ಕಾಂಗ್ರೆಸ್‌ ಶಾಸಕರನ್ನು ಭಿಕ್ಷುಕರಂತೆ ಕಾಣಲಾಗುತ್ತಿದೆ: ಶಾಸಕ ಕೆ.ವೈ ನಂಜೇಗೌಡ

By Govindaraj SFirst Published Aug 14, 2022, 1:20 AM IST
Highlights

ಇಂದಿನ ಜನ ವಿರೋಧಿ ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರು ಭಿಕ್ಷುಕರ ರೀತಿಯಲ್ಲಿ ಕಾಣುತ್ತಿದ್ದು, ಅನುದಾನ ಪಡೆಯಬೇಕಾದರೆ ಮಂತ್ರಿಗಳಿಗೆ ಅಣ್ಣ, ಸ್ವಾಮಿ ಎಂದು ಗೋಗರಿಯಬೇಕಾದ ಪರಿಸ್ಥಿತಿ ಇದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಮಾಲೂರು (ಆ.14): ಇಂದಿನ ಜನ ವಿರೋಧಿ ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರು ಭಿಕ್ಷುಕರ ರೀತಿಯಲ್ಲಿ ಕಾಣುತ್ತಿದ್ದು, ಅನುದಾನ ಪಡೆಯಬೇಕಾದರೆ ಮಂತ್ರಿಗಳಿಗೆ ಅಣ್ಣ, ಸ್ವಾಮಿ ಎಂದು ಗೋಗರಿಯಬೇಕಾದ ಪರಿಸ್ಥಿತಿ ಇದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ತಾಲೂಕಿನ ಲಕ್ಕೂರು ಪಂಚಾಯ್ತಿ ವ್ಯಾಪ್ತಿಯ ಲಕ್ಕೂರು-ಸಂಪಂಗೆರೆ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಬ್ಲಾಕ್‌ ಕಾಂಗ್ರೆಸ್‌ ಘಟಕ ಶಾಸಕ ನಂಜೇಗೌಡ ನೇತೃತ್ವದಲ್ಲಿ ಕೈ ಗೊಂಡಿದ್ದ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.

ಅಧಿಕಾರಕ್ಕೆ ಬಂದ ಮೊದಲ ಒಂದೂವರೆ ವರ್ಷ ನಮ್ಮ ಸರ್ಕಾರ ಇದ್ದಾಗ ತಾಲೂಕಿನ ಅಭಿವೃದ್ಧಿಗೆ ಸರಾಗವಾಗಿ ಅನುದಾನ ಹರಿದು ಬರುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಕಳೆದ ಮೂರು ವರ್ಷದಿಂದ ಕಾಂಗ್ರೆಸ್‌ ಶಾಸಕರು ಅನುದಾನ ಪಡೆಯಬೇಕಾದರೆ ಸರ್ಕಾರದ ಮುಂದೆ ಕೈಚಾಚಬೇಕು. ಮಂತ್ರಿಗಳ ಹಿಂದೆ ಅಣ್ಣ, ಅಣ್ಣ ಎಂದು ತಿರುಗಾಡಬೇಕು. ಪರಿಸ್ಥಿತಿ ಹೀಗೆಯೇ ಇರುವುದಿಲ್ಲ ಮುಂದೆ ಕಾಂಗೆಗೆ ಒಳ್ಳೆಯ ದಿನಗಳು ಬರಲಿದೆ. ಆಗ ತಾಲೂಕಿನ ಅಭಿವೃದ್ಧಿ ಮಾಡಿಯೇ ತೀರುವುದಾಗಿ ಹೇಳಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಧುಸೂಧನ್‌, ವಿಜಯ ನರಸಿಂಹ, ಕೆಪಿಸಿಸಿ ಕಾರ‍್ಯದರ್ಶಿ ಲಕ್ಷ್ಮೇನಾರಾಯಣ್‌ ಸೇರಿದಂತೆ ನೂರಾರು ಕಾಂಗ್ರೆಸ್‌ ಮುಖಂಡರು ಇದ್ದರು.

Kolar: ಪ್ರವಾಸಿಗರ ನ್ಯೂ ಹಾಟ್ ಪಿಕ್ನಿಕ್ ಸ್ಪಾಟ್ ಆಗಿ ಭೋರ್ಗರೆಯುತ್ತಿದೆ ಯರಗೋಳ್ ಡ್ಯಾಂ

ಯರಗೋಳ್‌ ಡ್ಯಾಂ ಉದ್ಘಾಟನೆಗೆ ಸರ್ಕಾರದ ನಿರ್ಲಕ್ಷ್ಯ: ನರಗಳ ದೌರ್ಬಲ್ಯದಿಂದ ಮಕ್ಕಳು ಆಗುವುದು ಹೇಗೆ ತಡವಾಗುತ್ತದೋ ಹಾಗೆಯೇ ಸರ್ಕಾರದ ನಿರ್ಲಕ್ಷದಿಂದ ಯರಗೋಳ್‌ ಡ್ಯಾಂ ನೀರು ಸಾರ್ವಜನಿಕರ ಬಳಕೆಗೆ ಸಿಗದೆ ವಿಳಂಬವಾಗುತ್ತಿದೆ ಎಂದು ಮಾಜಿ ಸ್ಪೀಕರ್‌ ಹಾಗೂ ಶಾಸಕ ರಮೇಶ್‌ ಕುಮಾರ್‌ ವ್ಯಂಗ್ಯವಾಡಿದರು.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿರುವ ಯರಗೋಳ್‌ ಡ್ಯಾಂಗೆ ಕಾಂಗ್ರೆಸ್‌ ಶಾಸಕರಿಂದ ಬಾಗಿನ ಅರ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸಿಂಗ್‌ ಮೈತ್ರಿ ಸರ್ಕಾರದಲ್ಲಿ ಶ್ರೀನಿವಾಸಗೌಡರು ಉಸ್ತುವಾರಿ ಸಚಿವರಾಗಿದ್ದಾಗ ಯರಗೋಳ್‌ ಡ್ಯಾಂಗೆ ಚಾಲನೆ ಕೊಟ್ಟಿದ್ದರು. ನಂತರ 2013ರಲ್ಲಿ ನನಗೆ ಸಚಿವ ಸ್ಥಾನ ಬಂತು. ಆಗ ನಾನು ಯರಗೋಳ್‌ ಡ್ಯಾಂಗೆ ಭೇಟಿ ನೀಡಿದಾಗ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಬಳಿಕ ಡ್ಯಾಂ ಯೋಜನೆಗೆ ವೇಗ ನೀಡಿದ್ದರಿಂದ ಇಂದು ಡ್ಯಾಂ ಈ ಹಂತಕ್ಕೆ ಬಂದಿದೆ ಎಂದರು.

ಎಲ್ಲವೂ ಎಚ್ಡಿಕೆ ಯೋಜನೆಗಳೇ?: ಯರಗೋಳ್‌ ಯೋಜನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಡಿರುವ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಕೆ.ಸಿ ವ್ಯಾಲಿ, ಹೆಚ್‌.ಎನ್‌ ವ್ಯಾಲಿ, ಎತ್ತಿನಹೊಳೆ, ಕೆ ಆರ್‌ ಎಸ್‌, ಹೆಚ್‌.ಎಂ.ಟಿ ಸೇರಿದಂತೆ ಯರಗೋಳ್‌ ಯೋಜನೆಯೂ ಅವರದೇ. ನಾನು ಯಾವ ಭಗೀರಥನೂ ಅಲ್ಲ, ನಾನು ಯಾವ ಮಹಾನ್‌ ನಾಯಕನೂ ಅಲ್ಲ. ನಾವೆಲ್ಲಾ ಅವರ ದಯೆಯಿಂದ ಬದುಕುತ್ತಿದ್ದೇವೆ ಎಂದರು.

ಶಾಸಕ ಶ್ರೀನಿವಾಸಗೌಡ ಮಾತನಾಡಿ, ತಾವು ಧರ್ಮಸಿಂಗ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಇಂಜಿನಿಯರ್‌ ಪಾಪ್‌ ಗೌಡ ಮತ್ತು ನಗರಸಭೆ ಸದಸ್ಯರಾಗಿದ್ದ ತ್ಯಾಗರಾಜ್‌ ನನ್ನನ್ನು ಈ ಸ್ಥಳಕ್ಕೆ ಕರೆದುಕೊಂಡು ಬಂದು ಇಲ್ಲಿಂದ ತಮಿಳು ನಾಡಿಗೆ ಹರಿದು ಹೋಗುತ್ತಿದ್ದ ನೀರನ್ನು ತೋರಿಸಿದರು, ಆಗ ನಾನು ಮುಖ್ಯಮಂತ್ರಿ ಧರ್ಮಸಿಂಗ್‌ ರವರ ಮುಂದೆ ವಿಷಯ ಪ್ರಸ್ತಾಪಿಸಿದಾಗ ಅವರು ಯರಗೋಳ್‌ ಯೋಜನೆಗೆ ಚಾಲನೆ ಕೊಟ್ಟರು. ನಂತರ ಕುಮಾರಸ್ವಾಮಿ ಒಂದಷ್ಟುಹಣ ಕೊಟ್ಟರು. ನಂತರ ಒಬ್ಬ ಮಹಾನುಭಾವ ಡ್ಯಾಂ ಕಟ್ಟುವ ಮೊದಲೇ ಪೈಪ್‌ಲೈನ್‌ ಹಾಕಿಸಿದರು. ಈಗ ಅವೆಲ್ಲ ನಾಶವಾಗಿವೆ. ಈಗ ಬಿಜೆಪಿ ಸೇರಿ ಮತ್ತೆ ಪೈಪ್‌ ಲೈನ್‌ಗೆ ಸಿದ್ಧವಾಗುತ್ತಿದ್ದಾನೆ ಎಂದು ಪರೋಕ್ಷವಾಗಿ ವರ್ತೂರ್‌ ಪ್ರಕಾಶ್‌ರನ್ನು ಟೀಕಿಸಿದರು.

Kolar; ಚಾಕು ಇರಿತಕ್ಕೆ ಒಳಗಾದ RSS ಮುಖಂಡನನ್ನು ಭೇಟಿ ಮಾಡಿದ ಸಚಿವರು

ಜಿಲ್ಲೆಯ ಸಂಸದರು ಕಾಳಜಿ ವಹಿಸಲಿ: ಮಾಲೂರು ಶಾಸಕ ಕೆ.ವೈ ನಂಜೇಗೌಡ ಮಾತನಾಡಿ, ಧರ್ಮಸಿಂಗ್‌ ನೇತೃತ್ವದ ಸಂಯುಕ್ತ ಸರ್ಕಾರದಲ್ಲಿ ಶ್ರೀನಿವಾಸಗೌಡ ಪ್ರಯತ್ನದಿಂದ ಯೋಜನೆ ರೂಪುಗೊಂಡು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗುದ್ದಲಿ ಪುಜೆ ಮಾಡಿದರು. ನಂತರ ಬಂದವರು ಡ್ಯಾಂ ಮತ್ತು ಪೈಪ್‌ಲೈನ್‌ ಮಾಡಿ ಲೂಟಿ ಮಾಡಿದರು. ಡ್ಯಾಂ ಪೂರ್ಣಗೊಳ್ಳುತ್ತೋ ಇಲ್ಲವೋ ಎಂಬ ಅನುಮಾನವಿತ್ತು. ನಂತರ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದರಿಂದ ಯರಗೋಳ್‌ ಯೋಜನೆ ಈ ಹಂತಕ್ಕೆ ಬಂದಿದೆ. ಬಿಜೆಪಿ ಸಂಸದರಿಗೆ ಜಿಲ್ಲೆಯ ಮೇಲೆ ಕಾಳಜಿ ಇದ್ದರೆ ಯರಗೋಳ್‌ ಯೋಜನೆ ಪೂರ್ಣಗೊಳಿಸಲಿ ಇಲ್ಲವಾದರೆ ಮತ್ತೆ ನಾವೇ ಅಧಿಕಾರಕ್ಕೆ ಬಂದು ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.

click me!