ಕೊಡಗು-ಮೈಸೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ನಾನೇ: ಪ್ರತಾಪ್ ಸಿಂಹ

By Govindaraj S  |  First Published Aug 20, 2023, 5:25 PM IST

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ನಾನೇ ಅಭ್ಯರ್ಥಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಿಗೆ ಕೊಂಚ ಬೇಸರ ಮತ್ತು ಸಿಟ್ಟು ತರಿಸಿದೆ.


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.20): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ನಾನೇ ಅಭ್ಯರ್ಥಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಿಗೆ ಕೊಂಚ ಬೇಸರ ಮತ್ತು ಸಿಟ್ಟು ತರಿಸಿದೆ. ಕುಶಾಲನಗರದಲ್ಲಿ ನಡೆದ ದೇವರಾಜು ಅರಸು ಅವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದ ಸಂದರ್ಭ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಅವರು ನನ್ನನ್ನು ಬಿಟ್ಟರೆ ಇಲ್ಲಿ ಸ್ಪರ್ಧಿಸುವುದಕ್ಕೆ ಯಾರು ಇದ್ದಾರೆ ನೀವೆ ಹೇಳಿ ಎಂದು ಪ್ರಶ್ನಿಸುವ ಮೂಲಕ ಮತ್ಯಾರು ಸಮರ್ಥರಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

Tap to resize

Latest Videos

undefined

ನಾನು ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಮತ್ತೆ ವಿಸ್ತರಣೆಗೊಳ್ಳುತ್ತಿದೆ. ಈಗಾಗಲೇ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇ ಮಾಡಿಸಿದ್ದೇನೆ. ಇಂತಹ ಹಲವು ಕೆಲಸಗಳನ್ನು ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿ  ಮಾಡಿದ್ದೇನೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನನ್ನ ಗೆಲುವು ಖಚಿತವಾಗಿದ್ದು, ನಾನೇ ಅಭ್ಯರ್ಥಿ ಎಂದಿದ್ದಾರೆ. ಮತ್ತೊಂದಡೆ ಆಪರೇಷನ್ ಹಸ್ತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಡಿಕೇರಿ ಶಾಸಕ ಮಂತರ್ ಗೌಡ ದೇವರಾಜು ಅರಸು ಅವರ ಅವಧಿಯಲ್ಲಿ ಬಿಟ್ಟರೆ ಮತ್ತೆ ಅತೀ ಹೆಚ್ಚು ಸೀಟುಗಳನ್ನು ಗೆದ್ದು ಫುಲ್ ಮೆಜಾರಿಟಿ ಮೂಲಕ ಸರ್ಕಾರ ರಚನೆ ಮಾಡಿರುವುದು ಈಗಲೇ. 

ಸೌಜನ್ಯಾ ಅತ್ಯಾಚಾರಿಗಳಿಗೆ ‘ದೈವದ ಶಿಕ್ಷೆ’ ಕಾದಿದೆ: ಮಹೇಶ ಶೆಟ್ಟಿ

ಹೀಗಿರುವಾಗ ನಮಗೆ ಬೇರೆ ಯಾರ ಅಗತ್ಯವೂ ಇರಲಿಲ್ಲ ಎಂದು ಹೇಳುವ ಮೂಲಕ ಆಪರೇಷನ್ ಹಸ್ತಕ್ಕೆ ಮಡಿಕೇರಿ ಶಾಸಕ ಮಂತರ್ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ದೇವರಾಜು ಅರಸು ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ದೇವರಾಜು ಅರಸು ಅವರ ಅವಧಿಯಲ್ಲಿ ಕಾಂಗ್ರೆಸ್ 160 ಸೀಟುಗಳನ್ನು ಗೆದ್ದಿತ್ತು. ಅದು ಬಿಟ್ಟರೆ ಈಗ ನಮ್ಮ ಪಕ್ಷ 136 ಸೀಟುಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದು ಸರ್ಕಾರ ರಚಿಸಿದೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಹಿರಿಯರು, ಯುವ ಶಾಸಕರು ಇದ್ದಾರೆ. 

ಹೀಗಾಗಿ ನಮಗೆ ಬೇರೆಯವರ ಬೆಂಬಲ ಅಗತ್ಯ ಇರಲಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ 2018 ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಬೆಂಬಲ ನೀಡುವ ಸಂದರ್ಭ ಪಕ್ಷ ಬಿಟ್ಟು ಹೋಗುತ್ತಿರುವವರನ್ನು ಎಂದಿಗೂ ಪಕ್ಷದ ವಾಪಸ್ ಕರೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಸ್ವತಃ ಅಂದು ಸಿದ್ದರಾಮಯ್ಯನವರೇ ಹೇಳಿದ್ದರು ಎನ್ನುವ ಮಾತಿಗೆ ಅದನ್ನು ನೀವು ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಅದರೆ ಈ ನಿರ್ಧಾರ ಪಕ್ಷದು, ಸಿಎಂ ಮತ್ತು ಪಕ್ಷದ ಅಧ್ಯಕ್ಷರ ನಿರ್ಧಾರವಿರುತ್ತದೆ. 

ತಮಿಳುನಾಡಿಗೆ ನೀರು ಬಿಟ್ಟರೆ ಕುಡಿಯುವ ನೀರಿನ ತತ್ವಾರ: ಶೋಭಾ ಕರಂದ್ಲಾಜೆ

ನಾವೆಲ್ಲ ಪಕ್ಷದ ಜನಪ್ರತಿನಿಧಿಗಳು ಅಷ್ಟೇ. ನಮ್ಮನ್ನು ಅವರೆಲ್ಲಾ ಯಾವುದೇ ಚರ್ಚೆಗೆ ಕರೆದಿಲ್ಲ ಎಂದು ಹೇಳುವ ಮೂಲಕ ನಮ್ಮ ನಿರ್ಧಾರಕ್ಕೆ ಏನು ಬೆಲೆ ಇಲ್ಲ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಗೆ ಅಖಾಡ ಅಣಿಯಾಗುತ್ತಿದೆ. ಆದರೆ ಕಾಂಗ್ರೆಸ್ನ ಶಾಸಕರು ಆಪರೇಷನ್ ಹಸ್ತಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿಯಲ್ಲಿ ನಾನೇ ಅಭ್ಯರ್ಥಿ ಎನ್ನುವ ಮೂಲಕ ಆಕಾಂಕ್ಷಿಗಳು ಸಿಟ್ಟಿಗೇಳುವಂತೆ ಮಾಡಿರುವುದಂತು ಸತ್ಯ.

click me!