ಆರೆಸ್ಸೆಸ್‌ ರಾಷ್ಟ್ರಧ್ವಜ ಹಾರಿಸಿದ ಸುದ್ದಿ ಕೇಳಿ ಸಂತೋಷವಾಯಿತು: ಡಿಕೆಶಿ

By Govindaraj SFirst Published Aug 14, 2022, 4:15 AM IST
Highlights

ಅವನ್ಯಾರೋ ಒಬ್ಬ ನಾಯಕ ರಾಷ್ಟ್ರಧ್ವಜ ತೆಗೆದು ಭಗವಾಧ್ವಜ ಹಾರಿಸುತ್ತೇವೆ ಎಂದಿದ್ದ. ಇಂತಹ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರಿಗೆ ತ್ರಿವರ್ಣ ಧ್ವಜಕ್ಕೆ ಗೌರವ ಕೊಡುವ ಬುದ್ಧಿ ಈಗಲಾದರೂ ಬಂದಿದೆ. ಅದಕ್ಕೆ ನಾವು ಸಂತೋಷ ಪಡಬೇಕು.

ಬೆಂಗಳೂರು (ಆ.14): ಅವನ್ಯಾರೋ ಒಬ್ಬ ನಾಯಕ ರಾಷ್ಟ್ರಧ್ವಜ ತೆಗೆದು ಭಗವಾಧ್ವಜ ಹಾರಿಸುತ್ತೇವೆ ಎಂದಿದ್ದ. ಇಂತಹ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರಿಗೆ ತ್ರಿವರ್ಣ ಧ್ವಜಕ್ಕೆ ಗೌರವ ಕೊಡುವ ಬುದ್ಧಿ ಈಗಲಾದರೂ ಬಂದಿದೆ. ಅದಕ್ಕೆ ನಾವು ಸಂತೋಷ ಪಡಬೇಕು. ಆರ್‌ಎಸ್‌ಎಸ್‌ ಕೂಡ ರಾಷ್ಟ್ರಧ್ವಜ ಹಾರಿಸಿದೆ ಎಂಬ ಸುದ್ದಿ ಕೇಳಿ ಸಂತೋಷವಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಕೇವಲ ಒಂದು ಪಕ್ಷಕ್ಕೆ ಸೇರಿದ್ದು ಎಂದು ನಾವು ಎಲ್ಲೂ ಹೇಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಇತಿಹಾಸ ನಮ್ಮ ಪಕ್ಷಕ್ಕಿದೆ ಎಂದಿದ್ದೇವೆ. ನಮ್ಮ ಪಕ್ಷಕ್ಕೆ ಇರುವ ಇತಿಹಾಸವನ್ನು ದೇಶದುದ್ದಗಲಕ್ಕೂ ಯುವ ಜನತೆಗೆ ತಿಳಿಸುವ ಕೆಲಸ ಮಾಡಿ ಎಂದು ನಾವು ಸೂಚನೆ ನೀಡಿದ್ದೇವೆ. ಅಷ್ಟೇ ಹೊರತು ಸರ್ಕಾರದವರು ಸ್ವಾತಂತ್ರ್ಯ ದಿನ ಆಚರಿಸಬಾರದು, ಕಾರ್ಯಕ್ರಮ ಮಾಡಬಾರದು ಎಂದು ಹೇಳಿಲ್ಲ. ನಾವು ಅಷ್ಟುಮೂರ್ಖರೂ ಅಲ್ಲ. 

ರಾಜ್ಯದಲ್ಲಿ 3ನೇ ಸಿಎಂ: ಬಿಜೆಪಿ ಮುಖಂಡರೇ ಹೇಳಿಕೆ ಕೊಟ್ಟಿದ್ದು, ಡಿಕೆಶಿ

ರಾಷ್ಟ್ರಧ್ವಜವನ್ನು ಮಾರಾಟದ ಸರಕಾಗಿ ಮಾಡಬೇಡಿ ಎಂದಷ್ಟೇ ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇಷ್ಟು ದಿನ ಆರ್‌ಎಸ್‌ಎಸ್‌ನವರು ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತಿರಲಿಲ್ಲವೇ ಎಂಬ ಪ್ರಶ್ನೆಗೆ, ‘ಆರ್‌ಎಸ್‌ಎಸ್‌ನವರು ಎಲ್ಲಿ ಗೌರವ ನೀಡುತ್ತಿದ್ದರು? ವಾಜಪೇಯಿ ಅವರು ಪಟ್ಟು ಹಿಡಿದ ನಂತರವಷ್ಟೇ ಅವರು ತಮ್ಮ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮುಂದಾದರು. ನಿನ್ನೆ ಶಿಕ್ಷಣ ಸಚಿವ ನಾಗೇಶ್‌ ಅವರು ಎಬಿವಿಪಿ ಧ್ವಜವನ್ನು ಮೇಲಿಟ್ಟು ಅದರ ಕೆಳಗೆ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಅದು ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಇರುವ ಗೌರವ’ ಎಂದು ಟೀಕಿಸಿದರು.

ತಿರಂಗಾ ಅಭಿಯಾನ ಬಿಜೆಪಿಯ ನಾಟಕ: ‘ಮನೆ ಮನೆಯಲ್ಲೂ ತಿರಂಗಾ’ ಎಂಬುದು ಬಿಜೆಪಿಯವರ ನಾಟಕ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು, ರಾಷ್ಟ್ರಧ್ವಜಕ್ಕೆ ಗೌರವ ಕೊಡದವರು ಈಗ ಮನೆ-ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದರೆ ಜನ ನಂಬುತ್ತಾರಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವಿದುರಾಶ್ವತ್ಥದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಜತೆಗೂಡಿ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಕಾಂಗ್ರೆಸ್‌ ಸ್ವಾತಂತ್ರ್ಯ ನಡಿಗೆಗೆ 40 ಸಾವಿರ ಜನ ನೋಂದಣಿ: ಡಿ.ಕೆ. ಶಿವಕುಮಾರ್‌

ದೇಶದಲ್ಲಿ ಸಹಜವಾಗಿಯೇ ಗೌರವಿಸಲ್ಪಡುವ ಎಲ್ಲಾ ವಿಚಾರಗಳನ್ನೂ ಪ್ರಚಾರದ ಗಿಮಿಕ್‌ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಲಜ್ಜೆಗೆಟ್ಟ ಬಿಜೆಪಿಯನ್ನು ದೇಶದೆಲ್ಲೆಡೆ ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಪೇಟ ಧರಿಸಿ ಗಮನ ಸೆಳೆದ ಅವರು, ಇಂದು ನಾವೆಲ್ಲರೂ ಸ್ವತಂತ್ರರಾಗಿದ್ದೇವೆ ಎಂದರೆ ಅದಕ್ಕೆ ಕಾಂಗ್ರೆಸ್‌ ಪಕ್ಷವೇ ಕಾರಣ. ದೇಶಕ್ಕಾಗಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಬಿಜೆಪಿಯವರು ಸಾರ್ವರ್ಕರ್‌ ಅವರನ್ನು ಹಾಡಿ ಹೊಗಳುತ್ತಾರೆ. ಆದರೆ, ಬ್ರಿಟೀಷರ ಕ್ಷಮೆ ಕೇಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟವರು ಅವರು. ಅಂತಹವರನ್ನು ಪೂಜಿಸುವ ಬಿಜೆಪಿಯವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕೆ? ಎಂದು ಪ್ರಶ್ನಿಸಿದರು.

click me!