Chikkaballapur Constituency: ಅಭಿವೃದ್ಧಿಯ ಹರಿಕಾರ ಡಾ.ಸುಧಾಕರ್‌ ಸೋಲಿಗೆ ಕಾರಣವೇನು?

By Kannadaprabha NewsFirst Published May 14, 2023, 9:19 AM IST
Highlights

ಚಿಕ್ಕಬಳ್ಳಾಪುರ ವಿಧಾನಸಭಾಕ್ಷೇತ್ರವು ರಾಜ್ಯದಲಿ ಹೈ ವೋಲ್ಟೇಜ್‌ಕ್ಷೇತ್ರವಾಗಿದ್ದು ಇಲ್ಲಿ ಆಶ್ಚರ್ಯಕರ ರೀತಿಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಪ್ರದೀಪ್‌ಈಶ್ವರ್‌ ಅವರು ಅತ್ಯಂತ ಪ್ರಭಾವಿ ಸಚಿವ ಡಾ.ಸುಧಾಕರ್‌ಅವರನ್ನು ಸೋಲಿಸಿರುವುದು ರಾಜ್ಯದ ಗಮನ ಚಿಕ್ಕಬಳ್ಳಾಪುರದತ್ತ ಸೆಳೆಯುವಂತಾಗಿದೆ. 

ಚಿಕ್ಕಬಳ್ಳಾಪುರ (ಮೇ.14): ಚಿಕ್ಕಬಳ್ಳಾಪುರ ವಿಧಾನಸಭಾಕ್ಷೇತ್ರವು ರಾಜ್ಯದಲಿ ಹೈ ವೋಲ್ಟೇಜ್‌ ಕ್ಷೇತ್ರವಾಗಿದ್ದು ಇಲ್ಲಿ ಆಶ್ಚರ್ಯಕರ ರೀತಿಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಪ್ರದೀಪ್‌ಈಶ್ವರ್‌ ಅವರು ಅತ್ಯಂತ ಪ್ರಭಾವಿ ಸಚಿವ ಡಾ.ಸುಧಾಕರ್‌ಅವರನ್ನು ಸೋಲಿಸಿರುವುದು ರಾಜ್ಯದ ಗಮನ ಚಿಕ್ಕಬಳ್ಳಾಪುರದತ್ತ ಸೆಳೆಯುವಂತಾಗಿದೆ. ಕಳೆದ 3 ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ರಾಜಕೀಯ ಚದುರಂಗದಾಟದಲ್ಲಿ ರಾಜಕೀಯ ದಿಕ್ಕನ್ನೇ ಬದಲಾಯಿಸಿದ ಚಿಕ್ಕಬಳ್ಳಾಪುರದ ಅಂದಿನ ಶಾಸಕರು ಮತ್ತು ಇಂದಿನ ಸಚಿವರು ಆದ ಡಾ.ಸುಧಾಕರ್‌ ಅವರನ್ನು ಯಾವುದೇಕಾರಣಕ್ಕೆ ಇನ್ನೆಂದಿಗೂ ಯಾರೂ ಸೋಲಿಸಲು ಸಾಧ್ಯವೇಇಲ್ಲ ಎಂಬ ಮಾತ ಕೇಳಿ ಬಂದಿತ್ತು. ಇದು ನಿಜವೂ ಸಹ ಆಗಿತ್ತು.ಅಷ್ಟರ ಮಟ್ಟಿಗೆ ಡಾ.ಸುಧಾಕರ್‌ ಪ್ರಭಾವ ಬೀರಿದ್ದರು.

ಮುಖಂಡರಿಗೆ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ: ಸಚಿವರಾಗುವ ಮೊದಲೇ ಕನಕಪುರಕ್ಕೆ ನೀಡಿದ್ದ ಮೆಡಿಕಲ್‌ ಕಾಲೇಜು ಚಿಕ್ಕಬಳ್ಳಾಪುರಕ್ಕೆ ತಂದು ತಮ್ಮ ಪ್ರಭಾವನ್ನು ಹೆಚ್ಚಿಸಿಕೊಂಡಿದ್ದರು.ಅನೇಕ ದಿನಗಳಿಂದ ಮಂಚೇನಹಳ್ಳಿ ಭಾಗದ ಜನರು ಕಂಡಿದ್ದ ತಾಲ್ಲೂಕು ಕೇಂದ್ರದ ಕನಸನ್ನು ನನಸು ಮಾಡಿ ಆ ಭಾಗದ ಜನರ ಪ್ರೀತಿ ಪಾತ್ರರೂ ಆಗಿದ್ದು, ಇದರ ಜೊತೆಜೊತೆಗೆ ತಮ್ಮ ರಾಜಕೀಯ ಪ್ರಭಾವನ್ನು ಪ್ರತಿದಿನ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದರು, ತಮ್ಮ ಎದುರಾಳಿಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯೂ ಆಗಿದ್ದರು. ಈ ನಿಟ್ಟಿನಲ್ಲಿ ಕೆಲವು ಮುಖಂಡರಿಗೆ ಕೆಲವು ಮಂಡಳಿಗಳು ಮತ್ತು ಕಾಪೋರ್‍ರೇಷನ್‌ಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳನ್ನಾಗಿ ಮಾಡುವ ಮೂಲಕ ಅವರನ್ನು ಸಹ ತಮ್ಮತ್ತ ಸೆಳೆದಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Karnataka Election Results 2023: ಚುನಾವಣಾ ಕಣದಲ್ಲಿ ಗೆದ್ದು ಬೀಗಿದ ಅಣ್ಣ-ತಂಗಿ!

ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್‌ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ರಾಜ್ಯ ಮಟ್ಟದ ನಾಯಕರು ಭಾವಿಸಿದ್ದರು. ಯಾರನ್ನು ಇಲ್ಲಿ ಕರೆತಂದು ಕಾಂಗ್ರೆಸ್‌ ಪಕ್ಷಕ್ಕೆ ನಿಲ್ಲಸಬೇಕುಎನ್ನುವ ನಿಟ್ಟಿನಲ್ಲಿ ಅತಿಯಾದ ಗೊಂದಲಕ್ಕೆ ಈಡಾಗಿದ್ದರು. ಆರಂಭದಲ್ಲಿಕೊತ್ತೂರು ಮಂಜುನಾಥ್‌ಅವರೇ ಇವರಿಗೆ ಉತ್ತಮ ಪ್ರತಿಸ್ಪರ್ಧಿಎಂದು ಬಿಂಬಿಸಿದ್ದರು. ಆದರೆ ಇದು ಸಹ ಹುಸಿಯಾಯಿತು. ಆದರೆ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ವಿನಯ್‌ಶ್ಯಾಮ್‌ಅವರು ಸಹ ಸುಧಾಕರ್‌ಗೆ ಸ್ಪರ್ಧೆ ನೀಡಲು ಅಸಾಧ್ಯಎಂದೇ ಭಾವಿಸಿದರು.ಇಂತಹ ಸಂದರ್ಭದಲ್ಲಿ ಏಕಾ ಏಕಿ ಪರಿಶ್ರಮ ನೀಟ್‌ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಈಶ್ವರ್‌ ಅವರ ವಾಕ್‌ಚಾತುರ್ಯಅಲ್ಪಸ್ವಲ್ಪವಾದರೂ ಕೆಲಸ ಮಾಡಬಹುದು ಎಂದು ಭಾವಿಸಿದರು. 

ಅವರಿಗೆ ಟಿಕೆಟ್‌ ಕೊಡಿಸಲುವಲ್ಲಿ ಈ ಭಾಗದ ಕಾಂಗ್ರೆಸ್‌ ಮುಖಂಡರು ಯಶಸ್ವಿಯೂ ಆದರು. ಜೆ.ಡಿ.ಎಸ್‌.ನ ಅಭ್ಯರ್ಥಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರು ಸಭ್ಯಅಭ್ಯರ್ಥಿ ಎಂದು ತಿಳಿದ್ದರೂ ಅವರು ಸುಧಾಕರ್‌ ವಿರುದ್ಧ ಸ್ಪರ್ಧೆ ನೀಡಲಾರರು ಎಂದೇ ಭಾವಿಸಲಾಗಿತ್ತು. ಅದರಂತೆ ಪ್ರದೀಪ್‌ಈಶ್ವರ್‌ ಸಹ ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಪಡೆದು ಚಿಕ್ಕಬಳ್ಳಾಪುರಕ್ಕೆ ಟಿಕೆಟ್‌ ತಂದುಕೊಳ್ಳುವಲ್ಲಿ ಯಶಸ್ವಿಯಾದರೂ ಅವರೂ ಸಹ ಡಾ.ಸುಧಾಕರ್‌ ಅವರಗೆ ಸರಿಸಾಟಿಯಾಗಲಾರರು ಎಂದೇ ಭಾವಿಸಲಾಗಿತ್ತು.

ಡಾ.ಸುಧಾಕರ್‌ ಅವರ ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿನ ಶ್ರೀರಕ್ಷೆ ಆಗಿದ್ದವು ಎಂಬು ಸುಳ್ಳಲ್ಲ. ಆದರೂ ಅವರು ಯಾವಕಾರಣಕ್ಕೆ ಸೋತರು ಎಂಬ ಹಾದಿಯಲ್ಲಿ ವಿಮರ್ಶೆ ಮಾಡಿದಾಗ ಕ್ಷೇತ್ರದ ಜನರ ಬಗ್ಗೆ ಅವರಿಗೆಇದ್ದ ನಿಲಕ್ಷ್ಯವೇ ಕಾರಣ ಎಂಬ ಚರ್ಚೆ ನಡೆಯುತ್ತಿದೆ. ಕ್ಷೇತ್ರದ ಸಾಮಾನ್ಯ ಮತದಾರ ಡಾ.ಸುಧಾಕರ್‌ ಅವರನ್ನು ಕಾಣಲು ಬೆಂಗಳೂರಿಗೆ ಹೋಗಬೇಕು. ಹೋದರೂ ಅಲ್ಲಿ ಅವರು ಕೈಗೆ ಸಿಗುವಂತಿಲ್ಲ. ಹತ್ತಾರು ದಿನ ಅಲೆದ ಮೇಲೆ ಅವರು ಸಿಕ್ಕರೂ ತಮ್ಮಕಷ್ಟವನ್ನು ಕೇಳುವಷ್ಟುತಾಳ್ಮೆಯೂ ಅವರಿಗೆ ಇರಲಿಲ್ಲ ಎನ್ನಲಾಗಿದೆ.

ಸುಧಾಕರ್‌ ಜನರಿಂದ ದೂರ ಸರಿದರೆ?: ಅವರ ಸಿಬ್ಬಂದಿಯೂ ಈ ಕ್ಷೇತ್ರದ ಮತದಾರಿಗೆ ಸ್ಪಂಧಿಸುವರೀತಿ ಹೆಚ್ಚು ಬೇಸರವನ್ನು ತರುತ್ತಿತ್ತು. ಈ ಮೊದಲು ಶಾಸಕರಾಗಿದ್ದ ಅವಧಿಯಲ್ಲಿ ಇದ್ದ ಜನಪರ ಕಾಳಜಿ ಸಚಿವರಾದ ನಂತರ ಇಲ್ಲವೇ ಇಲ್ಲ. ಸಣ್ಣ ಪುಟ್ಟಲೀಡರ್‌ಗಳು ಕಾರ್ಯಕರ್ತರು ಅವರ ಹಿಂಬಾಲಕರನ್ನು ಕರೆದುಕೊಂಡು ಅವರ ಕೆಲಸ ಮಾಡಿಸಲು ಹೋದಾಗ ಸಣ್ಣಪುಟ್ಟನಾಯಕರಿಗೆ ಅವರು ಸಿಗುವುದು ಮರೀಚಿಕೆ ಆಗಿತ್ತು. ಸಿಕ್ಕರೂ ತಮ್ಮ ಹಿಂಬಾಲಕರ ಕೆಲಸ ಮಾಡಿಕೊಡಲು ಆಸಕ್ತಿಯೂ ತೋರಿಸುತ್ತಿರಲಿಲ್ಲ ಎಂಬ ಆರೋಪವಿದೆ.

ಸವದಿ-ಹೆಬ್ಬಾಳ್ಕರ್-ಸತೀಶ್‌ ಕಾಂಬಿನೇಷನ್: ಬೆಳಗಾವಿ ಕೇಸರಿ ಕೋಟೆ ಛಿದ್ರ

ಮತದಾರರು, ಕಾರ್ಯಕರ್ತರು, ಹಿಂಬಾಲಕರು, ಸಣ್ಣಪುಟ್ಟಲೀಡರ್‌ಗಳು ಅವರನ್ನು ನಿಲಕ್ಷ್ಯ ಮಾಡುವುದು ಅವರ ಕಷ್ಟಕ್ಕೆ ನೆರವಾಗದಿರುವುದು, ಚಿಕ್ಕಬಳ್ಳಾಪುರದ ಸಾರ್ವಜನಿಕ ಕಚೇರಿಗಳಲ್ಲಿ ಪ್ರತಿ ಕೆಸಲಕ್ಕೆ ಕೈಬಿಸಿ ಮಾಡಿದರೆ ಮಾತ್ರ ಕೆಲಸ ಆಗುವ ಪರಿಪಾಠ, ಜಿಲ್ಲಾ ಮಟ್ಟದ ಅಧಿಕಾರಿಗಳು, ಪೋಲಿಸ್‌ ಮತ್ತು ಸರ್ಕಾರಿ ಅಧಿಕಾರಿಗಳ ನಿಯಂತ್ರಣ ಇವೆಲ್ಲವೂ ಡಾ.ಸುಧಾಕರ್‌ ಅವರ ಸೋಲಿಗೆ ಕಾರಣವಾಗಿವೆ ಎಂಬ ಮಾತುಗಳು ಈ ಭಾಗದ ಜನರಿಂದ ಕೇಳಿಬರುತ್ತಿವೆ.

click me!