
ಬೆಂಗಳೂರು (ಡಿ.25): ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರ ಅಧಿಕಾರವನ್ನ ಕಿತ್ತುಕೊಳ್ಳಬಹುದು. ಆದರೆ ಅವರ ಶಕ್ತಿ ಯಾರು ಕಿತ್ತುಕೊಳ್ಳಲು ಆಗಲ್ಲ. ಈಗ ಬಿಜೆಪಿ ಮತ್ತು ನನಗೂ ಸಂಬಂಧ ಪೂರ್ಣವಾಗಿ ಮುಕ್ತಾಯಗೊಂಡಿತು. ಆದರೆ, ಬಿಜೆಪಿ ಕುತಂತ್ರವನ್ನು ನಾನು ಮುಂದಿನ ದಿನಗಳಲ್ಲಿ ಬಯಲು ಮಾಡುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ನಗರದ ಪಾರಿಜಾತ ಅಪಾರ್ಟ್‌ಮೆಂಟ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಸೈಡ್ ಲೈನ್ ಆಗಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನಗೆ ರೆಡ್ಡಿ ಉತ್ತರಿಸಿದ ಅವರು, ಯಡಿಯೂರಪ್ಪರ ಅಧಿಕಾರವನ್ನ ಕಿತ್ತುಕೊಳ್ಳಬಹುದು. ಆದರೆ ಅವರ ಶಕ್ತಿ ಯಾರು ಕಿತ್ತುಕೊಳ್ಳಲು ಆಗಲ್ಲ. ಬಿಜೆಪಗೂ ನನಗೂ ಸಂಬಂಧ ಮುಗೀತು. ಹೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜ ತಿಳಿಯುವುದು. ಇನ್ನು ರಾಜಕೀಯ ಜೀವನದ ಕುರಿತು ಯಾರು ಕುತಂತ್ರ ಮಾಡಿದ್ದಾರೆ ಎಂಬುದರ ಕುರಿತು ಸಮಯ ಬಂದಾಗ ಹೇಳುತ್ತೇನೆ ಎಂದು ತಿಳಿಸಿದರು.
Assembly election:ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ: ಜನಾರ್ಧನರೆಡ್ಡಿ ಅಧಿಕೃತ ಘೋಷಣೆ
ಗಂಗಾವತಿಯಿಂದಲೇ ಸ್ಪರ್ಧೆ ನಿಶ್ಚಿತ: ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯ ಪ್ರವೃತ್ತನಾಗುವ ನಿಟ್ಟಿನಲ್ಲಿ ಚಿಂತನೆ ಮಾಡಿದ್ದೇನೆ. ಈಗಾಗಲೇ ಗಂಗಾವತಿ ಕ್ಷೇತ್ರದಲ್ಲಿ ಮನೆಯನ್ನು ಮಾಡಿದ್ದೇನೆ. ಓಟರ್ ಲಿಸ್ಟ್ ನಲ್ಲೂ ನನ್ನ ಹೆಸರು ಸೇರ್ಪಡೆ ಆಗಿದೆ. ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ. ಈ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ. ಇಲ್ಲಿಂದಲೇ ಸ್ಪರ್ಧೆ ಮಾಡುವುದು ನಿಶ್ಚಿತವಾಗಿದೆ ಎಂದು ಹೇಳಿದರು.
ರಾಜಕೀಯವಾಗಿ ಕೊನೆಗೊಳಿಸಲು ಕುತಂತ್ರ: ನನ್ನ ರಾಜಕೀಯ ಜೀವನವನ್ನು ಚಿಗುರೊಡೆಯದಂತೆ ತಡೆಯುವ ನಿಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐ ಒಂದು ಅಪ್ಲಿಕೇಶನ್ ಹಾಕಲಾಗಿದೆ. ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಇರಬಾರದು ಅಂತ ನಿರ್ಧರಿಸಿದ್ದಾರೆ. ವಿಚಾರಣೆಗೆ ಸಾಕ್ಷಿಗಳಿಗೆ ತೊಂದರೆ ಆಗಬಾರದು ಅಂತ ಅರ್ಜಿ ಹಾಕಿದಾರೆ. ನನ್ಮ ಮೇಲೆ ಕೇಸ್ ಹಾಕಿ 12 ವರ್ಷ ಆಯ್ತು. ನನ್ನನ್ನ ನಾಲ್ಕು ವರ್ಷ ಜೈಲಿನಲ್ಲಿಟ್ಟು ದೇಶ ವಿದೇಶಗಳಲ್ಲಿ ತನಿಖೆ ಮಾಡಿದರು. 1,200 ಕೋಟಿ ಅಕ್ರಮ ಆಗಿದೆ ಅಂತ ಚಾರ್ಚ್ ಶೀಟ್ ಹಾಕಿದಾರೆ. ಆದರೆ, ಕೆಲವರು ಒಂದು ಲಕ್ಷ ಕೋಟಿ, 50 ಸಾವಿರ ಕೋಟಿ ರೂಪಾಯಿ ಅಕ್ರಮ ಅಂತೆಲ್ಲಾ ಹೇಳಿದ್ದಾರೆ. ನಾವು ತನಿಖೆ ಬೇಗ ಮುಗಿಸಿ ಅಂತ ಮನವಿ ಮಾಡಿಕೊಂಡರು ಕೋರ್ಟ್ ಸಮ್ಮತಿ ನೀಡಿಲ್ಲ.
Assembly election: ಮಾಜಿ ಸಚಿವ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ಆರಂಭ: ಹೊಸ ಪಕ್ಷ ಘೋಷಣೆ ಆಗುತ್ತಾ?
ಚುನಾವಣೆ ಬೆನ್ನಲ್ಲೇ ಸಿಬಿಐ ಆರ್ಜಿ ಹಾಕಿದೆ: ಮುಂಬರುವ ವಿಧಾನಸಭಾ ಚುನಾವಣೆ ಆರಂಭದ ಮೊದಲೇ ಈಗ ಇದ್ದಕ್ಕಿಂದ ಹಾಗೆ ಅಪ್ಲಿಕೇಶನ್ CBI ಹಾಕಿದೆ. ಯಾರು ಒತ್ತಡ ಹಾಕಿದ್ರೋ ಗೊತ್ತಿಲ್ಲ. ನನ್ನ ಮಗಳು ಹೆರಿಗೆ ಆಗಿತ್ತು. ಸಿಬಿಐ ಅಧಿಕಾರಿಗಳು ಹೆರಿಗೆ ಆಗಿರೋದು ಸುಳ್ಳೋ ನಿಜನೋ ಅಂತ ನೋಡೋಕೆ ಬೆಳಗ್ಗೆ 5.30 ಗಂಟೆಗೆ ಬಂದು ತಪಾಸಣೆ ಮಾಡಿದ್ದರು. ಮಗಳು, ಮೊಮ್ಮಗಳನ್ನ ತೋರಿಸಿ ಅಂತ ಹೇಳಿದರು. ಆಗ ಮಗಳು, ಪುಟ್ಟ ಕಂದಮ್ಮನನ್ನ ಸಿಬಿಐಗೆ ತೋರಿಸಿದೆ. ಈ ವೇಳೆ ಫೋಟೋ ಕೂಡಾ ತೆಗೆದುಕೊಂಡರು. ನನ್ನ ಶ್ರೀಮತಿ ಆಗ ಏನ್ ನಡೆಯುತ್ತಿದೆ ದೇಶದಲ್ಲಿ ಅಂತ ಕೇಳಿದಳು. ಪಕ್ಷಕ್ಕೆ ಇಷ್ಟು ದುಡಿದು ಇದೇನಾ ಅಂತ ಅಸಹ್ಯ ಪಟ್ಟುಕೊಂಡರು. ನಾನು ಕಷ್ಟ ಅನುಭವಿಸಬಹುದು. ಆದರೆ, ಅ ಕಂದಮ್ಮ ಫೋಟೋ ತಗೋತಾರೆ ಅಂದರೆ ಏನು ಇದರರ್ಥ ಎಂದು ಪತ್ನಿ ಕೇಳಿದಾಗ ನನಗೆಅವರ ಮುಖವನ್ನು ನೋಡೋಕೆ ಆಗಲಿಲ್ಲ ಎಂದು ನೋವು ತೋಡಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.