಿದರು.
 


ಕೋಲಾರ (ಏ.10): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ನೇರವಾಗಿ ಫಲಾನುಭವಿಗಳ ಕೈಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಬೆಂಬಲಿಸುವಂತೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಮನವಿ ಮಾಡಿದರು.

ತಾಲೂಕಿನ ಮೂರಾಂಡಹಳ್ಳಿ ಹಾಗೂ ಕೊಂಡರಾಜನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರವಾಗಿ ಪ್ರಚಾರದಲ್ಲಿ ಮಾತನಾಡಿ, ಕೇಂದ್ರದಲ್ಲಿ ಹತ್ತು ವರ್ಷಗಳಿಂದ ಬಿಜೆಪಿ ಒಂದಾದರೂ ಕೊಟ್ಟ ಭರವಸೆ ಜಾರಿ ಮಾಡಿದೆಯೇ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಪ್ರತಿ ಮಹಿಳೆಯರಿಗೆ ೧ ಲಕ್ಷ ಕೊಡ್ತೇವೆ ಎಂದು ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಬಡವರ ದಲಿತರ ಬಗ್ಗೆ ಇರುವ ಕಾಳಜಿ ಎಂದರು.

Latest Videos

undefined

ಚುನಾವಣಾ ವೆಚ್ಚಕ್ಕಾಗಿ ನಿವೃತ್ತ ಯೋಧನಿಂದ ಕೋಟ ಶ್ರೀನಿವಾಸ್ ಪೂಜಾರಿಗೆ ಧನ ಸಹಾಯ!

ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ: ಕೋಲಾರ ಕ್ಷೇತ್ರವನ್ನು ಈಗಾಗಲೇ ಅಭಿವೃದ್ದಿಯತ್ತ ಕೊಂಡೊಯ್ಯಲಾಗುತ್ತಿದೆ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತ ಪಕ್ಷ. ದೇಶಕ್ಕೆ ವಿದ್ಯುತ್, ಟಿವಿ, ಬಡವರಿಗೆ ಭೂಮಿ ನೀಡಿದ್ದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೀಡಿದೆ. ಹಾಗಾಗಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತಂದರೆ ಬಡವರಿಗೆ ಅನುಕೂಲವಾಗಲಿದೆ ಎಂದರು. ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಕೋಲಾರದಿಂದ ಕೆವಿ ಗೌತಮ್ ಅವರನ್ನು ಅಧಿಕೃತವಾಗಿ ಅಭ್ಯರ್ಥಿಯಾಗಿದ್ದಾರೆ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ವಿದ್ಯಾರ್ಥಿ ಘಟಕದಲ್ಲಿ ಸಂಘಟನೆ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ್ದಾರೆ, ಗ್ಯಾರಂಟಿಗಳನ್ನು ಫಲಾನುಭವಿಗಳಿಗೆ ಯಾವುದೇ ಮಧ್ಯವರ್ತಿ ನೆರವಿಲ್ಲದೆ ಜನರಿಗೆ ತಲುಪಿಸಿದ್ದೇವೆ ಎಂದರು.

ಸಂವಿಧಾನ ಬದಲಾವಣೆ ಉದ್ದೇಶ: ಬಿಜೆಪಿಯು ಜಾತಿ ಜಾತಿಗಳ ನಡುವೆ ಕೋಮು ಸಂಘರ್ಷ ಉಂಟು ಮಾಡಿ ಗಲಭೆಗಳನ್ನು ಮಾಡುಡುವುದು ಬಿಟ್ಟರೆ ಅಭಿವೃದ್ದಿ ವಿಷಯದಲ್ಲಿ ಶೂನ್ಯ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ೪೦೦ ಸೀಟು ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ ಹಾಗಾಗಿ ಪ್ರತಿಯೊಬ್ಬರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ದೇಶದ ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆ ಅದಕ್ಕೆ ನೀವೆ ಮಾಲೀಕರು ನೀವೇ ಯಜಮಾನರು ನಿಮ್ಮ ಹಕ್ಕು ನಿಮ್ಮ ಜವಾಬ್ದಾರಿ, ದೇಶ ಯಾವ ದಿಕ್ಕಿನಲ್ಲಿ ಹೋಗಬೇಕು ಎನ್ನುವ ಚಿಂತೆಯೊಂದಿಗೆ ಜಾತ್ಯಾತೀತ ಹಾಗೂ ಅಭಿವೃದ್ದಿಗೆ ಮತ್ತೊಂದು ಹೆಸರಾಗಿರುವ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದರು.

ಕಾರ್ಯಕರ್ತನನ್ನು ಪಕ್ಷ ಗುರ್ತಿಸಿದೆ: ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ, ಪಕ್ಷಕ್ಕೆ ನಿಷ್ಟೆಯಿಂದ ಕೆಲಸ ಮಾಡಿದ್ದಲ್ಲಿ ಗುರುತಿಸಿ ಒಳ್ಳೆಯ ಸ್ಥಾನ ಕೊಡುತ್ತೆ ಅನ್ನೋದು ನಾನೇ ಉದಾಹಣೆ, ಬೇರೆ ರಾಜ್ಯದಲ್ಲಿ ಬಿಜೆಪಿಯ ಅನಾಚಾರಗಳು ಹೆಚ್ಚಾಗಿದೆ ಗುಜರಾತ್, ಯುಪಿ ಸೇರಿದಂತೆ ಅನೇಕ ಕಡೆಗಳಲ್ಲಿ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿದ್ದಾರೆ ರೈತರ ಪ್ರತಿಭಟನೆ ವೇಳೆ ೬೦೦ ಜನರು ಸತ್ತರೂ ಪ್ರಧಾನಿ ಮೋದಿ ಒಂದೇ ಒಂದು ಹನಿ ಕಣ್ಣೀರನ್ನು ಹಾಕಲಿಲ್ಲ ಎಂದರು. ಕಳೆದ ಹತ್ತು ವರ್ಷದಲ್ಲಿ ಬಿಜೆಪಿ ಯವರು ನೀಡಿರುವ ಒಂದೇ ಒಂದು ವಾಗ್ದಾನವನ್ನು ಈಡೇರಿಸಲಿಲ್ಲ ಸಂವಿಧಾನ ಅಪಾಯದಲ್ಲಿದೆ ರೈತರಿಗೆ ಆದಾಯವಿಲ್ಲ, 

ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ಹೆಚ್ಚು ಅನುಕೂಲ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಮಹಿಳೆಯರಿಗೆ ರಕ್ಷಣೆ ಇಲ್ಲ, ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿ ಜನರ ಅಭಿವೃದ್ಧಿಗೆ ಕಾಂಗ್ರೆಸ್ ಕಾರಣವಾಗಿದೆ ನನಗೆ ಮತ ಕೊಟ್ಟು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀಕೃಷ್ಣ, ನಾಗನಾಳ ಸೋಮಣ್ಣ,ವ ಮುನಿಅಂಜಿನಪ್ಪ, ಕೆ.ವಿ.ದಯಾನಂದ್, ವಕ್ಕಲೇರಿ ರಾಜಪ್ಪ, ಮಂಜುನಾಥ್, ಅಂಬರೀಷ್, ಮೈಲಾಂಡಹಳ್ಳಿ ಮುರಳಿ, ನುಕ್ಕನಹಳ್ಳಿ ಶ್ರೀನಿವಾಸ್, ಕೊಂಡರಾಜನಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್, ಖಾದ್ರಿಪುರ ಬಾಬು, ನಿರಂಜನ್ ರಾಮಚಂದ್ರಪ್ಪ, ಜಯರಾಮ್ ಇದ್ದರು.

click me!