ಶಾಸಕಿಯಾದ ತಾಸಲ್ಲಿ ಹೆಬ್ಬಾಳ್ಕರ್‌ ತಲೆ ಏರಿ ಕೂತರು: ರಮೇಶ್‌ ಜಾರಕಿಹೊಳಿ

By Govindaraj S  |  First Published Dec 25, 2022, 1:03 PM IST

ಶಾಸಕಿಯಾದ ಬಳಿಕ ಒಂದೇ ಗಂಟೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ನಮ್ಮ ತಲೆ ಮೇಲೆ ಏರಿ ಕೂತರು. ಶಾಸಕರಾದ ಮೇಲೆ ಮಂತ್ರಿಯಾಗುವುದು, ಮುಖ್ಯಮಂತ್ರಿ ಆಗುವುದು ನಮ್ಮ ಹಕ್ಕು. ಅದರ ಬಗ್ಗೆ ಯಾರೂ ಅಸೂಯೆ ಪಟ್ಟುಕೊಳ್ಳಬಾರದು. 


ಬೆಳಗಾವಿ (ಡಿ.25): ಶಾಸಕಿಯಾದ ಬಳಿಕ ಒಂದೇ ಗಂಟೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ನಮ್ಮ ತಲೆ ಮೇಲೆ ಏರಿ ಕೂತರು. ಶಾಸಕರಾದ ಮೇಲೆ ಮಂತ್ರಿಯಾಗುವುದು, ಮುಖ್ಯಮಂತ್ರಿ ಆಗುವುದು ನಮ್ಮ ಹಕ್ಕು. ಅದರ ಬಗ್ಗೆ ಯಾರೂ ಅಸೂಯೆ ಪಟ್ಟುಕೊಳ್ಳಬಾರದು. ಆದರೆ, ಹೆಬ್ಬಾಳಕರ್‌ ಅಸೂಯೆಪಟ್ಟುಕೊಂಡರು ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಕಿಡಿಕಾರಿದರು. 

ಬಿಜೆಪಿ ಟಿಕೆಟ್‌ ಆಕಾಂಕ್ಷಿ ನಾಗೇಶ ಮನ್ನೋಳಕರ ಜನಸಂಪರ್ಕ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಲಕ್ಷ್ಮೀ ಹೆಬ್ಬಾಳಕರ್‌ ವಿರುದ್ಧ ಅಸಮಾಧಾನ ಹೊರಹಾಕಿದರು. ‘ಮೈದಾನ್‌ ಓಪನ್‌ ಹೈ, ಖುಲ್ಲಾ ಹೈ, ಹಂ ಭಿ ತಯಾರ್‌ ಹೈ, ಆಪ್‌ ಭಿ ಆವೋ ಮೈದಾನ್‌ ಮೇ’ ಎಂಬ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿಕೆ ಪ್ರಸ್ತಾಪಿಸಿದ ಅವರು, ಯಾವಾಗಲೂ ನಾವು ವೀಕ್‌, ವಿರೋಧಿಗಳು ಪ್ರಬಲ ಎಂದು ಹೇಳಿಕೊಂಡೇ ನಾವು ಕೆಲಸ ಮಾಡುತ್ತೇವೆ. ಬೆಳಗಾವಿ ಜಿಲ್ಲೆಯಲ್ಲಿ ಈಗ 13 ಮಂದಿ ಬಿಜೆಪಿ ಶಾಸಕರಿದ್ದೇವೆ. ಅದನ್ನು 14 ಮಾಡಲು ಪ್ರಯತ್ನಿಸುತ್ತೇವೆ ಎಂದರು.

Latest Videos

undefined

ವರಿಷ್ಠರು ಒಪ್ಪಿದರೆ ಜಾರಕಿಹೊಳಿ, ಈಶ್ವರಪ್ಪಗೆ ಶೀಘ್ರ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ

ಸಿಎಂ ಮೇಲೆ ನನಗೆ ವಿಶ್ವಾಸವಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿಗೆ ತೆರಳುತ್ತಿದ್ದಾರೆ. ನಾವು ಏನೂ ನಿರೀಕ್ಷೆ ಇಟ್ಟುಕೊಂಡಿಲ್ಲ. ಮುಖ್ಯಮಂತ್ರಿಗಳ ಮೇಲೆ ನನಗೆ ವಿಶ್ವಾಸ ಇದೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದರು. ಮುಖ್ಯಮಂತ್ರಿ ಅವರ ಜತೆ ಮಾತನಾಡಿರುವ ಕೆಲ ವಿಷಯ ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಮೇಲೆ ನನಗೆ ವಿಶ್ವಾಸವಿದೆ. ಅವರು ಹೇಳಿದ ಪ್ರಕಾರ ನಾನು ಅಧಿವೇಶನಕ್ಕೆ ಹಾಜರಾಗಿದ್ದೇನೆ ಎಂದರು. 

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಾನು ಮಂತ್ರಿ ಆಗುವುದು, ಬಿಡುವುದು ಬೇರೆ ವಿಚಾರ. ಆದರೆ, ಇಡೀ ಜಿಲ್ಲೆಯಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ವಿಶೇಷವಾಗಿ ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದರು. ಕೆಲವೊಬ್ಬರು ನಾನು ಚಕ್ಕಡಿ ಜೊತೆ ನಾಯಿ ಹೋದಂತೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಈ ಬಾರಿಯೂ ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ. ಕೆಲವೊಂದು ನೀತಿಗಳನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ಮುಂದಿನ ಯುದ್ಧ ನೀತಿ ಹಾಗೂ ರಾಜಕೀಯ ವಿಷಯದ ಬಗ್ಗೆ ನಾನು ಈಗ ಏನೂ ಹೇಳಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಕಿಂಗ್‌ ಎಂದರು.

ನನ್ನ ಶಕ್ತಿ ಏನೆಂಬುದನ್ನು ಈ ಬಾರಿಯೂ ತೋರಿಸುತ್ತೇನೆ: ಕೆಲವೊಬ್ಬರೂ ನಾನು ಚಕ್ಕಡಿ ಜೊತೆ ನಾಯಿ ಹೋದಂತೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಈ ಬಾರಿಯೂ ನನ್ನ ಶಕ್ತಿ ಎನ್ನುವುದನ್ನು ತೋರಿಸುತ್ತೇನೆ. ಕೆಲವೊಂದು ನೀತಿಗಳನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ಮುಂದಿನ ಯುದ್ಧ ನೀತಿ ಹಾಗೂ ರಾಜಕೀಯ ವಿಷಯದ ಬಗ್ಗೆ ನಾನು ಈಗೇನೂ ಹೇಳುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಕಿಂಗ್‌ ಆಗಿದ್ದಾರೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ತಾಲೂಕಿನ ಹಿಂಡಲಗಾದಲ್ಲಿ ಶನಿವಾರ ಬೆಳಗಾವಿ ಗ್ರಾಮೀಣ ಬಿಜೆಪಿ ಟಿಕೆಟ್‌ ಆಕಾಂಕ್ಷಿ ನಾಗೇಶ ಮನ್ನೋಳಕರ ಜನಸಂಪರ್ಕ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,

ಕೊಲೆ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಮಾಡಲಾಗ್ತಿದೆ: ಅಶ್ರಫ್ ಕಿನಾರ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವರಿಷ್ಠರು ಯಾರಿಗೇ ಟಿಕೆಟ್‌ ಕೊಟ್ಟರೂ ನಮ್ಮ ಶಕ್ತಿ ಹಾಕಿ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ. ಚುನಾವಣಾ ಫಲಿತಾಂಶದ ನಂತರ ಮಾತನಾಡಬೇಕು, ಅಲ್ಲಿಯವರೆಗೆ ಸುಮ್ಮನಿರಬೇಕು ಎಂದು ಶಪಥ ಮಾಡಿದ್ದೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾತನಾಡುವ ಅನಿವಾರ್ಯತೆ ಇದೆ ಎಂದು ಮಾತನಾಡುತ್ತಿದ್ದೇನೆ. ಕೆಲಸ ಮಾಡಿ ಗೆಲ್ಲಿಸಿ ಮಾಧ್ಯಮದ ಮುಂದೆ ಮಾತನಾಡುತ್ತೇನೆ. ಈ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ದೃಢಸಂಕಲ್ಪ ಮಾಡೋಣ. ನಾಲ್ಕು ಗೋಡೆ ಮಧ್ಯ ಹೇಳುವುದು ಬಹಳಷ್ಟಿದೆ. ನಿಮ್ಮೆಲ್ಲರ ಜತೆ ಮಾತನಾಡುತ್ತೇನೆ. ದುಡ್ಡು ಕೊಟ್ಟು ಒಂದು ಸಾರಿ ಗೆದ್ದು ಬರುತ್ತಾರೆ. ಪದೇಪದೇ ದುಡ್ಡಿನ ಮೇಲೆ ನಡೆಯುವುದಿಲ್ಲ ಎಂದು ಹೇಳುವ ಮೂಲಕ ಲಕ್ಷ್ಮೀ ಹೆಬ್ಬಾಳಕರ ಸೋಲಿಸಲು ಕರೆ ನೀಡಿದರು.

click me!