‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಭೇಟಿ ಮಾಡಿದ್ದು ನಿಜ. ಕಾಂಗ್ರೆಸ್‌ಗೆ ಬರುವಂತೆ ಮತ್ತೊಮ್ಮೆ ಆಫರ್ ನೀಡಿದ್ದಾರೆ. ಆದರೆ, ನಾನು ಇದನ್ನು ತಳ್ಳಿ ಹಾಕಿದ್ದೇನೆ. ಜೆಡಿಎಸ್ ಬಿಟ್ಟು ಬರುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ’ ಎಂದು ಜೆಡಿಎಸ್ ಶಾಸಕ ಹಾಗೂ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಬೆಂಗಳೂರು (ನ.18): ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಭೇಟಿ ಮಾಡಿದ್ದು ನಿಜ. ಕಾಂಗ್ರೆಸ್‌ಗೆ ಬರುವಂತೆ ಮತ್ತೊಮ್ಮೆ ಆಫರ್ ನೀಡಿದ್ದಾರೆ. ಆದರೆ, ನಾನು ಇದನ್ನು ತಳ್ಳಿ ಹಾಕಿದ್ದೇನೆ. ಜೆಡಿಎಸ್ ಬಿಟ್ಟು ಬರುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ’ ಎಂದು ಜೆಡಿಎಸ್ ಶಾಸಕ ಹಾಗೂ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್‌ರನ್ನು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಸೇರಿದಂತೆ ಇತರೆ ಶಾಸಕರು ಭೇಟಿಯಾಗಲು ಆಗಮಿಸಿದ್ದರು. ಭೇಟಿಯ ಸಂದರ್ಭದಲ್ಲಿ, ‘ಈಗಲೂ ಅವಕಾಶ ಇದೆ, ಕಾಂಗ್ರೆಸ್‌ಗೆ ಬರುವ ಮನಸು ಮಾಡಿ’ ಎಂದರು. ಆದರೆ, ನಾನು ಇದನ್ನು ತಳ್ಳಿ ಹಾಕಿದೆ. ಜೆಡಿಎಸ್ ಬಿಟ್ಟು ಬರುವುದಿಲ್ಲ ಎಂದು ಅವರಿಗೆ ತಿಳಿಸಿದೆ ಎಂದು ಸ್ಪಷ್ಟಪಡಿಸಿದರು.
‘ಶಿವಕುಮಾರ್ ಅವರು ನಮ್ಮದೇ ಸರ್ಕಾರ ಇದ್ದು, ನಿಮಗೂ ಅಧಿಕಾರದ ಅವಕಾಶ ಸಿಗಲಿದೆ ಎಂದಿದ್ದಾರೆ. ಅದಕ್ಕೆ, ನಾನು ಕೋರ್ ಕಮಿಟಿ ಅಧ್ಯಕ್ಷನಾಗಿ ಜೆಡಿಎಸ್ ಪಕ್ಷವನ್ನು ಕಟ್ಟುತ್ತಿದ್ದೇನೆ. ನಿಮ್ಮಲ್ಲಿಯೇ 135 ಶಾಸಕರು ಇದ್ದು, ಶಾಸಕರನ್ನು ಸೇರಿಸಿಕೊಳ್ಳುವ ಅಗತ್ಯ ಬರಲ್ಲ ಎಂಬುದಾಗಿ ತಿಳಿಸಿದ್ದೇನೆ’ ಎಂದರು. ಅಲ್ಲದೇ, ‘ಈ ಹಿಂದೆಯೂ ಶಿವಕುಮಾರ್ ಅವರು ನನ್ನನ್ನು ಕಾಂಗ್ರೆಸ್‌ಗೆ ಕರೆದಿದ್ದರು. ಅವರ ಅಧ್ಯಕ್ಷ ಸ್ಥಾನ ಹೋದರೂ ಎರಡು ಸ್ಥಾನ ಕೊಡಿಸುತ್ತೇನೆ ಎಂದಿದ್ದರು. ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಹೇಳಿದ್ದರೂ ಆ ಪಕ್ಷಕ್ಕೆ ಹೋಗಿಲ್ಲ. ಈಗ ಕಾಂಗ್ರೆಸ್‌ಗೂ ಹೋಗಲ್ಲ ಎಂದು ತಿಳಿಸಿದ್ದೇನೆ. ಕಾಂಗ್ರೆಸ್‌ಗೆ ಹೋಗುತ್ತೇನೆ ಎಂಬ ಯೋಚನೆಯೂ ಇಲ್ಲ ಎಂದಿದ್ದೇನೆ’ ಎಂದರು.
ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿ ಸಲಾಂ: ಸಚಿವ ಜಮೀರ್ ಹೇಳಿಕೆ ವಿವಾದ
ಹಾಸನಾಂಬೆ ಎದುರು ಶಾಸಕರು ಆಣೆ-ಪ್ರಮಾಣ ಮಾಡಿಲ್ಲ: ಹಾಸನಾಂಬೆ ಎದುರು ನಾವ್ಯಾರೂ ಆಣೆ ಮಾಡಿಲ್ಲ. ಬದಲಿಗೆ ಪಕ್ಷ ಕಟ್ಟುವ ಕುರಿತು ಪ್ರತಿಜ್ಞೆ ಮಾಡಿದ್ದೇವೆ ಎಂದು ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರು ಪಕ್ಷ ಬಿಡುವುದಿಲ್ಲ ಎಂದು ಆಣೆ-ಪ್ರಮಾಣ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಲಕ್ಷಾಂತರ ಜನರು ಬರುವ ತಾಯಿ ಹಾಸನಾಂಬೆ ಎದುರು ಆಣೆ-ಪ್ರಮಾಣ ಸಾಧ್ಯವಾ? ನಾವೆಲ್ಲರೂ ನಮ್ಮ ಮನಸಿನಲ್ಲಿರುವುದನ್ನಷ್ಟೆ ಕೇಳಿಕೊಂಡಿದ್ದೇವೆ ಎಂದರು. ಜೆಡಿಎಸ್ ನಾಯಕರು ಯಾರೂ ಪಕ್ಷ ಬಿಡುವುದಿಲ್ಲ ಎಂದ ಅವರು, ರಾಜ್ಯದಲ್ಲಿ ಪಕ್ಷ ಬಲವರ್ಧನೆ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವುದು ನಮ್ಮ ಮುಂದಿರುವ ಗುರಿ. ಆ ಕುರಿತು ನಾವು ಸಂಘಟನಾತ್ಮಕವಾಗಿ ಕೆಲಸ ಮಾಡ್ತೀವಿ ಎಂದವರು ಹೇಳಿದರು.