ಮೋದಿ ಬ್ಲೂ ಜಾಕೆಟ್ ನಡುವೆ ಸದ್ದು ಮಾಡಿದ ಖರ್ಗೆ ಲೂಯಿಸ್ ವಿಟ್ಟನ್ ಶಾಲು!

By Suvarna NewsFirst Published Feb 8, 2023, 6:53 PM IST
Highlights

ಪ್ರಧಾನಿ ಮೋದಿ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಬ್ಲೂ ಜಾಕೆಟ್ ಹಾಕಿ ಎಲ್ಲರ ಗಮನಸಳೆದಿದ್ದರು. ಇದರ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಲೂಯಿಸ್ ವಿಟ್ಟನ್ ಶಾಲು ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದರ ಬೆಲೆ ಕೇಳಿ ನೆಟ್ಟಿಗರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇತ್ತ ಬಿಜೆಪಿ ಇದೇ ವಿಚಾರ ಮುಂದಿಟ್ಟು ಟ್ವೀಟ್ ಸಮರ ಆರಂಭಿಸಿದೆ.

ನವದೆಹಲಿ(ಫೆ.08) ಪ್ರಧಾನಿ ನರೇಂದ್ರ ಮೋದಿಗೆ ಬೆಂಗಳೂರಿನಲ್ಲಿ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್ ಉಡುಗೊರೆಯಾಗಿ ನೀಡಲಾಗಿತ್ತು. ಇದೇ ಜಾಕೆಟ್ ಧರಿಸಿ ಮೋದಿ ಇಂದು ಸಂಸತ್ತಿಗೆ ಹಾಜರಾಗಿದ್ದರು. ಮೋದಿ ಜಾಕೆಟ್ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಶಾಲು ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಮಲ್ಲಿಕಾರ್ಜುನ ಖರ್ಗೆ ಧರಿಸಿದ್ದ ಶಾಲು ಲೂಯಿಸ್ ವಿಟ್ಟನ್ ಬ್ರಾಂಡ್ ಬಟ್ಟೆಯಾಗಿದೆ. ಈ ಶಾಲಿನ ಆನ್‌ಲೈನ್‌ ಬೆಲೆ 56,332 ರೂಪಾಯಿ. ಹೀಗಾಗಿ ಖರ್ಗೆ ಶಾಲು ನೆಟ್ಟಿಗರ ಗಮನಸೆಳೆದಿದ್ದರೆ, ಇತ್ತ ಬಿಜೆಪಿ ಇದೇ ಪ್ರಶ್ನೆ ಮುಂದಿಟ್ಟು ಟ್ವೀಟ್ ಸಮರ ಆರಂಭಿಸಿದೆ.

ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ ಈ ಕುರಿತು ಟ್ವೀಟ್ ಮೂಲಕ ಖರ್ಗೆ ಶಾಲು ವಿಚಾರ ಮುನ್ನಲೆಗೆ ತಂದಿದ್ದಾರೆ. ಪ್ರಧಾನಿ ಮೋದಿ ಭಾರತದಲ್ಲೇ ತಯಾರಿಸಿದ, ಅದರಲ್ಲೂ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್ ಧರಿಸಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಲೂಯಿಸ್ ವಿಟ್ಟನ್ ಬ್ರ್ಯಾಂಡ್ ಶಾಲು ಧರಿಸಿದ್ದಾರೆ. ಪುನರ್‌ಬಳಕೆ ಮೂಲಕ ಭಾರತದ ಬೆಳವಣಿಗೆಯಲ್ಲಿ ಮೋದಿ ಮಹತ್ವದ ಸಂದೇಶ ಸಾರಿದ್ದಾರೆ. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಲೂಯಿಸ್ ವಿಟ್ಟನ್ ಶಾಲು ಧರಿಸಿದ್ದಾರೆ. ಈ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪೂನಾವಾಲ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರ ಶಾಂತಿ ಕದಡಲಿದೆ ಎಂದವರೇ ಲಾಲ್‌ಚೌಕ್‌ನಲ್ಲಿ ತಿರಂಗ ಹಾರಿಸಿದ್ದಾರೆ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!

ಪೂನಾವಾಲ ಈ ಕುರಿತು ಟ್ವೀಟ್ ಮಾಡಿದ ಬೆನ್ನಲ್ಲೇ ನೆಟ್ಟಿಗರು ಖರ್ಗೆ ಧರಿಸಿದ ಲೂಯಿಸ್ ವಿಟ್ಟನ್ ಶಾಲು ಬೆಲೆ ಹುಡುಕಾಡಿದ್ದಾರೆ. ಲೂಯಿಸ್ ವಿಟ್ಟನ್ ಅಧಿಕೃತ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಲೂಯಿಸ್ ವಿಟ್ಟನ್ ಶಾಲಿನ ಬೆಲೆ 56,332 ರೂಪಾಯಿ ಎಂದು ಉಲ್ಲೇಖಿಸಿದೆ. ಈ ಕುರಿತು ಹಲವರು ಟ್ವೀಟ್ ಮಾಡಿದ್ದಾರೆ. ಬಹುತೇಕರು ಮಲ್ಲಿಕಾರ್ಜುನ ಖರ್ಗೆ ಧರಿಸಿದ ಶಾಲಿನ ಬೆಲೆ 475 ಅಮೆರಿಕನ್ ಡಾಲರ್ ಅಂದರೆ 39,000 ರೂಪಾಯಿ ಎಂದು ಟ್ವೀಟ್ ಮಾಡಿದ್ದಾರೆ.

 

Taste Apna Apna , Message Apna Apna

PM sends a “green message” with his sustainable fashion - blue jacket; enlisting Jan Bhagidari for the cause of sustainable growth & environment

Meanwhile, Kharge ji sports an expensive LV scarf 🧣 ((not making any judgment)) pic.twitter.com/RijtfCCsGq

— Shehzad Jai Hind (@Shehzad_Ind)

 

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ  ಧರಿಸುವ ಕೋಟ್ ಹಾಗೂ ಜಾಕೆಟ್ ಬೆಲೆ 10 ಲಕ್ಷ ರೂಪಾಯಿ ಎಂದು ಆರೋಪ ಮಾಡಿತ್ತು. ಇದಾದ ಬಳಿಕ ಬಿಜೆಪಿ ಕೂಡ ಕಾಂಗ್ರೆಸ್ ಕಾಲಳೆದಿತ್ತು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರಾಹುಲ್ ಗಾಂಧಿ 41,000 ರೂಪಾಯಿ ಬೆಲೆಯ ಬ್ಲೂಬೆರೆ ಟಿಶರ್ಟ್ ಧರಿಸಿ ಸಂಸತ್ತಿಗೆ ಬಂದಿದ್ದರು ಎಂದು ದಾಖಲೆ ಸಮೇತ ಟೀಕೆ ಮಾಡಿತ್ತು. ಇದೀಗ ಖರ್ಗೆ ಶಾಲು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಶಿಕಾರಿ ಕತೆಯೊಂದಿಗೆ ಕಾಂಗ್ರೆಸ್ ಆಡಳಿತ ವೈಖರಿ ವಿವರಿಸಿದ ಮೋದಿ, ನಗೆಗಡಲಲ್ಲಿ ತೇಲಿದ ಸಂಸತ್ತು!

ಇಂದು ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಮುಖವಾಗಿ ಅದಾನಿ ಪ್ರಕರಣ ಹಿಡಿದು ಬಿಜೆಪಿ ಹಾಗೂ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಮೋದಿಯ ಆತ್ಮೀಯ ಗೆಳೆಯನ ಸಂಪತ್ತು 2.5 ವರ್ಷದಲ್ಲಿ 13 ಪಟ್ಟು ಹೆಚ್ಚಾಗಿದೆ. 2014ರಲ್ಲಿ 50,000 ಕೋಟಿ ರೂಪಾಯಿ ಇದ್ದ ಸಂಪತ್ತು, 2019ರ ವೇಳೆಗೆ 1 ಲಕ್ಷ ಕೋಟಿ ರೂಪಾಯಿ ಆಗಿದೆ. ಕಳೆದೆರು ವರ್ಷದಲ್ಲಿ ಈ ಸಂಪತ್ತು 12 ಲಕ್ಷ ಕೋಟಿ ರೂಪಾಯಿ ಆಗಿದೆ. ಇದು ಹೇಗೆ ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇತರರ ಸಂಪತ್ತು ವಿವರಿಸಿದ ಖರ್ಗೆ,  ಶಾಲಿನ ಮೂಲಕ ತಮ್ಮ ಸಂಪತ್ತು ಹೆಚ್ಚಿರುವುದನ್ನು ಬಹಿರಂಗಪಡಿಸಿದ್ದಾರೆ ಎಂದು ಕುಟುಕಿದ್ದಾರೆ.
 

click me!