ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಮಂಡ್ಯ ಉಸ್ತುವಾರಿ ಕೊಟ್ರು ಬೇಡ: ಸಚಿವ ಕೆ.ಸಿ. ನಾರಾಯಣಗೌಡ

By Gowthami KFirst Published Feb 18, 2023, 5:14 PM IST
Highlights

ನಾನೆಲ್ಲೂ ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ. ಮಂಡ್ಯ ಉಸ್ತುವಾರಿ ಕೊಟ್ಟರೂ ವಹಿಸಿಕೊಳ್ಳುವುದಿಲ್ಲ.  ವದಂತಿಗಳಿಗೆ ಯಾರೂ ಕೂಡ ಕಿವಿ ಕೊಡಬೇಡಿ ಎಂದು ರೇಷ್ಮೆ ಖಾತೆ ಸಚಿವ ಕೆ.ಸಿ ನಾರಾಯಣಗೌಡ ಹೇಳಿದ್ದಾರೆ.

ಮಂಡ್ಯ (ಫೆ.18): ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಇದೆಲ್ಲವೂ ಕೇವಲ ಗಾಳಿ ಸುದ್ದಿ, ವದಂತಿ ಅಷ್ಟೇ. ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ರೇಷ್ಮೆ ಖಾತೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ವಿರೋಧಿಗಳು ಇಲ್ಲದ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಹೋಗುತ್ತೇನೆ ಎಂದು ಎಲ್ಲಾದರೂ ಹೇಳಿದ್ದೇನಾ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಅನಿವಾರ್ಯತೆ ಏನಿದೆ. ಬಿಜೆಪಿಯಲ್ಲೇ ನಾನು ನೆಮ್ಮದಿಯಿಂದ ಇದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಹಾಗಾಗಿ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕೊಟ್ಟಿರುವುದಕ್ಕೂ ನನಗೆ ಬೇಸರವಿಲ್ಲ. ಆ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿಲ್ಲ. ಈಗ ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು ಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ಶಿವಮೊಗ್ಗದಲ್ಲಿ ಹಲವಾರು ಕೆಲಸಗಳು ಅರ್ಧಕ್ಕೆ ನಿಂತಿವೆ. ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಈ ನಡುವೆ ಮಂಡ್ಯ ಉಸ್ತುವಾರಿ ವಹಿಸಿಕೊಂಡರೆ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ. ಎರಡೂ ಕಡೆ ನ್ಯಾಯ ಸಲ್ಲಿಸಲಾಗುವುದಿಲ್ಲ ಎಂದು ಹೇಳಿದರು.

Pralhad Joshi: ನಾನು ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಉದ್ಭವಿಸಲ್ಲ: ಪ್ರಲ್ಹಾದ್ ಜೋಶಿ

Latest Videos

ಬಿಜೆಪಿ ಯುವ ಸಮಾವೇಶಗಳ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಿಲ್ಲೆಯ ಆರು ಕ್ಷೇತ್ರಗಳ ಆಕಾಂಕ್ಷಿಗಳೊಂದಿಗೆ ಸಭೆ ನಡೆಸಿದ್ದಾರೆ. ಚುನಾವಣೆ ಪ್ರಚಾರ ಹೇಗಿರಬೇಕು, ಯುವ ಮತದಾರರನ್ನು ಹೇಗೆ ಸೆಳೆಯಬೇಕು, ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳುವ ಕುರಿತಂತೆ ಮನದಟ್ಟು ಮಾಡಿದ್ದಾರೆ ಎಂದರು.

ಸಿದ್ದು-ಡಿಕೆಶಿ ನಡುವೆ 'ಸಿಎಂ ಪಟ್ಟ'ದ ಜಿದ್ದು: ಕೋಲಾರದಲ್ಲಿ ಟಗರಿಗೆ ವಿಘ್ನ

ಮಂಡ್ಯ ಉಸ್ತುವಾರಿ ನಿರ್ಧಾರ ಸಿಎಂಗೆ ಬಿಟ್ಟದ್ದು 
ಮಂಡ್ಯ ಜಿಲ್ಲಾ ಉಸ್ತುವಾರಿ ಯಾರಿಗೆ ನೀಡಬೇಕೆಂದು ತೀರ್ಮಾನ ಮಾಡೋರು ಮುಖ್ಯಮಂತ್ರಿಯವರು, ಉಸ್ತುವಾರಿ ಬಗ್ಗೆ ನನ್ನನ್ನು ಕೇಳಿದರೆ ನಾನೇನು ಹೇಳಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಕೆಲ ದಿನಗಳ ಹಿಂದೆ ಮಂಡ್ಯಕ್ಕೆ ಭೇಟಿ ನೀಡಿದ್ದಾಗ  ಹೇಳಿದ್ದರು. ಜಿಲ್ಲೆಯ ಮೇಲೆ ನನಗಿರುವ ಪ್ರೀತಿ, ಬಾಂಧವ್ಯ ಒಂದು ಭಾಗವಾದರೆ, ಜವಾಬ್ದಾರಿ ಮತ್ತು ಆಡಳಿತ ಇನ್ನೊಂದು ಭಾಗ. ಯಾವುದೇ ಜಿಲ್ಲೆಯ ಉಸ್ತುವಾರಿ ನಿಶ್ಚಯ ಮಾಡುವ ಅಧಿಕಾರವಿರುವುದು ಸಿಎಂಗೆ ಮಾತ್ರ. ಮಂಡ್ಯ ಉಸ್ತುವಾರಿ ನೇಮಕ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

click me!