UP Elections: ಚಿದಂಬರಂ ವಿರುದ್ಧ ತನಿಖೆ ನಡೆಸಿದ್ದ ಮಾಜಿ ಇಡಿ ಅಧಿಕಾರಿಗೆ ಬಿಜೆಪಿ ಟಿಕೆಟ್!

Suvarna News   | Asianet News
Published : Feb 02, 2022, 04:18 PM IST
UP Elections: ಚಿದಂಬರಂ ವಿರುದ್ಧ ತನಿಖೆ ನಡೆಸಿದ್ದ ಮಾಜಿ ಇಡಿ ಅಧಿಕಾರಿಗೆ ಬಿಜೆಪಿ ಟಿಕೆಟ್!

ಸಾರಾಂಶ

ವಿಆರ್ ಎಸ್ ತೆಗೆದುಕೊಂಡ 24 ಗಂಟೆಯಲ್ಲೇ ಬಿಜೆಪಿ ಟಿಕೆಟ್ ಉತ್ತರ ಪ್ರದೇಶದ ಸರೋಜಿನಿ ನಗರದಿಂದ ಸ್ಪರ್ಧೆ ಮಾಡಲಿದ್ದಾರೆ ರಾಜೇಶ್ವರ್ ಸಿಂಗ್ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್ ಸಿಂಗ್ 

ನವದೆಹಲಿ (ಫೆ. 2): ಜಾರಿ ನಿರ್ದೇಶನಾಲಯದ (Enforcement Directorate ) ಮಾಜಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ (Rajeshwar Singh) ತಮ್ಮ 14 ವರ್ಷದ ಸೇವೆಯಿಂದ ಸ್ವಯಂ ನಿವೃತ್ತಿ (VRS) ಪಡೆದ 24 ಗಂಟೆಯ ಒಳಗಾಗಿ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Uttar Pradesh Elections) ಸ್ಪರ್ಧಿಸಲು ಭಾರತೀಯ ಜನತಾ ಪಕ್ಷದಿಂದ (BJP) ಟಿಕೆಟ್ ಪಡೆದುಕೊಂಡಿದ್ದಾರೆ. ಫೆಬ್ರವರಿ 1 ರಂದು ರಾಜೇಶ್ವರ್ ಸಿಂಗ್ ಜಾರಿ ನಿರ್ದೇಶನಾಲಯದಲ್ಲಿ ತಮ್ಮ ಹುದ್ದೆಯಿಂದ ವಿಆರ್ ಎಸ್ ಪಡೆದುಕೊಂಡಿದ್ದು, ಅದೇ ದಿನ ಅವರಿಗೆ ಉತ್ತರ ಪ್ರದೇಶದ ಸರೋಜಿನಿ ನಗರ (Sarojini Nagar ) ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ (Karti Chidambaram), ಬಿಜೆಪಿ ಹಾಗೂ ಇಡಿ ಕುರಿತಾಗಿ ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ. ಇಡಿ (ED) ಹುದ್ದೆಯಿಂದ ವಿಆರ್ ಎಸ್ ಪಡೆದು ಬಿಜೆಪಿ ಪಕ್ಷಕ್ಕೆ ಸೇರುವುದು, ಒಂದರ್ಥದಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಿಂದ ಮಾತೃ ಸಂಸ್ಥೆಗೆ ಹೋದ ರೀತಿಯಲ್ಲಿ ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಇನ್ನೊಂದೆಡೆ ರಾಜೇಶ್ವರ್ ಸಿಂಗ್ ಕೂಡ ಬಿಜೆಪಿಯಿಂದ ಟಿಕೆಟ್ ಪಡೆದ ವಿಚಾರವನ್ನು ಟ್ವಿಟರ್ ಮೂಲಕ ಘೋಷಣೆ ಮಾಡಿದ್ದರು.

ಏರ್ ಸೆಲ್-ಮ್ಯಾಕ್ಸಿಸ್ ಡೀಲ್ ಪ್ರಕರಣದಲ್ಲಿ(Aircel-Maxis deal case) ರಾಜೇಶ್ವರ್ ಸಿಂಗ್ ಕಾರ್ತಿ ಚಿದಂಬರಂ ಹಾಗೂ ಅವರ ತಂದೆ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ (senior Congress leader P Chidambaram ) ವಿರುದ್ಧ ತನಿಖೆ ನಡೆಸಿದ್ದರು. ಏರ್ ಸೆಲ್-ಮ್ಯಾಕ್ಸಿಸ್ ಡೀಲ್ ಮಾತ್ರವಲ್ಲದೆ, 2009ರಿಂದ ಯುಪಿಎ ಸರ್ಕಾರವನ್ನು ಬಹುವಾಗಿ ಕಾಡಿದ, ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳ ಮೇಲಿನ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿದ ಪ್ರತಿ ಪ್ರಕರಣದ ತನಿಖಾ ತಂಡದಲ್ಲಿ ರಾಜೇಶ್ವರ್ ಸಿಂಗ್ ಭಾಗಿಯಾಗಿದ್ದರು. ಅವುಗಳಲ್ಲಿ 2ಜಿ ತರಂಗಾಂತರ ಹಂಚಿಕೆ ಪ್ರಕರಣ (2G spectrum), ಅಗಸ್ಟಾವೆಸ್ಟ್ ಲ್ಯಾಂಡ್ ಹಗರಣ (AgustaWestland chopper scam),  ಕಾಮನ್‌ವೆಲ್ತ್ ಗೇಮ್ಸ್ ಹಗರಣ (Commonwealth Games scam) ಮತ್ತು ಕಲ್ಲಿದ್ದಲು ಗಣಿ ಹಂಚಿಕೆ ಹಗರಣ (coal scam) ಸೇರಿವೆ. ಈ ಪ್ರತಿಯೊಂದು ಪ್ರಕರಣದಲ್ಲಿ ಕಾಂಗ್ರೆಸ್ ಅಥವಾ ಅದರ ಮಿತ್ರಪಕ್ಷಗಳ ಉನ್ನತ ನಾಯಕರು ಪ್ರಮುಖ ಆರೋಪಿಗಳಾಗಿ ಹೊರಹೊಮ್ಮಿದ್ದಾರೆ.
 


ಅವರ ಹೊಸ ಇನ್ನಿಂಗ್ಸ್‌ಗೆ ಶುಭ ಹಾರೈಸಿದ ಬಿಜೆಪಿಯ ಲೋಕಸಭಾ ಸಂಸದ ನಿಶಿಕಾಂತ್ ದುಬೆ ಅವರಿಗೆ ಟ್ವಿಟರ್ ಮೂಲಕವೇ ರಾಜೇಶ್ವರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ, "ತುಂಬಾ ಧನ್ಯವಾದಗಳು ಭಯ್ಯಾ. ನೀವು ಯಾವಾಗಲೂ ನನ್ನೊಂದಿಗೆ ನಿಂತಿದ್ದೀರಿ. ನಿಮ್ಮ ಆಶೀರ್ವಾದ ಯಾವಾಗಲೂ ನನಗೆ ಶಕ್ತಿಯ ಮೂಲವಾಗಿದೆ" ಎಂದು ಹೇಳಿದರು.

5 States Election: ಯೋಗಿ ಪ್ರಚಾರದಲ್ಲಿ ಮುಜಫ್ಫರ್‌ನಗರ ಗಲಭೆ ಪ್ರತಿಧ್ವನಿ, ಗೋವಾದಲ್ಲಿ ಫೋಟೋ ಫಿನಿಶ್‌?
ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿದ್ದ ಸ್ವಾತಿ ಸಿಂಗ್ ಬದಲಿಗೆ ಸರೋಜಿನಿ ನಗರದಲ್ಲಿ ರಾಜೇಶ್ವರ್ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿದೆ. ಇನ್ನೊಂದೆಡೆ ಕಳೆದ ಒಂದು ಆರು ತಿಂಗಳಿನಿಂದಲೂ ರಾಜೇಶ್ವರ್ ಸಿಂಗ್, ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳಿದ್ದವು. ಕಳೆದ ಆಗಸ್ಟ್ ನಲ್ಲಿಯೇ ಸ್ವಯಂ ನಿವೃತ್ತಿ ಪಡೆಯುವ ಕುರಿತಾಗಿ ರಾಜೇಶ್ವರ್ ಸಿಂಗ್ ಅರ್ಜಿಯನ್ನು ಸಲ್ಲಿಸಿದ್ದು ಮಾತ್ರವಲ್ಲದೆ, ದೆಹಲಿಯ ಅಗ್ರ ಬಿಜೆಪಿ ನಾಯಕರೊಂದಿಗೆ ಈ ಕುರಿತಾಗಿ ಮಾತುಕತೆಯನ್ನೂ ಆಡಿದ್ದರು.

PM Modi UP Virtual Rally: ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವುದು ಪ್ರತಿಪಕ್ಷಗಳ ಏಕೈಕ ಅಜೆಂಡಾ: ಪ್ರಧಾನಿ!
ಲಕ್ನೋದಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ವರ್ ಸಿಂಗ್ ಅವರು 2009 ರಲ್ಲಿ ಉತ್ತರ ಪ್ರದೇಶ ಪೊಲೀಸರಿಂದ ನಿಯೋಜನೆಯ ಮೇಲೆ ಜಾರಿ ನಿರ್ದೇಶನಾಲಯಕ್ಕೆ ಸೇರಿದ್ದರು. ಉತ್ತರ ಪ್ರದೇಶದ ಸುಲ್ತಾನ್‌ಪುರದವರಾದ ರಾಜೇಶ್ವರ್ ಸಿಂಗ್ ಅವರು ಧನ್‌ಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‌ನಲ್ಲಿ ಇಂಜಿನಿಯರ್ ಪದವಿ ಪಡೆದಿದ್ದಾರೆ. ಅದರೊಂದಿಗೆ ಕಾನೂನು ಮತ್ತು ಮಾನವ ಹಕ್ಕುಗಳ ಪದವಿಯನ್ನೂ ಹೊಂದಿದ್ದಾರೆ. ಅವರು ನಿರ್ವಹಿಸಿದ ಪ್ರಕರಣಗಳಲ್ಲಿ ವಿವಿಧ ಆರೋಪಿಗಳಿಂದ ಸುಮಾರು 3000 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ ಸಾಧನೆಯನ್ನೂ ಹೊಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್