ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ ನಾನಲ್ಲ: ಮಾಜಿ ಸಚಿವ ಸಾ.ರಾ.ಮಹೇಶ್

By Govindaraj S  |  First Published Feb 29, 2024, 9:03 PM IST

ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು. ಸದ್ಯದಲ್ಲಿ ಯಾವುದೇ ಚುನಾವಣೆಯಲ್ಲೂ ನಾನು ಸ್ಪರ್ಧಿಸುತ್ತಿಲ್ಲ. ಹೀಗಾಗಿ ನಾನು ಯಾವುದೇ ಚುನಾವಣೆಯ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
 


ಮೈಸೂರು (ಫೆ.29): ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು. ಸದ್ಯದಲ್ಲಿ ಯಾವುದೇ ಚುನಾವಣೆಯಲ್ಲೂ ನಾನು ಸ್ಪರ್ಧಿಸುತ್ತಿಲ್ಲ. ಹೀಗಾಗಿ ನಾನು ಯಾವುದೇ ಚುನಾವಣೆಯ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಬಿಜೆಪಿ ಮುಖಂಡರ ಜೊತೆಗೆ ಸುಮಾರು 30 ವರ್ಷಗಳಿಂದ ಸಂಬಂಧವಿದೆ. ಹೀಗಾಗಿ ಅವರೊಡನೆ ಮಾತನಾಡುವುದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ಇನ್ನು, ಈಗಿನ ಸಂಸದ ಪ್ರತಾಪ್ ಸಿಂಹ ಅವರು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ನಡುವೆ ತಮ್ಮ ಗುರಿ ಕೇವಲ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಸಿಎಂ ಆಗಿಸುವುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tap to resize

Latest Videos

ಕಾಂಗ್ರೆಸ್‌ಗೆ ದೇಶಕಿಂತ ದೇಶದ್ರೋಹಿಗಳೇ ಮೆಚ್ಚು: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಬಿಜೆಪಿಯ ಮಂಡಲ ಅಧ್ಯಕ್ಷರ ನೇಮಕ: ಮೈಸೂರು ಜಿಲ್ಲೆಯ ಮಂಡಲ ಅಧ್ಯಕ್ಷರಾಗಿ ಈ ಕೆಳಕಂಡವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ. ಟಿ. ನರಸೀಪುರ- ಶಿವಕುಮಾರ್ ಸತ್ಯರಾಜ್, ಹುಣಸೂರು ನಗರ- ಟಿ.ಡಿ. ನಾರಾಯಣ್, ಹುಣಸೂರು ಗ್ರಾಮಾಂತರ- ಕಾಂತರಾಜ್, ಪಿರಿಯಾಪಟ್ಟಣ- ರಾಜೇಂದ್ರ, ನಂಜನಗೂಡು ನಗರ- ಸಿದ್ದರಾಜು, ನಂಜನಗೂಡು ಗ್ರಾಮಾಂತರ- ಎಚ್.ಎಂ. ಕೆಂಡಗಣ್ಣಪ್ಪ, ಎಚ್.ಡಿ. ಕೋಟೆ- ಶಂಭೇಗೌಡ, ಸರಗೂರು- ಕೆ.ಪಿ. ಗುರುಸ್ವಾಮಿ, ಕೆ.ಆರ್. ನಗರ- ಧರ್ಮ, ಸಾಲಿಗ್ರಾಮ- ಸಾರಾ ತಿಲಕ್.

ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಇಬ್ಬರಿಗೂ ಲಾಭ: ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಎರಡೂ ಪಕ್ಷಗಳಿಗೂ ಲಾಭವಿದೆ. ಎರಡೂ ಪಕ್ಷಗಳ ಮತದಾರರು ಕಾಂಗ್ರೆಸ್ ವಿರೋಧಿಗಳು. ಇಬ್ಬರು ಒಟ್ಟಾದರೆ ಅನುಕೂಲವಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಬಿಜೆಪಿ ಯಾರಿಂದ ಗೆಲುವು ಪಡೆಯಿತು? ಒಂದು ನರೇಂದ್ರ ಮೋದಿ ಮತ್ತೊಂದು ಜೆಡಿಎಸ್ ಪಕ್ಷದಿಂದ ಎಂದು ಹೇಳಿದರು. ಯಾವ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ. ಎಲ್ಲಾ ಪಕ್ಷಗಳಲ್ಲೂ ಭಿನ್ನಾಭಿಪ್ರಾಯ ಇದ್ದೇ ಇದೆ. ಪ್ರಾದೇಶಿಕ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು. 

ಸಂಸದ ರಾಘವೇಂದ್ರ ಗೆಲ್ಲಿಸಿ, ಮೋದಿ ಕೈ ಬಲಪಡಿಸಬೇಕು: ಯಡಿಯೂರಪ್ಪ ಮನವಿ

ಅದನ್ನು ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ ಎಂದರು. ಟಿಕೆಟ್ ಹಂಚಿಕೆ ವಿಚಾರವಾಗಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಈಗ ಎರಡು ಸುತ್ತಿನ ಮಾತುಕತೆ ಆಗಿದೆ. ಯಾವ್ಯಾವ ಕ್ಷೇತ್ರಗಳು ಸಿಗಲಿವೆಯೋ ಕಾದು ನೋಡಬೇಕು. ನಮ್ಮ ಬೇಡಿಕೆಗಳಿಂತ ಪಕ್ಷವನ್ನು ಬಲಪಡಿಸಲು ನಮ್ಮ ಪ್ರಯತ್ನ ಇದೆ ಎಂದು ಹೇಳಿದರು. ಜೆಡಿಎಸ್ ಸಿದ್ಧಾಂತ ಒಪ್ಪಿದ ನಾಯಕರು ಅಸಮಾಧಾನಗೊಂಡಿದ್ದರೆ ವರಿಷ್ಠರು ಸಮಾಧಾನಪಡಿಸುತ್ತಾರೆ. ವೈಯಕ್ತಿಕ ಹಿತಾಸಕ್ತಿ ಅಥವಾ ಕಾಂಗ್ರೆಸ್ ಪ್ರೇರಿತವಾಗಿ ವಿರೋಧ ಮಾಡುವವರ ಬಗ್ಗೆ ಪಕ್ಷ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

click me!