Karnataka Politics : ಕಾಂಗ್ರೆಸ್‌ ಸೇರುತ್ತೇನೆಂದು ಸ್ವ ಪಕ್ಷದವರ ಪಿತೂರಿ : ಕುಮಾರಸ್ವಾಮಿ ಗರಂ

By Kannadaprabha NewsFirst Published Jan 3, 2022, 8:50 AM IST
Highlights
  •   ಕಾಂಗ್ರೆಸ್‌ ಸೇರುತ್ತೇನೆಂದು ಸ್ವಪಕ್ಷದವರ ಪಿತೂರಿ: ಶಾಸಕ ಕುಮಾರಸ್ವಾಮಿ ಗರಂ
  • ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ

ಚಿಕ್ಕಮಗಳೂರು (ಜ.03): ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ಅವರು ಸ್ವಪಕ್ಷ ಮುಖಂಡರ ವಿರುದ್ಧ ಗರಂ ಆಗಿದ್ದಾರೆ.  ನಾನು ಕಾಂಗ್ರೆಸ್‌ (Congress) ಸೇರುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು, ನಮ್ಮ ಪಕ್ಷದ ಕೆಲವು ಮುಖಂಡರ ಕೆಲಸ ಎಂದು ಕುಮಾರಸ್ವಾಮಿ ಅವರು ಹೇಳಿರುವ ವಿಡಿಯೋ ವೈರಲ್‌ ಆಗಿದೆ. ನಾನೇಕೆ ಕಾಂಗ್ರೆಸ್‌  ಪಕ್ಷಕ್ಕೆ ಹೋಗಲಿ? ನಾನು ನಿಷ್ಠಾವಂತ ಬಿಜೆಪಿ (BJP) ಮುಖಂಡ. ಪಕ್ಷ ನನ್ನನ್ನು ಚೆನ್ನಾಗಿಯೇ ನೋಡಿಕೊಂಡಿದೆ. ನಾನು ಕಾಂಗ್ರೆಸ್‌ ಸೇರುವುದು ಸುಳ್ಳು ಎಂದು ಪುನರುಚ್ಚರಿಸಿದ್ದಾರೆ.

ಸಂಪುಟ ಪುನಾರಚನೆ, ನಿಗಮ ಮಂಡಳಿ ನೀಡುವ ಸಂದರ್ಭ ಬಂದಾಗ ಮಾತ್ರ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಆದರೂ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ವಿಪಕ್ಷದವರಿಗಿಂತ ನಮ್ಮ ಪಕ್ಷದವರೇ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮವರೇ ಕೆಲವರು ಕಾಂಗ್ರೆಸ್‌ (Congress) ಸೇರುವ ಸುದ್ದಿ ಹರಿಬಿಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬೊಮ್ಮಾಯಿ ವಿಶ್ರಾಂತಿ ಪಡೆಯಲಿ :   ಬಿಜೆಪಿ ಶಾಸಕರೊಬ್ಬರು ಸಿಎಂ ಬೊಮ್ಮಾಯಿ ವಿಶ್ರಾಂತಿ ಪಡೆಯುವುದು ಒಳ್ಳೆಯದು ಎಂದು ಅಚ್ಚರಿ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಲು ನೋವಿನ ಕಾರಣದಿಂದ 20 ದಿನ ವಿಶ್ರಾಂತಿ(Rest) ತೆಗೆದುಕೊಳ್ಳಲಿ ಎಂದು ಆಡಳಿತ ಪಕ್ಷದ ಶಾಸಕ ಎಂ ಪಿ ಕುಮಾರಸ್ವಾಮಿ(M.P. Kumaraswamy) ಅವರು ಬಹಿರಂಗವಾಗಿಯೇ ಸಲಹೆ ನೀಡಿದ್ದಾರೆ.

ಇಂದು(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿ 20 ದಿನ ವಿಶ್ರಾಂತಿ ತೆಗೆದುಕೊಂಡರೆ ಆಡಳಿತ ಚುರುಕಾಗುತ್ತದೆ. ಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡರೆ ಕಾಲು ನೋವಿನಿಂದ ಗುಣಮುಖರಾಗಬಹುದು. ಎಲ್ಲೂ ಹೊರಗಡೆ ಓಡಾಡಬಾರದು, ಮನೆಯಿಂದಲೆ ಕಚೇರಿ ಕೆಲಸ ಮಾಡಲಿ ಎಂದರು.

ಬೊಮ್ಮಾಯಿ ಪ್ರತಿಕ್ರಿಯೆ
ಸಿಎಂ ವಿಶ್ರಾಂತಿ ಪಡೆದು ಕೆಲಸ‌ ಮಾಡಲಿ ಎನ್ನೋ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿಯೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಎಂ.ಪಿ ಕುಮಾರಸ್ವಾಮಿಗೆ ನನ್ಮೇಲೆ ಬಹಳ ಪ್ರೀತಿ ಇದೆ. ವರ್ಷಪೂತಿ ದಿನಾಲು 15 ಗಂಟೆ ಕೆಲಸ ಮಾಡೊ ಸಂಕಲ್ಪ ಮಾಡಿದ್ದಿನಿ. 2023 ಕ್ಕೆ ಬಿಜೆಪಿ ಅಧಿಕಾರಕ್ಕೆ ತರೋದೆ ನನ್ನ ಗುರಿ. ಈಗಿನಿಂದಲೇ ಅದನ್ನ ಸ್ಟಾಟ್೯ ಮಾಡುತ್ತೇನೆ. ಅರುಣ್ ಸಿಂಗ್ ಸೇರಿದಂತೆ ಕೇಂದ್ರ ವರಿಷ್ಟರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ‌. ಅವರಿಗೆ ಅದಕ್ಕಾಗಿ ಧನ್ಯವಾದ. ನಾವೆಲ್ಲಾ ಸೇರಿ ಸಾಮೂಹಿಕವಾಗಿ ಚುನಾವಣೆ ಎದುರಿಸುತ್ತೆವೆ ಎಂದು ಹೇಳಿದರು.

ಕುಮಾರಸ್ವಾಮಿ ಸ್ಪಷ್ಟನೆ  : 

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಜೆಪಿ ತೊರೆಯುತ್ತಾರೆ ಎನ್ನುವ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.  ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ತೊರೆಯುತ್ತಾರೆ ಎಂದು ಚರ್ಚೆ ಶುರುವಾಗಿತ್ತು.

ಇದೀಗ ಅದಕ್ಕೆ ಸ್ಪಷ್ಟನೆ ನೀಡಿರುವ ಎಂ.ಪಿ. ಕುಮಾರಸ್ವಾಮಿ (MP Kumaraswamy), ಬಿಜೆಪಿ ನನಗೆ ತಾಯಿ ಇದ್ದಂತೆ. ಮಗು ಹೇಗೆ ತಾಯಿಯನ್ನು ಬಿಟ್ಟು ಇರಲಾರದೋ ಹಾಗೇ ನಾನೂ ಬಿಜೆಪಿ ಬಿಟ್ಟು ಇರಲಾರೆ. ನಾನು ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರುತ್ತೇನೆ ಎಂಬುದೆಲ್ಲ ಬರೀ ವದಂತಿ ಎಂದು ಹೇಳುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

 ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ (Congress) ಸೇರುತ್ತಿದ್ದೇನೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಬಿಜೆಪಿ ಎನ್ನುವುದು ನನ್ನ ಮಾತೃ ಸಮಾನ. ನಾನು ಬಿಜೆಪಿ ಬಿಟ್ಟು ಇರಲಾರೆ ಎಂದರು.

ಪಕ್ಷ ಹಾಗೂ ಸಂಘಟನೆಯ ನಡುವೆ ಇರುವುದು ಭಾವನಾತ್ಮಕ ಸಂಬಂಧವೇ ಹೊರತು ತೋರಿಕೆಯ ಪ್ರೀತಿಯಲ್ಲ. ಯಾರೋ ಊಹೆ ಮಾಡಿದ ಮಾತ್ರಕ್ಕೆ ಸುಳ್ಳು ಸತ್ಯವಾಗಲು ಸಾಧ್ಯವಿಲ್ಲ. ಸಹಜವಾಗಿ ಎಲ್ಲರಂತೆ ನನಗೂ ಸಚಿವನಾಗುವ ಆಸೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಇಷ್ಟಕ್ಕೆ ಪಕ್ಷ ಬಿಡಲಾಗುತ್ತದೆಯೇ? ಪಕ್ಷದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಕೂಡ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

click me!