ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಲು ಪಕ್ಷ ನನಗೆ ಹೇಳಿತ್ತು. ಆದರೆ, ಈಗ ಕುಮಾರಸ್ವಾಮಿ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡುವುದಿಲ್ಲ.
ಮಂಡ್ಯ (ಏ.20): ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಲು ಪಕ್ಷ ನನಗೆ ಹೇಳಿತ್ತು. ನಮ್ಮಲ್ಲೇ ಸಮರ್ಥ ಅಭ್ಯರ್ಥಿ ಇದ್ದಾರೆ ಅವರನ್ನೇ ಕುಮಾರಸ್ವಾಮಿ ವಿರುದ್ಧ ಗೆಲ್ಲಿಸಬಹುದು ಎಂದಿದ್ದೆನು. ಆದರೆ, ಈಗ ಕುಮಾರಸ್ವಾಮಿ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಅವರ ವಿರುದ್ಧ ಸ್ಪರ್ಧೆ ಮಾಡುವಂತೆ ಪಕ್ಷ ನನಗೆ ಹೇಳಿತ್ತು. ಆದರೆ, ಈ ವೇಳೆ ನಮ್ಮಲ್ಲೇ ಸಮರ್ಥ ಅಭ್ಯರ್ಥಿ ಇದ್ದಾರೆ ಅವರನ್ನೇ ಕುಮಾರಸ್ವಾಮಿ ವಿರುದ್ಧ ಗೆಲ್ಲಿಸಬಹುದು ಎಂದಿದ್ದೆನು. ಆದರೆ, ಪಕ್ಷ ಹೇಳಿದಂತೆ ಕೇಳಲು ನಾನು ಸಿದ್ಧವಾಗಿದ್ದೆನು. ಈಗ ಕುಮಾರಸ್ವಾಮಿ ಸ್ಪರ್ಧಿಸದ ಹಿನ್ನೆಲೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳಿದರು.
ರಾಮಚಂದ್ರಗೆ ಮಂಡ್ಯ ಜೆಡಿಎಸ್ ಟಿಕೆಟ್: ಎಚ್‌ಡಿಕೆ ಸ್ಪರ್ಧೆ ಇಲ್ಲ
ಕುತಂತ್ರ ರಾಜಕಾರಣ ಮಾಡಿ ಅಧಿಕಾರ ಹಿಡಿತಾರೆ: ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಹಕ್ಕಿದೆ. ಪಕ್ಷ ಕಟ್ಟಲು ಸಮರ್ಥ ಅಭ್ಯರ್ಥಿಗಳು ಇಲ್ಲದ ಕಡೆ ನಮ್ಮ ಕುಟುಂಬದವರು ನಿಲ್ಲುತ್ತಾರೆ. ಇಲ್ಲವಾದರೆ ನಾವು ಕುಟುಂಬದವರನ್ನ ಬೆಳೆಸಲ್ಲಾ ಎಂದು ಹೇಳ್ತಾರೆ. ಆದರೆ ಬೇರೆ ಅಭ್ಯರ್ಥಿಗಳು ಬಂದರೆ ವಿರೋಧ ಮಾಡ್ತಾರೆ. ಅವರ ವಿರುದ್ಧ ಯಾವ ಬಲಿಷ್ಠ ಅಭ್ಯರ್ಥಿಯೂ ಸ್ಪರ್ಧೆ ಮಾಡಬಾರದು ಅನ್ನೋ ಉದ್ದೇಶ. ಕುತಂತ್ರ ರಾಜಕಾರಣ ಮಾಡಿ ಅಧಿಕಾರ ಹಿಡಿಯುತ್ತಾ ಬಂದಿರುವವರು ಅವರು. ಬಿಜೆಪಿ ಪಕ್ಷ ಆ ರೀತಿಯಾಗಿ ಬೆಳೆದು ಬಂದಿಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ದುರಹಂಕರಾದ ರಾಜಕಾರಣಿ ಅಲ್ಲ ಸ್ವಾಭಿಮಾನಿ: ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ಯಾವ ರೀತಿ ನಾಶ ಆಗಿದೆ ಎನ್ನುವುದಕ್ಕೆ ನಿನ್ನೆ ಮಂಡ್ಯದಲ್ಲಿ ಆದ ಘಟನೆ ಉದಾಹರಣೆ ಆಗಿದೆ. ಎಂ. ಶ್ರೀನಿವಾಸ್‌ಗೆ ಟಿಕೆಟ್ ತಪ್ಪಿದ್ದಕ್ಕೆ ಅವರ ಪಕ್ಷದ ಹಾಲಿ ಶಾಸಕರೆ ಧಿಕ್ಕರಾ ಕೂಗಿ, ಆರೋಪ ಮಾಡಿದ್ದಾರೆ. ಬ್ಯಾಕ್ ಡೋರ್ ರಾಜಕಾರಣ ಈಗ ನಡೆಯಲ್ಲಾ. ಎಲ್ಲವೂ ಜನಕ್ಕೆ ತಿಳಿದಿದೆ. ಜನ ಯಾರಿಗೆ ತಕ್ಕ ಪಾಠ ಕಲಿಸುತ್ತಾರೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಅವರ ವಿರುದ್ಧ ಸ್ಪರ್ಧೆ ಮಾಡ್ತೀನಿ ಎಂದ ಮಾತೇ ಅವರಿಗೆ ದುತಹಂಕಾರ ಎನಿಸುತ್ತಿದೆ. ಅವರ ವಿರುದ್ಧ ಯಾರು ಸ್ಪರ್ಧೆ ಮಾಡಬಾರದು ಅನ್ನೋದೆ ಅವರ ಉದ್ದೇಶವಾಗಿದೆ. ಅವರ ಹೊಂದಾಣಿಕೆ ರಾಜಕಾರಣ ಮಂಡ್ಯದಲ್ಲಿ ನಡೆಯಲ್ಲಾ. ನನ್ನ ಮಾತನ್ನ ಅವರು ದುರಹಂಕಾರ ಅಂದ್ರೆ ನಾನು ಅದನ್ನ ಸ್ವಾಭಿಮಾನ ಎಂದು ಹೇಳುತ್ತೇನೆ ಎಂದರು.
ಕಾಂಗ್ರೆಸ್‌ನ ಕೊನೆಯ ಐವರ ಪಟ್ಟಿ ಬಿಡುಗಡೆ : ಮಂಗಳೂರಿಗೆ ಇನಾಯತ್ ಅಲಿಗೆ ಟಿಕೆಟ್
ಕೋಟ್ಯಂತರ ರೂ.ಗೆ ಮಂಡ್ಯ ಟಿಕೆಟ್ ಸೇಲ್: ಜೆಡಿಎಸ್ ಪಕ್ಷದವರೇ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಹೇಳ್ತಿದ್ದಾರೆ. ಈಗ ಅವರು ರೈತನ ಮಗನನ್ನು, ರೈತ ಮಹಿಳೆಯನ್ನೋ ನಿಲ್ಲಿಸಿಲ್ಲ. ಕೋಟ್ಯಾಂತರ ರೂಪಾಯಿಗೆ ಟಿಕೆಟ್ ಸೇಲ್ ಆಗಿದೆ ಎಂದು ಅವರ ಪಕ್ಷದವರೇ ಹೇಳಿದರು. ಸ್ಕೂಟ್ ಕೇಸ್ ಪಾರ್ಟಿ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಜನಕ್ಕೆ ಎಲ್ಲವೂ ಗೊತ್ತಾಗ್ತಿದೆ. ಯಾರನ್ನು ಜನ ಗೆಲ್ಲಿಸುತ್ತಾರೆ ಎಂದು ತಿಳಿಯಲಿದೆ ಎಂದು ಕಿಡಿಕಾರಿದರು.
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.