ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೂ ಎಲ್ಲಾ ಕಡೆ ನನ್ನ ಹೆಸರು ಕೇಳಿ ಬರುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದರು.
ರಾಮನಗರ (ಆ.06): ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೂ ಎಲ್ಲಾ ಕಡೆ ನನ್ನ ಹೆಸರು ಕೇಳಿ ಬರುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದರು. ಪೊಲೀಸರ ವರ್ಗಾವಣೆಯಲ್ಲಿ ಸಂಸದ ಸುರೇಶ್ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಆರೋಪ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ನಾನು ಒಬ್ಬ ಸಂಸದ. ಆಡಳಿತ ವ್ಯವಸ್ಥೆಯಲ್ಲಿ ಮಧ್ಯೆ ಹೋಗೋಕೆ ನಾನೇನು ಸಚಿವ ಅಲ್ಲ. ವರ್ಗಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ.
ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ಕೊಡಲೆಂದು ನಾನು ಬೆಂಬಲ ಕೊಟ್ಟಿದ್ದೇನೆ. ಪಕ್ಷದಲ್ಲಿ ಬೇರೆ ಬೇರೆ ವಿಚಾರಗಳಿಗೆ ಸಲಹೆ ಕೊಟ್ಟಿದ್ದೇನೆ. ಸರ್ಕಾರದ ಯಾವುದೇ ವಿಚಾರದಲ್ಲಿಯೂ ನಾನು ಮಧ್ಯ ಪ್ರವೇಶ ಮಾಡುವುದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಮಧ್ಯೆ ಹೋಗಲು ನಾನೇನು ಸಚಿವನಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಅವರು ಮಾಜಿ ಮುಖ್ಯಮಂತ್ರಿ ಇದ್ದಾರೆ. ಅವರನ್ನೇ ಅದರ ಬಗ್ಗೆ ಕೇಳಬೇಕು. ವರ್ಗಾವಣೆ ರೇಚ್ ಕಾರ್ಡ್ ಬಗ್ಗೆ ಅವರ ಸರ್ಕಾರದಲ್ಲಿ ಏನಿತ್ತು ನೀವೆ ಬರೆದಿದ್ದರಲ್ಲ ಎಂದು ಹೇಳಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಶರತ್ ಬಚ್ಚೇಗೌಡ
ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ 2 ಸಾವಿರ ಕೋಟಿ ಆದಾಯ: ಶಕ್ತಿ ಯೋಜನೆಯಿಂದ ರಾಜ್ಯಸರ್ಕಾರಕ್ಕೆ 250 ಕೋಟಿ ರು.ಲ್ ಬಂದಿದೆ. ಆದರೆ, ಈ ಯೋಜನೆ ಜಾರಿಯಾದ ಬಳಿಕ ಸರ್ಕಾರಕ್ಕೆ 2 ಸಾವಿರ ಕೋಟಿ ಆದಾಯ ಲಭಿಸಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ನಗರದಲ್ಲಿ ಗೃಹ ಜ್ಯೋತಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇವಾಲಯದ ಆದಾಯ ಹಾಗೂ ವಿವಿಧ ಚಟುವಟಿಕೆಗಳಿಂದಾಗಿ ರಾಜ್ಯ ಸರ್ಕಾರಕ್ಕೆ 2 ಸಾವಿರ ಕೋಟಿ ಆದಾಯ ಬಂದಿದೆ.
ಆರ್ಥಿಕ ಸುಧಾರಣೆಗಾಗಿ ಗ್ಯಾರಂಟಿ ಜಾರಿಗೆ ತರಲಾಯಿತೆ ಹೊರತು ಚುನಾವಣೆ ಗೆಲ್ಲಲು ಅಲ್ಲ. ಬಡವರ ಬಳಿ ಹಣ ಇದ್ದರೆ ಖರ್ಚು ಆಗಲಿದೆ. ಅದೇ ಶ್ರೀಮಂತರು ಖರ್ಚು ಮಾಡುವುದಿಲ್ಲ. ಶಕ್ತಿ ಯೋಜನೆ ಜಾರಿಯಾದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದ ಟ್ರಿಪ್ ಕಡಿಮೆ ಮಾಡಿಲ್ಲ. ಈ ಹಿಂದೆ ಇದ್ದಷ್ಟೆಬಸ್ಸುಗಳು ಸಂಚಾರ ಮಾಡುತ್ತಿವೆ. ಚಾಲಕರು, ನಿರ್ವಾಹಕರ ಸಂಖ್ಯೆಯೂ ಅಷ್ಟೇ ಇದೆ. ಆದರೆ, ಜನರ ಪ್ರಯಾಣ ಮಾತ್ರ ಹೆಚ್ಚಾಗಿದೆ. ಯಾರು ಬಸ್ಸಿನಲ್ಲಿ ಸಂಚಾರ ಮಾಡಲು ಭಯ ಪಡುತ್ತಿದ್ದರೊ ಅಂಥವರು ಇಂದು ಧೈರ್ಯದಿಂದ ಪ್ರಯಾಣ ಮಾಡಿ ಖುಷಿ ಪಡುತ್ತಿದ್ದಾರೆ ಎಂದು ಹೇಳಿದರು.
ಸುಳ್ಳು ಆರೋಪಗಳಿಂದ ಕಾಲ ಕಳೆಯುತ್ತಿರುವ ಎಚ್ಡಿಕೆ: ಸಚಿವ ರಾಮಲಿಂಗಾರೆಡ್ಡಿ
ಗೃಹಜ್ಯೋತಿ ಯೋಜನೆ ರೂಪಿಸುವಾಗ ಪಕ್ಷದ ಮುಖಂಡರು 300 ಯೂನಿಚ್ ಉಚಿತ ನೀಡುವಂತೆ ಸಲಹೆ ನೀಡಿದ್ದರು. ಆದರೆ, ಯೋಜನೆ ಜಾರಿ ಸಂಬಂಧ ರಾಮನಗರ ಜಿಲ್ಲೆಯ ವಿದ್ಯುತ್ ಬಳಕೆ ಮಾಹಿತಿ ಪಡೆದು ಸರಾಸರಿ ಅಂದಾಜು ಲೆಕ್ಕ ಮಾಡಿ 200 ಯೂನಿಚ್ ಉಚಿತ ನೀಡಲಾಯಿತು. ಇದು ಶೇ.95ರಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ. ಇನ್ನು 86 ಸಾವಿರ ಕುಟುಂಬ ಗೃಹ ಜ್ಯೋತಿ ಯೋಜನೆಗೆ ನೋಂದಣಿಯಾಗಬೇಕಿದ್ದು, ಒಂದು ತಿಂಗಳಲ್ಲಿ ಇದು ಪೂರ್ಣವಾಗಲಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದೆ. ಚುನಾವಣಾ ಪೂರ್ವ ನೀಡಿದ್ದ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸುರೇಶ್ ತಿಳಿಸಿದರು.