ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿ ಸಲಾಂ: ಸಚಿವ ಜಮೀರ್ ಹೇಳಿಕೆ ವಿವಾದ

By Kannadaprabha News  |  First Published Nov 18, 2023, 11:02 AM IST

ಕಾಂಗ್ರೆಸ್‌ ಪಕ್ಷ  ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಸ್ಥಾನವನ್ನು ಮುಸ್ಲಿಮರಿಗೆ ನೀಡಿ, ಬಿಜೆಪಿ ಶಾಸಕರು ಸಹ ನಮಸ್ಕಾರ ಸ್ಪೀಕರ್ ಸಾಬ್ ಎನ್ನುವಂತೆ ಮಾಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ತೆಲಂಗಾಣ ಚುನಾವಣೆ ವೇಳೆ ನೀಡಿದ್ದ ಹೇಳಿಕೆ ಶುಕ್ರವಾರ ವಿವಾದದ ಸ್ವರೂಪ ಪಡೆದಿದೆ. 


ಬೆಂಗಳೂರು (ನ.18): ಕಾಂಗ್ರೆಸ್‌ ಪಕ್ಷ  ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಸ್ಥಾನವನ್ನು ಮುಸ್ಲಿಮರಿಗೆ ನೀಡಿ, ಬಿಜೆಪಿ ಶಾಸಕರು ಸಹ ನಮಸ್ಕಾರ ಸ್ಪೀಕರ್ ಸಾಬ್ ಎನ್ನುವಂತೆ ಮಾಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ತೆಲಂಗಾಣ ಚುನಾವಣೆ ವೇಳೆ ನೀಡಿದ್ದ ಹೇಳಿಕೆ ಶುಕ್ರವಾರ ವಿವಾದದ ಸ್ವರೂಪ ಪಡೆದಿದೆ. ಇದಕ್ಕೆ, ಜಮೀರ್ ಅವರು ಕಾಂಗ್ರೆಸ್ ಮುಸ್ಲಿಂ ಸಮಾಜಕ್ಕೆ ನೀಡಿರುವ ಗೌರವ ಪ್ರಸ್ತಾಪಿಸಿದ್ದೇನೆಯೇ ಹೊರತು ಸ್ಪೀಕರ್‌ ಸ್ಥಾನಕ್ಕೆ ಅಗೌರವ ತರುವ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಮೀರ್ ಅಹಮದ್‌ ಅವರು ತೆಲಂಗಾಣದ ಚುನಾವಣೆ ಪ್ರಚಾರದ ವೇಳೆ ಮಾತನಾಡಿ, ’ಕರ್ನಾಟಕದಲ್ಲಿ ಕಾಂಗ್ರೆಸ್ನಿಂದ 9 ಮಂದಿ ಮುಸ್ಲಿಂ ಶಾಸಕರು ಗೆದ್ದಿದ್ದು, ಅದರಲ್ಲಿ ನನ್ನನ್ನು ಸಚಿವ, ಸಲೀಂ ಅಹ್ಮದ್ ಅವರನ್ನು ಮುಖ್ಯ ಸಚೇತಕ, ನಜೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಅಷ್ಟ ಅಲ್ಲದೆ, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಮರನ್ನು ಸ್ಪೀಕರ್‌ ಮಾಡಿದ್ದು, ಬಿಜೆಪಿಯ ಒಳ್ಳೊಳ್ಳೆಯ ಶಾಸಕರು ನಮಸ್ಕಾರ ಸ್ಪೀಕರ್ ಸಾಬ್ ಅಂತ  ಕೈ ಮುಗಿದು ನಿಲ್ಲಬೇಕು’ ಎಂದಿದ್ದರು.

Tap to resize

Latest Videos

Congress ವಿರುದ್ಧ ಕಾಫಿನಾಡಲ್ಲಿ ಫೋಸ್ಟರ್ ಅಭಿಯಾನ: ಸಿದ್ದು ವಿರುದ್ಧ ಶ್ಯಾಡೋ ಸಿಎಂ ಪೋಸ್ಟರ್

ಇದು ಶುಕ್ರವಾರ ವಿವಾದ ಸ್ವರೂಪ ಪಡೆದು, ಸ್ಪೀಕರ್ ಹುದ್ದೆಗೆ ಕೋಮು ಬಣ್ಣ ಹಚ್ಚಲಾಗುತ್ತಿದೆ ಎಂದು ಪ್ರತಿಪಕ್ಷಗಳು ದಾಳಿ ಮಾಡಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಜಮೀರ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಮುಸ್ಲಿಂ ಸಮುದಾಯಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪೀಕರ್‌ ಹುದ್ದೆಯಂತಹ ಅತ್ಯುನ್ನತ ಸ್ಥಾನ ನೀಡಿದೆ. ಇದರಿಂದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹೀಗೆ ಎಲ್ಲ ಪಕ್ಷಗಳ ಶಾಸಕರು ಸದನದಲ್ಲಿ ಅವರನ್ನು ಸನ್ಮಾನ್ಯ ಸಭಾಧ್ಯಕ್ಷರೇ ಎಂದು ಕರೆಯುತ್ತೇವೆ. ಮುಸ್ಲಿಮರು ಅಷ್ಟೊಂದು ಉನ್ನತ ಹುದ್ದೆಗೆ ಏರುವ ಅವಕಾಶ ನೀಡಿದ್ದು ಕಾಂಗ್ರೆಸ್‌ ಎಂದು ಹೇಳಿದ್ದೆನೇ ಹೊರತು ಯಾವುದೇ ಪಕ್ಷದ ಶಾಸಕರು, ವ್ಯಕ್ತಿಗಳಿಗೆ ಅಗೌರವ ತೋರುವ ರೀತಿ ಮಾತನಾಡಿಲ್ಲ.  ಕಾಂಗ್ರೆಸ್ ನಮ್ಮ ಸಮಾಜಕ್ಕೆ ನೀಡಿರುವ ಗೌರವ ಸ್ಮರಿಸುವುದು ತಪ್ಪೇ ಎಂದು ಅವರು ಪ್ರಶ್ನಿಸಿದ್ದಾರೆ.

click me!