ಅಕ್ರಮ ಆಸ್ತಿ ಆರೋಪ; ಆಸ್ತಿಯ ದಾಖಲೆ ಪರಿಶೀಲಿಸಿ ಕರಡಿ ಸಂಗಣ್ಣಗೆ ಸಿವಿಸಿ ಸವಾಲು!

By Kannadaprabha News  |  First Published Apr 26, 2023, 2:49 AM IST

 ಸಂಸದ ಸಂಗಣ್ಣ ಕರಡಿ ನನ್ನ ವಿರುದ್ಧ ಆಧಾರದ ರಹಿತ ಆರೋಪ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ನನ್ನ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ಮಾಡಿ, ಮಾತನಾಡಲಿ ಎಂದು ಜೆಡಿಎಸ್‌ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ.ವಿ. ಚಂದ್ರಶೇಖರ(CV Chandrashekhar) ತಿರುಗೇಟು ನೀಡಿದ್ದಾರೆ.


ಕೊಪ್ಪಳ (ಏ.26) : ಸಂಸದ ಸಂಗಣ್ಣ ಕರಡಿ ನನ್ನ ವಿರುದ್ಧ ಆಧಾರದ ರಹಿತ ಆರೋಪ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ನನ್ನ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ಮಾಡಿ, ಮಾತನಾಡಲಿ ಎಂದು ಜೆಡಿಎಸ್‌ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ.ವಿ. ಚಂದ್ರಶೇಖರ(CV Chandrashekhar) ತಿರುಗೇಟು ನೀಡಿದ್ದಾರೆ.

ಎರಡು ದಿನಗಳ ಹಿಂದೆ ಸಂಸದರು ಕೊಪ್ಪಳದಲ್ಲಿ ಮತಯಾಚನೆಯ ಸಂದರ್ಭದಲ್ಲಿ ಸಿ.ವಿ. ಚಂದ್ರಶೇಖರ(CV Chandrashekhar) ಸಾವಿರಾರು ಕೋಟಿ ಅಕ್ರಮ ಹಣ-ಆಸ್ತಿ ಸಂಪಾದಿಸಿದ್ದಾರೆ ಎಂದು ಆಪಾದನೆ ಮಾಡಿದ್ದರು. ಸಂಸದರ ಆರೋಪದ ಕುರಿತಾಗಿ ಹಿರಿಸಿಂದೋಗಿಯಲ್ಲಿ ಪ್ರಚಾರದ ವೇಳೆ ಪ್ರಸ್ತಾಪ ಮಾಡಿದ ಅವರು, ತಮ್ಮ ಆಸ್ತಿ ಕುರಿತಾದ ದಾಖಲೆಗಳನ್ನು ಪರಿಶೀಲಿಸುವಂತೆ ಸವಾಲು ಹಾಕಿದ್ದಾರೆ.

Tap to resize

Latest Videos

undefined

ಕರಡಿ ಸಂಗಣ್ಣ(Karadi sanganna) ತಂದೆ ಸಮಾನರು. ಅವರ ಬಗ್ಗೆ ಅಪಾರ ಗೌರವವಿದೆ. ಅವರು ನಾಲ್ಕು ಸಲ ಶಾಸಕರು ಹಾಗೂ ಎರಡು ಸಲ ಲೋಕಸಭಾ ಸದಸ್ಯರಾಗಿದ್ದವರು. ಅವರು ಏನು ಮಾತನಾಡಬೇಕೆಂಬುದು ಅವರಿಗೆ ಗೊತ್ತಿರಬೇಕು. ಆದಾಯ ತೆರಿಗೆ ಇಲಾಖೆ ಬಳಿ ನನ್ನ ಆಸ್ತಿಯ ದಾಖಲೆ ಇದೆ. ಅವರಿಗೆ ತಾಕತ್ತಿದೆ. ಆ ದಾಖಲೆಗಳನ್ನು ತರಿಸಿಕೊಂಡು ನೋಡಲಿ. ಅವರ ಆಶೀರ್ವಾದದಿಂದ ಹಾಗೂ ಬಾಯಿ ಹರಕೆಯಿಂದ ನಾನು ನೂರಾರು ಕೋಟಿ ಒಡೆಯನಾದರೆ, ಅದರಲ್ಲಿನ ಅರ್ಧ ದುಡ್ಡನ್ನು ಅವರ ಮನೆಗೆ ಬಂದು ತಲುಪಿಸುತ್ತೇನೆ ಎಂದು ಕುಟುಕಿದ್ದಾರೆ.

ಕ್ಷೇತ್ರದಲ್ಲಿ ಜೆಡಿಎಸ್‌ ಪರವಾದ ವ್ಯಾಪಕ ಅಲೆಯಿದ್ದು, ಪಕ್ಷ ಚುನಾವಣೆಯಲ್ಲಿ ಗೆಲ್ಲುವುದರಲ್ಲಿ ಯಾವುದೇ ಸಂಶಯ ಬೇಡ ಎಂದರು. ಜಾತಿ ರಾಜಕಾರಣ, ಕುಟುಂಬ ರಾಜಕಾರಣ ಹಾಗೂ ಹೊಂದಾಣಿಕೆ ರಾಜಕಾರಣವನ್ನು ಸೋಲಿಸಿ ಸ್ವಾಭಿಮಾನದ ರಾಜಕಾರಣವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಕೊಪ್ಪಳ: ಕಾಂಗ್ರೆಸ್ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತದೆ: ಬಯ್ಯಾಪುರ ವಿಶ್ವಾಸ

ಪಂಚರತ್ನ ಯೋಜನೆಗಾಗಿ ಜೆಡಿಎಸ್‌ ಬೆಂಬಲಿಸಿ

ಪಂಚರತ್ನ ಯೋಜನೆಗಳಿಗಾಗಿ ಜೆಡಿಎಸ್‌ ಬೆಂಬಲಿಸಬೇಕು. ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡಲಾಗುವುದು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿ.ವಿ. ಚಂದ್ರಶೇಖರ ಹೇಳಿದ್ದಾರೆ. ಮೋರನಾಳ ಗ್ರಾಮದಲ್ಲಿ ಬಿರುಸಿನ ಪ್ರಚಾರ ಕೈಗೊಂಡು, ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿ ಎಕರೆಗೆ .10,000 ಸಹಾಯಧನ, ಹಿರಿಯ ನಾಗರಿಕರ ಮಾಶಾಸನ, ವಿಕಲಚೇತನರ ಪಿಂಚಣಿ ಹೆಚ್ಚಳ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ .25 ಲಕ್ಷ 24 ಗಂಟೆಗಳಲ್ಲೇ ಬಿಡುಗಡೆ, ಜಿಲ್ಲೆಗಳಲ್ಲಿ ಜಯದೇವ ಆಸ್ಪತ್ರೆ ಮಾದರಿಯಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗಳ ಸ್ಥಾಪನೆ, ನಿರುದ್ಯೋಗಿ ಯುವಕರಿಗೆ ಹಾಗೂ ಉದ್ಯಮ ಆರಂಭಿಸುವವರಿಗೆ ಸಹಾಯಧನ, ಧಾರ್ಮಿಕ ಅಲ್ಪ ಸಂಖ್ಯಾತರ, ಪರಿಶಿಷ್ಟಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳು ಪಕ್ಷದ ಪ್ರಮುಖ ಕಾರ್ಯಕ್ರಮಗಳಾಗಿವೆ. ಇವು ರಾಜ್ಯದಲ್ಲಿ ಅಭಿವೃದ್ಧಿ ಪರ್ವವನ್ನೇ ಆರಂಭಿಸಲಿವೆ ಎಂದರು.

ಬಸವರಾಜ ಹಿಟ್ನಾಳ, ಸಿವಿಸಿ ಭೇಟಿ

ಮೋರನಾಳ ಗ್ರಾಮದಲ್ಲಿ ಪ್ರಚಾರದ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿ.ವಿ. ಚಂದ್ರಶೇಖರ, ಶಾಸಕ ರಾಘವೇಂದ್ರ ಹಿಟ್ನಾಳ ತಂದೆ ಬಸವರಾಜ ಹಿಟ್ನಾಳ ಮುಖಾಮುಖಿಯಾದ ಪ್ರಸಂಗ ನಡೆಯಿತು.

ಮೋರನಾಳ ಗ್ರಾಮದ ಲಕ್ಷ್ಮೇದೇವಿ ದೇವಸ್ಥಾನದಲ್ಲಿ ದೇವಿದರ್ಶನ ಪಡೆದ ನಂತರ ಸಿವಿಸಿ ಬೆಂಬಲಿಗರೊಂದಿಗೆ ಹೊರಬಂದರು. ಅದೇ ಸಮಯಕ್ಕೆ ಮಾಜಿ ಶಾಸಕರು ತಮ್ಮ ಮಗನಿಗಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಬಸವರಾಜ ಹಿಟ್ನಾಳ ಅವರನ್ನು ಗಮನಿಸಿದ ಸಿವಿಸಿ ಅವರತ್ತ ತೆರಳಿ ಅವರ ಆಶೀರ್ವಾದ ಪಡೆದರು.

ಹಾಲಪ್ಪ ಆಚಾರ ಶಕ್ತಿ ಪ್ರದರ್ಶನಕ್ಕೆ ಜನಸಾಗರ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!