ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟೊದಕ್ಕೆ ನಾನು ಸಿದ್ದ: ವರ್ತೂರು ಪ್ರಕಾಶ್

By Suvarna News  |  First Published Jan 6, 2023, 7:52 PM IST

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದ್ರೆ ನಾನು 50 ಸಾವಿರ ಅಂತರದಲ್ಲಿ ಗೆಲ್ಲುತ್ತೇನೆ.  ಗೆಲುವಿನ ಅಂತರ 10000 ಮತಗಳು ಕಡಿಮೆಯಾಗ ಬಹುದು ಅಷ್ಟೇ ವಿನಹ ಬೇರೇನು ಆಗುವುದಿಲ್ಲ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್  ಹೇಳಿದ್ದಾರೆ. 


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಜ.6): ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅಥವಾ ರಾಹುಲ್ ಗಾಂಧಿಯೇ ಸ್ಪರ್ಧೆ ಮಾಡಲಿ  ನನ್ನ ಗೆಲುವಿನ ಅಂತರ ಐವತ್ತು ಸಾವಿರ ಶತಸಿದ್ದ, ಸಿದ್ದರಾಮಯ್ಯನವರು ಬಂದರೆ ಗೆಲುವಿನ ಅಂತರ 10000 ಮತಗಳು ಕಡಿಮೆಯಾಗ ಬಹುದು ಅಷ್ಟೇ ವಿನಹ ಬೇರೇನು ಆಗುವುದಿಲ್ಲ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು. ಇದೇ ತಿಂಗಳು 9 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೋಲಾರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಹೊರಹೊಲಯದಲ್ಲಿರುವ ಕೋಗಿಲ ಹಳ್ಳಿಯ ನಿವಾಸದ ಬಳಿ ಕಾರ್ಯಕರ್ತರ ಸಭೆ ಕರೆದು ಕಾರ್ಯಕರ್ತರ ಅನಿಸಿಕೆಗಳನ್ನು ಪಡೆದು ಅವರು ಮಾತನಾಡಿದ ವರ್ತೂರು ಪ್ರಕಾಶ್, ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರಕ್ಕೆ ಬಂದರೆ ಬೇರೆ ಬೇರೆ ಪಕ್ಷದ ನಾಯಕರು ನನಗೆ ಸಹಾಯ ಮಾಡುತ್ತಾರೆ ಆದ್ದರಿಂದ ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಭಯಪಡದೆ ಗ್ರಾಮಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.

Latest Videos

undefined

ನನಗೆ ಎರಡು ದಿನಗಳಿಂದ ಕೋಲಾರದ ಕಾಂಗ್ರೆಸ್ ನ ಪ್ರಮುಖ ಮುಖಂಡರೊಬ್ಬರು ನನ್ನ ಸಂಪರ್ಕದಲ್ಲಿ ಇದ್ದು, ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬಂದರೆ ನಿನ್ನ ಗೆಲುವು ಗ್ಯಾರಂಟಿ ಅಂತ ಹೇಳಿದ್ದಾರೆ .ನಾಲ್ಕು ದಿನಗಳಿಂದ ಬೆಂಗಳೂರಿನಿಂದ ಕರೆಗಳು ಬರುತ್ತಿದ್ದು ನನಗೆ ಎಲ್ಲಾ ಪಕ್ಷದ ಮುಖಂಡರು ಕೋಲಾರಕ್ಕೆ ಬಂದು ನನ್ನನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದರು.

ಕಾರ್ಯಕರ್ತರು ಒಪ್ಪಿದರೆ ನಾನು ಸೋಮವಾರದಂದು ಶ್ರೀರಾಮೋತ್ಸವ ಕಾರ್ಯಕ್ರಮ ಮಾಡಿ ಸಿದ್ದರಾಮಯ್ಯನವರಿಗೆ ನಮ್ಮ ತಾಕತ್ತು ಏನೆಂದು ತೋರಿಸೋಣ.ಕೋಲಾರದಲ್ಲಿ ಮುಸ್ಲಿಂ ಬಾಂಧವರು ಈ ಬಾರಿ ನನಗೆ ಮತ ಚಲಾವಣೆ ಮಾಡುತ್ತಾರೆ ಮುಸ್ಲಿಂ ಬಾಂಧವರು ನನಗೆ ಭರವಸೆ ಕೊಟ್ಟಿದ್ದಾರೆ ನಾವು ಈ ಬಾರಿ  ಪಕ್ಷ ನೋಡದೆ ಅಭಿವೃದ್ಧಿ  ಪರ ಮತ ಹಾಕುತ್ತೇವೆ ಎಂದಿದ್ದಾರೆ.ಮಾರ್ಚ್ ನಲ್ಲಿ ಒಂದು ಲಕ್ಷ ಕಾರ್ಯಕರ್ತರು ಸೇರಿ ಅದ್ದೂರಿ ಕಾರ್ಯಕ್ರಮ ಮಾಡಿ ಅಮಿತ್ ಷಾ ರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸೋಣ.ನರೇಂದ್ರ ಮೋದಿ ಜಿ ರವರ ಅಭಿವೃದ್ಧಿ ಕೆಲಸಗಳು ಬಸವರಾಜ ರವರ ಜನಪ್ರಿಯ ಯೋಜನೆಗಳು ನಮ್ಮ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದರು.

ಇನ್ನು ಜನವರಿ-9 ರ ಸೋಮವಾರ ಸಿದ್ದರಾಮಯ್ಯ ಕೋಲಾರ ಪ್ರವಾಸಕ್ಕೆ ಬಂದಿದ್ದಾಗ ನಾವು ಮಾಡಿಕೊಂಡಿದ್ದ ಪ್ಲಾನ್​ ಬೇರೆನೇ ಇತ್ತು. ಸಿದ್ದರಾಮಯ್ಯ ಕೋಲಾರಕ್ಕೆ ಬರಬೇಕು ಅನ್ನೋದು ನಮ್ಮ ಆಸೆ ಸಹ ಇದೆ,ಅದು ತಪ್ಪೋಗುತ್ತದೆ ಅನ್ನೋ ಕಾರಣಕ್ಕೆ ಸೋಮವಾರದ ಕಾರ್ಯಕ್ರಮವನ್ನು ನಾವು ಮುಂದೂಡಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಸ್ವಾಗತ ಮಾಡುತ್ತೇವೆ ಅದಾದ ನಂತರ ನಾವು ಮುಂದೆ ಹೋಗುತ್ತೇವೆ. 

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ. ನೀನು ಜೊಳ್ಳು ಆಗೋಗ್ತೀಯಾ ಎಂದು ಕೆಲವರು ನನಗೆ ಕೇಳಿದ್ರು.ನಾನು ಪೆಟ್ಟಿ ಅಂಗಡಿ ಹಾಕಿಕೊಂಡು ಬಟಾಣಿ ಮಾರತೀನಾ,ನಾನೇನು ಸನ್ಯಾಸಿ ಅಲ್ಲ. ಪಂಚಾಯ್ತಿ, ಜಿಲ್ಲಾಪಂಚಾಯ್ತಿ ಎರಡು ಬಾರಿ ಇಂಡಿಪೆಂಡೆಂಟ್​ ಎಂಎಲ್​ಎ ಅಗಿದ್ದೇನೆ.ಸಿದ್ದರಾಮಯ್ಯ ಅಲ್ಲ ರಾಹುಲ್​ ಗಾಂಧಿನೆ ಬಂದ್ರು ನಾನು ಚುನಾವಣೆಗೆ ನಿಲ್ಲೋದೆ, ತೊಡೆ ತಟ್ಟೋದೆ ಎಂದರಲ್ಲದೇ. ಈ ಬಾರಿ ರಾಜ್ಯದಲ್ಲಿ ಸಿದ್ದರಾಮಯ್ಯ ಎಂಎಲ್​ಎ ಆಗೋದಿಲ್ಲ,ಹಾಗೊಂದು ವೇಳೆ ಅವರು ನಿಂತುಕೊಂಡರೆ ನಮ್ಮ ಸಮುದಾಯದವರು ಸುಮ್ಮನೆ ಬಿಡ್ತಾರ,ಅವರು ಹೋಗಿದ್​ ಕಡೆ ಏನೂ ಮಾಡ್ತಾರೆ ಎಂದು ನಾನ್ ಹೇಳಲ್ಲ ಎಂದ ವರ್ತೂರು ಪ್ರಕಾಶ್ ಸಿದ್ದರಾಮಯ್ಯಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ರು.

ಇನ್ನು ಸಿದ್ದರಾಮಯ್ಯ ಅವರಿಗೆ ಪುತ್ರ ವ್ಯಾಮೋಹವಿದೆ.ಮಗನೂ ಎಂ.ಎಲ್.ಎ ಆಗಬೇಕು, ವರ್ತೂರ್ ಪ್ರಕಾಶ್ ಹಾಳಾಗಬೇಕು,ಇನ್ನೊಂದು ಕಡೆ ಸಮಾಜವೂ ಹಾಳಾಗಬೇಕು ಅನ್ನೋದು ಸಿದ್ದರಾಮಯ್ಯ ಅವರ ತಂತ್ರ.ಅವರ ಭವಿಷ್ಯ.ಈ ಚುನಾವಣೆಯಲ್ಲಿ ನಿರ್ಧಾರ ಆಗುತ್ತದೆ. ಕೋಲಾರದಲ್ಲಿ ಜನರನ್ನ ಮನವೊಲಿಸಲು ಅಭಿವೃದ್ದಿ ಕಾರ್ಯಗಳು ಮಾಡ್ತಾರೆ ಎಂದು ಹೇಳ್ತಿದಾರೆ‌.ಆದರೆ ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು.ಬಾದಾಮಿಯಲ್ಲಿ ಸಾವಿರಾರು ಕೋಟಿ ಕೆಲಸ ಮಾಡಿದರೂ ಯಾಕೆ ಅಲ್ಲಿ ಸ್ಪರ್ದಿಸುತ್ತಿಲ್ಲ‌. ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ದೆ ಮಾಡಿದರೆ ಠೇವಣಿ ಬರುವುದಿಲ್ಲ.ಅವರಿಗೆ ಉಳಿದಿರುವುದು ವರುಣ ಕ್ಷೇತ್ರ ಒಂದೇ,ಆದರೆ ಪುತ್ರ ವ್ಯಾಮೋಹವಿದೆ.

ಸಿದ್ದರಾಮಯ್ಯ ಅವರ ಮೇಲೆ ವರ್ತೂರ್ ಪ್ರಕಾಶ್ ಅವರನ್ನ ಗೆಲ್ಲಿಸಬೇಕು ಅನ್ನೋದು ಕಾರ್ಯಕರ್ತರ ಆಸೆಯಾಗಿದೆ. ಕೋಲಾರಕ್ಕೆ ಸಿದ್ದರಾಮಯ್ಯ ಬರಬೇಕೆಂಬುದು ಕಾರ್ಯಕರ್ತರ ಆಸೆ.ನನ್ನ ಒಂದು ಕರೆಗೆ 25 ಸಾವಿರ ಜನತೆ ಕಾರ್ಯಕ್ರಮಕ್ಕೆ ಬರ್ತಾರೆ.ಸಿದ್ದರಾಮಯ್ಯ ಎಲ್ಲಿ ಭಯಪಟ್ಟು ಬರೋದಿಲ್ಲವೋ ಎಂದು ಜ.9 ರಂದು ನಾವು ನಿಗದಿ ಮಾಡಿದ್ದ ಕಾರ್ಯಕ್ರಮವನ್ನ ಮುಂದೂಡಿದ್ದೇವೆ‌.

ಸಿದ್ದರಾಮಯ್ಯ ಬರಬೇಕೆನ್ನುವುದು ನಮ್ಮೆಲ್ಲರ ಇಷ್ಟ. ಘಟಬಂದನ್ ಅಂಕಿ ಅಂಶಗಳಂತೆ ಒಂದು ಲಕ್ಷ ಮತಗಳ ಅಂತರದಿಂದ ಸಿದ್ದರಾಮಯ್ಯ ಅವರನ್ನ ಗೆಲ್ಲಿಸುವುದು ಸುಳ್ಳು.ಯಾವ ಹಳ್ಳಿಯಲ್ಲೂ ಕಾಂಗ್ರೇಸ್ ಪಕ್ಷ ಇಲ್ಲ‌, ಯಾವ ರೀತಿ ಜನ ಕಾರ್ಯಕ್ರಮಕ್ಕೆ ಬರ್ತಾರೆ ಅನ್ನೋದು ಕುತೂಹಲ. ಮುಖ್ಯಮಂತ್ರಿಗಳು ನನಗೆ ಕರೆ ಮಾಡಿದ್ದಾರೆ ಬಜೆಟ್​ನಲ್ಲಿ ಕೋಲಾರಕ್ಕೆ ಏನೇನು ಕೊಡಬೇಕು ಎಂದರು. 

ಕೋಲಾರಕ್ಕೆ ರಿಂಗ್ ರಸ್ತೆ, ಏಷ್ಯಾದಲ್ಲೇ ನಂಬರ್​ ಒನ್​ ಮಾರುಕಟ್ಟೆ ಶಿಪ್ಟ್​ಮಾಡಿ ದೊಡ್ಡ ಮಾರುಕಟ್ಟೆ ಮಾಡೋದಕ್ಕೆ ಬೇಕಾದ ಅನುದಾನದ ಕೊಡ್ತಾರೆ.ಎಲ್ಲವನ್ನು ಈ ಬಜೆಟ್​ನಲ್ಲಿ ಘೋಷಣೆ ಮಾಡ್ತಾರೆ. ಸಿಎಂ ಅವರು ಸಿದ್ದರಾಮಯ್ಯ ಹೆಸರೇಳೋದಿಲ್ಲ ಅವರಿಗೆ ವರ್ತೂರ್ ಪ್ರಕಾಶ್​ ಗೆಲ್ಲಬೇಕು ಅಷ್ಟೇ.ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮೂರನೇ ಸ್ಥಾನಕ್ಕೆ ಹೋಗಿದ್ರು,40,000 ಮತಗಳಿಂದ ಸೋತಿರುವುದು ಸೋಲು ಗೆಲುವು ಕಾಮನ್​ ಯಾರನ್ನೂ ಕಂಡಂ ಮಾಡುವಂತಿಲ್ಲ.ಇದು ನನ್ನ ಜೀವನದಲ್ಲಿ ಮಹಾಯುದ್ದ, ಜೀವನದಲ್ಲಿ ಸೋಲೋದಿಲ್ಲ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡ್ತೀನಿ.ಸಿದ್ದರಾಮಯ್ಯ ಬರಲಿ, ರಾಹುಲ್​ ಗಾಂಧಿ ಬರಲಿ,ಯಾರೇ ಬರಲಿ ನನಗೆ ಇಲ್ಲಿ ಒಳ್ಳೆ ವಾತಾವರಣವಿದೆ.

ಕಳೆದ ಮೂರು ದಿನಗಳಿಂದ ಅಲ್ಪಸಂಖ್ಯಾತರು ಕೂಡಾ ನನಗೆ ಸಪೋರ್ಟ್​ ಮಾಡೋದಕ್ಕೆ ಸಿದ್ದವಾಗಿದ್ದಾರೆ.ಇನ್ನು ಮುಂದೆ ನಾನು ಅಲ್ಪಸಂಖ್ಯಾಂತರ ಏರಿಯಾಗಳಿಗೆ ಹೋಗುತ್ತೇನೆ. ಕಾಂಗ್ರೇಸ್​ ಪಕ್ಷಕ್ಕೆ ಎಷ್ಟು ಓಟು ಬರುತ್ತದೋ ಅಷ್ಟೇ ಓಟು ನಮಗೂ ಬರಬೇಕು.ನಾನು ಯಾವತ್ತೂ ಮುಸ್ಲಿಂ ಮತಗಳು ಬೇಡ ಎಂದು ಹೇಳಿಲ್ಲ, ಅಲ್ಪಸಂಖ್ಯಾತರ ಓಟುಗಳು ವರ್ತೂರ್ ಪ್ರಕಾಶ್​ಗೆ ಬೇಕು.ಯಾರು ಹಿಂದುತ್ವವನ್ನು ಮೆಚ್ಚಿದರೆ,ಯಾರೂ ನಮ್ಮ ದೇಶದ ಸ್ವಾಭಿಮಾನವನ್ನು ಮೆಚ್ಚಿದ್ದಾರೆ ಅವರನ್ನು ನಾನು ಸ್ವಾಗತಿಸುತ್ತೇನೆ.ಯಾರು ಹಿಂದುತ್ವನ್ನು ವಿರೋಧಿಸುತ್ತಾರೆ, ಯಾರೂ ದೇಶವನ್ನು ವಿರೋಧಿಸುತ್ತಾರೆ ಅವರನ್ನು ನಾವು ವಿರೋಧಿಸುತ್ತೇವೆ.

ಕೋಲಾರದಲ್ಲಿ ರಾಹುಲ್‌ ಸ್ಪರ್ಧಿಸಿದರೂ ಗೆಲ್ಲುವುದು ವರ್ತೂರು: ಸಂಸದ ಮುನಿಸ್ವಾಮಿ

 ಕೋಲಾರದಲ್ಲಿ ಸರಿಯಾದ ಕಾಂಗ್ರೇಸ್​ ಕಾರ್ಯಕರ್ತರಿಲ್ಲ, ಊರಿಗೆ ಹತ್ತು ಜನರಿಲ್ಲ.ಕಾಂಗ್ರೇಸ್​ ಪಕ್ಷದ ಅಭ್ಯರ್ಥಿಗಳಾಗಬೇಕು ಎಂದುಕೊಂಡಿದ್ದವರು ನನಗೆ ಪೋನ್​ ಮಾಡಿ ನನಗೆ ಸಪೋರ್ಟ್​ ಮಾಡೋದಾಗಿ ಹೇಳಿದ್ದಾರೆ. ಬೆಂಗಳೂರಿನಿಂದ ಪ್ರತಿನಿತ್ಯ ನೂರಾರು ಪೋನ್​ ಕಾಲ್​ಗಳು ಬರುತ್ತಲೇ ಇವೆ. ನೀನು ಹುಲಿ,ಮೈಸೂರು ಹುಲಿಯನ್ನು ಸೋಲಿಸಲೇಬೇಕು ಎಂದು ಹೇಳುತ್ತಿದ್ದಾರೆ.

 

ಕೋಲಾರದಲ್ಲಿ ರಾಹುಲ್‌ ಸ್ಪರ್ಧಿಸಿದರೂ ಗೆಲ್ಲುವುದು ವರ್ತೂರು :

ಈ ಸಂದರ್ಭದಲ್ಲಿ ಬೆಗ್ಲಿ ಸೂರ್ಯ ಪ್ರಕಾಶ್.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಪ್ರಸಾದ್. ಬಂಕ್ ಮಂಜುನಾಥ್. ಮಾಜಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಸೋಲೂರು ಆಂಜನಪ್ಪ.ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ. ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ. ಹಾಗೂ ಅನೇಕ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

click me!