Karnataka Politics: ನನಗೆ ಸಚಿವ ಸ್ಥಾನ ಬೇಕೇಬೇಕು: ಆನಂದ್‌ ಮಾಮನಿ ಪಟ್ಟು

Kannadaprabha News   | Asianet News
Published : Jan 28, 2022, 11:43 AM ISTUpdated : Jan 28, 2022, 11:44 AM IST
Karnataka Politics:  ನನಗೆ ಸಚಿವ ಸ್ಥಾನ ಬೇಕೇಬೇಕು: ಆನಂದ್‌ ಮಾಮನಿ ಪಟ್ಟು

ಸಾರಾಂಶ

*   ಕ್ಷೇತ್ರ ಮತ್ತು ರಾಜ್ಯದ ಜನರ ಕೆಲಸ ಮಾಡಲು ಅವಕಾಶ ಕೊಡಬೇಕು *  ಕೇವಲ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸಚಿವ ಸ್ಥಾನ ಕೇಳುತ್ತಿಲ್ಲ *  17 ಮಂದಿ ತ್ಯಾಗದಿಂದ ಸರ್ಕಾರ ಬಂದಿದೆ, ಇದನ್ನು ಮರೆಯದಿರಿ

ಬೆಂಗಳೂರು(ಜ.28):  ಸಂಪುಟ ವಿಸ್ತರಣೆಯನ್ನಾದರೂ ಮಾಡಲಿ, ಪುನರಾಚನೆಯನ್ನಾದರೂ ಮಾಡಲಿ, ನನಗೆ ಸಚಿವ ಸ್ಥಾನ ಬೇಕೇಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ್‌ ಮಾಮನಿ(Anand Mamani) ಆಗ್ರಹಿಸಿದ್ದಾರೆ.  ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಅಥವಾ ವಿಸ್ತರಣೆ(Cabinet Expansion) ವೇಳೆ ನನಗೆ ಸಚಿವ ಸ್ಥಾನ ನೀಡಲೇಬೇಕೆಂದು ಪಕ್ಷದ ನಾಯಕರನ್ನು ಒತ್ತಾಯಿಸಿದ್ದೇನೆ.

ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಕ್ಷೇತ್ರ ಮತ್ತು ರಾಜ್ಯದ(Karnataka) ಜನರ ಕೆಲಸ ಮಾಡಲು ಅವಕಾಶ ಕೊಡಬೇಕು. ಸಂಪುಟ ವಿಸ್ತರಣೆಯನ್ನಾದರೂ ಮಾಡಲಿ, ಪುನಾರಚನೆಯನ್ನಾದರೂ ಮಾಡಲಿ. ನನಗೆ ಸಚಿವ ಸ್ಥಾನ ನೀಡಲೇಬೇಕು. ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಘದ ಜತೆಯೂ ಈ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

Karnataka Politics: ಗದ್ದುಗೆ ಏರಲು ಬಿಜೆ​ಪಿ ತವಕ​, ಕಾಂಗ್ರೆಸ್‌ ತೆರೆಮರೆಯ ಕಸರತ್ತು..!

ಕೇವಲ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸಚಿವ ಸ್ಥಾನ ಕೇಳುತ್ತಿಲ್ಲ. ಕ್ಷೇತ್ರದ ಜತೆಗೆ ರಾಜ್ಯದ ಜನರ ಕೆಲಸ ಮಾಡುತ್ತೇನೆ ಎಂದರು.

ಪಕ್ಷ ಬಿಡಲ್ಲ, ಬಿಜೆಪಿಯಿಂದಲೇ ಸ್ಪರ್ಧೆ: ಬಾಲಚಂದ್ರ

ಗೋಕಾಕ(Gokak): ಯಾರು ಎಷ್ಟೇ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದರೂ 2023ರಲ್ಲಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅರಬಾವಿ ಕ್ಷೇತ್ರದಿಂದಲೇ ಕಣಕ್ಕಿಳಿಯುವೆ ಎಂದು ಕೆಎಂಎಫ್‌(KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ(Balachandra Jarkiholi) ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿಯಿಂದಲೇ(BJP) ಸ್ಪರ್ಧಿಸುತ್ತೇನೆ ಎಂದು ಬಾಂಡ್‌ ಪೇಪರ್‌ನಲ್ಲೂ ಬರೆದುಕೊಡುತ್ತೇನೆ. ನಾನು ಪಕ್ಷ ಬಿಡುತ್ತೇನೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

17 ಜನರ ತ್ಯಾಗ ಮರೆಯಬೇಡಿ: 

ರಮೇಶ ಜಾರಕಿಹೊಳಿ(Ramesh Jarkiholi) ಮತ್ತು ಇನ್ನಿತರ 16 ಶಾಸಕರ ತ್ಯಾಗದಿಂದ ಇಂದು ಬಿಜೆಪಿಯಲ್ಲಿ ಕೆಲವರು ಅಧಿಕಾರ ಅನುಭವಿಸುತ್ತಿದ್ದಾರೆ. ಇದನ್ನು ಅಧಿಕಾರದಲ್ಲಿರುವವರು ಮರೆಯಬಾರದು ಎಂದು ಬಾಲಚಂದ್ರ ಜಾರಕಿಹೊಳಿ ಅವರು ಸಚಿವ ಉಮೇಶ್‌ ಕತ್ತಿ(Umesh Katti) ಮತ್ತು ಸಂಗಡಿಗರಿಗೆ ಟಾಂಗ್‌ ನೀಡಿದರು.

Karnataka Politics: ಡಿಕೆಶಿ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್‌ ಜಾರಕಿಹೊಳಿ ವಾಗ್ದಾಳಿ

17 ಮಂದಿ ಶಾಸಕರು ಬಿಜೆಪಿಗೆ ಬಾರದಿದ್ದಲ್ಲಿ ಹಲವರು ಸಚಿವರಾಗಲು, ಡಿಸಿಎಂ ಆಗಲು, ರಾಜ್ಯಸಭಾ ಸದಸ್ಯರಾಗಲು ಸಾಧ್ಯ ಇರುತ್ತಿರಲಿಲ್ಲ. ಇದನ್ನು ಅಧಿಕಾರ ಅನುಭವಿಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕೆಂದರು. ಇತ್ತೀಚೆಗೆ ಬೆಳಗಾವಿಯಲ್ಲಿ(Belagavi) ನಮ್ಮ ಪಕ್ಷದವರೇ ಸಭೆ ನಡೆಸಿದ್ದಾರೆ. ಅದು ಅಧಿಕೃತವೋ ಅಥವಾ ಅನಧಿಕೃತವೋ ಎಂಬುದನ್ನು ಪಕ್ಷದ ಮುಖಂಡರೇ ನಿರ್ಣಯಿಸಬೇಕು. ಇಂತಹ ಬೆಳವಣಿಗೆಗಳು ನಡೆಯಬಾರದಿತ್ತು. ಇದರಿಂದ ಪಕ್ಷಕ್ಕೆ ಮುಜುಗರವಾಗಬಹುದು ಎಂದರು.

ಬಿಜೆಪಿಯಲ್ಲಿ ನೆಮ್ಮದಿಯಾಗಿದ್ದೇವೆ, ಪಕ್ಷ ಬಿಡಲ್ಲ: ಮುನಿರತ್ನ

‘ಬಿಜೆಪಿಯಲ್ಲಿ(BJP) ನೆಮ್ಮದಿಯಾಗಿ, ಸಂತೋಷವಾಗಿದ್ದೇನೆ. ಪಕ್ಷ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದೆ. ಹೀಗಾಗಿ ಪಕ್ಷ ಬಿಡುವ ಪ್ರಮೇಯವೇ ಇಲ್ಲ’ ಎಂದು ತೋಟಗಾರಿಕೆ ಸಚಿವ ಮುನಿರತ್ನ(Munirathna) ಸ್ಪಷ್ಟಪಡಿಸಿದ್ದಾರೆ. 
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮತನಾಡಿದ ಅವರು, ‘ಕಾಂಗ್ರೆಸ್‌ನಿಂದ(Congress) ಬಂದಿರುವ ನಾವೆಲ್ಲರೂ ಸಂತೋಷವಾಗಿದ್ದೇವೆ. ಬಿಜೆಪಿ ನಮ್ಮನ್ನು ಗೌರವದಿಂದ ನೋಡಿಕೊಳ್ಳುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದರು.

‘ಕಾಂಗ್ರೆಸ್‌ನಿಂದ ಬರುವವರು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ. ಹೈಕಮಾಂಡ್‌(High Command) ಅನುಮತಿ ನೀಡಿದರೆ ಮುಂದೆ ಕರೆತರುವ ಬಗ್ಗೆ ನೋಡೋಣ. ಶಾಸಕ ರಮೇಶ್‌ ಜಾರಕಿಹೊಳಿ(Ramesh Jarkiholi) ಜತೆ ಯಾರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಕೇಳುತ್ತೇನೆ. ನಾವು ಯಾರನ್ನೂ ವಾಪಸ್‌ ಬಿಟ್ಟುಕೊಡಲ್ಲ. ಹೀಗಾಗಿ ನಾವು ಯಾರು ಅಲ್ಲಿಗೆ ಹೋಗುವುದಿಲ್ಲ. ಪ್ರತಿಪಕ್ಷ ಸಿದ್ದರಾಮಯ್ಯ(Siddaramaiah) ಸಂಪರ್ಕದಲ್ಲಿ ಯಾರಿದ್ದಾರೆ ಗೊತ್ತಿಲ್ಲ’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ