ಮೋದಿ ರಾಜ್ಯಕ್ಕೆ ಬಂದ್ರೆ ನಮ್ಮ ಅಭ್ಯರ್ಥಿಗಳು 3-4 ಲಕ್ಷ ಅಂತರದಿಂದ ಗೆಲ್ಲುತ್ತಾರೆ: ಶಾಸಕ ಹಿಟ್ನಾಳ್ ವ್ಯಂಗ್ಯ

By Govindaraj S  |  First Published Jul 23, 2023, 3:16 PM IST

ಬಿಜೆಪಿಯಲ್ಲಿ ವಿಪಕ್ಷ ನಾಯಕರಾಗೋಕೆ ಒಬ್ರು ಯೋಗ್ಯರಿಲ್ಲ. ಬಿಜೆಪಿ ಪರಿಸ್ಥಿತಿ ರಾಜ್ಯದಲ್ಲಿ ಯಾವ ಮಟ್ಟಕ್ಕೆ ಹೋಗಿದೆ ಗೊತ್ತಲ್ವಾ. ಅವರಿಗೆ ಒಬ್ಬ ವಿಪಕ್ಷ ನಾಯಕನ ಆಯ್ಕೆ ಮಾಡೋಕೆ ಆಗಿಲ್ಲ, ಅದಕ್ಕಾಗಿ ಬೇರೆಯವರಿಗೆ ಮಣೆ ಹಾಕೋದು ದುಷ್ಟಕರ ಸಂಗತಿ, ಬಿಜೆಪಿಯವರು ಎಷ್ಟು ಗೆದ್ದಿದ್ದಾರೆ ಅವರಲ್ಲಿ ಒಬ್ಬರಿಗೂ ಅರ್ಹತೆ ಇಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.


ಕೊಪ್ಪಳ (ಜು.23): ಬಿಜೆಪಿಯಲ್ಲಿ ವಿಪಕ್ಷ ನಾಯಕರಾಗೋಕೆ ಒಬ್ರು ಯೋಗ್ಯರಿಲ್ಲ. ಬಿಜೆಪಿ ಪರಿಸ್ಥಿತಿ ರಾಜ್ಯದಲ್ಲಿ ಯಾವ ಮಟ್ಟಕ್ಕೆ ಹೋಗಿದೆ ಗೊತ್ತಲ್ವಾ. ಅವರಿಗೆ ಒಬ್ಬ ವಿಪಕ್ಷ ನಾಯಕನ ಆಯ್ಕೆ ಮಾಡೋಕೆ ಆಗಿಲ್ಲ, ಅದಕ್ಕಾಗಿ ಬೇರೆಯವರಿಗೆ ಮಣೆ ಹಾಕೋದು ದುಷ್ಟಕರ ಸಂಗತಿ, ಬಿಜೆಪಿಯವರು ಎಷ್ಟು ಗೆದ್ದಿದ್ದಾರೆ ಅವರಲ್ಲಿ ಒಬ್ಬರಿಗೂ ಅರ್ಹತೆ ಇಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. 

ಬಿಜೆಪಿಯವರು ಇರೋದೆ ನಮ್ಮನ್ನ ವಿರೋಧ ಮಾಡೋಕೆ: ನಂಗೆ ಸಿಎಂ ಮಾಡೋದು ಗೊತ್ತು ಕೆಳಗಡೆ ಇಳಿಸೋದು ಗೊತ್ತು ಎನ್ನೋ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಹಿಟ್ನಾಳ್ ನಕಾರ ಮಾಡಿದ್ದು, ಆ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ. ಬಿಜೆಪಿಯವರು ಇರೋದೆ ನಮ್ಮನ್ನ ವಿರೋಧ ಮಾಡೋಕೆ, ಅವರೇನು ನಮ್ಮನ್ನ ಹೋಗಳೋಕೆ ಆಗುತ್ತೆ ಎಂದರು. 

Latest Videos

undefined

ಸುತ್ತೂರು, ಚುಂಚನಗಿರಿ ಎರಡು ಕಣ್ಣುಗಳಿದ್ದಂತೆ: ಸಚಿವ ಚಲುವರಾಯಸ್ವಾಮಿ

ಬಿಜೆಪಿ-ಜೆಡಿಎಸ್ ಗಂಭೀರ ಸ್ಥಿತಿಯಲ್ಲಿವೆ: ಜೆಡಿಎಸ್ ಬಿಜೆಪಿ ಜಂಟಿ ಪ್ರತಿಭಟನೆ ವಿಚಾರವಾಗಿ ಆ ಪಕ್ಷದ ಶಾಸಕರು ಜೆಡಿಎಸ್ ನಲ್ಲಿ ಉಳಿಯಬೇಕಾದ್ರೆ ಅವರು ವಿಲೀನ ಆಗಲೇಬೇಕು. ಅವರು ವಿಲೀನ ಆಗೋ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನೋ ಮಾಹಿತಿ ನಾನು ಮಾಧ್ಯಮಗಳಲ್ಲಿ ನೋಡಿದ್ದೆನೆ. ಸದ್ಯ ಬಿಜೆಪಿ-ಜೆಡಿಎಸ್ ಗಂಭೀರ ಸ್ಥಿತಿಯಲ್ಲಿವೆ. ಅದು ದೇಶದಲ್ಲೂ ಮುಂದುವರೆಯುತ್ತೆ. ಅವರು ಮೈತ್ರಿ ಮಾಡಿಕೊಂಡು ಲೋಕಸಭೆಗೆ ಬಂದ್ರು. ನೂರಕ್ಕೆ ನೂರರಷ್ಟು ನಾವು ಎಲ್ಲಾ ಕಡೆ ಗೆಲ್ಲುತ್ತೇವೆ ಎಂದರು.

ಮೋದಿಯವರು ಮತ್ತೊಮ್ಮೆ ರಾಜ್ಯಕ್ಕೆ ಬರ್ಬೇಕು: ಅಸೆಂಬ್ಲಿ ಏಲೆಕ್ಷನ್‌ನಲ್ಲಿ ಮೋದಿಯವರು ರಾಜ್ಯಕ್ಕೆ  28 ಸಾರಿ ಭೇಟಿ ನೀಡಿ ಪ್ರಚಾರ ಮಾಡಿದ್ದರು. ಅವರು ಏಲ್ಲೇಲ್ಲಿ ಭೇಟಿ ಕೊಟ್ಟಿದ್ದರು, ಅಲ್ಲಿ ನಮ್ಮ ಅಭ್ಯರ್ಥಿಗಳು 30-40 ಸಾವಿರದ ಅಂತರದಿಂದ ಗೆದ್ದಿದ್ದೆವೆ. ಮೋದಿಯವರು ಮತ್ತೊಮ್ಮೆ ರಾಜ್ಯಕ್ಕೆ ಬರ್ಬೇಕು ಎಂದರು. ಅವರು ಬಂದ್ರೆ ಅವರ ಸುಳ್ಳು ಭರವಸೆಗಳು ಜನರಿಗೆ ಗೊತ್ತಾಗುತ್ತೆ. ಅವರ ಸಾಧನೆಗಳೇನು ಎನ್ನೋದು ಗೊತ್ತಾಗುತ್ತೆ. ಮೋದಿಯವರಿಗೆ ನಾನೇ ಅಹ್ವಾನ ನೀಡ್ತೇನೆ. ಲೋಕಸಭೆ ಚುನಾವಣೆಯಲ್ಲೂ ರಾಜ್ಯಕ್ಕೆ ಹೆಚ್ಚು ಬರಲಿ. 

ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳರ ವದಂತಿ: ಪೊಲೀಸ್ ಇಲಾಖೆ ಸ್ಪಷ್ಟನೆ

ಬಂದ್ರೆ ನಮ್ಮ ಗ್ಯಾರೆಂಟಿ ಏನು, ನಾವು ನುಡಿದಂತೆ ನಡೆದಿದ್ದು ನೋಡಲಿ. ಅವರು ಬಂದ್ರೆ ನಮಗೇ ಅನೂಕುಲ ಆಗುತ್ತೆ. ಅವರು ಬಂದ್ರೆ ಅವರ ಸುಳ್ಳು ಭರವಸೆಗಳು ಗೊತ್ತಾಗುತ್ತೆ. ಅದು ಗೊತ್ತಾಗಿ ನಮಗೆ ಹೆಚ್ಚು ಸೀಟ್ ಗೆಲ್ಲುತ್ತೇವೆ. ಮೋದಿ ಭೇಟಿ ಕೊಟ್ರೆ 3-4 ಲಕ್ಷ ಅಂತರದಿಂದ ನಮ್ಮ ಅಭ್ಯರ್ಥಿಗಳು ಗೆಲ್ತಾರೆ. ರಾಹುಲ್ ಗಾಂಧಿ ಹೊದಲೆಲ್ಲಾ ಕೈ ಸೋಲುತ್ತೆ ಅಂತಿದ್ರು. ಇದು ಕಾಲ ಚಕ್ರ ಇವಾಗ ಮೋದಿ ಬಂದ್ರೆ ನಮ್ಮ ಅಭ್ಯರ್ಥಿಗಳು 3-4 ಲಕ್ಷ ಅಂತರದಿಂದ ಗೆಲ್ಲುತ್ತಾರೆ. ಮೋದಿಯವರು ಬರುವಂತೆ ಮಧ್ಯಮದವರು ನೀವೆ ಏನಾದ್ರು ಮಾಡಿ ಎಂದ ಹಿಟ್ನಾಳ್ ತಿಳಿಸಿದರು.

click me!