
ಬೆಂಗಳೂರು(ಏ.26): ಕಾಂಗ್ರೆಸ್ ಪಕ್ಷ ಬಡವರ, ದೀನ ದಲಿತರ ಪಕ್ಷ. ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪ್ರತಿಯೊಬ್ಬರಿಗೆ ತಲಾ 10 ಕೇಜಿ ಅಕ್ಕಿ, ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು .2 ಸಾವಿರ, 200 ಯೂನಿಟ್ ವಿದ್ಯುತ್ ನೀಡುವ ಭರವಸೆ ಈಡೇರಿಸಲಿದೆ ಎಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಹೇಳಿದರು.
ಮಂಗಳವಾರ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೀತಪ್ಪ ಲೇಔಟ್, ಮುನೇಶ್ವರ ಬ್ಲಾಕ್, ಚಾಮುಂಡಿ ನಗರ, ಗಿಡ್ಡಪ್ಪ ಬ್ಲಾಕ್, ಮುತ್ತಪ್ಪ ಬ್ಲಾಕ್ ಮತ್ತು ರಹಮತ್ ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಮನೆ ಮನೆ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಅಕ್ರಮ ಆಸ್ತಿ ಆರೋಪ; ಆಸ್ತಿಯ ದಾಖಲೆ ಪರಿಶೀಲಿಸಿ ಕರಡಿ ಸಂಗಣ್ಣಗೆ ಸಿವಿಸಿ ಸವಾಲು!
ಕಳೆದ 35 ವರ್ಷಗಳ ಹಿಂದೆ ಬಸವಲಿಂಗಪ್ಪ ಅವರು ಕೊಟ್ಟ ನಂತರ ನಾನು, ಆನಂದ್ ಸೇರಿದಂತೆ ಪಕ್ಷದ ಇತರ ಮುಖಂಡರು ಪ್ರಯತ್ನಪಟ್ಟು ಹಕ್ಕುಪತ್ರಗಳನ್ನು ಕೊಡಿಸಿದ್ದೇವೆ. ಹಕ್ಕುಪತ್ರಗಳ ದುಡ್ಡನ್ನು ಸಹ ಯಾರಿಂದ ಪಡೆಯದೇ ಸ್ವಂತ 70 ಲಕ್ಷ ರು.ಗಳನ್ನು ಕಟ್ಟಿದ್ದೇವೆ. ಸ್ಲಂ ಬೋಡ್‌ನಿಂದ ಮನೆಗಲನ್ನು ಕಟ್ಟಿಸಿ ಕೊಟ್ಟಿದ್ದೇವೆ. ಹೆಬ್ಬಾಳ ಕ್ಷೇತ್ರದಲ್ಲಿ ಎಲ್ಲೆಲ್ಲಿ ಕೊಳವೆ ಬಾವಿಗಳ ಅವಶ್ಯಕತೆ ಇದೆಯೋ ಅಲ್ಲಿ ಕೊಳವೆ ಬಾವಿಗಳು, ಹೊಸದಾಗಿ ಶಾಲಾ, ಕಾಲೇಜು, ಅಂಗನವಾಡಿ ಮತ್ತು ಮೂರು ಸಮುದಾಯ ಭವನಗಳನ್ನು ಕಟ್ಟಿಸಿಕೊಟ್ಟಿದ್ದೇವೆ ಎಂದರು.
ಬಿಜೆಪಿಯ ಯಾವುದೇ ಶಾಸಕರು ಕ್ಷೇತ್ರದಲ್ಲಿ ಇಂತಹ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಆದರೆ, ಕ್ಷೇತ್ರದ ಜನರು ನಮ್ಮ ಮೇಲೆ ನಂಬಿಕೆಯಿಟ್ಟು ಶಾಸಕನನ್ನಾಗಿ ಮಾಡಿ ಕಳುಹಿಸಿದ್ದೀರಿ. ನೀವು ಇಟ್ಟಂತಹ ನಂಬಿಕೆಗೆ ಕಿಂಚಿತ್ತು ದ್ರೋಹ ಬಗೆಯಬಾರದು, ನೀವು ನನ್ನ ಮೇಲಿಟ್ಟಿರುವ ಪ್ರೀತಿ ಕಡಿಮೆಯಾಗಬಾರದೆಂದು ನೀವು ಹೇಳಿದ ಕೆಲಸವನ್ನೆಲ್ಲಾ ಮಾಡಿದ್ದೇನೆ. ಬಿಜೆಪಿಯವರಂತೆ ಸುಳ್ಳು ಹೇಳಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ್ತೊಮ್ಮೆ ಶಾಸಕನಾಗಿ ಕ್ಷೇತ್ರದ ಜನರ ಸೇವೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.
ಪತ್ನಿ ಪದ್ಮಾವತಿ ಸಾಥ್
ಮಂಗಳವಾರವೂ ಕೂಡ ಶಾಸಕ ಬೈರತಿ ಸುರೇಶ್ ಪರವಾಗಿ ಅವರ ಪತ್ನಿ ಪದ್ಮಾವತಿ ಅವರು, ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯ ಅಮರಜ್ಯೊತಿ ಲೇಔಟ್, ಮುನಿರಾಯನಪಾಳ್ಯ, ದೊಡ್ಡಮ್ಮ ದೇವಸ್ಥಾನ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮನೆ ಮನೆ ಪ್ರಚಾರ ಕೈಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.