ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ: ಮಾಗಡಿ ಶಾಸಕ ಬಾಲ​ಕೃಷ್ಣ

By Kannadaprabha NewsFirst Published May 22, 2023, 9:03 PM IST
Highlights

ಮಾಗಡಿ ಕ್ಷೇತ್ರ​ದಿಂದ 5ನೇ ಬಾರಿ ಶಾಸ​ಕ​ರಾಗಿ ಆಯ್ಕೆ​ಯಾ​ಗಿ​ರುವ ಎಚ್‌.ಸಿ.​ಬಾ​ಲ​ಕೃ​ಷ್ಣ​ ಅವರು ಚುನಾ​ವಣಾ ಪೂರ್ವ​ದಲ್ಲಿ ನೀಡಿದ ಭರ​ವ​ಸೆ​ಗ​ಳನ್ನು ಎಷ್ಟರ ಮಟ್ಟಿಗೆ ಈಡೇ​ರಿ​ಸು​ತ್ತಾರೆ ಎಂಬ ಕುತೂ​ಹಲದ ಜೊತೆಗೆ ಆಶಾ​ದಾ​ಯಕ ಬೆಳ​ವ​ಣಿ​ಗೆಗೆ ಕ್ಷೇತ್ರದ ಮತ​ದಾ​ರ​ರು ಬೆರು​ಗು​ಗ​ಣ್ಣಿ​ನಿಂದ ನೋಡು​ತ್ತಿ​ದ್ದಾರೆ. 

ಗಂ.ದಯಾನಂದ ಕುದೂರು

ಕುದೂರು (ಮೇ.22): ಮಾಗಡಿ ಕ್ಷೇತ್ರ​ದಿಂದ 5ನೇ ಬಾರಿ ಶಾಸ​ಕ​ರಾಗಿ ಆಯ್ಕೆ​ಯಾ​ಗಿ​ರುವ ಎಚ್‌.ಸಿ.​ಬಾ​ಲ​ಕೃ​ಷ್ಣ​ ಅವರು ಚುನಾ​ವಣಾ ಪೂರ್ವ​ದಲ್ಲಿ ನೀಡಿದ ಭರ​ವ​ಸೆ​ಗ​ಳನ್ನು ಎಷ್ಟರ ಮಟ್ಟಿಗೆ ಈಡೇ​ರಿ​ಸು​ತ್ತಾರೆ ಎಂಬ ಕುತೂ​ಹಲದ ಜೊತೆಗೆ ಆಶಾ​ದಾ​ಯಕ ಬೆಳ​ವ​ಣಿ​ಗೆಗೆ ಕ್ಷೇತ್ರದ ಮತ​ದಾ​ರ​ರು ಬೆರು​ಗು​ಗ​ಣ್ಣಿ​ನಿಂದ ನೋಡು​ತ್ತಿ​ದ್ದಾರೆ. ಮಾಗಡಿ ಹಿಂದುಳಿದ ತಾಲೂಕು ಎಂಬ ಹಣೆ​ಪಟ್ಟಿಯಿಂದ ಹೊರ ಬಂದಿ​ರ​ಲಿಲ್ಲ. ಆದರೆ, ಅವರು ಇಪ್ಪತ್ತು ವರ್ಷಗಳ ಕಾಲ ಮಾಗಡಿಯನ್ನು ಆಳ್ವಿಕೆ ಮಾಡಿದ್ದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಹಾಗಂತ ಕೆಲಸಗಳು ಆಗಿಯೇ ಇಲ್ಲ ಎಂದೇನಿಲ್ಲ. ಆದರೆ, ಮಾಡಬಹುದಾಗಿದ್ದ ಕೆಲಸಗಳು ಸಾಕಷ್ಟುಇದ್ದವು ಎಂಬ ಕೊರತೆ ಕ್ಷೇತ್ರದ ಜನತೆಯಲ್ಲಿ ಉಳಿದುಕೊಂಡಿದೆ.

ನೀರಾವರಿ ಕೃಷಿ ಉದ್ಯೋಗ ಈ ಎಲ್ಲಾ ವಿಷಯಗಳಲ್ಲೂ ತಾಲೂಕು ಹಿಂದುಳಿದಿದೆ ಎಂಬ ಹಣೆ ಪಟ್ಟಿಹೊತ್ತುಕೊಂಡಿತ್ತು. ಇಂತಹ ಹೆಸರನ್ನು ಅಳಿಸಿ ತಾಲೂಕಿನ ಸಮಗ್ರ ಅಭಿವೃದ್ಧಿ ಏಕಾಗಲಿಲ್ಲ ಎಂದು ಶಾಸಕ ಬಾಲಕೃಷ್ಣರವರನ್ನೆ ಪ್ರಶ್ನೆ ಮಾಡಿದಾಗ ‘ನಾನು ಪ್ರತಿ ಬಾರಿ ಗೆದ್ದಾಗಲೂ ರಾಜ್ಯದಲ್ಲಿ ವಿರೋಧ ಪಕ್ಷವೇ ಆಡಳಿತ ಮಾಡುತಿತ್ತು. ಹಾಗಾಗಿ ಅಭಿವೃದ್ಧಿ ಕುಂಠಿತವಾಯಿತು. ಆದರೆ ಈಗ ನಮ್ಮ ಸರ್ಕಾರವೇ ಬಂದಿದೆ ಅಭಿವೃದ್ಧಿ ಎಂದರೆ ಏನು ಎನ್ನುವುದನ್ನು ಮಾಡಿ ತೋರಿಸುತ್ತೇನೆ ಎಂದು ಉತ್ತರಿಸುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಬಾಲಕೃಷ್ಣರವರು ಹೇಳಿದ ಮಾತುಗಳನ್ನು ಹೆಸರು ಹೇಳಲು ಇಚ್ಚಿಸದ ಕುದೂರು ಗ್ರಾಪಂ ಸದಸ್ಯರು ಮತ್ತು ಜನತೆ ಪತ್ರಿಕೆಯ ಮೂಲಕ ಕೊಟ್ಟಭರವಸೆಗಳನ್ನು ನೆನಪಿಸಲು ಮನವಿ ಮಾಡಿದ್ದಾರೆ.

Ramanagara: ಡಿಸಿಎಂ ಡಿ.ಕೆ.ಶಿವಕುಮಾರ್‌ ಮೇಲೆ ಹೆಚ್ಚಿದ ಜವಾ​ಬ್ದಾ​ರಿ

ಮಾಗಡಿ ಮಾದರಿ ತಾಲೂಕನ್ನಾಗಿಸುವೆ: ಆಡಳಿತ ಪಕ್ಷದ ಶಾಸಕನಾದರೆ ಮಾಗಡಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮಾಡುತ್ತೇನೆ ಎಂದು ಹೇಳಿದ್ದರು. ಮಾಗಡಿ ತಾಲೂಕು ಮಳೆಯಾಧಾರಿತ ಕ್ಷೇತ್ರ. ನೀರಾವರಿ ಕೃಷಿಯ ಕೊರತೆಯಿರುವ ಕ್ಷೇತ್ರ. ಹಿಂದುಳಿತ ತಾಲೂಕು ಎಂಬ ಹಣೆಪಟ್ಟಿಹೊತ್ತ ತಾಲೂಕು. ಇಲ್ಲಿಗೆ ನೀರಾವರಿ ಯೋಜನೆಗಳು ಬರುತ್ತವೆ ಎಂಬುದೇ ತೋಳಬಂದು ತೋಳದ ಕಥೆಯಂತಾಗಿದೆ. ಎ.ಮಂಜುನಾಥ್‌ ಅವರು ಅದಕ್ಕೆ ಒಂದಷ್ಟುಚಾಲನೆಯನ್ನು ನೀಡಿದ್ದರು. ನೀವು ಆ ಕಾರ್ಯವನ್ನು ಮುಂದುವರೆಸಿ ಆದಷ್ಟುಬೇಗನೆ ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರನ್ನು ಹರಿಸಿ ತಾಲೂಕಿನ ರೈತರ ಮೊಗದಲ್ಲಿ ನಗು ಮೂಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಎಂಬದುನ್ನು ನೆನಪಿಸಿದ್ದಾರೆ. ಸಾವನದುರ್ಗ, ಮಂಚನಬೆಲೆ ಡ್ಯಾಂ, ವೀರಾಪುರ, ಬಾನಂದೂರು, ಸುಗ್ಗನಹಳ್ಳಿ, ದೊಡ್ಡಮುದಿಗೆರೆ, ಸಾತನೂರು ವಿಠಲ ಇಂತಹ ಸ್ಥಳಗಳನ್ನು ಪ್ರೇಕ್ಷಣೀಯ ಸ್ಥಳಗಳನ್ನಾಗಿಸುವ ಸೌಲಭ್ಯಗಳನ್ನು ಒದಗಿಸುವ ಕೆಲಸವಾಗಬೇಕಿದೆ.

ಮುಂದಿನ ಚುನಾವಣೆಗೆ ಮತ ಕೇಳಲಾರೆ: ಕುದೂರು ಗ್ರಾಮಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೀರಿ. ಈಗಿರುವ ಆಸ್ಪತ್ರೆಯನ್ನು ನೂರು ಹಾಸಿಗೆಗಳುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುತ್ತೇನೆ. ವೈದ್ಯರ ಕೊರತೆ ಇರದಂತೆ ನೋಡಿಕೊಳ್ಳುತ್ತೇನೆ ಎಂದಿದ್ದೀರಿ. ಕುದೂರು ಶಿವಗಂಗೆ ರಸ್ತೆ ಅಗಲೀಕರಣ, ಉದ್ಯಾನವನ, ಸುಸಜ್ಜಿತ ಮೈದಾನ, ಹಾಗೂ ಕುದೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಹೋಬಳಿಯ ಅತ್ಯಂತ ದೊಡ್ಡ ಕೆರೆಯೆನಿಸಿರುವ ತಮ್ಮೇನಹಳ್ಳಿ ಕೆರೆಯಿಂದ ಪೈಪ್‌ಲೈನ್‌ ಮಾಡಿಸಲಾಗುವುದು. 

ಮತ್ತು ಆ ಕೆರೆಯಲ್ಲಿ ಸದಾ ನೀರು ಇರುವಂತೆ ಮಾಡಲು ಎತ್ತಿನಹೊಳೆ ಅಥವ ಹೇಮಾವತಿ ನದಿ ನೀರನ್ನು ಹರಿಸುವ ಯೋಜನೆಯನ್ನು ಈಗಾಗಲೇ ತಯಾರು ಮಾಡಿದ್ದೇನೆ ಎಂದಿದ್ದೀರಿ. ಕುದೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಹಾಗೂ ಒಳಚರಂಡಿ ವಿಸ್ತರಣೆ, ಗ್ರಾಮಕ್ಕೆ ಸಬ್‌ ರಿಜಿಸ್ಟ್ರಾರ್‌ ಕಚೇರಿ ಮಂಜೂರು ಮಾಡಿಸಿಕೊಡಲಾಗುವುದು ಎಂದು ಸಾರ್ವಜನಿಕ ಭಾಷಣಗಳಲ್ಲಿ ಹೇಳಿದ್ದೀರಿ. ಇವುಗಳನ್ನು ಮಾಡದೇ ಹೋದರೆ ಮುಂದಿನ ಬಾರಿ ಚುನಾವಣೆಗೆ ನಾನು ಮತ ಕೇಳಲು ಬರುವುದಿಲ್ಲ ಎಂದಿದೀರಿ. ಕೊಟ್ಟಮಾತುಗಳನ್ನು ನೆನಪು ಮಾಡುವ ಕೆಲಸವನ್ನು ನಾವು ಪ್ರೀತಿಯಿಂದ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದರೊಂದಿಗೆ ಆಗಬೇಕಾಗಿರುವುದು ನೀವು ಕೊಟ್ಟಮಾತಿನ ಜೊತೆಗೆ ಗ್ರಾಮಕ್ಕೆ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಕೆಂಪೇಗೌಡರ ಕೋಟೆಗಳಲ್ಲಿ ಗ್ರಾಮದಲ್ಲಿರುವ ಭೈರವನದುರ್ಗವೂ ಒಂದು. ಈಗಾಗಲೇ ಕುಣಿಗಲ್‌ ತಾಲೂಕು ಹುತ್ತರಿದುರ್ಗದ ಅಭಿವೃದ್ಧಿಗೆ ಸರ್ಕಾರ ಕೊಟ್ಯಂತರ ರು. ಮಂಜೂರು ಮಾಡಿದೆ. ಅದೇ ಸಾಲಿನಲ್ಲಿರುವ ಕುದೂರು ಭೈರವನದುರ್ಗವನ್ನು ಅಭಿವೃದ್ಧಿ ಪಡಿಸಿ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿಸಬೇಕು ಹಾಗೂ ಈಗಾಗಲೇ ಕೆಂಪೇಗೌಡರು ಕೊಟೆ ಕಟ್ಟಿಆಳ್ವಿಕೆ ಮಾಡಿದ್ದ ಬೆಟ್ಟವನ್ನು ಅಗೆದು ನೆಲಗಳ್ಳರು ಬೆಟ್ಟವನ್ನೇ ಕಿರಿದಾಗಿಸುತ್ತಿದ್ದಾರೆ. ಅದನ್ನು ನಿಲ್ಲಿಸಿ ಪರಂಪರೆಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ರಾಮ​ನ​ಗ​ರ​ ಕ್ಷೇತ್ರ​ದಲ್ಲಿಯೇ ರಾಜ​ಕೀ​ಯ​ ಮರು ಜನ್ಮ: ನಿಖಿಲ್‌ ಕುಮಾ​ರ​ಸ್ವಾಮಿ

ಮಾಗಡಿ ಜನತೆ ನನ್ನ ಮೇಲೆ ಅಭಿಮಾನವಿಟ್ಟು ಗೆಲ್ಲಿಸಿದ್ದಾರೆ. ಇಷ್ಟುವರ್ಷಗಳ ಅವಧಿಯಲ್ಲಿ ನಾನು ಗೆದ್ದ ಪಕ್ಷ ಅಧಿಕಾರಕ್ಕೇರಿದೆ. ತಾಲೂಕಿಗೆ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇನೆ. ಐದು ವರ್ಷದ ಅವಧಿಯಲ್ಲಿ ಆದ್ಯತೆಗಳಿಗೆ ಅನುಗುಣವಾಗಿ ಒಂದೊಂದೇ ಕೆಲಸ ಕೈಗೆತ್ತಿಕೊಂಡು ಮುಗಿಸುತ್ತೇನೆ. ಮಾಗಡಿ ಮಾದರಿ ತಾಲೂಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಎಲ್ಲರೂ ನನ್ನೊಂದಿಗೆ ಕೈಜೋಡಿಸಬೇಕು. ಒಟ್ಟಾದ ತಾಲೂಕು ಬಹುಬೇಗ ಬೆಳೆಯುತ್ತದೆ ಎಂಬುದು ನನ್ನ ಅಭಿಪ್ರಾಯ.
-ಎಚ್‌.ಸಿ.ಬಾಲಕೃಷ್ಣ , ಶಾಸಕರು, ಮಾಗಡಿ ಕ್ಷೇತ್ರ

click me!