ಮೋದಿ ಹೇಳಿದ ಹಾಗೆ ಕೇಳುವ ಸರ್ಕಾರ ಇರಬೇಕಾ? ರಾಹುಲ್ ಬಾಬಾ ಹೇಳಿದಂತೆ ಕೇಳುವ ಸರ್ಕಾರ?

By Gowthami K  |  First Published Apr 30, 2023, 11:57 AM IST

ಈ ವರ್ಷದ ಡಿಸೆಂಬರ್ ನಲ್ಲಿ ರಾಜಾಸ್ತಾನ ಛತ್ತೀಸ್ ಗಢ ಸೇರಿ ಪಂಚರಾಜ್ಯಗಳ ಚುನಾವಣೆ ಇದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.


ಬೆಂಗಳೂರು (ಏ.30): ಮಲ್ಲೇಶ್ವರಂನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ , ಈ ವರ್ಷದ ಡಿಸೆಂಬರ್ ನಲ್ಲಿ ರಾಜಾಸ್ತಾನ ಛತ್ತೀಸ್ ಗಢ ಸೇರಿ ಪಂಚರಾಜ್ಯಗಳ ಚುನಾವಣೆ ಇದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟವಾಗುತ್ತದೆ. ಹಾಗಾಗಿ ಈಗ ಕರ್ನಾಟಕ ವಿಧಾನಸಭಾ ಚುನಾವಣೆ ಮಹತ್ವ ಪಡೆದುಕೊಂಡಿದೆ. ಈ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲ್ಲ. ಒಂದು ವೇಳೆ ಗೆದ್ದರೆ ಕರ್ನಾಟಕ ಕಾಂಗ್ರೆಸ್ ನ ಎಟಿಎಂ ಆಗಿಬಿಡುತ್ತದೆ. ಹೀಗಾಗಿ ನಾವು ಈ ಚುನಾವಣೆಯಲ್ಲಿ ಬಿಜೆಪಿಯನ್ಬು ಗೆಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರಂತೂ 2045ರ ವಿಷನ್ ಹೊಂದಿದ್ದಾರೆ. ಅಲ್ಲಿಯವರೆಗೂ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ. ಮುಂದಿನ‌ ಮೂರ್ನಾಲ್ಕು ವರ್ಷಗಳಲ್ಲಿ ಭಾರತ ವಿಶ್ವದಲ್ಲಿ ನಂಬರ್ ಒನ್ ಆಗುತ್ತದೆ.‌ ಭಾರತ ನಂಬರ್ ಒನ್ ಆಗಬೇಕಾದರೆ ಕರ್ನಾಟಕವೂ ಅಭಿವೃದ್ದಿ ಆಗಬೇಕು. ಅದಕ್ಕೆ ನರೇಂದ್ರ ಮೋದಿ ಹೇಳಿದ ಹಾಗೆ ಕೇಳುವ ಸರ್ಕಾರ ಇರಬೇಕಾ, ರಾಹುಲ್ ಬಾಬಾ ಹೇಳಿದಂತೆ ಕೇಳುವ ಸರ್ಕಾರ ಬೇಕಾ ಎಂದು ಪ್ರಶ್ನಿಸಿದ್ದಾರೆ.

ವಿದೇಶಗಳಿಗೆ ಹೋಗಿ ಭಾರತದ ಸಾರ್ವಭೌಮತೆಯನ್ನೇ ಪ್ರಶ್ನೆ ಮಾಡಿದ್ದರು. ಭಾರತ ಅವರ ತಾತ ಮುತ್ತಾತ ಮಾಡಿದ ದೇಶವಲ್ಲ. ಅತ್ಯಂತ ಗೌರವಪೂರ್ಣವಾದ ಇತಿಹಾಸ ಹೊಂದಿರುವ ದೇಶ ನಮ್ಮದು ಇದು ರಾಹುಲ್ ಗಾಂಧಿಯವರಿಗೆ ಗೊತ್ತೇ ಇಲ್ಲ ಎಂದು ಕಿಡಿಕಾರಿದರು.

Tap to resize

Latest Videos

ರಾಜ್ಯದಲ್ಲಿ ಲೂಟಿ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಟೀಕಿಸಿದ ಪ್ರಹ್ಲಾದ್ ಜೋಶಿ:
2000ಯೂನಿಟ್ ವಿದ್ಯುತ್ ಉಚಿತ ಕೊಡುತ್ತಾರಂತೆ. ಅವರು ಅಧಿಕಾರದಲ್ಲಿ ಇದ್ದಾಗ ಯಾಕೆ ಕೊಡಲಿಲ್ಲ. ಯಾಕೆಂದ್ರೆ ಆಗ ಕರೆಂಟ್ ಉತ್ಪಾದನೆಯೇ ಅಷ್ಟು ಆಗುತ್ತಿರಲಿಲ್ಲ. ಪುಕುಪುಕು ಲೈಟ್ ಗಳು ಇದ್ದ ಕಾಲ ಅದು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಪುಕುಪುಕು ದೀಪಗಳಿಗೆ ಬದಲು ಎಲ್ ಇಡಿ ಲೈಟ್ ಕೊಟ್ಟಿದ್ದು ನರೇಂದ್ರ ಮೋದಿ ಸರ್ಕಾರ. 2024ರ ವೇಳೆಗೆ ನಾವು ಶಾಖೋತ್ಪನ್ನ ಕೇಂದ್ರಗಳಿಗೆ ಬೇಕಾದ ಕಲ್ಲಿದ್ದಲು ಆಮದನ್ನು ಪೂರ್ಣ ನಿಲ್ಲಿಸುತ್ತಿದ್ದೇವೆ. ಯಾಕೆಂದರೆ  ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಲಿದೆ ಎಂದು ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಅನ್ನು ಟೀಕಿಸಿದರು.

ನಾನು ದೇವೇಗೌಡರ ನಿಯತ್ತಿನ ನಾಯಿ ಎಂದ ಶಾಸಕ: ಕಣ್ಣೀರಿಟ್ಟ ಮಾಜಿ ಪಿಎಂ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ:
ಜಾತಿ ಪಂಥಗಳ ಮೇಲೆ ಕಾಂಗ್ರೆಸ್ ಬರೀ ಸುಳ್ಳಿನ ಅಶ್ವಾಸನೆ ನೀಡುತ್ತಿದೆ. ಸುಳ್ಳು ಹೇಳುವ ಸ್ಪರ್ಧೆ ಇಟ್ಟರೆ ಅದು ಕಾಂಗ್ರೆಸ್ ಪಾರ್ಟಿಗೆ ಕೊಡಬಹುದು. ನೀವು ಬರೆದಿಟ್ಟುಕೊಳ್ಳಿ ಮುಂದೆ ಬರುವ ರಾಜಸ್ಥಾನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರಲಿದೆ. ನಾಡಪ್ರಭು ಕೆಂಪೇಗೌಡ ನಿರ್ಮಾಣವಾಗಿದೆ ಅದರ ನಿರ್ಮಾಣ ಕಾರ್ಯದಲ್ಲಿ ಅಶ್ವತ್ಥ ನಾರಾಯಣ ಪಾತ್ರ ಬಹಳಷ್ಟಿದೆ. ಮಲ್ಲೇಶ್ವರಂ ಗೆ ಕುಡಿಯುವ ನೀರಿನ ಸಮಸ್ಯೆಗಳನ್ನ ಬಗೆಹರಿಸಿದ್ದಾರೆ. ನಾನು ಅಶ್ವತ್ಥ ನಾರಾಯಣ ಅವರನ್ನ ಕೇಳಿದೆ ಎಷ್ಟು ರಸ್ತೆ ಮಾಡಿಸಿದ್ದೀರಿ ಎಂದು 200 ಕಿಮೋ ಗೂ ಹೆಚ್ಚು ರಸ್ತೆ ನಿರ್ಮಾಣ ಮಾಡಿದ್ದಾರೆ ಅಂತ ಹೇಳಿದರು.

ಕಾಂಗ್ರೆಸ್ ಸುಳ್ಳು ಹೇಳೋದಕ್ಕೆ ನಿಸ್ಸೀಮ ಪಾರ್ಟಿ. ಭಾರತ ಒಂದು ದೇಶವೇ ಅಲ್ಲ ಅಂತ ರಾಹುಲ್ ಗಾಂಧಿ ಹೇಳೋಕೆ ಹೊರಟಿದ್ದಾರೆ. ಮೋದಿ ಬಗ್ಗೆ ಖರ್ಗೆಯವರು ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಯಾಕೆ ಹಾಗೇ ಮಾತನಾಡ್ತಿದ್ದಾರೆ ಅಂದ್ರೆ ಹತಾಶೆರಾಗಿದ್ದಾರೆ. ಖರ್ಗೆ ಪರಿಸ್ಥಿತಿ ಬೇರೆ ಇದೆ. ಅವರ ನಾಯಕರನ್ನ ಮೆಚ್ಚಿಸುವ ಕೆಲಸ ಮಾಡಬೇಕಿದೆ. ಉಳಿದ ಸೀಟಿ ಯಾವಾಗ ಬಿಡುಗಡೆ ಮಾಡ್ತೀರಾ ಅಂದ್ರೆ ಹೈಕಮಾಂಡ್ ನಿರ್ಧಾರ ಮಾಡುತ್ತೆ ಅಂತಾರೆ ಎಂದ ವ್ಯಂಗ್ಯ ಮಾಡಿದ ಜೋಶಿ ಕಾಂಗ್ರೆಸ್ ಪಾರ್ಟಿ ನಕಲಿ ಗಾಂಧಿಗಳ ಕೈಯಲ್ಲಿದೆ. ನಕಲಿ ಗಾಂಧಿ ಫ್ಯಾಮಿಲಿಗೆ ನಾವೇ ಸುಪ್ರೀಂ ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.  ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
 

click me!