ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಶರತ್‌ ಬಚ್ಚೇಗೌಡ

By Kannadaprabha News  |  First Published Aug 6, 2023, 6:02 PM IST

ಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ ಗುರಿ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು. ಹೋಬಳಿ ನಗರೇನಹಳ್ಳಿ ಹಾಗೂ ಇ-ಮುತ್ಸಂದ್ರ ಗ್ರಾಮಗಳ ಬಳಿ 6.50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.


ಸೂಲಿಬೆಲೆ (ಆ.06): ಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ ಗುರಿ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು. ಹೋಬಳಿ ನಗರೇನಹಳ್ಳಿ ಹಾಗೂ ಇ-ಮುತ್ಸಂದ್ರ ಗ್ರಾಮಗಳ ಬಳಿ 6.50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲಾ ಮತ್ತು ಇತರೆ ರಸ್ತೆಗಳ ಸುಧಾರಣೆ 5054 ಯೋಜನೆಯಡಿ 2 ಕೋಟಿ ವೆಚ್ಚದಲ್ಲಿ ನಗರೇನಹಳ್ಳಿಯಿಂದ ಡಿ.ಶೆಟ್ಟಿಹಳ್ಳಿ ಮಾರ್ಗವಾಗಿ ಮಲ್ಲಿಯಪ್ಪನಹಳ್ಳಿ, ಶಿವನಾಪುರ, ಹೆತ್ತಕ್ಕಿ ರಸ್ತೆ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಯಾಗಿದೆ. 

ಚಿಂತಾಮಣಿ ರಸ್ತೆಯಿಂದ ಬೀಮಕನಹಳ್ಳಿ, ಸೊಣ್ಣೆದೇವನಹಳ್ಳಿ ಮೂಲಕ ಬೇಗೂರು, ಏಕರಾಜಪುರ, ಇ-ಮುತ್ಸಂದ್ರ ಮಾರ್ಗವಾಗಿ ಸೊಣ್ಣಹಳ್ಳಿಪುರ, ಹಸಿಗಾಳ ಸೇರುವ ರಸ್ತೆಯನ್ನು 4.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿಸಲಾಗುವುದು ಎಂದರು. ಹೊಸಕೋಟೆ ತಾಲ್ಲೂಕಿಗೆ 3 ಸಾವಿರ ಆಶ್ರಯ ಯೋಜನೆಯ ವಸತಿ ಯೋಜನೆ ಮಂಜೂರಾಗಿದ್ದು ಅರ್ಹರನ್ನು ಆಯ್ಕೆ ಮಾಡಿ ಎಲ್ಲರಿಗೂ ಸೂರು ಕಲ್ಪಿಸುವ ಸಂಕಲ್ಪ ಮಾಡಲಾಗುವುದು. ಮಲ್ಲಸಂದ್ರ, ಕಣ್ಣೂರಹಳ್ಳಿ ಹಾಗೂ ಭಾವಾಪುರ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುವುದು ಎಂದರು. 

Tap to resize

Latest Videos

undefined

ಸುಳ್ಳು ಆರೋಪಗಳಿಂದ ಕಾಲ ಕಳೆಯುತ್ತಿರುವ ಎಚ್ಡಿಕೆ: ಸಚಿ​ವ ರಾಮ​ಲಿಂಗಾ​ರೆಡ್ಡಿ

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ವಿ.ಸತೀಶಗೌಡ, ಕಂಬಳೀಪುರ ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಯುವ ಮುಖಂಡ ಜಿ.ನಾರಾಯಣಗೌಡ, ತಾಪಂ ಮಾಜಿ ಸದಸ್ಯ ಡಾ. ವೆಂಕಟೇಶ್‌, ಭುವನಹಳ್ಳಿ ಗೋಪಾಲಪ್ಪ, ನಗರೇನಹಳ್ಳಿ ನಾಗರಾಜಪ್ಪ, ಹಾಪಕಾಮ್ಸ್‌ ನಿರ್ದೇಶಕ ಎಂ.ಬಿ.ವೆಂಕಟೇಶ್‌, ಸಹಕಾರ ಬ್ಯಾಂಕ್‌ ನಿರ್ದೇಶಕ ಬಿ.ತಮ್ಮೇಗೌಡ, ಶಶಿಮಾಕನಹಳ್ಳಿ ಮುನಿರಾಜು, ಗುತ್ತಿಗೆದಾರ ದೇವರಾಜಪ್ಪ, ಈರಣ್ಣ, ಬಾಬು, ಶಿವಕುಮಾರ್‌, ಯನಗುಂಟೆ ರಮೇಶ್‌, ಬೇಗೂರುರಾಜಣ್ಣ, ಅಮ್ಜದ್‌ಬೇಗ್‌ ಇತರರಿದ್ದರು.

ಐಕ್ಯತೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸೋಣ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಒಗ್ಗಟ್ಟಿನಿಂದ ಎಲ್ಲಾ ಇಲಾಖೆ ಅ​ಧಿಕಾರಿಗಳ ಸಹಯೋಗದೊಂದಿಗೆ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸೇರಿ ಅದ್ಧೂರಿಯಾಗಿ ಆಚರಣೆ ಮಾಡೋಣ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ನಗರದ ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಮುಂಜಾನೆ 9 ಗಂಟೆಗೆ ಶುರುವಾಗಿ 12:30ಕ್ಕೆ ಮುಗಿಸಬೇಕು ಮಕ್ಕಳನ್ನು ಹೆಚ್ಚು ಸಮಯ ಬಿಸಿಲಿನಲ್ಲಿರಿಸಬಾರದು. 

ಲೋಕಸಭಾ ಚುನಾವಣೆ ಹಿನ್ನೆಲೆ: ಮಾಗಡಿ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಆಪ​ರೇ​ಷನ್‌ ಹಸ್ತ!

3 ಸಾವಿರ ಮಕ್ಕಳಿಗೆ ಬೆಳಗಿನ ಉಪಾಹಾರ, ಕುಡಿಯುವ ನೀರು, ಮೈದಾನದಲ್ಲಿ ಆ್ಯಂಬುಲೆನ್ಸ್‌ ಹಾಗು ಅಗ್ನಿಶಾಮಕ ವಾಹನದ ವ್ಯವಸ್ತೆಗಳನ್ನು ಸಂಬಂಧಪಟ್ಟಇಲಾಖೆಯ ಅ​ಧಿಕಾರಿಗಳು ನೋಡಿಕೊಳ್ಳಬೇಕು. ಪಥ ಸಂಚಲನಕ್ಕೆ ಜನಸಂದಣಿ ನಿಯಂತ್ರಣದ ಜೊತೆ ಭದ್ರತೆಗೆ ಪೊಲೀಸ್‌ ಇಲಾಖೆಗೆ ಜವಾಬ್ದಾರಿ ನೀಡಿ ಮೈದಾನದ ಸ್ವಚ್ಛತೆ ಹಾಗೂ ದೀಪಾಲಂಕಾರದ ತಳಿರು ತೋರಣಗಳಿಂದ ಸಿಂಗರಿಸುವ ಜವಾಬ್ದಾರಿಯನ್ನು ನಗರಸಭೆಗೆ ವಹಿಸಲಾಯಿತು. ಎಲ್ಲಾ ಇಲಾಖೆಗಳ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

click me!