
ಬೆಂಗಳೂರು(ಜ.28): ‘ಬಿಜೆಪಿಯಲ್ಲಿ(BJP) ನೆಮ್ಮದಿಯಾಗಿ, ಸಂತೋಷವಾಗಿದ್ದೇನೆ. ಪಕ್ಷ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದೆ. ಹೀಗಾಗಿ ಪಕ್ಷ ಬಿಡುವ ಪ್ರಮೇಯವೇ ಇಲ್ಲ’ ಎಂದು ತೋಟಗಾರಿಕೆ ಸಚಿವ ಮುನಿರತ್ನ(Munirathna) ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮತನಾಡಿದ ಅವರು, ‘ಕಾಂಗ್ರೆಸ್‌ನಿಂದ(Congress) ಬಂದಿರುವ ನಾವೆಲ್ಲರೂ ಸಂತೋಷವಾಗಿದ್ದೇವೆ. ಬಿಜೆಪಿ ನಮ್ಮನ್ನು ಗೌರವದಿಂದ ನೋಡಿಕೊಳ್ಳುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದರು.
‘ಕಾಂಗ್ರೆಸ್‌ನಿಂದ ಬರುವವರು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ. ಹೈಕಮಾಂಡ್(High Command) ಅನುಮತಿ ನೀಡಿದರೆ ಮುಂದೆ ಕರೆತರುವ ಬಗ್ಗೆ ನೋಡೋಣ. ಶಾಸಕ ರಮೇಶ್ ಜಾರಕಿಹೊಳಿ(Ramesh Jarkiholi) ಜತೆ ಯಾರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಕೇಳುತ್ತೇನೆ. ನಾವು ಯಾರನ್ನೂ ವಾಪಸ್ ಬಿಟ್ಟುಕೊಡಲ್ಲ. ಹೀಗಾಗಿ ನಾವು ಯಾರು ಅಲ್ಲಿಗೆ ಹೋಗುವುದಿಲ್ಲ. ಪ್ರತಿಪಕ್ಷ ಸಿದ್ದರಾಮಯ್ಯ(Siddaramaiah) ಸಂಪರ್ಕದಲ್ಲಿ ಯಾರಿದ್ದಾರೆ ಗೊತ್ತಿಲ್ಲ’ ಎಂದು ಹೇಳಿದರು.
ಫುಟ್‌ಬಾತ್‌ನಲ್ಲಿ ಇಡ್ಲಿ ಮಾರುತ್ತಿದ್ದ ಹುಡುಗ, ಮಿನಿಸ್ಟರ್ ಮುನಿರತ್ನ ಆಗಿದ್ಹೇಗೆ.?
ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ: ಮುನಿರತ್ನ
ಕೋಲಾರ: ಆಪರೇಷನ್ ಕಮಲದ(Operation BJP) ಮೂಲಕ ಬಿಜೆಪಿ ಸೇರಿರುವ ಯಾವೊಬ್ಬ ಮಂತ್ರಿ ಮತ್ತು ಶಾಸಕರೂ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನಾವು ಹಾಗೇನಾದರೂ ಕಾಂಗ್ರೆಸ್‌ಗೆ ಸೇರುವುದಾದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್(Ramesh Kumar) ಕಾಂಗ್ರೆಸ್‌ನಲ್ಲಿ ಇರುವುದಿಲ್ಲ ಎಂದು ಮೊದಲೇ ಹೇಳಿದ್ದಾರೆ. ನಾವು ಕಾಂಗ್ರೆಸ್ ಸೇರಿದರೆ ಅವರು ಪಕ್ಷ ಬಿಡಬೇಕಾಗುತ್ತದೆ ಎಂದು ಸಿದ್ದರಾಮಯ್ಯನವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಟಾಂಗ್ ನೀಡಿದ್ದರು.
ಜ.26 ರಂದು ಜಿಲ್ಲಾಡಳಿತ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ನಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿದೆ. ಪಕ್ಷ ಬಿಡುವ ಪ್ರಶ್ನೆ ನಮ್ಮಲ್ಲಿ ಇಲ್ಲ. ಅಂತಹ ಪರಿಸ್ಥಿತಿ ಯಾವತ್ತೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಜಿಲ್ಲಾ ಉಸ್ತುವಾರಿ ಅಸಮಾಧಾನ ಇಲ್ಲ
ಕೋಲಾರ(Kolar) ಜಿಲ್ಲೆಯ ಉಸ್ತುವಾರಿ ಸ್ಥಾನ ನನಗೆ ಯಾವುದೇ ಅಸಮಾಧನವಿಲ್ಲ. ಕೊಟ್ಟಿರುವ ಕೆಲಸ ನಿರ್ವಹಿಸುತ್ತೇನೆ. ತವರು ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಲು ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ. ಯಾವುದೇ ಅಸಮಾಧಾನವಿಲ್ಲದೆ ಸಾರ್ವಜನಿಕರ ಕೆಲಸ ಮಾಡಲು ಸಿದ್ದ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೆಕು ಎಂದರು.
ಸಚಿವ ಸಂಪುಟ ಪುನರ್ ರಚನೆ ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು. ಮಂತ್ರಿ ಈಶ್ವರಪ್ಪ ಸೆರಿದಂತೆ ಎಲ್ಲರೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಬೇಕು. ಶಾಸಕ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿ ಕಾಂಗ್ರೆಸ್‌ನ ಹಲವು ಶಾಸಕರು ಇರುವುದು ನಿಜ. ಅವರು ಒಬ್ಬ ಪ್ರಭಾವಿ ವ್ಯಕ್ತಿ, ಅವರ ಹೇಳಿಕೆಯನ್ನು ತೆಗೆದುಹಾಕುವಂತಿಲ್ಲ ಎಂದರು.
ಬೆಂಗಳೂರಿಗೆ ಉಸ್ತುವಾರಿ ಇರುವಾಗ ಚರ್ಚೆ ಅನಗತ್ಯ: ಮುನಿರತ್ನ
ಡಿ.ಕೆ. ಶಿವಕುಮಾರ್(DK Shivakumar) ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ(Mekedatu Padayatra) ಪ್ರಸ್ತಾಪಿಸಿದ ಸಚಿವರು, ಕಾಂಗ್ರೆಸ್‌ನ ರಾಜಕೀಯ ಹಾಗೂ ಪ್ರಚಾರದ ಯೋಜನೆ ಇದಾಗಿದೆ. ರಾಜ್ಯ ಹಾಗು ಕೇಂದ್ರ ಸರ್ಕಾರಗಳು(Central Government) ಮೇಕೆದಾಟು ಯೋಜನೆ ಜಾರಿಗೊಳಿಸಲು ಬದ್ದವಾದ್ದು, ಅದಕ್ಕೆ ಕೆಲವು ಕಾನೂನು ತೊಡಕುಗಳಿವೆ. ಅದನ್ನು ಸರಿಪಡಿಸಿಕೊಂಡು ಮೇಕೆದಾಟು ಯೋಜನೆ ಡಿಪಿಆರ್‌ನಲ್ಲಿ ಕೋಲಾರ ಜಿಲ್ಲೆಯ ಹೆಸರು ಸೇರಿಸುವ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.
ಪ್ರಗತಿ ಪರಿಶೀಲನಾ ಸಭೆಯ ಅಧಿಕಾರಿಗಳಿಗೆ ಸಚಿವ ಮುನಿರತ್ನ ಸೂಚನೆ
ಸರ್ಕಾರವು ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.