ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 40 ಪರ್ಸೆಂಟ್ ಕಮಿಷನ್‌ಗಾಗಿ ಮೂವರ ಜೀವಗಳನ್ನು ಆತ್ಮಹತ್ಯೆ ಮೂಲಕ ಕಸಿದುಕೊಂಡವರ ಜೈಲಿನಲ್ಲಿರುತ್ತಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಮಂಗಳೂರು (ಮಾ.3) : ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 40 ಪರ್ಸೆಂಟ್ ಕಮಿಷನ್‌ಗಾಗಿ ಮೂವರ ಜೀವಗಳನ್ನು ಆತ್ಮಹತ್ಯೆ ಮೂಲಕ ಕಸಿದುಕೊಂಡವರ ಜೈಲಿನಲ್ಲಿರುತ್ತಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ(Randeep singh surjewala) ಹೇಳಿದ್ದಾರೆ.
ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ಗುರುವಾರ ‘ಕರಾವಳಿ ಪ್ರಜಾಧ್ವನಿ’ ಯಾತ್ರೆ(Prajadhwani yatre)ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆ(Assembly election) ಬಿಜೆಪಿಯ ಭೃಷ್ಟಾಚಾರದಿಂದ ನಲುಗಿದ ಶ್ರೀಮಂತ ಕರ್ನಾಟಕದ ವೈಭವವನ್ನು ಮತ್ತೆ ಮರಳಿ ತರುವ ಚುನಾವಣೆಯಾಗಲಿದೆ. ಈಗಾಗಲೇ ಬಿಜೆಪಿಯನ್ನು ಜನರು ತಿರಸ್ಕರಿಸತೊಡಗಿದ್ದಾರೆ, ಇದು ಚುನಾವಣೆಯಲ್ಲಿ ಪ್ರತಿಧ್ವನಿಸಲಿದೆ ಎಂದು ಭವಿಷ್ಯ ನುಡಿದರು.
ಭ್ರಷ್ಟಾಚಾರ ಸಹಿಸಲ್ಲ, ಕೆಲಸ ಸರಿಯಾಗಿ ಮಾಡಿ: ಪೊಲೀಸರಿಗೆ ಮಂಗಳೂರಿನ ನೂತನ ಕಮಿಷನರ್ ಎಚ್ಚರಿಕೆ!
ಸರ್ಕಾರಿ ಹುದ್ದೆಗಳನ್ನೂ ಬಿಜೆಪಿ ಸರ್ಕಾರ ಮಾರಾಟಕ್ಕಿಟ್ಟಿದೆ. ಹೀಗಾದರೆ ಕರಾವಳಿಯಲ್ಲಿ ಹೆಚ್ಚಿನ ಎಂಜಿನಿಯರಿಂಗ್, ಮೆಡಿಕಲ್ ಮತ್ತಿತರ ಶಿಕ್ಷಣ ಸಂಸ್ಥೆಯಲ್ಲಿ ಯುವಕರು ಯಾವ ಪುರುಷಾರ್ಥಕ್ಕೆ ಶಿಕ್ಷಣ ಪಡೆಯಬೇಕು ಎಂದು ಸುರ್ಜೇವಾಲಾ ಪ್ರಶ್ನಿಸಿದರು.
ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖಂಡರಾದ ರಮಾನಾಥ ರೈ, ಯು.ಟಿ. ಖಾದರ್, ಹರೀಶ್ ಕುಮಾರ್, ಇನಾಯತ್ ಅಲಿ, ಧ್ರುವ ನಾರಾಯಣ್, ಮಧು ಬಂಗಾರಪ್ಪ, ರೋಜಿ ಜಾನ್, ಐವನ್ ಡಿಸೋಜ, ರಾಜಶೇಖರ ಕೊಟ್ಯಾನ್, ಶಶಿಧರ ಹೆಗ್ಡೆ, ಮಂಜುನಾಥ ಭಂಡಾರಿ ಮತ್ತಿತರರಿದ್ದರು.
ಬಿಜೆಪಿ ಸರ್ಕಾರದಿಂದ ಅಸಾಂವಿಧಾನಿಕ ಕಾರ್ಯ: ಬಿಕೆ
ಮಂಗಳೂರು: ಭ್ರಷ್ಟಾಚಾರ, ಶೋಷಣೆ, ವಂಚನೆ, ಕೋಮು ದ್ವೇಷ, ಬೆಲೆ ಏರಿಕೆಯಂತಹ ಅಸಾಂವಿಧಾನಿಕ ಕಾರ್ಯಗಳನ್ನೇ ತಮ್ಮ ಸಾಧನೆ ಎಂದು ಬೀಗುತ್ತಿರುವ ಬಿಜೆಪಿ ಸರ್ಕಾರ(BJP Government)ವನ್ನು ಕಿತ್ತೊಗೆಯದಿದ್ದರೆ ರಾಜ್ಯದ ಜನರಿಗೆ ನೆಮ್ಮದಿ ಸಿಗಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್(BK Hariprasad) ಹೇಳಿದ್ದಾರೆ.
ಗುರುಪುರ ಕೈಕಂಬದ ಖಾಸಗಿ ಸಭಾಂಗಣದಲ್ಲಿ ಕಾಂಗ್ರೆಸ್‌ನ ಕರಾವಳಿ ಧ್ವನಿ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾನೂನು ರಕ್ಷಣೆಗೆ ಪೊಲೀಸ್ ಸಹಿತ ಪ್ರತ್ಯೇಕ ವಿಭಾಗಗಳೇ ಇದ್ದರೂ, ಬಿಜೆಪಿಗರು ಕತ್ತಿ, ಚೂರಿ ಹರಿತ ಮಾಡಿಕೊಳ್ಳಿ ಅಂತಾರೆ. ಆದರೆ ಹಾಗೆ ಮಾಡದೆ ಶಿಕ್ಷಣಕ್ಕೆ ಮಹತ್ವ ನೀಡಿ ಎಂದರು.
ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಗುಪ್ತ ಸರ್ವೆ: ಸೂಕ್ತ ಅಭ್ಯರ್ಥಿಗಳಾಗಿ ಹುಡುಕಾಟ
ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಮಾತನಾಡಿ, ಜನರಿಗೆ ಮೋಸ ಮಾಡುವ, ಒಂದೂ ನಿವೇಶನ ನೀಡದ, ಬೆಲೆ ಏರಿಕೆಗೆ ಕಾರಣವಾದ, ಜಿಎಸ್‌ಟಿ ಸುಲಿಗೆಯಂತಹ ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಅಂತ್ಯ ಹಾಡೋಣ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಇನಾಯತ್ ಅಲಿ, ಮಾಜಿ ಎಂಎಲ್‌ಸಿ ಐವನ್ ಡಿಸೋಜ ಮತ್ತಿತರರು ಇದ್ದರು.