ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಸಿಡಿ ಸಮಿತಿ
ವಿಷಕನ್ಯೆ, ಮಟಾಷ್ ಲೆಗ್, ರಕ್ತಕಣ್ಣೀರು ಯಾರೆಂಬುದು ಓಪನ್ ಸಿಕ್ರೇಟ್
ಸಿಡಿ ಷಡ್ಯಂತ್ರದಲ್ಲಿ ಮಹಾನಾಯಕ, ಬೆಳಗಾವಿ ವಿಷಕನ್ಯೆಯೂ ಭಾಗಿ
ಬೆಳಗಾವಿ (ಜ.31): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಲಾಗಿದೆ. ಎಲ್ಲಾ ಆಡಿಯೋ ಬಿಟ್ಟರೆ ತನಿಖೆಗೆ ಮಹತ್ವ ಇರುವುದಿಲ್ಲ. ಹೀಗಾಗಿ 18 ಸೆಕೆಂಡ್ ಆಡಿಯೋ ರಿಲೀಸ್ ಮಾಡಲಾಗಿದೆ. ಮಹಾನಾಯಕ ಸರ್ಕ್ಯೂಟ್‌ಹೌಸ್‌ನಿಂದ ಎಲ್ಲಿ ಹೋಗಿ ಪ್ಯಾಂಟ್ ಬಿಚ್ಚುತ್ತಾನೆ. ಎಲ್ಲಿ ಹೋಗಿ ಲುಂಗಿ ಬಿಚ್ಚುತ್ತಾನೆ. ಎಲ್ಲಿ ಹೋಗಿ ಶರ್ಟ್ ಬಟನ್ ಉಚ್ಚುತ್ತಾನೆ ಎಲ್ಲಾ ಗೊತ್ತಿದೆ ಎಂದು ಲಖನ್ ಜಾರಕಿಹೊಳಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ ಎಂದು ಡಿಕೆಶಿ ಹೇಳಿಕೆ ನೀಡಿದ್ದ ವಿಚಾರವಾಗಿ ಗೋಕಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಾಯಕ ಸರ್ಕ್ಯೂಟ್‌ಹೌಸ್‌ನಿಂದ ಎಲ್ಲಿ ಹೋಗಿ ಪ್ಯಾಂಟ್ ಬಿಚ್ಚುತ್ತಾನೆ, ಎಲ್ಲಿ ಹೋಗಿ ಲುಂಗಿ ಬಿಚ್ಚುತ್ತಾನೆ, ಎಲ್ಲಿ ಹೋಗಿ ಶರ್ಟ್ ಬಟನ್ ಉಚ್ಚುತ್ತಾನೆ ಎಲ್ಲಾ ಗೊತ್ತಿದೆ. ಎಲ್ಲಾ ಆಡಿಯೋ ಮತ್ತು ವಿಡಿಯೋಗಳನ್ನು ಬಿಟ್ಟರೆ ತನಿಖೆಗೆ ಮಹತ್ವ ಇರುವುದಿಲ್ಲ. ಹೀಗಾಗಿ 18 ಸೆಕೆಂಡ್ ಆಡಿಯೋ ರಿಲೀಸ್ ಮಾಡಿದ್ದೇವೆ. ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿ ಮೂಲಕ ತನಿಖೆಗೆ ಕೊಟ್ಟಿದ್ದೇವೆ. ಆದರೆ, ಸಿಎಂ ಜೊತೆ ಮಾತನಾಡಿ ಸಿಬಿಐ ತನಿಖೆಗೆ ಕೊಟ್ಟಾಗ ಎಲ್ಲಾ ಎವಿಡೆನ್ಸ್ ಅಲ್ಲೇ ಕೊಡುತ್ತೇವೆ ಎಂದು ಹೇಳಿದರು.
10 ಸಾವಿರ ಕೋಟಿ ರೂ. ಹಗರಣಕ್ಕೆ ಸಹಕರಿಸದ ಹಿನ್ನೆಲೆ ಸಿಡಿ ಬಿಡುಗಡೆ: ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ
ಮಹಾನಾಯಕನ ಬಳಿ ಕಾಂಗ್ರೆಸ್ ನಾಯಕರದ್ದೇ ಹೆಚ್ಚಿನ ಸಿಡಿಗಳಿವೆ: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಮಾಡಿರುವ ಸಿಡಿ ಷಡ್ಯಂತ್ರದಲ್ಲಿ ಮಹಾನಾಯಕ (ಡಿ.ಕೆ. ಶಿವಕುಮಾರ್), ಬೆಳಗಾವಿ ನಾಯಕಿ, ವಿಷಕನ್ಯೆ (ಲಕ್ಷ್ಮೀ ಹೆಬ್ಬಾಳ್ಕರ್) ಸೇರಿ ಅನೇಕ ನಾಯಕರು ಇದ್ದಾರೆ. ಬೆಳಗಾವಿ ಟು ಬೆಂಗಳೂರು, ಬೆಂಗಳೂರು ಟು ಕನಕಪುರ, ಕರ್ನಾಟಕ ಟು ಕೇರಳ - ದೆಹಲಿ - ಮುಂಬೈ ಎಲ್ಲಾ ಕಡೆ ಇದು ವಿಸ್ತಾರವಾಗಿದೆ. ಇದರ ತಾರ್ಕಿಕ ಅಂತ್ಯ ಆಗಬೇಕೆಂದರೆ ಸಿಬಿಐ ತನಿಖೆ ಆಗಲೇಬೇಕು. ಮೇ 3ಕ್ಕೆ ಸಿಡಿ ರಿಲೀಸ್ ಮಾಡಿ ಎರಡು ವರ್ಷ ಆಯ್ತು. ಈಗ ಎಲೆಕ್ಷನ್ ಬಂದಿದೆ. ಆಗ ಅವರು ಹೇಗೆ ಮಾಡಿದ್ದರು, ಈಗ ನಾವು ಜನರಿಗೆ ಹೇಳಬೇಕಲ್ಲ. ರಮೇಶ್ ಜಾರಕಿಹೊಳಿ ತಪ್ಪಿದೆಯೋ, ಮಹಾನಾಯಕನ ತಪ್ಪಿದೆಯೋ ಜನರಿಗೆ ಗೊತ್ತಾಗಬೇಕು. ದೇಶಾದ್ಯಂತ ವಿಸ್ತಾರವಾಗಿದ್ದು, ಸಾವಿರಾರು ಜನರ ಸಿಡಿ ಇದೇ ಅನಿಸುತ್ತದೆ. ಕಾಂಗ್ರೆಸ್ ನಾಯಕರ ಸಿಡಿಯೂ ಇವೆ. ಸ್ಟೇಜ್ ಮೇಲೆ ಹೇಗೆ ಕುಳಿತಿರ್ತಾರೆ ನೋಡಿದಿರಲ್ಲ ಎಂದು ತಿಳಿಸಿದರು.
ವಿಷಕನ್ಯೆ, ಮಟಾಷ್ ಲೆಗ್, ರಕ್ತಕಣ್ಣೀರು ಯಾರೆಂಬುದು ಓಪನ್ ಸಿಕ್ರೇಟ್: ರಾಜ್ಯ ಕಾಂಗ್ರೆಸ್‌ನಲ್ಲಿ ಬೆಳಗಾವಿಯಲ್ಲಿ ವಿಷಕನ್ಯೆ ಯಾರೆಂಬುದು ಓಪನ್ ಸೀಕ್ರೆಟ್ ಆಗಿದೆ. ಅದನ್ನು ಮತ್ತೊಮ್ಮೆ ಬಿಡಿಸಿ ಹೇಳಬೇಕಂತೇನಿಲ್ಲ. ಅದನ್ನು ಹೇಳಿದರೆ ನಾ ಹಂಗ, ಹಿಂಗ ಅಂತಾರೆ. ಹೀಗಾಗಿ ಕ್ವೆಷನ್ ಮಾರ್ಕ್ ಇಟ್ಟು ಹೇಳೋದು ಚಲೋ. ಇನ್ನೂ ಮುಂದಕ್ಕೆ ಹೋಗಿ ಅವರನ್ನು ವಿಷಕನ್ಯೆ, ಮಟಾಷ್ ಲೆಗ್, ರಕ್ತಕಣ್ಣೀರು ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು. ಮಟಾಷ್ ಲೆಗ್ ಅಂದರೆ ಇವರು ಶಾಸಕರಾದ ಮೇಲೆ ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರ ಪತನ ಆಯಿತು. ದೇಶ ಮತ್ತು ರಾಜ್ಯಕ್ಕೆ ಕೊರೊನಾ ಸಾಂಕ್ರಾಮಿಕ ರೋಗ ಬಂತು. ನಮ್ಮ ಮಾತು ಅರ್ಥ ಮಾಡಿಕೊಳ್ಳಲು ಎರಡು ದಿವಸ ಬೇಕಾಗುತ್ತದೆ. ಉಪೇಂದ್ರ 'ಎ' ಫಿಲ್ಮ್ ತರಹ ಉಲ್ಟಾ ರೀಲ್ ಹಾಕಿ ನೋಡಬೇಕಾಗುತ್ತದೆ. ಫಸ್ಟ್ ರೀಲ್ ನೋಡಿದ್ರೆ ಅರ್ಥ ಆಗಲ್ಲ ಎಂದರು.
ನಾನು ಡಿಕೆಶಿ ಅಣ್ಣ ತಮ್ಮಂದಿರಂತೆ ಇದ್ದೆವು- ಗ್ರಾಮೀಣ ಶಾಸಕಿ ಸಂಬಂಧ ಹಾಳು ಮಾಡಿದಳು: ರಮೇಶ್ ಜಾರಕಿಹೊಳಿ
ವಿಷಕನ್ಯೆಯಿಂದ ಕಾಂಗ್ರೆಸ್ ಹಾಳಾಗಿದೆ: ರಮೇಶ್ ಜಾರಕಿಹೊಳಿ ಅವರು ರಾಜ್ಯ ಕಾಂಗ್ರೆಸ್ ಮಹಾನಾಯಕ ಮತ್ತು ವಿಷಕನ್ಯೆಯಿಂದ ಹಾಳಾಗಿದೆ ಎಂದಿರುವುದು ಕರೆಕ್ಟ್ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು, ಎಷ್ಟೋ ಭಾಗ್ಯಗಳನ್ನು ಕೊಟಟರು. ಆದರೆ, ಇವರು ಶಾಸಕರಾದ ಮೇಲೆ ಸಿದ್ದರಾಮಯ್ಯ ಮಾಜಿ ಸಿಎಂ ಆದರು. ಇನ್ನು ಸಮ್ಮಿಶ್ರ ಸರ್ಕಾರದ ಅವಧಿತಲ್ಲಿ ಎಚ್.ಡಿ. ಕುಮಾರಸ್ವಾಮಿ 45 ಸಾವಿರ ಕೋಟಿ ಸಾಲ ಮನ್ನಾ ಮಾಡಿ ಅವರು ಮಾಜಿ ಆದರು. ಸಮ್ಮಿಶ್ರ ಸರ್ಕಾರ ಪತನ ಆಯ್ತು ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಆಕ್ರೋಶ: ರಾಜ್ಯದಲ್ಲಿ ಉದ್ದ ಅಂಗಿ ನಾಯಕನಿಂದ (ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ) ಎಂಎಲ್ ಸಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಆಗಿರುವುದು ಎಲ್ಲರಿಗೂ ಗೊತ್ತಿದೆ. ಒಂದು ಪಕ್ಷದಲ್ಲಿ ಇರೋದು ಬೇರೆ ಪಕ್ಷದ ಪರ ಕೆಲಸ ಮಾಡೋದು. ಅವರ ಇತಿಹಾಸ ನೋಡಿದರೆ ಜೆ.ಹೆಚ್. ಪಟೇಲ್ ಸಿಎಂ ಇದ್ದಾಗ, ಯಡಿಯೂರಪ್ಪ ಸಿಎಂ ಇದ್ದಾಗ ಎಲ್ಲಾ ಹಾಳು ಮಾಡುತ್ತಾ ಬಂದಿದ್ದಾರೆ. ಇರೋದು ಅಧಿಕಾರ ಅನುಭವಿಸೋದು ಒಂದು ಪಕ್ಷದಲ್ಲಿ ಆದರೆ ಕಾಂಗ್ರೆಸ್ ಪಕ್ಷಕ್ಕೆ ಸಪೋರ್ಟ್ ಮಾಡುತ್ತಾ ಹೋಗೋದು. ಪ್ರಧಾನಿ ಮೋದಿ, ಅಮಿತ್ ಷಾ, ಸಿಎಂ ಬೊಮ್ಮಾಯಿ ಅಳತೆ ಇದ್ದಿದ್ದ ಅಂಗಿ ಹಾಕಿಕೊಳ್ಳುತ್ತಾರೆ. ಅಳತೆ ಇಲ್ಲದ ಉದ್ದ ಅಂಗಿ ಹಾಕಿಕೊಳ್ಳುತ್ತಾರೆ ಇವರು. ಅಳತೆ ಇರಲ್ಲ ಏನೂ ಇರಲ್ಲ ಎಬ್ಬಿಸಿಕೊಂಡು ಹೋಗಿಬಿಡೋದು. ಮಹಾಂತೇಶ ಕವಟಗಿಮಠ ಅವರನ್ನು ಎಂಲ್‌ಸಿ ಚುನಾವಣೆಯಲ್ಲಿ, ಎಂಪಿ ಚುನಾವಣೆಯಲ್ಲಿ ಅರುಣ್ ಶಹಾಪುರ್ ಅವರನ್ನು ಸೋಲಿಸಿದ್ದು ಇವರೇ ಎಂಬುದು ಗೊತ್ತಾಗಿದೆ ಎಂದು ಆರೋಪಿಸಿದರು.