ನಾನು ಕನಕಪುರ ಶಾಲಾ ಕಾರ್ಯಕ್ರಮದಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿದರೆ, ಮಾಧ್ಯಮಗಳು ಸಿಎಂ ಹುದ್ದೆ ವಿಚಾರ ಎಂದು ತಿರುಚಿವೆ. ಶಾಲಾ ಕಟ್ಟಡ ನಿರ್ಮಾಣ ಅಭಿವೃದ್ಧಿ ಅಲ್ಲವೇ? ನಾನು 40 ವರ್ಷದ ರಾಜಕಾರಣ ಮಾಡಿದ್ದೇನೆ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಿ ಗೊಂದಲ ಸೃಷ್ಟಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್
ಚನ್ನಪಟ್ಟಣ(ಅ.01): ನಾನು ಕನಕಪುರದ ಇತ್ತೀಚಿಗೆ ಶಾಲಾ ಕಾರ್ಯಕ್ರಮದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದೇನೆ ಹೊರತು ಸಿಎಂ ಹುದ್ದೆ ಬಗ್ಗೆ ಅಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಷ್ಟನೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕನಕಪುರ ಶಾಲಾ ಕಾರ್ಯಕ್ರಮದಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿದರೆ, ಮಾಧ್ಯಮಗಳು ಸಿಎಂ ಹುದ್ದೆ ವಿಚಾರ ಎಂದು ತಿರುಚಿವೆ. ಶಾಲಾ ಕಟ್ಟಡ ನಿರ್ಮಾಣ ಅಭಿವೃದ್ಧಿ ಅಲ್ಲವೇ? ನಾನು 40 ವರ್ಷದ ರಾಜಕಾರಣ ಮಾಡಿದ್ದೇನೆ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಿ ಗೊಂದಲ ಸೃಷ್ಟಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
undefined
ಚನ್ನಪಟ್ಟಣ ಬೈಎಲೆಕ್ಷನ್: ಕಾಂಗ್ರೆಸ್ ಸೇರ್ತಾರಾ ಯೋಗೇಶ್ವರ್?, ಬಾಲಕೃಷ್ಣ ಹೇಳಿದ್ದಿಷ್ಟು
ಚುನಾವಣೆ ದೃಷ್ಟಿಯಿಂದ ನಾನು ಇಲ್ಲಿಗೆ ಬರುತ್ತಿಲ್ಲ: ಡಿ.ಕೆ. ಶಿವಕುಮಾರ್
ಚನ್ನಪಟ್ಟಣ: ಚುನಾವಣೆ ದೃಷ್ಟಿಯಿಂದ ನಾನು ಇಲ್ಲಿಗೆ ಬರುತ್ತಿಲ್ಲ. ನಾನು ಈ ಜಿಲ್ಲೆಯವನು. ನಾಲ್ಕು ಬಾರಿ ಈ ಭಾಗದ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಬೇರೆ ಎಲ್ಲೂ ಹೋಗಲು ಆಗುವುದಿಲ್ಲ. ನಾನು ಇಲ್ಲೇ ಹುಟ್ಟಿ ದೇನೆ. ಇಲ್ಲೇ ಸಾಯುತ್ತೇನೆ. ನಿಮ್ಮನ್ನು ಟೂರಿಂಗ್ ಟಾಕೀಸ್ ಥರ ಬಳಸಲು ಆಗುವುದಿಲ್ಲ. ನೀವು ಹೃದಯವಂತಿಕೆಯಿಂದ ನಮಗೆ ಶಕ್ತಿ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದರು.
ತಾಲೂಕಿನ ಕೆಂಗಲ್ ಬಳಿಯ ತಿಮ್ಮಮ್ಮದಾಸೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿಮಾತನಾಡಿದರು.ಭವ್ಯವಾದಗುರುಭವ ನವನ್ನು ಮಂಜೂರು ಮಾಡಲಾಗುವುದು. ಇಲ್ಲಿ ಅನೇಕ ಶಿಕ್ಷಕರಿಗೆ ನಿವೇಶನ ಇಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ. ನಿವೇಶನ ನೀಡುವ ಬಗ್ಗೆ ಚರ್ಚೆ ಮಾಡುತ್ತೇನೆ. ಅದೇ ರೀತಿ ಗುರುಭವನ ಸ್ಥಾಪನೆಗೆ ನೀವೇ ಜಾಗ ಗುರುತಿಸಿ ಎಂದರು. 10,000 ಕೋಟಿ ಸಿಎಸ್‌ಆರ್‌ನಿಧಿ ಸಂಗ್ರಹ: ರಾಜ್ಯದಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ರು. ಸಿಎಸ್‌ಆರ್‌ನಿಧಿ ಸಂಗ್ರಹವಾಗುತ್ತದೆ, ಮುಂದಿನ ದಿನಗಳಲ್ಲಿ ಇದನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಲು ತೀರ್ಮಾ ನಿಸಿದ್ದೇವೆ. ಪ್ರತಿ ಮೂರ್ನಾಲ್ಕು ಪಂಚಾಯಿತಿ ಮಟ್ಟ ದಲ್ಲಿ ಪಬ್ಲಿಕ್ ಶಾಲೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈಶಾಲೆಗಳನ್ನು ಖಾಸಗಿಯವರು ನಿಭಾಯಿಸುತ್ತಾರೆ. ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದ್ದು, ಈ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಖಾಸಗಿ ಶಾಲೆಯವರು ತುಂಬಲಿದ್ದಾರೆ ಎಂದರು.
ಎಲ್ಲಾ ತಾಲೂಕುಗಳಲ್ಲಿ ಮೂರ್ನಾಲ್ಕು ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದೆ ಶಿಕ್ಷಣ ಕ್ಕಾಗಿ ಯಾರೂ ನಗರಕ್ಕೆ ವಲಸೆ ಹೋಗಬಾರದು ಎಂಬುದು ನಮ್ಮ ಆಲೋಚನೆ. ಮುಂದಿನ 3 ವರ್ಷ ಗಲ್ಲಿ ಸುಮಾರು 2 ಸಾವಿರ ಶಾಲೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈ ಜಿಲ್ಲೆಯಲ್ಲಿರುವ ಎಲ್ಲಾ ಕಂಪನಿಗಳು ತಮ್ಮ ಸಿಎಸ್‌ಆರ್‌ನಿಧಿಯನ್ನು ಇದಕ್ಕೆ ಬಳಸಬೇಕುಎಂದು ಡೀಸಿಗೆ ಸೂಚಿಸಿದ್ದೇನೆ ಎಂದರು.
ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್. ರವಿ, ರಾಮೋಜಿಗೌಡ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಸಿಇಒ ದಿಗ್ವಿಜಯ್ ಬೋಡೈ, ಎಸ್‌ಪಿ ಕಾರ್ತೀಕ್ ರೆಡ್ಡಿ, ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಸ್.ಆರ್. ಪ್ರಮೋದ್ ಇತರರಿದ್ದರು.
ರಾಮನಗರ: ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ
ಡಿಕೆಶಿಗೆ ಅವಕಾಶ ಸಿಗಲು ಕೈ ಬಲಪಡಿಸಿ: ಪುಟ್ಟಣ್ಣ
ಚನ್ನಪಟ್ಟಣ: ಬೇರೆ ಜಿಲ್ಲೆಯವರು ಇಲ್ಲಿಗೆ ಬಂದು ಇಲ್ಲಿಂದ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಅದಕ್ಕೆ ಬೇಸರವಿಲ್ಲ, ಆದರೆ, ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಒಂದು ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ಮುಂದಿನ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅವರ ಕೈ ಬಲಪಡಿಸುವ ಕೆಲಸ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಮನವಿ ಮಾಡಿದರು.
ತಾಲೂಕಿನಲ್ಲಿ ಕೆಂಗಲ್‌ನಲ್ಲಿ ಆಯೋಜಿಸಿದ್ದ ಜಿಲ್ಲಾ, ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಭಾಗದಿಂದ ಮುಖ್ಯಮಂತ್ರಿ ಆಗುವ, ಆ ಸ್ಥಾನ ಕೇಳುವವಂಥ ಭರವಸೆಯನ್ನು ಯಾರ ಮೇಲೂ ಇಟ್ಟುಕೊಳ್ಳುವಂತಿಲ್ಲ. ಇರುವುದು ಅವರು ಒಬ್ಬರೇ ಇನ್ಯಾರು ಈ ಭಾಗದಲ್ಲಿ ಇಲ್ಲ. ಚನ್ನಪಟ್ಟಣದ ಗೆಲುವು ಅವರಿಗೆ ಶಕ್ತಿ ನೀಡಿದಂತೆ ಆಗುತ್ತದೆ. ಅವರ ಬೆನ್ನಿಗೆ ನಾವೆಲ್ಲ ನಿಲ್ಲಬೇಕಿದೆ ಎಂದರು. ಅನುದಾನಿತ ಶಿಕ್ಷಣಸಂಸ್ಥೆಗಳಿಗೆಎನ್‌ಪಿಎಸ್, ಒಪಿಎಸ್ ಎರಡು ಇಲ್ಲ. ಇದಕ್ಕಾಗಿ 2023ರ ಮಾರ್ಚ್‌ನಲ್ಲಿ 42 ದಿನ ಚಳುವಳಿ ಮಾಡಿದೆವು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಕುರಿತು ಸಭೆ ಮಾಡುವಂತೆ ಒತ್ತಾಯ ಮಾಡಿ ದೆವು. ಆದರೆ ಸ್ಪಂದಿಸಲಲಿಲ್ಲ. ಆದರೆ ಡಿ.ಕೆ. ಶಿವಕುಮಾರ್‌ಗೆಎನ್‌ಪಿಎಸ್, ಒಪಿಎಸ್ ಎರಡು ಇಲ್ಲ ಒಪಿಎಸ್ ನೀಡಿ ಎಂದಾಗ ಮರುದಿನ ಫ್ರೀಡಂಪಾರ್ಕ್‌ಗೆ ಬಂದು ಸ್ಪಂದಿಸುವ ಭರವಸೆ ನೀಡಿದರು. ಆ ನಂತರ ಅದನ್ನು ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಸೇರಿಸಿದರು. ನಮ್ಮ ಬೇಡಿಕೆಗೆ ಸ್ಪಂದಿಸುವ ಇಂಥವರ ಬೆನ್ನಿಗೆ ನಾವು ನಿಲ್ಲಬೇಕಿದೆ ಎಂದು ಹೇಳಿದರು.