* ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯ್ತು ಮುಂದಿನ ಸಿಎಂ ಯುದ್ಧ
* ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ
* ಕೈ ಎತ್ತಿದ ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ
ದಾವಣಗೆರೆ, (ಡಿ.10): ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯುದ್ಧ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಧ್ಯೆ ಮುಂದಿನ ಸಿಎಂ ವಿಚಾರಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದರ ಮಧ್ಯೆ ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ ನಾನೇ ಮುಂದಿನ ಸಿಎಂ ಆಗುವೆ ಎಂದು ಹೇಳಿದ್ದಾರೆ.
ಹೌದು.... ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರೇ ಇದ್ದಾರೆ. ಇವರೂ ಸಹ ಜೀವನದಲ್ಲಿ ಒಮ್ಮೆಯಾದರೂ ಸಿಎಂ ಆಗಬೇಕೆಂಬ ಕನಸು ಕಂಡಿರುವವರೇ. ಆದರೆ ಈಗ ಮತ್ತೆ ಹೊಸದೊಂದು ಹೆಸರು ಕೇಳಿ ಬಂದಿದೆ.
Karnataka Politics: ನಾನು ಸಿಎಂ ಆಗುತ್ತೆನೆಂದು ಎಲ್ಲಿಯೂ ಹೇಳಿಲ್ಲ, ವದಂತಿಗಳಿಗೆ ತೆರೆಎಳೆದ ಸಚಿವ
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕ್ರಪ್ಪ ಅವರು ನಾನು ಕೂಡು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದು, ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು (ಡಿ.10) ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಸಿಎಂ ನಾನೇ ಆಗುವೆ, ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದರು.
ಜನ ಬಿಜೆಪಿ ಮೇಲೆ ಬೇಸರಗೊಂಡಿದ್ದಾರೆ. ಬಿಜೆಪಿಯವರ ಆಡಳಿತದ ಬಗ್ಗೆ ಜನರಿಗೆ ಸಮಾಧಾನ ಇಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿಲ್ಲಿದ್ದಾರೆ ಎಂದು ಶಾಮನೂರ ಶಿವಶಂಕರಪ್ಪ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ಇದೆ. ಯಾರಾಗ್ತಾರೆ ಸಿಎಂ ಎಂಬ ಮಾಧ್ಯಮದವರ ಪ್ರಶ್ನೆಗೆ ಶಾಮನೂರು ಶಿವಶಂಕರಪ್ಪ ಅಚ್ಚರಿ ಹೇಳಿಕೆ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ನಡುವೆ ಮುಂದಿನ ಸಿಎಂ ವಿಚಾರವಾಗಿ ಶೀತನ ಸಮರ ಏರ್ಪಟ್ಟಿರುವುದು ( Siddaramaiah) ಗೊತ್ತಿಲ್ಲದ ಸಂಗತಿ ಏನಲ್ಲ. ಇದರ ನಡುವೆ ಕಾಂಗ್ರೆಸ್ನ ಮತ್ತೋರ್ವ ಹಿರಿಯ ನಾಯಕ ಜಿ. ಪರಮೇಶ್ವರ್ (G Parameshwar) ಅವರು ದಲಿತ ಸಿಎಂ ಅಸ್ತ್ರವನ್ನು (Dalit CM) ಪ್ರಯೋಗ ಮಾಡಿ ಮತ್ತೊಂದು ಹಂತದ ಚರ್ಚೆ ಹುಟ್ಟು ಹಾಕಿದ್ದಾರೆ.
ಪಂಜಾಬಿನಲ್ಲಿ ದಲಿತ ಸಮುದಾಯದವರನ್ನು ಸಿಎಂ ಮಾಡಿದ್ದಾರೆ. ನಮ್ಮಲ್ಲೂ ದಲಿತ ಸಿಎಂ ಕೇಳುವಂತದಾಗಬಹುದು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಇಲ್ಲೂ ದಲಿತ ಸಿಎಂ ಕೊಡಬೇಕು ಎಂದು ಕೇಳುವಂತದಾಗಬಹುದು. ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆ ಎಂದು ಹೇಳುವ ಮೂಲಕ ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದರು.
ಬಿಜಿಪಿಯಲ್ಲೂ ಮುಂದಿನ ಸಿಎಂ ಸುದ್ದಿ
ಬಿಜೆಪಿಯಲ್ಲೂ ಸಹ ಮುಂದಿನ ಸಿಎಂ ಬಗ್ಗೆ ಒಂದೊಂದು ಮಾತುಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿಯಾಗುವ ಪೈಕಿ ಸಚಿವ ಮುರುಗೇಶ್ ನಿರಾಣಿ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಈ ಹಿಂದೆ ಕೂಡ ಮುಖ್ಯಮಂತ್ರಿ ಬದಲಾವಣೆ ಕೂಗು ಕೇಳಿ ಬಂದಾಗ ನಿರಾಣಿ ಹೆಸರೇ ಮೊದಲಿತ್ತು. ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಕೂಡ ನಿರಾಣಿಯವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ಕೊಟ್ಟಾಗಿಂದ ಸಿಎಂ ಬದಲಾವಣೆಯ ಚರ್ಚೆ ಮತ್ತೆ ಆರಂಭವಾಗಿದ್ದು, ಈ ಬಗ್ಗೆ ಖುದ್ದು ಮುರುಗೇಶ್ ನಿರಾಣಿ ಸ್ಪಷ್ಟನೆ ಕೊಟ್ಟಿದ್ದು, ನಾನು ಸಿಎಂ ಆಗುತ್ತೆನೆಂದು ಎಲ್ಲಿಯೂ ಹೇಳಿಲ್ಲ ಎಂದು ಹೇಳಿವ ಮೂಲಕ ವದಂತಿಗಳಿಗೆ ತೆರೆಎಳೆದರು.