ತಪ್ಪಾಯ್ತು ಅಂಥಾ ಕಳ್ಳ ಹೇಳಿದ್ರೆ ಪೊಲೀಸರು ಬಿಟ್‌ಬಿಡ್ತಾರಾ? ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ!

By Santosh Naik  |  First Published Oct 1, 2024, 12:40 PM IST

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಎಚ್‌ಡಿ ಕುಮಾರಸ್ವಾಮಿ, ಸಿಎಂ ಪತ್ನಿ ಪಾರ್ವತಿ ಅವರು ಸೈಟ್‌ ವಾಪಾಸ್‌ ನೀಡಿದ ವಿಚಾರವಾಗಿ ಪ್ರಶ್ನಿಸಿದ್ದಾರೆ. ತಪ್ಪಾಯ್ತು ಅಂತಾ ಕಳ್ಳ ಹೇಳಿದ್ರೆ ಪೊಲೀಸರು ಬಿಟ್‌ಬಿಡ್ತಾರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.


ಬೆಂಗಳೂರು (ಅ.1): ಸಿದ್ದರಾಮಯ್ಯ ವಿರುದ್ಧ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಕ್ಸಮರ ನಡೆಸಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಸಿಎಂ ಪತ್ನಿ ಪಾರ್ವತಿ ಅವರು ಸೈಟ್‌ ವಾಪಾಸ್‌ ನೀಡಿದ ವಿಚಾರವಾಗಿಯೂ ಮಾತನಾಡಿದ್ದಾರೆ. ತಪ್ಪಾಯ್ತು ಅಂತಾ ಕಳ್ಳ ಹೇಳಿದ್ರೆ ಪೊಲೀಸರು ಬಿಟ್‌ಬಿಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನನ್ನು ಹಿಟ್‌ ಆಂಡ್‌ ರನ್‌ ಕುಮಾರಸ್ವಾಮಿ ಎನ್ನುವ ನಿಮ್ಮನ್ನು ಈಗ ಯೂಟರ್ನ್‌ ಕುಮಾರಸ್ವಾಮಿ ಎನ್ನಬಹುದೇ ಎಂದು ಕೇಳಿದ್ದಾರೆ. ರಾಜ್ಯ ರಾಜಕಾರಣ ಪ್ರತಿ ದಿನ ಒಂದೊಂದು ರೀತಿ ಟರ್ನ್ ತೆಗೆದುಕೊಳ್ಳುತ್ತಿದೆ. ಸಿಎಂ ವಿರುದ್ದ ರಾಜ್ಯಪಾಲರ ಮುಂದೆ ತನಿಖೆಗೆ ಅನುಮತಿ ಕೋರಿದ್ದು ಸಂಪುಟ ಸಭೆ ಕರೆದು, ರಾಜ್ಯ ಸರ್ಕಾರ ಏನೇನು ತೀರ್ಮಾನ ಕೊಟ್ಟಿದ್ದಾರೆ. ಈ ಪ್ರಕರಣ ಹೊರಗೆ ಬಂದ ಬಳಿಕ ಸಿಎಂ ಯಾವ ಯಾವ ಹೇಳಿಕೆ ಕೊಟ್ಟಿದ್ದಾರೆ. ಹೈಕೋರ್ಟ್, ಜನಪ್ರತಿನಿಧಿ ನ್ಯಾಯಾಲಯದಿಂದ ತನಿಖೆಗೆ ಆದೇಶವಾಗಿದೆ.
ನಮ್ಮ ಗಮನಕ್ಕೆ ಬರದೆ ಮುಡಾ ಅವರು ಮಾಡಿರುವ ತಪ್ಪು ಅಂಥ ಸಿಎಂ ಹಲವು ಬಾರಿ ಹೇಳಿದ್ದಾರೆ. 62 ಕೋಟಿ ದುಡ್ಡು ಕೊಡಿ ಅಂತ ಸಿಎಂ ಹೇಳಿದ್ದಾರೆ. ನಿನ್ನೆ ಸಿಎಂ ಮನೆಯಲ್ಲಿ ಹಲವು ಸುತ್ತು ಮಾತುಕತೆ ನಡೆದಿದೆ. ಎಚ್ ಕೆ ಪಾಟೀಲ್ ಹೇಳಿಕೆ ನೋಡಿದರೆ ನ್ಯಾಯಾಕ್ಕಾಗಿ ಹುಟ್ಟಿದವರು ಅನ್ನೋ ಥರ ಮಾತನಾಡ್ತಾರೆ.

ನಾನು ವೃತ ಮಾಡಿದ್ದೇನೆ. ನನ್ನ ಯಜಮಾನರು ದುಡಿದ್ದಾರೆ ಅಂತಾರೆ ಆ ಹೆಣ್ಣು ಮಗಳು. ಆ ಹೆಣ್ಣು ಮಗಳ ಬಗ್ಗೆ ನಾನು ಮಾತಾಡಲ್ಲ. ನನ್ನ ಹಿಟ್ ಅಂಡ್ ರನ್ ಅಂತಾರೆ. ಈಗ ಸಿದ್ದರಾಮಯ್ಯ ಅವರನ್ನು ಯು ಟನ್೯ ಸಿದ್ದರಾಮಯ್ಯ ಅಂತಾ ಹೇಳಬಹುದಾ? ಇಷ್ಟು ತರಾತುರಿಯಲ್ಲಿ ಈ ತೀರ್ಮಾನ ಮಾಡಿದ್ದಾರೆ ಯಾರು ಇದರ ಹಿಂದೆ ಇದ್ದಾರೆ. ತಪ್ಪಾಯ್ತು ಅಂಥ ಕಳ್ಳನ ಹೇಳಿದ ಕೂಡ್ಲೇ ಪೊಲೀಸರು ಬಿಟ್ಟು ಬಿಡ್ತಾರಾ. ಬಿಜೆಪಿ ಮೇಲೆ ಆರೋಪ ಮಾಡಿದ್ದೀರಿ, ಈತನಕ ಯಾವುದಾದರೂ ಹೊರಗಡೆ ತರಲು ಸಾಧ್ಯವಾಯಿತಾ? ಎಂದು ಪ್ರಶ್ನೆ ಮಾಡಿದ್ದಾರೆ.

ನೆಲದ, ಚಿನ್ನದ ಮೇಲೆ ವ್ಯಾಮೋಹ ಇಲ್ಲ ಎಂದವರ ಬಗ್ಗೆ ನಾನು ಮಾತಾಡ್ತಿನಿ. ನನ್ನ ಪ್ರಕರಣದಲ್ಲಿ ಬೇಲ್‌ ತೆರವು ಮಾಡೋಕೆ ನಿನ್ನೆ ಇಡೀ ಪ್ರಯತ್ನ ಮಾಡಿದ್ದೀರಿ ಅನ್ನೋದು ಗೊತ್ತಿದೆ. ನಾನಾದ್ರೂ ಬೇಲ್ ಮೇಲೆ ಇದ್ದೀನಿ. ದೇಶದ ಕಾನೂನು ಅಡಿ ಬೇಲ್ ಪಡೆದಿದ್ದೇನೆ. ಈ ಕೆಟ್ಟ ಅಧಿಕಾರಿಗಳನ್ನು ಇಟ್ಟು ಏನಾದರೂ ಮಾಡಬಹುದು ಅಂಥ ನಮ್ಮ ವಕೀಲರು ಹೇಳಿದರು ಹಾಗಾಗಿ ನಾನು ಬೇಲ್ ತೆಗೆದುಕೊಂಡಿದ್ದೇನೆ. ನಾನು ತಪ್ಪು ಮಾಡಿದ್ದೀನಿ ಅಂಥ ಬೇಲ್ ತೆಗೆದುಕೊಂಡಿಲ್ಲ ಎಂದಿದ್ದಾರೆ.

ನಾನು ಆರೋಪಿ ಅಷ್ಟೆ. ನನ್ನ ಮೇಲೆ ಇರೋದು ರಾಜಕೀಯ ಪ್ರೇರಿತ ಆರೋಪಗಳು. ನಮ್ಮ ನೆಲದ ಕಾನೂನಿನಲ್ಲಿ ನಿರಪರಾಧಿಯನ್ನು ಅಪರಾಧಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮುಕ್ತವಾಗಿದ್ದೇನೆ. ನಾನು ಅಧಿಕಾರಿಗಳನ್ನು ಬೆದರಿಸಿ ಯಾವುದು ಬರೆಸಿಕೊಂಡಿಲ್ಲ. ರಾಜ್ಯಪಾಲರ ಕಚೇರಿ ತನಿಖೆಗೆ ಅವಕಾಶ ಕೇಳಿ, ರಾಜ್ಯಪಾಲರಿಗೆ ಅವಮಾನ ಮಾಡಲು ಈ ಅಧಿಕಾರಿ ಮುಂದಾಗಿದ್ದ. ಹಾಗಾಗಿ ಈ ಅಧಿಕಾರಿಯ ಉದ್ದಟತನ ಪ್ರಶ್ನೆ ಮಾಡಿದ್ದೀನಿ. ಕ್ರಿಮಿನಲ್ ಚಟುವಟಿಕೆ ಇದ್ದವರನ್ನು ಹೆದರಿಸಿ, ದುರುಪಯೋಗ ಪಡಿಸಿಕೊಂಡು. ಕಾನೂನುಬಾಹಿರ ಚಟುವಟಿಕೆ ಮಾಡಿ ಅಂಥ ಕೇಂದ್ರ ಸರ್ಕಾರ ಐಪಿಎಸ್ ನೇಮಕ ಮಾಡಿದ್ಯಾ? ಅಧಿಕಾರಿ ವಿರುದ್ದವೇ ಕೇಸ್ ಇದೆ. ಆರೋಪಿ ನಂಬರ್ 2,  ಹೈಕೋರ್ಟ್ ನಲ್ಲಿ ಸ್ಟೇ ತೆಗೆದುಕೊಂಡಿದ್ದಾರೆ. 19 ನೇ ತಾರೀಖು ಕೇಸ್ ಬಂದಿತ್ತು. ವಜಾಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ.. ಅದು ಮುಂದೂಡಿಕೆ ಆಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ಅಧಿಕಾರಿಗಳಿಗೆ ಮೆಮೋ ಹಾಕಬೇಕಾದ್ರೆ ಒಂದು ನಂಬರ್ ಹಾಕಲ್ವಾ? ಜನರನ್ನು ದಾರಿ ತಪ್ಪಿಸಲು ನನ್ನ ವಿರುದ್ದ  ಈ ಪತ್ರ ಬರೆಯಲಾಗಿದೆ. ಕುಮಾರಸ್ವಾಮಿ ಅಂಥ ಹೇಳಿ ಪತ್ರ ಬರೆದಿರೋದು ಆ ಅಧಿಕಾರಿ ಸಿದ್ದರಾಮಯ್ಯ ಅವರೇ ಅದೇ ಅಧಿಕಾರಿ ನಿಮ್ಮ ಮುಂದೆ ಬಂದು ಕ್ರಿಮಿನಲ್ ಸಿಎಂ ಅಂದ್ರೆ ಕರೆದ್ರೆ ಸುಮ್ಮನೇ ಇರ್ತೀರಾ? ನಿನ್ನೆ ರಾತ್ರಿ ಸಿಎಂ ಪತ್ರಿಕಾಲಯದಿಂದ ಹೋಗಿರುವ ಪತ್ರ ಇದು. ಸಹಿಯೂ ಇಲ್ಲ. ಇದರ ಮೇಲೆ. ಹಿಮಾಚಲಪ್ರದೇಶದಲ್ಲಿ ಆರೋಗ್ಯ ಸಮಸ್ಯೆ ಹೇಳಿ ಕರ್ನಾಟಕ ಕ್ಕೆಬಂದ್ರಲ್ಲ.. ಈಗ ಏನು ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಇಳಿಕಲ್ ಬಳಿ ಸಿಎಂ ಸೈಟ್ ತೆಗೆದುಕೊಂಡಿದ್ದಾರೆ ಅಂಥ ಗೊತ್ತಾಗಿದೆ. ಗುಂಡೇಟ್ ತಿಂದವರು, ಅದೇ ಜಾಗವನ್ನು ವಸತಿ ಶಾಲೆಯ ಕಟ್ಟಲು ಡಿನೋಟಿಫೈ ಮಾಡಿಸಿಕೊಳ್ತಾರೆ. ಅದೇ ತೀರ್ಪಿನಲ್ಲಿ ಅಕ್ರಮ ಡಿನೋಟಿಫೈ ಅಂತ ಹೇಳಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಆರೋಪಿ ನಂ.1 ಇದೊಂದು ದೊಡ್ಡ ಪ್ರಕರಣ, ಇದರಲ್ಲಿ ಪ್ಲಾನ್ ಗೆ ಅನುಮತಿ ಪಡೆದಿಲ್ಲ. 14 ಸೈಟ್ ಗಿಂತ ದೊಡ್ಡ ಪ್ರಕರಣ ಇದು. ಈಗ ಕೇಸ್ ಸುಪ್ರೀಂ ಕೋರ್ಟ್ ನಲ್ಲಿ ಇದೆ. ನೀವು ಏನೇ ಮಾನ್ಯೂಪ್ಲೇಟ್ ಮಾಡಿದರೂ ಮೇಲೆ ಉತ್ತರ ಕೊಡಬೇಕು

ಸಿದ್ದರಾಮಯ್ಯ ನನ್ನ ಮನೆ ದೇವರು, ಅವರಿಗೆ ದ್ರೋಹ ಮಾಡಿಲ್ಲ: ಮುಡಾ ಮರೀಗೌಡ

ಅಧಿಕಾರ ದುರುಪಯೋಗ ಪಡಿಸಿಕೊಂಡು ನನ್ನ ಮುಗಿಸಲು ಹೊರಟಿದ್ರು. ಈ ಸೈಟ್ ಬಗ್ಗೆ ‌ಸತ್ಯ ಹೇಳಿ. ಕೃಷ್ಣಭೈರೇಗೌಡರೇ ಈ ಕೇಸ್ ನೋಡಿ. ನಾವು ಯಾರು ಏನೂ ಮಾಡೋಕೆ ಆಗಲ್ಲ. ಅಂತಿಮವಾಗಿ ಮೇಲೊಬ್ಬ ಇದ್ದಾನೆ ಉತ್ತರ ಕೊಡಬೇಕು. ಅಧಿಕಾರ ದುರುಪಯೋಗ ಮಾಡಿ, ಸೇಡಿನ ರಾಜಕಾರಣ ಮಾಡಿದವರು ನೀವು. ನಾನು ಯಾರನ್ನು ಹೆದರಿಸುವ ಪ್ರಶ್ನೆ ಇಲ್ಲ. ನಾನು ಜನಪ್ರತಿನಿಧಿಯಾಗಿ ತಪ್ಪಾದಾಗ ಎತ್ತಿ ಹಿಡಿಯುತ್ತೇನೆ. ಅದನ್ನು ಬೇರೆ ತರ ತಿಳಿದುಕೊಂಡರೆ ಏನು ಮಾಡಲಿ ಎಂದು ಹೇಳಿದ್ದಾರೆ.

Tap to resize

Latest Videos

ಮುಡಾ ಹಗರಣ: ಅಂದೇ ಸಿದ್ದು ನನ್ನ ಮಾತು ಕೇಳಿದ್ರೆ ಸಿಎಂ ಕುರ್ಚಿ ಅಲುಗಾಡುತ್ತಿರಲಿಲ್ಲ, ಪ್ರತಾಪ್‌ ಸಿಂಹ

click me!