ನಾನು ನಿಮ್ಮ ಸೇವಕ, ಸಂಪೂರ್ಣ ನೀರಾವರಿ ಒದಗಿಸುವುದೇ ನನ್ನ ಕಾಯಕ: ಬಸನಗೌಡ ದದ್ದಲ್

By Sathish Kumar KH  |  First Published May 4, 2023, 11:43 PM IST

ನಾನು ರಾಯಚೂರು ಗ್ರಾಮಿಣ ಕ್ಷೇತ್ರದ ಜನರ ಸೇವಕನಾಗಿದ್ದೇನೆ. ಮುಂದಿನ 5 ವರ್ಷಗಳಲ್ಲಿ ಸಂಪೂರ್ಣ ನೀರಾವರಿ ಒದಗಿಸುವುದೇ ನನ್ನ ಕಾಯಕ ಎಂದು ಶಾಸಕ ಬಸವನಗೌಡ ದದ್ದಲ್‌ ಹೇಳಿದ್ದಾರೆ.


ರಾಯಚೂರು (ಮೇ 04): ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ ದಿನದಿಂದಲೂ ನನ್ನ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಕೆಲಸ ಮಾಡಿದ್ದೇನೆ. ನಾನು ನಿಮ್ಮ‌ ಸೇವಕನಾಗಿ ದುಡ್ಡಿಯುತ್ತಿದ್ದೇನೆ. ಮತ್ತೊಮ್ಮೆ ನನಗೆ ಮತ ನೀಡಿ, ಈ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಯೋಜನೆ ಜಾರಿಗೆ ಶ್ರಮಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಪ್ರಚಾರ ಮಾಡುತ್ತಿದ್ದಾರೆ.

ರಾಜ್ಯದ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ.‌ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ‌ನಡುವೆ ಭಾರೀ ಪೈಪೋಟಿ ‌ನಡೆದಿದ್ದು, ಕ್ಷೇತ್ರದ ಮತದಾರ ಮನಸೆಳೆಯಲು ಅಭ್ಯರ್ಥಿಗಳು ಮತಬೇಟೆ ನಡೆಸಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರವು ಮಳೆಯಾಶ್ರಿತ ಪ್ರದೇಶವಾಗಿದ್ದು, ಈ ಭಾಗವನ್ನು ಸಂಪೂರ್ಣವಾಗಿ ನೀರಾವರಿ ಹೆಸರಿನಲ್ಲಿ ಈ ಸಲ ರಾಜಕೀಯ ನಾಯಕರು ಪ್ರಚಾರ ಶುರು ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅಷ್ಟೇ ಅಲ್ಲದೆ ಐದು ವರ್ಷಕ್ಕೊಮ್ಮೆ ಬರುವ  ವ್ಯಕ್ತಿಯಲ್ಲ ನಾನು, ನಿರಂತರವಾಗಿ ನಿಮ್ಮೊಂದಿಗೆ ಇರುವವನು ಎಂದಿದ್ದಾರೆ.

Latest Videos

undefined

ಪ್ರಧಾನಿ ಮೋದಿ ಸೋಲಿನ ಭಯದಿಂದ, ಗಲ್ಲಿ ಗಲ್ಲಿ ಸುತ್ತಾಡ್ತಿದಾರೆ! ಎಚ್. ವಿಶ್ವನಾಥ್

5 ವರ್ಷಗಳಿಂದ ನಿರಂತರ ಸೇವಕ: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಅಗತ್ಯ ಸೌಲಭ್ಯಗಳನ್ನು ಗ್ರಾಮಕ್ಕೆ ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಅಧಿವೇಶನದಲ್ಲಿ ಕ್ಷೇತ್ರದ ಜನರ ಧ್ವನಿಯಾಗಿ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಮುಂದೆ ಇಟ್ಟು ಅವುಗಳಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ.‌ ಕಳೆದ 5 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ. ಹೀಗಾಗಿ ರಾಯಚೂರು ಗ್ರಾಮೀಣ ಕ್ಷೇತ್ರದ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಜನರ ಸ್ವಯಂಪ್ರೇರಿತರಾಗಿ ವಿವಿಧ ಪಕ್ಷಗಳನ್ನು ತೊರೆದು ನನ್ನ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎಂದರು.

ಕೃಷ್ಣ ನದಿಯಿಂದ ಕೆರೆ ತುಂಬಿಸುವ ಯೋಜನೆ: ನನ್ನ ರೈತ  ಬಾಂಧವರು ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ನಿರಂತರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದರ ಪರಿಣಾಮವಾಗಿ ಇಂದು ಕೃಷ್ಣ ನದಿಯಿಂದ ಪೈಪ್ ಲೈನ್ ಮೂಲಕ ಕೆರೆ ತುಂಬಿಸುವ ಯೋಜನೆ ಜಾರಿಗೆ ಆಗಿದೆ. ಈ ಭಾಗದ ನೀರಾವರಿ ಯೋಜನೆ ಜಾರಿಗೆ ತರಲು ಸತತವಾಗಿ ಶ್ರಮಿಸುತ್ತೇನೆ. ರೈತರ ಆದಾಯವನ್ನು ದ್ವಿಗುಣ ಗೊಳ್ಳಿಸಬೇಕು ಎಂದು ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದೇನೆ. ಇನ್ನೂ ಮತ್ತೆ ನಾನು ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ನನ್ನ 5 ವರ್ಷಗಳ ಆಡಳಿತದ ಅವಧಿಯಲ್ಲಿ ನನ್ನ ರೈತರಿಗೆ ನೀರಿನ ಆಭಾವವಾಗದಂತೆ ನೋಡುಕೊಳ್ಳುವೆ ಎಮದು ಹೇಳಿದರು.

ಗ್ರಾಮೀಣ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಶ್ರಮ: ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರತಿಯೊಂದು ಗ್ರಾಮದಲ್ಲಿ ಶಾಲಾ ಕಟ್ಟಡಗಳು ಮತ್ತು ನಮ್ಮ ಭಾಗದ ಹೆಮ್ಮೆಯ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಅಗತ್ಯ ಅನುದಾನ ಜಾರಿಗೆ ಅಧಿವೇಶನದಲ್ಲಿ ನೀರಂತರವಾಗಿ ಧ್ವನಿಯೆತ್ತಿ ನಿಮ್ಮ ಸಹಕಾರದಿಂದ ಅನುದಾನ ತಂದಿದ್ದೇನೆ. ಪ್ರತಿಯೊಬ್ಬ ಫೋಷಕರು ಸಹ ತಮ್ಮ ಮಕ್ಕಳಿಗೆ ಶಿಕ್ಷಣ ಒದಸಲು ಮುಂದಾಗಬೇಕು, ಗ್ರಾಮೀಣ ಪ್ರದೇಶದ ಶಿಕ್ಷಣದ ಪ್ರಮಾಣ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕದಿಂದ ಕಾಂಗ್ರೆಸ್‌ ಬ್ಯಾನ್‌ ಆಗಲಿದೆ: ಬಿ.ವೈ. ವಿಜಯೇಂದ್ರ ಟೀಕೆ

ಕಾಂಗ್ರೆಸ್‌ ಗ್ಯಾರಂಟಿಗಳನ್ನು ತಿಳಿಸಿದ ದದ್ದಲ್: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿ ಕೊಡ್ತೀವಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಕೊಡ್ತೀವಿ ವರ್ಷಕ್ಕೆ 24000 ಕೊಡ್ತೀವಿ.200 ಯೂನಿಟ್ ವಿದ್ಯುತ್ ಫ್ರೀ ಕೊಡುತ್ತೇವೆ. ನಿರೂದ್ಯೋಗ ಯುವಕ ಯುವತಿಯರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ಕೊಡ್ತೀವಿ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗೌರವ ಧನ ಹೆಚ್ಚಳ ಸೇರಿದಂತೆ ಹಲವಾರು  ಯೋಜನೆಗಳು ಇವೆ. ಅದಕ್ಕಾಗಿ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ. ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸಿ, 5 ವರ್ಷಗಳ ಸೇವೆ ಸಲ್ಲಿಸಿದ್ದೇನೆ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವತ್ತೂ ಧಕ್ಕೆ ತರೋದಿಲ್ಲ ನಿಮ್ಮ ಸೇವಕನಾಗಿ ಕ್ಷೇತ್ರದ ಜನರಿಗಾಗಿ 24 ಗಂಟೆ ದುಡಿಯುತ್ತೇನೆ, ನನ್ನ ಕುಟುಂಬಕ್ಕೆ ಕೂಡ ನಾನು ಸಮಯ ಕೊಟ್ಟಿಲ್ಲ ನನ್ನ ಕುಟುಂಬ ಎಂದರೆ ರಾಯಚೂರು ಗ್ರಾಮೀಣ ಕ್ಷೇತ್ರದ ಜನರು  ಆ ಕುಟುಂಬಕ್ಕಾಗಿ ಮನೆಯ ಮಗನಾಗಿ ದುಡಿಯುತ್ತೇನೆ ಎಂದು ಬಸನಗೌಡ ದದ್ದಲ್ ತಿಳಿಸಿದರು.

click me!