ಬಿಜೆಪಿಯಲ್ಲೇ ಇರ್ತೇನೆ, ಕಾಂಗ್ರೆಸ್‌ಗೆ ಹೋಗಲ್ಲ: ಸಚಿವ ಎಂಟಿಬಿ ನಾಗರಾಜ್‌

By Govindaraj S  |  First Published Nov 5, 2022, 9:29 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬರುವವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ಆದರೆ ನಾನು ಬಿಜೆಪಿಯಲ್ಲೇ ಇದ್ದೇನೆ, ಮುಂದೆಯೂ ಇಲ್ಲೆ ಇರ್ತೇನೆ. ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂಟಿಬಿ ನಾಗರಾಜ್‌ ಸ್ಪಷ್ಟಪಡಿಸಿದರು. 


ಹೊಸಕೋಟೆ (ನ.05): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬರುವವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ಆದರೆ ನಾನು ಬಿಜೆಪಿಯಲ್ಲೇ ಇದ್ದೇನೆ, ಮುಂದೆಯೂ ಇಲ್ಲೆ ಇರ್ತೇನೆ. ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂಟಿಬಿ ನಾಗರಾಜ್‌ ಸ್ಪಷ್ಟಪಡಿಸಿದರು. ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಮುತ್ಸಂದ್ರ ಗ್ರಾಪಂ ನೂತನ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪವಿರುವ ಕಾರಣ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಪಕ್ಷಕ್ಕೆ ಬರುವ ಎಲ್ಲರನ್ನೂ ಸ್ವಾಗತಿಸಿದ್ದಾರೆ. 

ಆದರೆ ನಾನು ಈಗಾಗಲೆ ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿಗೆ ಬಂದು ಮಂತ್ರಿ ಸಹ ಆಗಿದ್ದೇನೆ. ಪದೇಪದೇ ಪಕ್ಷ ಬದಲಾವಣೆ ಮಾಡುವ ಜಾಯಮಾನ ನನ್ನದಲ್ಲ. ನಾನೇನಿದ್ದರೂ ಇನ್ನು ಬಿಜೆಪಿ ಪಕ್ಷದಲ್ಲೆ ಇರ್ತೇನೆ ಎಂದರು. ಬಿಜೆಪಿ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಸಾಕಷ್ಟುಪರಿಣಮಕಾರಿಯಾಗಿ ಅಭಿವೃದ್ಧಿ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮುತ್ಸಂದ್ರ ಗ್ರಾಪಂಗೆ ನಡೆದ ಚುನಾವಣೆಯಲ್ಲಿ 23ಕ್ಕೆ ಬಿಜೆಪಿ ಬೆಂಬಲಿತ 17ಸದಸ್ಯರು ಗೆದ್ದಿದ್ದಾರೆ. ಅಲ್ಲದೆ ಉಳಿದ 6 ಸದಸ್ಯರು ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಆದ್ದರಿಂದ ವಿಪಕ್ಷಗಳು ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಎಂದಿಗೂ ಫಲ ನೀಡಲ್ಲ ಎಂದರು.

Tap to resize

Latest Videos

ಅಮೃತ ನಗರೋತ್ಥಾನ ಹಂತ-4ಕ್ಕೆ 145 ಕೋಟಿ ಮಂಜೂರು: ಸಚಿವ ಎಂಟಿಬಿ ನಾಗರಾಜ್‌

ನಾಗನಾಯಕನ ಕೋಟೆ ಗ್ರಾಪಂ ಸದಸ್ಯೆ ಆಶಾರಾಣಿ ಮಾತನಾಡಿ, ಸಚಿವ ಎಂಟಿಬಿ ನಾಗರಾಜ್‌ ಅವರ ಅಭಿವೃದ್ಧಿ ಕಾರ್ಯಗಳು ಈ ಬಾರಿ ನಮ್ಮ ಗೆಲುವಿಗೆ ಸಾಕಷ್ಟುಪರಿಣಾಮಕಾರಿ ಕೆಲಸ ಮಾಡಿದೆ. ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡುವ ಮೂಲಕ ಗೆಲುವು ಸಾ​ಧಿಸಲು ಸಹಕರಿಸಿದ್ದು ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದರು. ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿನೋದ್‌ ರೆಡ್ಡಿ, ಗ್ರಾಪಂ ಸದಸ್ಯರಾದ ಪಟೇಲ್‌ ಬಾಬು, ಆಶಾರಾಣಿ, ಆಂಜಿನಪ್ಪ, ವಿನೋದ್‌ ಶಶಿಧರ್‌, ಮುಖಂಡರಾದ ನಾಗನಾಯಕನಕೋಟೆ ವಸಂತ್‌ಕುಮಾರ್‌, ಮಧು, ಹೀರೇಗೌಡ, ಬಸವರಾಜ್‌, ಸುನಿಲ್‌ ಕುಮಾರ್‌, ಗೋಪಾಲ್‌, ಪ್ರಕಾಶ್‌, ಆಟೋ ವೆಂಕಟೇಶ್‌ ಇತರರಿದ್ದರು.

ಹೈನುಗಾರರ ಅಭಿವೃದ್ಧಿಗೆ ಸರ್ಕಾರ ಬದ್ಧ: ಹೈನುಗಾರರ ಅಗತ್ಯ ಬೇಡಿಕೆಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ತಾಲೂಕಿನ ಕುಂಬಳಹಳ್ಳಿ ಗ್ರಾಪಂ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಹೆಚ್ಚುವರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಗುಣಮಟ್ಟದ ಹಾಲು ಪೂರೈಕೆಯಿಂದ ಅಗತ್ಯವಾದಂತಹ ರಾಸುಗಳ ಪೌಷ್ಟಿಕ ಆಹಾರವನ್ನು ಸರಬರಾಜು ಮಾಡುವಲ್ಲಿ ಸಹ ಮುಂಚೂಣಿಯಲ್ಲಿದೆ. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಚುನಾಯಿತರಾಗಿರುವ ನಿರ್ದೇಶಕರು ಹೈನು ಸಾಕಾಣಿಕೆದಾರರಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ತಾರತಮ್ಯವೆಸಗದೆ ಪ್ರಾಮಾಣಿಕವಾಗಿ ಪ್ರತಿಯೊಬ್ಬ ಸದಸ್ಯರಿಗೂ ತಲುಪಿಸಬೇಕು. 

ಇನ್‌ಸ್ಪೆಕ್ಟರ್‌ ಬಗೆಗಿನ ನನ್ನ ಮಾತು ತಿರುಚಲಾಗಿದೆ: ಸಚಿವ ಎಂಟಿಬಿ ನಾಗರಾಜ್‌

ಅಷ್ಟೆ ಅಲ್ಲದೆ ಗುಣಮಟ್ಟದ ಹಾಲು ಸರಬರಾಜಿಗೆ ಪ್ರಮುಖ ಆದ್ಯತೆ ನೀಡಬೇಕಿದ್ದು, ಅಗತ್ಯ ತರಬೇತಿಯನ್ನು ಹೈನು ಸಾಕಾಣಿಕೆದಾರರಿಗೆ ನೀಡಬೇಕು ಎಂದರು. ಗ್ರಾಪಂ ಸದಸ್ಯ ಕುರುಬರಹಳ್ಳಿ ವೆಂಕಟೇಶ್‌ ಮಾತನಾಡಿ, ಡೇರಿ ಕಟ್ಟಡ ಕಿರಿದಾಗಿದ್ದ ಕಾರಣ ಬೆಳಿಗ್ಗೆ ಸಂಜೆ ಹಾಲು ಹಾಕಲು ಬರುವ ಸದಸ್ಯರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕಟ್ಟಡವನ್ನು ನಿರ್ಮಾಣ ಮಾಡುವ ಮೂಲಕ ಸದಸ್ಯರಿಗೆ ಸಾಕಷ್ಟುಅನುಕೂಲವಾಗುವಂತೆ ಮಾಡಲಾಗಿದೆ. ಗುಣಮಟ್ಟದ ಹಾಲು ಸರಬರಾಜು ಮಾಢುವಲ್ಲಿ ಡೇರಿ ಸಾಕಷ್ಟುಮುಂದಿದೆ ಎಂದರು.

click me!