ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಏನು ಗೊತ್ತಿಲ್ಲ. ಗೊತ್ತಿಲ್ಲದೆ ಬೇರೆ ಏನು ಮಾತಾಡೋದಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ದಾವಣಗೆರೆ (ಜು.23): ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಏನು ಗೊತ್ತಿಲ್ಲ. ಗೊತ್ತಿಲ್ಲದೆ ಬೇರೆ ಏನು ಮಾತಾಡೋದಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಅವರು, ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ನಾನು ಮೀಟ್ ಮಾಡಿದಾಗ ಹೇಳುತ್ತೇನೆ ಎಂದು ಜಾರಿಕೊಂಡರು.
ವೀರಶೈವ ಲಿಂಗಾಯತರನ್ನು ಒಬಿಸಿ ಸೇರ್ಪಡೆ ವಿಚಾರವಾಗಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳು ಸೇರಿ ಒಬಿಸಿಗೆ ಒತ್ತಾಯ ಮಾಡಿದ್ದೇವೆ. ಪ್ರತ್ಯೇಕ ಧರ್ಮದ ಮಾತೇ ಇಲ್ಲ ಎಲ್ಲಾರೂ ಒಟ್ಟಾಗಿ ಇರ್ತಿವಿ ಎಂದರು. ಇನ್ನು ಹಾಲಿನ ದರ ಕೇವಲ 3 ರೂಪಾಯಿ ಹೆಚ್ಚಿಗೆ ಮಾಡಿದ್ದೇವೆ. ಇದರಿಂದ ರೈತರಿಗೆ ಉಪಯೋಗವಾಗುತ್ತದೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಾವು ಸಂವಿಧಾನದ ಬಲದಲ್ಲಿದ್ದೀವಾ, ನೆರಳಲ್ಲಿದ್ದೀವಾ ಎಂಬ ಅರಿವು ಅಗತ್ಯ: ಹಂಸಲೇಖ
ಬಿ.ಕೆ. ಹರಿಪ್ರಸಾದ್ ನೋವು ಸರ್ಕಾರಕ್ಕೆ ಅಪಾಯಕಾರಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ಕೆ. ಹರಿಪ್ರಸಾದ್ ಅವರ ಮಾತು, ನೋವು, ಚಟುವಟಿಕೆಗಳು ರಾಜ್ಯದಲ್ಲಿ ಆಳುವ ಕಾಂಗ್ರೆಸ್ ಸರ್ಕಾರಕ್ಕೆ ಅಪಾಯಕಾರಿಯಾಗಲಿವೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿ.ಕೆ. ಹರಿಪ್ರಸಾದ್ ಅವರ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರಂತೆ ಬಿ.ಕೆ. ಹರಿಪ್ರಸಾದ್ ಅವರೂ ಮೇಲ್ಮನೆಯ ವಿಪಕ್ಷ ನಾಯಕರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹರಿಪ್ರಸಾದ್ ಕೂಡ ಶ್ರಮಿಸಿದ್ದಾರೆ. ವೈಚಾರಿಕವಾಗಿ ನನಗೂ ಅವರಿಗೂ ಬಹಳ ಅಭಿಪ್ರಾಯ ಭೇದವಿದೆ. ನಾವು ವೈಚಾರಿಕಾ ಚರ್ಚೆ, ಸಂಘರ್ಷ ಮಾಡಿದ್ದೇವೆ ಎಂದವರು ಹೇಳಿದ್ದಾರೆ.
ಖಾದರ್ ನಡೆ ದುರಂತ: ವಿಧಾನಸಭೆಯಲ್ಲಿ ಸ್ಪೀಕರ್ ಬೇಜವಾಬ್ದಾರಿಯಿಂದ ಸದನ ನಿರ್ವಹಣೆ ವೈಫಲ್ಯವಾಗಿದೆ. ಸಭೆಯನ್ನು ಮುಂದೂಡಿ ಸ್ಪೀಕರ್, ಸಿಎಂ ಮತ್ತು ವಿಪಕ್ಷ ನಾಯಕನ ಜೊತೆ ಮಾತನಾಡಬೇಕಿತ್ತು, ನಡೆದದ್ದು ಮರೆಯೋಣ ಎಂದು ಸದನವನ್ನು ಮುಂದುವರಿಸಬಹುದಿತ್ತು ಎಂದು ಕೋಟ ಅಭಿಪ್ರಾಯಪಟ್ಟರು. ಬಿಜೆಪಿ ಶಾಸಕರ ಅಮಾನತು ಮಾಡಿದ ಸ್ಪೀಕರ್ ಖಾದರ್ ನಡೆ ಪ್ರಜಾಪ್ರಭುತ್ವದ ದುರಂತ ಎಂದ ಅವರು, ಹಿಂದೆ ಸಿದ್ದರಾಮಯ್ಯ ಅವರೂ ವಿಪಕ್ಷ ನಾಯಕನಾಗಿ ಸದನದ ಬಾಗಿಲಿಗೇ ಒದ್ದಿದ್ದರು, ಡಿ.ಕೆ. ಶಿವಕುಮಾರ್ ಬಜೆಟ್ ಪುಸ್ತಕ ಹರಿದು ಬಿಸಾಡಿದ್ದರು, ಕಾಂಗ್ರೆಸ್ ಶಾಸಕರು ಸ್ಪೀಕರ್ ಮೈಕ್ ಕಿತ್ತು ಬಿಸಾಡಿದ್ದರು ಎಂದು ನೆನಪಿಸಿಕೊಂಡರು.
ಮೋದಿ ರಾಜ್ಯಕ್ಕೆ ಬಂದ್ರೆ ನಮ್ಮ ಅಭ್ಯರ್ಥಿಗಳು 3-4 ಲಕ್ಷ ಅಂತರದಿಂದ ಗೆಲ್ಲುತ್ತಾರೆ: ಶಾಸಕ ಹಿಟ್ನಾಳ್ ವ್ಯಂಗ್ಯ
ಹಾಲಿನ ದರ ಏರಿಸಿದರೆ, ಗ್ರಾಹಕರಿಗೆ ಸಬ್ಸಿಡಿ ನೀಡಿ: ಸರ್ಕಾರ ಹಾಲಿನ ದರ ಏರಿಸಿದ್ದಕ್ಕೆ ಪ್ರತಿಕ್ರಿಯಿಸಿದ ಕೋಟ, ರೈತರಿಗೆ ಸಹಾಯವಾಗುವಂತೆ ಹಾಲಿನ ದರ ಏರಿಸಿದ್ದರೇ ಯಾರ ಆಕ್ಷೇಪವೂ ಇಲ್ಲ, ಆದರೇ ಹಾಲಿನ ದರ ಏರಿಸಿದರೆ ಸಾಲದು, ಮಾರಾಟ ದರದಲ್ಲಿ ಸಬ್ಸಿಡಿಯನ್ನೂ ಕೊಡಿ, ಇಲ್ಲದಿದ್ದರೆ ದರ ಏರಿಕೆಯಿಂದ ಸಾಮಾನ್ಯ ಬಡ ಗ್ರಾಹಕರ ಗತಿ ಏನು ? ಅರ್ಧ ಲೀಟರ್ ಹಾಲು ಕುಡಿಯಲು ಕಷ್ಟದ ಪರಿಸ್ಥಿತಿ ಬರಬಹುದು ಎಂದವರು ಹೇಳಿದರು.