* ಫೆ.14ರಂದು ಲವರ್ಸ್ ಡೇ, ಅಂದೇ ರಾಜೀನಾಮೆ ನೀಡ್ತೇನೆ
* ಕರ್ನಾಟಕ ಕಾಂಗ್ರೆಸ್ ನಾಯಕ ಘೋಷಣೆ
* ಮೈಸೂರಿನಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ
ಮೈಸೂರು, (ಫೆ.02): ಈಗಾಗಲೇ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದ್ದ ಸಿಎಂ ಇಬ್ರಾಹಿಂ (CM Ibrahim) ಇದೀಗ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ(Resign) ನೀಡಲು ತೀರ್ಮಾನಿಸಿದ್ದಾರೆ.
ಇಂದು(ಬುಧವಾರ) ಮೈಸೂರಿನಲ್ಲಿ ( Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ 14ರಂದು ಲವರ್ಸ್ ಡೇ. ಅಂದೇ ನಾನು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಹೂವಿನ ಹಾರ ಹಾಕಿ ಹೋರಾಟ ಮಾಡುತ್ತೇನೆ. ಸಿದ್ದರಾಮಯ್ಯನವರಿಗೆ ನನ್ನದೇ ಸ್ಥಿತಿ ಬರುತ್ತೆ ಎಂದು ಭವಿಷ್ಯ ನುಡಿದರು.
Karnataka Congress ಪಾಟೀಲ್ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್, ಸಂಚಲನ ಮೂಡಿಸಿದ ಇಬ್ರಾಹಿಂ ಹೇಳಿಕೆ
ನನ್ನ ಜೊತೆ ಸಿದ್ದರಾಮಯ್ಯನವರು ಮಾತನಾಡಿಲ್ಲ. ಬಾದಾಮಿಗೆ ಹೊತ್ತುಕೊಂಡು ಹೋದವನು ನಾನು. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ. ಸಿದ್ದರಾಮಯ್ಯನವರು ಕಾಂಗ್ರೆಸ್ನಲ್ಲಿ ಅಸಹಾಯಕರಾಗಿದ್ದಾರೆ. ಅಲಿಂಗ ಸಮಾವೇಶವನ್ನು ಫೆಬ್ರವರಿಯಲ್ಲಿ ಮಾಡುತ್ತೇನೆ. ಕರ್ನಾಟಕದಲ್ಲಿ ಬಸವ ಕೃಪಾದ ಸಿದ್ದಾಂತ ತರುತ್ತೇನೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ನನ್ನ ಜೊತೆ ಟೆಚ್ ಅಲ್ಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಫೆಬ್ರವರಿ 14ರ ನಂತರ ನನ್ನ ಯಾತ್ರೆ ಶುರುವಾಗುತ್ತೆ. ಮತ್ತೆ ಕರ್ನಾಟಕದಲ್ಲಿ ದೇಶದ ಚರಿತ್ರೆ ಬದಲಾಗುತ್ತೆ. ನನಗೆ ರಾಜ್ಯಸಭಾ ಸದಸ್ಯ ಸ್ಥಾನ ತಪ್ಪಿಸಿದ್ರು. ಅವತ್ತು ಮೋಯ್ಲಿ ಸರ್ಕಾರ ಹೋಯ್ತು. ಇವತ್ತು ರಾಜ್ಯದಲ್ಲಿ ನನ್ನ ಕೂಗು ತಲುಪುತ್ತಿದೆ. ನಾನು ಯಾರ ವಿರುದ್ದವೂ ಬಂದಿಲ್ಲ. ನಾನು ಮೂಲಭೂತ ಹಕ್ಕಿನ ಪ್ರಶ್ನೆ ಮಾಡುತ್ತಿದ್ದೇನೆ. ವಿಧಾನ ಪರಿಷತ್ ನಾಯಕರನ್ನು ಅಯ್ಕೆ ಮಾಡುವುದು ಸದಸ್ಯರ ಕರ್ತವ್ಯ. ನನ್ನ ಪರ 19 ಜನ ಪರಿಷತ್ ಸದಸ್ಯರು ಇದ್ರು. ದೆಹಲಿ ನಾಯಕರು ನನ್ನನ್ನು ಸಂಪರ್ಕ ಮಾಡಿದ್ದರು. ಆದರೆ, ರಾತ್ರೋರಾತ್ರಿ ನಾಯಕರ ಆಯ್ಕೆ ಬದಲಾವಣೆಯಾಯ್ತು ಎಂದು ಅಸಮಾಧಾನ ಹೊರಹಾಕಿದರು.
ನನಗೆ ದುಡ್ಡಿನ ಶಕ್ತಿ ಇಲ್ಲ ಅಂತ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶವಿಲ್ಲ. ನಾನು ಅಲ್ಪಸಂಖ್ಯಾತ ಅಂತ ನನಗೆ ಸ್ಥಾನ ನೀಡಿಲ್ಲ. ನಾವು ಶೇ 21ರಷ್ಟು ಜನಸಂಖ್ಯೆ ಇದ್ದೇವೆ. ನಮಗೆ ಸ್ಥಾನನೂ ಇಲ್ಲ, ಬಜೆಟ್ನಲ್ಲಿ ದುಡ್ಡು ಕೂಡ ಇಲ್ಲ. ನಾನು ವಿಶ್ಚನಾಥ್, ರಮೇಶ್ ಕುಮಾರ್ ಚರ್ಚೆ ಮಾಡಿ ಭಾಗ್ಯಗಳನ್ನು ನೀಡಿ ಅಂತ ಹೇಳಿದೆವು. ನಾವು ಸಿದ್ದರಾಮಯ್ಯನವರಿಗೆ ಹಿನ್ನಲೆ ಗಾಯಕರು. ಸತತ ನಾಲ್ಕು ವರ್ಷದಿಂದ ಕತ್ತು ಕೊಯ್ದಿದ್ದಾರೆ ಎಂದು ಆರೋಪಿಸಿದರು.
ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ನನ್ನ ಪ್ರಾಣ ಒತ್ತೆಯಿಟ್ಟು ಹೋರಾಟ ಮಾಡಿದ್ದೇನೆ. 15 ದಿನ ನಾವು ಕ್ಯಾಂಪ್ ಮಾಡಿ ಬಾದಾಮಿಯಲ್ಲಿ ಗೆಲ್ಲಿಸಿದ್ದೇವೆ. ಯಾರು ಕಾಂಗ್ರೆಸ್ನ ಹೈಕಮಾಂಡ್? ನಿಮ್ಮ ಸಲುವಾಗಿ ನಾನು ದೇವೇಗೌಡರನ್ನ ಬಿಟ್ಟು ಬಂದಿದ್ದೇನೆ. ಅಲ್ಪಸಂಖ್ಯಾತರಿಗೆ ಪ್ಯಾಂಟ್ ನೀಡದೇ ಚಡ್ಡಿ ನೀಡಿದ್ದೀರಾ. ಅಲ್ಪಸಂಖ್ಯಾತರಿಗೆ ಉಪನಾಯಕ ಪಟ್ಟ ನೀಡಿದ್ದಾರೆ. ನಮಗೆ ಕಾಂಗ್ರೆಸ್ನಲ್ಲಿ ಮಾತನಾಡುವ ಹಕ್ಕಿಲ್ಲ.ತನ್ವೀರ್ ಸೇಠ್ನ ವಿರೋಧ ಪಕ್ಷದ ನಾಯಕರು ಮಾಡಿ. ನಿಮಗೆ ಚೀಲ ಹಿಡಿದವರು ಬೇಕು. ಟಿಪ್ಪು ಸುಲ್ತಾನ್ ಭೂಮಿಯಲ್ಲಿ ಹುಟ್ಟಿದವರು ನಾವು. ಅಲಿಂಗ ಅಂತ ಚಳುವಳಿ ಶುರು ಮಾಡಿದ್ದೇನೆ ಎಂದರು.