ನನ್ನ ವಿರುದ್ಧ ಗೆಲ್ಲಲು ಶ್ರೀರಾಮುಲುಗೆ ನೂರು ಕೋಟಿ ಖರ್ಚು ಮಾಡಿದ್ರು ಜನರು ಹಣದ ಅಮೀಷಕ್ಕೆ ಒಳಗಾಗದೇ ನನ್ನ ಕೈ ಹಿಡಿದಿದ್ದಾರೆ. ಹಣದ ಮೂಲಕ ನಮ್ಮ ಕಾರ್ಯಕರ್ತರು ನಾಯಕರನ್ನು ಖರೀದಿ ಮಾಡಲು ಹೋದ್ರು. ಆದ್ರೇ ಯಾರು ಕೂಡ ಹಣ ಮುಟ್ಟಲಿಲ್ಲ. ತೆಗೆದುಕೊಂಡವರು ಕೂಡ ವಾಪಸ್ ಕೊಟ್ರು. ವೈಯಕ್ತಿಕವಾಗಿ ಶ್ರೀರಾಮುಲು ಸೋಲು ನೋವು ತಂದಿದೆ: ನಾಗೇಂದ್ರ
ಬಳ್ಳಾರಿ(ಮೇ.14): ಶ್ರೀರಾಮುಲು ಅವರಂತ ದೊಡ್ಡ ನಾಯಕನನ್ನು ಸೋಲಿಸಿರುವೆ. ಇವರನ್ನ ಸೋಲಿಸಿ ಬಂದ್ರೇ ಉನ್ನತ ಸ್ಥಾನ ಕೊಡೋದಾಗಿ ದೆಹಲಿಯ ನಾಯಕರು ಹೇಳಿದ್ರು. ನಾನು ಮಂತ್ರಿ ಆಕಾಂಕ್ಷಿಯಾಗಿದ್ದೇನೆ ಅಂತ ನೂತನ ಶಾಸಕ ನಾಗೇಂದ್ರ ಹೇಳಿದ್ದಾರೆ.
ಸುವರ್ಣ ನ್ಯೂಸ್ ಜತೆ ಮಾತನಾಡಿದ ನಾಗೇಂದ್ರ ಅವರು, ನನ್ನ ವಿರುದ್ಧ ಗೆಲ್ಲಲು ಶ್ರೀರಾಮುಲುಗೆ ನೂರು ಕೋಟಿ ಖರ್ಚು ಮಾಡಿದ್ರು ಜನರು ಹಣದ ಅಮೀಷಕ್ಕೆ ಒಳಗಾಗದೇ ನನ್ನ ಕೈ ಹಿಡಿದಿದ್ದಾರೆ. ಹಣದ ಮೂಲಕ ನಮ್ಮ ಕಾರ್ಯಕರ್ತರು ನಾಯಕರನ್ನು ಖರೀದಿ ಮಾಡಲು ಹೋದ್ರು. ಆದ್ರೇ ಯಾರು ಕೂಡ ಹಣ ಮುಟ್ಟಲಿಲ್ಲ. ತೆಗೆದುಕೊಂಡವರು ಕೂಡ ವಾಪಸ್ ಕೊಟ್ರು. ವೈಯಕ್ತಿಕವಾಗಿ ಶ್ರೀರಾಮುಲು ಸೋಲು ನೋವು ತಂದಿದೆ ಅಂತ ತಿಳಿಸಿದ್ದಾರೆ.
undefined
Chikkaballapur Constituency: ಅಭಿವೃದ್ಧಿಯ ಹರಿಕಾರ ಡಾ.ಸುಧಾಕರ್ ಸೋಲಿಗೆ ಕಾರಣವೇನು?
ನನ್ನ ಗೆಲುವಿಗಾಗಿ ಹೋರಾಟ ಮಾಡಿದ್ದೇನೆ. ಆದ್ರೇ ಶ್ರೀರಾಮುಲು ಕ್ಷೇತ್ರ ಆಯ್ಕೆ ವಿಚಾರದಲ್ಲಿ ಎಡವಿದ್ರು. ಖಂಡಿತವಾಗಿ ಈ ಬಾರಿ ನಾನು ಸಚಿವ ನಾಗ್ತೇನೆ. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ. ದೊಡ್ಡ ಅವಕಾಶ ಕೊಡ್ತಾರೆ ಎನ್ನುವ ವಿಶ್ವಾಸವಿದೆ. ರಾಹುಲ್ ಗಾಂಧಿ ಎಲ್ಲಿ ಹೋಗಿ ಪ್ರಚಾರ ಮಾಡಿದ್ರು ಗೆಲ್ತಾರೆ. ರಾಹುಲ್ ಕಾಲ್ಗುಣ ಚೆನ್ನಾಗಿದೆ ದೇಶದ ಅವರು ಉನ್ನತ ಸ್ಥಾನ ಅಲಂಕರಿಸುತ್ತಾರೆ ಅಂತ ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದಿದ್ದಾರೆ.